ಮರಣಾಂತಿಕ ರಸ್ತೆ ಅಪಘಾತ ಪ್ರಕರಣ
ಅಜ್ಜಂಪುರ ಪೊಲೀಸ್ ಠಾಣೆ.
ದಿನಾಂಕ;20/06/2022 ರಂದು 20.00 ಗಂಟೆಗೆ ಪಿರ್ಯಾದಿ ರಾಜಪ್ಪ ಬಿನ್ ಸಿದ್ದಪ್ಪ, ವಾಸ ಜೋಡಿಬೋಕಿಕೆರೆ, ಅಜ್ಜಂಪುರ ವಾಸಿ ಇವರು ನೀಡಿದ ದೂರಿನಲ್ಲಿ ದಿನಾಂಕ;20/06/2022 ರಂದು ಪಿರ್ಯಾದಿ ತನ್ನ ಬಾಬ್ತು ಕೆಎ-18-ಇಎ-3892 ರ ಮೋಟಾರು ಬೈಕಿನಲ್ಲಿ ಮಧುಸೂದನ್ ಇವನನ್ನು ಕೂಡಿಸಿಕೊಂಡು ಶ್ಯಾನಭೊಗನಹಳ್ಳಿ ಮಾರ್ಗವಾಗಿ ಬರುತ್ತಿರುವಾಗ ಎದುರುಗಡೆಯಿಂದ ಕೆಎ-66-1696 ನಂಬರಿನ ಶಾಲೆಯ ಬಸ್ಸಿನ ಚಾಲಕ ಬಸ್ಸನ್ನು ಅತೀವೇಗ ಮತ್ತು ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ಬೈಕಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಮದೂಸೂಧನ ರಸ್ತೆಯ ಬಲಭಾಗಕ್ಕೆ ಬಿದ್ದು ತಲೆಗೆ, ಹಣೆಗೆ ಬಲವಾದ ಪೆಟ್ಟು ಬಿದ್ದು , ಹಿಂಬದಿ ಬೈಕಿನಲ್ಲಿ ಬರುತ್ತಿದ್ದ ಓಬಳಪ್ಪ ಮತ್ತು ಚಂದ್ರಪ್ಪ ಇವರು ಸಹ ಪೆಟ್ಟಾಗಿದ್ದು, ಮಧುಸೂದನ ನಿಗೆ ಅಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಅಪಘಾತಪಡಿಸಿದ ಬಸ್ಸಿನ ಚಾಲಕನ ವಿರುದ್ದ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿರುತ್ತಾರೆ
ಕಳ್ಳತನ ಪ್ರಕರಣ
ಲಕ್ಕವಳ್ಳಿ ಪೊಲೀಸ್ ಠಾಣೆ.
ದಿನಾಂಕ;20/06/2022 ರಂದು ಪಿರ್ಯಾದಿ ಚಂದ್ರನಾಯ್ಕ ಬಿನ್ ಲೇಟ್ ರುದ್ರನಾಯ್ಕ ಕರಕುಚ್ಚಿ ತಾಂಡ್ಯ ಗ್ರಾಮ ಲಕ್ಕವಳ್ಳಿ ವಾಸಿ ನೀಡಿದ ದೂರಿನಲ್ಲಿ ಪಿರ್ಯಾದಿ ದಿನಾಂಕ;14/06/2022 ರಂದು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದು, ದಿನಾಂಕ; 20/06/2022 ರಂದು ವಾಪಾಸ್ಸು ಬಂದು ನೋಡಲಾಗಿ ಯಾರೋ ಕಳ್ಳರು ಮನೆಯ ಹೆಂಚು ತೆಗೆದಿದ್ದು, ಮನೆಯ ಒಳಗೆ ಇದ್ದ ಬೀರುವಿನಿಂದ 44 ಗ್ರಾಂ ತೂಕದ ಚಿನ್ನದ ಒಡವೆಗಳು ಅಂದಾಜು ಬೆಲೆ ಒಟ್ಟು 1,32,000/- ರೂ ಮೌಲ್ಯದ ಅಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಅಭರಣಗಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಅಕ್ರಮ ಮದ್ಯ ಮಾರಾಟ ಪ್ರಕರಣ
ಬೀರೂರು ಪೊಲೀಸ್ ಠಾಣೆ.
