ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಹಾಗೂ ಕೊವಿಡ್ 19 ನಿಯಮ ಉಲ್ಲಂಘನೆ  ಪ್ರಕರಣ.  
ಪಂಚನಹಳ್ಳಿ   ಪೊಲೀಸ್  ಠಾಣೆ
ದಿನಾಂಕ: 21/05/2021 ರಂದು ಪಂಚನಹಳ್ಳಿ  ಠಾಣಾ ಸರಹದ್ದಿನ ಬೊಮ್ಮೆನಹಳ್ಳಿ ಕೆರೆಯಂಗಳದ ಬಿ. ಬಸವನಹಳ್ಳಿಯಿಂದ ಬೊಮ್ಮೇನಹಳ್ಳಿಗೆ ಹೋಗುವ ರಸ್ತೆಯ ಸೇತುವೆ ಮೇಲೆ ಒಬ್ ಆಸಾಮಿಯು ಸಾರ್ವಜನಿಕರನ್ನು  ಗುಂಪುಕಟ್ಟಿಕೊಂಡು ಕೊವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆಂದು  ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ಒಬ್ಬ ಆಸಾಮಿಯು  ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು , ಆತನ ಹೆಸರು ಕೇಳಲಾಗಿ ಸತೀಶ್ ನಾಯ್ಕ ಎಂದು ತಿಳಿಸಿದ್ದು ಆರೋಪಿಯನ್ನು ವಶಕ್ಕೆ ಪಡೆದು , ಆತನ ಬಳಿ  ಪ್ಲಾಸ್ಟಿಕ್ ಚೀಲದಲ್ಲಿದ್ದ   90  ಎಂ.ಎಲ್ ನ ರಾಜಾವಿಸ್ಕಿಯ  45  ಟೆಟ್ರಾ ಪೌಚ್ಗಳಿದ್ದು ,ಮದ್ಯದ ಅಂದಾಜು ಬೆಲೆ 1580/ರೂ ಆಗಿರುತ್ತೆ. ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ  ಕಾರ್ಯಾಚರಣೆಯಲ್ಲಿ ಪಿ.ಎಸ್ಐ. ಶ್ರೀಮತಿ.  ಶೋಭಾ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ


ಅಜ್ಜಂಪುರ    ಪೊಲೀಸ್  ಠಾಣೆ
ದಿನಾಂಕ: 20/05/2021 ರಂದು ಅಜ್ಜಂಪುರ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಮಾಡುತ್ತಿರುವಾಗ ಹೆಬ್ಬೂರು ಕ್ರಾಸ್ ಬಳಿ ರಮೇಶ ಎಂಬ ಆಸಾಮಿಯು ಸಾರ್ವಜನಿಕರನ್ನು  ಗುಂಪುಕಟ್ಟಿಕೊಂಡು ಕೊವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆಂದು  ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ  ರಮೇಶನು  ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು , ಹಿಡಿಯಲು ಹೋದಾಗ  ರಮೇಶನು ಓಡಿಹೋಗಿದ್ದು, ಅವನು ಬಿಟ್ಟು ಹೋಗಿದ್ದ ಪ್ಲಾಸ್ಟಿಕ್ ಚೀಲದಲ್ಲಿ  180 ಎಂ.ಎಲ್ ನ ಬ್ಯಾಗ್ ಪೇಪರ್ ಎಂದು ಲೇಬಲ್ ಇರುವ  25 ಟೆಟ್ರಾ ಪೌಚ್ ಗಳಿದ್ದು ,ಮದ್ಯದ ಅಂದಾಜು ಬೆಲೆ 2656/ರೂ ಆಗಿರುತ್ತೆ. ಆರೋಪಿ ರಮೇಶನ  ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್ಐ. ತಿಪ್ಪೇಶ್ ಡಿ.ವಿ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ

ಬಣಕಲ್   ಪೊಲೀಸ್  ಠಾಣೆ
