ಅಭಿಪ್ರಾಯ / ಸಲಹೆಗಳು

ಅಕ್ರಮ  ಗೋ ಮಾಂಸ ಮಾರಾಟ ಪ್ರಕರಣ.

ಬಸವನಹಳ್ಳಿ ಪೊಲೀಸ್ ಠಾಣೆ.

ದಿನಾಂಕ:20-05-2022 ರಂದು ಬಸವನಹಳ್ಳಿ, ಪೊಲೀಸ್ ಠಾಣಾ ಸರಹದ್ದಿನ ಚಿಕ್ಕಮಗಳೂರು ನಗರದ 60 ಅಡಿ ರಸ್ತೆಯಿಂದ ಬಲ್ಬ್ ಪ್ಯಾಕ್ಟರಿ ರಸ್ತೆಯಲ್ಲಿ ಅಕ್ರಮವಾಗಿ ದನದ ಮಾಂಸವನ್ನು ಮಾರಾಟ ಮಾಡುತ್ತಿದ್ದು, ಆರೋಪಿತನಾದ ಮೊಹಮ್ಮದ್ ಖಲೀಲ್ ಬಿನ್ ಸಲೀಂ, ಶಂಕರಪುರ, ಚಿಕ್ಕಮಗಳೂರು ವಾಸಿ ವಶಕ್ಕೆ ಪಡೆದು, ಆರೋಪಿತನು ಅಕ್ರಮವಾಗಿ ಹೊಂದಿದ್ದ 15 ಕೆ.ಜಿ. ದನದ ಮಾಂಸವನ್ನು ಅಮಾನತ್ತುಪಡಿಸಿಕೊಂಡು, ಆರೋಪಿತನ ವಿರುದ್ದ ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ  ಲೇಟ್ ಅಜ್ಮತ್ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಬಸವನಹಳ್ಳಿ ಠಾಣಾ ಪಿಎಸ್ಐ ಕಿರಣ್ ಕುಮಾರ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ.

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ:20-05-2022 ರಂದು ತರೀಕೆರೆ ಪೊಲೀಸ್ ಠಾಣಾ ಸರಹದ್ದಿನ ಇಟ್ಟಿಗೆ ಗ್ರಾಮದ ವಾಸಿ ರಘು ಬಿನ್ ರಂಗನಾಥ  ವಾಸ ಇಟ್ಟಿಗೆ ಗ್ರಾಮ ಈತನು ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಅರೋಪಿತನನ್ನು ವಶಕ್ಕೆ ಪಡೆದು ಆರೋಪಿತನ ವಶದಲ್ಲಿ ಇದ್ದ 90 ಎಂ.ಎಲ್. ನ 10 ಟೆಟ್ರಾಪ್ಯಾಕ್ ಮದ್ಯವನ್ನು ಅಮಾನತ್ತುಪಡಿಸಿಕೊಂಡಿದ್ದು, ಮದ್ಯದ ಅಂದಾಜು ಬೆಲೆ 350/- ರೂ ಗಳಾಗಿರುತ್ತೆ. ಆರೋಪಿತ ವಿರುದ್ದ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ತರೀಕೆರೆ ಠಾಣಾ ಪಿ.ಎಸ್.ಐ. ಅನಿಲ್ ಕುಮಾರ್ ನಾಯ್ಕ  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಸಖರಾಯಪಟ್ಟಣ ಪೊಲೀಸ್  ಠಾಣೆ.

ದಿನಾಂಕ;20-05-2022 ರಂದು ಪಿರ್ಯಾದಿ ಚಂದ್ರಾಬೋವಿ ಬಿನ್ ಕೃಷ್ಣಬೋವಿ ಹೊಸೂರು ಸಖರಾಯಪಟ್ಟಣ ವರವರು ನೀಡಿದ ದೂರಿನಲ್ಲಿ ದಿನಾಂಕ;20-05-2022 ರಂದು ಪಿರ್ಯಾದಿ ಪಕ್ಕದ ಮನೆ ವಾಸಿ ರಾಮಕೃಷ್ಣಪ್ಪನು  ಮಂಗಗಳನ್ನು ಹಿಡಿಯುವ ಕೆಲೆಸ ಮಾಡುತ್ತಿದ್ದು , ಹೊಸೂರಿನ ವಾಸಿ ಮಂಜುನಾಥ ರವರ ಬಾಬ್ತು ಕೆಎ-18-ಬಿ-6457 ರ ಅಟೋದಲ್ಲಿ ಕಣಿವೆ ಆಂಜನೇಯ ದೇವಸ್ಥಾನದ ಬಳಿ ಹೋಗುತ್ತಿರುವಾಗ ಆಟೋ ಚಾಲಕ ಅಟೋವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದು ಅಟೋ ರಸ್ತೆಯ ಬಲಬದಿಗೆ ಪಲ್ಟಿಯಾಗಿ ಬಿದ್ದು ಅಟೋದಲ್ಲಿ ಕುಳಿತಿದ್ದ ರಾಮಕೃಷ್ಣಪ್ಪನ ತಲೆಗೆ ಮತ್ತು ಎಡ ಕೈಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿರುತ್ತಾನೆ. ಅಪಘಾತಕ್ಕೆ ಕಾರಣನಾದ ಅಟೋ ಚಾಲಕ ಮಂಜುನಾಥ ನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಸರ್ಕಾರಿ ನೌಕರನ ಹಲ್ಲೆ ಪ್ರಕರಣ.