ದಿನಾಂಕ:20-06-2022 ರಂದು ಬೀರೂರು ಪೊಲೀಸ್ ಠಾಣಾ ಸರಹದ್ದಿನ ಬೀರೂರು ಬಿ.ಕೆ. ಹೊಸೂರು ಗ್ರಾಮದ ಗೇಟ್ ಬಸ್ ನಿಲ್ದಾಣದಲ್ಲಿ ಶಿವರುದ್ರಪ್ಪ ಬಿನ್ ಮಹೇಶ್ವರಬೋವಿ ವಾಸ ಬಿ.ಕೆ. ಹೊಸೂರು, ಈತನು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಅರೋಪಿಯನ್ನು ವಶಕ್ಕೆ ಪಡೆದು, ಅರೋಪಿತನ ವಶದಲ್ಲಿ ಇದ್ದ 90 ಎಂ.ಎಲ್. ನ 31 ಟೆಟ್ರಾಪ್ಯಾಕ್ ಮದ್ಯವನ್ನು ಅಂದಾಜು ಬೆಲೆ 1085/- ರೂ ಅಗಿದ್ದು ಮದ್ಯವನ್ನು ಅಮಾನತ್ತುಪಡಿಸಿಕೊಂಡಿದ್ದು, ಆರೋಪಿತನ ವಿರುದ್ದ ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಬೀರೂರು ಠಾಣಾ ಪಿ.ಎಸ್.ಐ. ಬಸವರಾಜಪ್ಪ ಹೆಚ್. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.
ಅಕ್ರಮ ಜಾನುವಾರು ಹತ್ಯೆ ಪ್ರಕರಣ
ನ.ರಾ.ಪುರ ಪೊಲೀಸ್ ಠಾಣೆ.
ದಿನಾಂಕ:20/06/2022 ರಂದು ಮದ್ಯ ರಾತ್ರಿ ನ.ರಾ.ಪುರ ಠಾಣಾ ಸರಹದ್ದಿನ ಕೆ. ಕಣಬೂರು ಗ್ರಾಮದ ಚಿಬ್ಬಳ್ಳಿಯಲ್ಲಿ ವರ್ಗೀಸ್ ರವರ ತೋಟದಲ್ಲಿ ಅಕ್ರಮವಾಗಿ ಹಸುವನ್ನು ಕಡಿದು ಮಾಂಸ ಮಾಡುತ್ತಿದ್ದು, ದಾಳಿ ಮಾಡಿದಾಗ ಅರೋಫಿತರಾದ 1] ಸೈಯದ್ ವಜೀದ್ ಬಿನ್ ಸೈಯದ್ ಖಲೀಲ್ ,2] ವರ್ಗೀಸ್ ಎಂ.ಇ. ಬಿನ್ ಸ್ಕರಿಯ ಎಂ.ಐ. ರವರನ್ನು ವಶಕ್ಕೆ ಪಡೆದು, ಅರೋಫಿ ಖಾದರ್ @ ಖಾದ್ರಿ ಈತನು ತಪ್ಪಿಸಿಕೊಂಡು ಓಡಿ ಹೋಗಿದ್ದು, ಅರೋಪಿತರಿಂದ ಜಾನುವಾರುಗಳ ಚರ್ಮ, 35 ಕೆ.ಜಿ ಮಾಂಸ, ಜಾನುವಾರಿವಿನ 4 ಕೊಂಬುಗಳು, ಮಾಂಸ ಕಡಿಯಲು ಬಳಸಿದ ಚಾಕು, ಮಾಂಸ ಕಡಿಯುವ ಮರದ ತುಂಡು, ಒಂದು ಪ್ಲಾಸ್ಟಿಕ್ ಚೀಲ, ಒಂದು ಹೆಡ್ ಟಾರ್ಚ, ಗಳನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಫಿತರ ವಿರುದ್ದ ನ.ರಾ.ಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ದಿಲೀಪ್ ಕುಮಾರ್ ವಿ.ಟಿ. ಮತ್ತು ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ
ಮನುಷ್ಯ ಕಾಣೆ ಪ್ರಕರಣ
ಮೂಡಿಗೆರೆ ಪೊಲೀಸ್ ಠಾಣೆ.