ದಿನಾಂಕ: 20/05/2021 ರಂದು ಬಣಕಲ್   ಠಾಣಾ ವ್ಯಾಪ್ತಿಯ ಬಿ.ಹೊಸಳ್ಳಿ ಗ್ರಾಮದ ವಾಸಿಯಾದ ಕೃಷ್ಣ ಎಂಬುವವರು ತಮ್ಮ ಅಂಗಡಿಯ ಮುಂಭಾಗ ಸಾರ್ವಜನಿಕರನ್ನು  ಗುಂಪುಕಟ್ಟಿಕೊಂಡು ಕೊವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆಂದು  ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ಕೃಷ್ಣರವರು ಕೋವಿಡ್ ನಿಯಮದ ಮಾರ್ಗಸೂಚಿಯನ್ನು ಉಲ್ಲಂಘಿಸಿ ಸಾರ್ವಜನಿಕರನ್ನು ಗುಂಪು ಸೇರಿಸಿಕೊಂಡು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು ಆರೋಪಿಯನ್ನು ವಶಕ್ಕೆ ಪಡೆದು ಆತನ ವಶದಲ್ಲಿದ್ದ180 ಎಂ.ಎಲ್ ನ ಕ್ಯಾಪ್ಟನ್ ಮಾಟರ್ಿನ್ ಸ್ಪೆಷಲ್ ವಿಸ್ಕಿಯ 186 ಟೆಟ್ರಾ ಪೌಚ್ ಗಳನ್ನು ಮದ್ಯದ ಅಂದಾಜು ಬೆಲೆ 6534 /ರೂ ಆಗಿರುತ್ತೆ.  ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಅರೋಪಿ ಕೃಷ್ಣ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್ಐ. ಶ್ರೀನಾಥ ರೆಡ್ಡಿ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಬಣಕಲ್   ಪೊಲೀಸ್  ಠಾಣೆ
ದಿನಾಂಕ: 20/05/2021 ರಂದು ಬಣಕಲ್   ಠಾಣಾ ವ್ಯಾಪ್ತಿಯ ದೇವನಗೂಲ್  ಗ್ರಾಮದ ವಾಸಿಯಾದ ರಮೇಶ ಕೊಟ್ಟೆರೆಹಾರದಿಂದ  ಬಾಳೂರು ಕಡೆಗೆ ಹೋಗುವ ಸಾರ್ವಜನಿಕ  ರಸ್ತೆಯ ಬದಿಯಲ್ಲಿ  ದೇವನಗೂಲ್  ಹತ್ತಿರ ಸಾರ್ವಜನಿಕರನ್ನು  ಗುಂಪುಕಟ್ಟಿಕೊಂಡು ಕೊವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆಂದು  ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ರಮೇಶ ರವರು ಕೋವಿಡ್ ನಿಯಮದ ಮಾರ್ಗಸೂಚಿಯನ್ನು ಉಲ್ಲಂಘಿಸಿ ಸಾರ್ವಜನಿಕರನ್ನು ಗುಂಪು ಸೇರಿಸಿಕೊಂಡು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು ಆರೋಪಿ ನಮ್ಮಗಳನ್ನು ನೋಡಿ ಓಡಿಹೋಗಿ ತಪ್ಪಿಸಿಕೊಂಡಿದ್ದು ಆತನು ಬಿಟ್ಟುಹೋಗಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ  180 ಎಂ.ಎಲ್ ನ ಕ್ಯಾಪ್ಟನ್ ಮಾಟರ್ಿನ್ ಸ್ಪೆಷಲ್ ವಿಸ್ಕಿಯ9ಟೆಟ್ರಾ ಪೌಚ್ , 90 ಎಂ.ಎಲ್ ಓರಿಜಿನಲ್ ಚಾಯ್ಸ್ ವಿಸ್ಕಿಯ 17 ಟೆಟ್ರಾ ಪೌಚ್ ಗಳು, 90 ಎಂ.ಎಲ್ ನ ವಿಂಡ್ಸರ್ ಸೆಷಲ್  ವಿಸ್ಕಿಯ ಟೆಟ್ರಾ ಪೌಚ್ ಗಳನ್ನು  ಮದ್ಯದ ಅಂದಾಜು ಬೆಲೆ 1053  /ರೂ ಆಗಿರುತ್ತೆ.  ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಅರೋಪಿ ರಮೇಶನ  ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್ಐ. ಶ್ರೀನಾಥ ರೆಡ್ಡಿ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ
ಅಕ್ರಮ ಮದ್ಯ ಮಾರಾಟ
ಮೂಡಿಗೆರೆ    ಪೊಲೀಸ್  ಠಾಣೆ
ದಿನಾಂಕ: 21/05/2021 ರಂದು ಮೂಡಿಗೆರೆ  ಠಾಣಾ ಸರಹದ್ದಿನ ಹೆಸಗಲ್ ಗ್ರಾಮದ ಶಕ್ತಿನಗರದ ನಿಂಗಯ್ಯ ಬಿನ್ ಮರಿಯಯ್ಯ ರವರು ತಮ್ಮ ಮನೆಯ ಹತ್ತಿರ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆಂದು  ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ  ನಿಂಗಯ್ಯರವರು   ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡಲು ಮದ್ಯವನ್ನು ಇಟ್ಟುಕೊಂಡಿದ್ದು . ಮದ್ಯವನ್ನು ವಶಪಡಿಸಿಕೊಂಡು ಆರೋಪಿ ನಿಂಗಯ್ಯರವರ  ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್ಐ. ರವಿ ಜಿ.ಎ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ

ಕೊವಿಡ್ 19 ನಿಯಮ ಉಲ್ಲಂಘನೆ  ಪ್ರಕರಣ.  
ನಗರ   ಪೊಲೀಸ್  ಠಾಣೆ
ದಿನಾಂಕ:20 /05/2021 ರಂದು ನಗರ  ಠಾಣಾ ವ್ಯಾಪ್ತಿಯಲ್ಲಿ  ಕೊರೋನಾ ಸಂಬಂಧ ಗಸ್ತು ಮಾಡುತ್ತಾ   ಚಿಕ್ಕಕುರುಬರಹಳ್ಳಿ  ಹತ್ತಿರ ಗಸ್ತು ಮಾಡುತ್ತಾ ಬರುತ್ತಿರುವಾಗ ಒಂದು ಕಿರಾಣಿ ಅಂಗಡಿಯು ತೆರೆದಿದ್ದು  ಅಂಗಡಿಯ ಒಳಗೆ  ಕೆಲವರು  ಹುಡುಗರನ್ನು ಸೇರಿಸಿಕೊಂಡು ಒಬ್ಬ ವ್ಯಕ್ತಿಯು ವ್ಯಾಪಾರ ಮಾಡುತ್ತಿದ್ದು ನಮ್ಮಗಳನ್ನು ನೋಡಿಅಂಗಡಿಯೊಳಗಿದ್ದ  ಹುಡುಗರು ಓಡಿಹೋಗಿದ್ದು  ಅಂಗಡಿ ಮಾಲೀಕರ ಹೆಸರು ಕೇಳಲಾಗಿ  ರಂಗಸ್ವಾಮಿ ಬಿನ್ ಸಗನಯ್ಯ  ಎಂದು ತಿಳಿಸಿದ್ದು  ಸರ್ಕಾರವು ಹೊರಡಿಸಿರುವ ಕೊವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ತಮ್ಮ ಕಿರಾಣಿ  ಅಂಗಡಿಯನ್ನು ತೆರೆದು ಸಾರ್ವಜನಿಕರನ್ನು ಗುಂಪುಸೇರಿಸಿಕೊಂಡು ವ್ಯಾಪಾರ ಮಾಡುತ್ತಿದುದು  ಕಂಡುಬಂದಿದ್ದರಿಂದ ಸಕರ್ಾರವು ಹೊರಡಿಸಿರುವ ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿರುವ  ರಂಗಸ್ವಾಮಿ  ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಇತ್ತೀಚಿನ ನವೀಕರಣ​ : 21-05-2021 08:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080