ಕಳಸ ಪೊಲೀಸ್ ಠಾಣೆ.

ದಿನಾಂಕ;20-05-2022 ರಂದು ಪಿರ್ಯಾದಿ  ಹೇಮಕುಮಾರ್ ಡಿ.ಸಿ. ಮೆಸ್ಕಾಂ ಇಲಾಖೆಯಲ್ಲಿ ಲೈನ್ ಮ್ಯಾನ್ ಕೆಲಸ, ಹಿರೇಬೈಲು ಕ್ಯಾಂಪ್ ಕಳಸ ಇವರು ನೀಡಿದ ದೂರಿನಲ್ಲಿ ದಿನಾಂಕ 19-05-2022 ರಂದು ಪಿರ್ಯಾದಿ ಹಿರೇಬೈಲು ಗ್ರಾಮದಲ್ಲಿ ವಿದ್ಯುತ್ ಲೈನ್ ಸಮಸ್ಯೆ ಇದ್ದು, ಪಿರ್ಯಾದಿ ಚಂದ್ರು ಬೇಕರಿಯಲ್ಲಿ ಊಟಕ್ಕೆ ಹೋದ ಸಂದರ್ಬದಲ್ಲಿ ಹಿರೇಬೈಲು ವಾಸಿಯಾದ ರಂಜನ್, ಅದರ್ಶ, ಸುಂದರೇಶ ರವರು ಪಿರ್ಯಾದಿಯನ್ನು ನೋಡಿ ಕರೆಂಟ್ ಇಲ್ಲದ ಬಗ್ಗೆ ಪಿರ್ಯಾದಿಗೆ ಗೌರ್ನಮೆಂಟ್ ಸಂಬಳ ತಿನ್ನುಕೊಂಡು ಇಲ್ಲಿ ಊಟ ಮಾಡಿಕೊಂಡು ಮಜಾ ಮಾಡುತ್ತಿದ್ದಿಯಾ, ಇತ್ಯಾದಿ ಅವಾಚ್ಯವಾಗಿ ಬೈದು, ಕೈಯಿಂದ  ಮೈಕೈಗೆ ಮತ್ತು  ತಲೆಗೆ ಹೊಡೆದಿರುತ್ತಾರೆ. ಮತ್ತು ಸರ್ಕಾರಿ ನೌಕರನ ನಾದ ನನ್ನ ಮೇಲೆ ಹಲ್ಲೆ ಮಾಡಿದ ಆರೋಪಿತರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ  ಪ್ರಕರಣ.

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ;20-05-2022 ರಂದು ರಾಜಪ್ಪ ಟಿ.ಇ. ಬಿನ್ ಈಶ್ವರಪ್ಪ ತಡಗ, ಶಿವನಿ ಹೋಬಳಿ ವಾಸಿ ರವರು ನೀಡಿದ ದೂರೇನೆಂದರೆ, ಪಿರ್ಯಾದುದಾರರ ಅಣ್ಣ ದೇವೇಂದ್ರಪ್ಪ , 52 ವರ್ಷ ಇವರು ದಿನಾಂಕ 19-05-2022 ರಂದು ಮದ್ಯಾಹ್ನ ಮನೆಯಿಂದ  ಹೋದವರು  ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು ಈವರೆಗೂ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ  ದೇವೆಂದ್ರಪ್ಪ , 52 ವರ್ಷ, ದುಂಡುಮುಖ , ಸಾದಾರಣ ಮೈಕಟ್ಟು , ಕನ್ನಡ ಬಾಷೆ ಮಾತನಾಡುತ್ತಾರೆ. ಕಾಣೆಯಾದಾಗ ಬಿಳಿ ಶರಟು ಪಟ್ಟೆ ಪಂಚೆ ಧರಿಸಿರುತ್ತಾರೆ. ಕಾಣೆಯಾಗಿರುವ ದೇವೇಂದ್ರಪ್ಪ ಇವರನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ  ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 21-05-2022 06:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080