ದಿನಾಂಕ;20/06/2022 ರಂದು ಪಿರ್ಯಾದಿ ಮೂರ್ತಿ ಆರ್. ಬಿನ್ ರವಿಚಂದ್ರ ವಾಸ ಇಂದಿರಾ ನಗರ ಬಿಳುಗುಳ ಮೂಡಿಗೆರೆ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯ ತಂಗಿ ಗೌರಿ ದಿನಾಂಕ; 20/06/2022 ರಂದು ಮದ್ಯಾಹ್ನ 3.00 ಗಂಟೆಗೆ ಮನೆಯಿಂದ ಹೋದವಳು, ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು, ಈವರೆಗೆ ಹುಡಕಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ತಂಗಿ ಗೌರಿ ಕೊಂ ಸತೀಶ 22 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾದಾರಣ ಮೈ ಕಟ್ಟು, ಕನ್ನಡ, ತೆಲಗು, ತಮಿಳು, ಬಾಷೆ ಮಾತಾನಾಡುತ್ತಾಳೆ, ನೇರಳೆ ಬಣ್ಣದ ಕಲರ್ ಚೂಡಿದಾರ ಧರಿಸಿರುತ್ತಾರೆ. ಕಾಣೆಯಾಗಿರುವ ತನ್ನ ತಂಗಿ ಗೌರಿ ರವರನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಅಕಸ್ಮಿಕ ವಿದ್ಯುತ್ ಸ್ಪರ್ಶದಿಂದ ಸಾವು ಪ್ರಕರಣ
ಕಡೂರು ಪೊಲೀಸ್ ಠಾಣೆ.
ದಿನಾಂಕ 21/06/2022 ರಂದು ಪಿರ್ಯಾಧಿ ಚಂದ್ರಪ್ಪ ಬಿನ್ ಹಾಲದಪ್ಪ, ವಾಸ ಡಿ. ಕಾರೇಹಳ್ಳಿ ಕಾಲೋನಿ ಕಡೂರು ತಾಲ್ಲೋಕು ವಾಸಿ ಇವರು ನೀಡಿದ ದೂರಿನಲ್ಲಿ ದಿನಾಂಕ; 20/06/2022 ರಂದು 3.30 ಗಂಟೆ ಸಮಯದಲ್ಲಿ ಪಿರ್ಯಾದಿ ಮತ್ತು ಪಿರ್ಯಾದಿ ಹೆಂಡತಿ ರೇಣುಕಾ ಜಮೀನಿಗೆ ಹೋಗುವಾಗ ಮಲ್ಲೇಶಪ್ಪ , ಗಂಗಾಧರಪ್ಪ ಇವರ ಜಮೀನಿಗೆ ವಿದ್ಯುತ್ ಸಂಪರ್ಕಕ್ಕೆ ಹಾದು ಹೋಗಿರುವ ವಿದ್ಯುತ್ ತಂತಿ ಕಂಬವನ್ನು ರೇಣುಕಮ್ಮ ನಡೆದುಕೊಂಡು ಹೋಗುತ್ತಿರುವಾಗ ಜಾರಿ ಬೀಳುವ ಸಮಯದಲ್ಲಿ ಹಿಡಿದುಕೊಂಡಿದ್ದು ವಿದ್ಯುತ್ ಸ್ಪರ್ಶವಾಗಿ ಒದ್ದಾಡುತ್ತಿದ್ದಾಗ, ಪಿರ್ಯಾದಿ ರೇಣುಕಮ್ಮಳಿಗೆ ಬಿಡಿಸಿಕೊಳ್ಳಲು ಹೋದಾಗ ಅವರಿಗೂ ಸ್ಪರ್ಶ ತಗಲಿರುತ್ತೆ, ರೇಣುಕಮ್ಮ ಶಾಕ್ ನಿಂದ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ. ಪಿರ್ಯಾದಿ ಹೆಂಡತಿಯ ಸಾವಿಗೆ ಮೆಸ್ಕಾಂ ನ ಅಧಿಕಾರಿಗಳು ಮತ್ತು ಮಲ್ಲೇಶಪ್ಪ , ಗಂಗಾಧರಪ್ಪ ಕಾರಣರಾಗಿರುತ್ತಾರೆಂದು ಅವರ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.