ಅಭಿಪ್ರಾಯ / ಸಲಹೆಗಳು

ಮನುಷ್ಯ ಕಾಣೆ ಪ್ರಕರಣ.
ಆಲ್ದೂರು ಪೊಲೀಸ್ ಠಾಣೆ.
ದಿನಾಂಕ 21-10-2021 ರಂದು ಈರೇಗೌಡ, ಮಾವಿನಹಳ್ಳಿ ವಾಸಿರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 19-10-2021 ರಂದುಬೆಳಿಗ್ಗೆ 05-00 ಗಂಟೆ ಸಮಯದಲ್ಲಿ  ನನ್ನ ಮಗಳಾದ ಅನಘ , 19 ವರ್ಷ ಈಕೆಯು ಮನೆಯಲ್ಲಿ ಯಾರಿಗೂ ಹೇಳದಂತೆ ತಾನು ಪ್ರೀತಿಯಿಂದ ಸಾಕಿದ ನಾಯಿಯನ್ನು ಸಹ ತೆಗೆದುಕೊಂಡು ಮನೆ ಬಿಟ್ಟು ಎಲ್ಲಿಗೋ ಹೋಗಿರುತ್ತಾಳೆ. ಆದ್ದರಿಂದ ಕಾಣೆಯಾಗಿರುವ ನನ್ನ ಮಗಳಾದ ಅನಘಳನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.


ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣ
ಬಣಕಲ್  ಪೊಲೀಸ್ ಠಾಣೆ
 ದಿನಾಂಕ 21/10/2021 ರಂದು ಪಿರ್ಯಾದಿ ಹರೀಶ್, ಬಿ.ಹೊಸಳ್ಳಿ ವಾಸಿರವರು ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿವಸ ಬೆಳಗ್ಗೆ 09-40 ಗಂಟೆ ಸಮಯದಲ್ಲಿ ಅಶೋಕನು  ತನ್ನ ಬಾಬ್ತು ಕೆಎ-18 ಎಎಫ್- 5069 ಬೈಕಿನಲ್ಲಿ ಹಿಂಬದಿಯ ಸೀಟಿನಲ್ಲಿ ರಾಜೇಶನನ್ನು ಕೂರಿಸಿಕೊಂಡು ದಾಸರಹಳ್ಳಿ ಬಸ್ ಸ್ಟ್ಯಾಂಡ್ ಎದುರಿನ ರಸ್ತೆಯಲ್ಲಿ ಹೋಗುತ್ತಿರುವಾಗ ಮತ್ತಿಕಟ್ಟೆಯಿಂದ ಬಣಕಲ್ ಟೌನ್ ಕಡೆಗೆ ಎದುರಿನಿಂದ ಬರುತ್ತಿದ್ದ ಕೆಎ-18 ಎಫ್- 0582 ಕೆಎಸ್ಆರ್ಟಿಸಿ ಬಸ್ ಚಾಲಕ ಬಸ್ಸನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ಬಂದು ಮೋಟಾರ್ ಸೈಕಲ್ಗೆ ಅಪಘಾತಪಡಿಸಿದ್ದು, ಹಿಂಬದಿಯಲ್ಲಿದ್ದ ಕಿಳಿತಿದ್ದ ರಾಜೇಶನು ನೆಲಕ್ಕೆ ಬಿದ್ದಾಗ ಬಸ್ ನ ಮುಂಭಾಗದ ಟೈರ್ ತಲೆಯ ಮೇಲೆ ಹರಿದಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದು , ಅಶೋಕನಿಗೆ ಬೆನ್ನಿಗೆ ಹಾಗೂ ತಲೆಗೆ ಪೆಟ್ಟಾಗಿದ್ದು,  ಅಪಘಾತಪಡಿಸಿದ ಬಸ್ ಚಾಲಕನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.


ಕರ್ನಾಟಕ ಜಾನುವಾರು ಕಳ್ಳತನ ಹಾಗೂ  ಹತ್ಯಾ ಪ್ರತಿಬಂಧಕ ಸಂರಕ್ಷಣಾ ಆದ್ಯಾದೇಶ-2020     
ಹರಿಹರಪುರ   ಪೊಲೀಸ್ ಠಾಣೆ .
ದಿನಾಂಕ 20-10-2021 ರಂದು ರಾತ್ರಿ 09-00 ಗಂಟೆ ಸಮಯದಲ್ಲಿ ಹರಿಹರಪುರ ಘನ ತ್ಯಾಜ್ಯ ವಿಲೇವಾರಿ ಘಟಕದ ಬಳಿ  ದಾಸನಕೂಡಿಗೆ ಕಡೆಯಿಂದ ಕೆಎ- 18 ಎ- 4584 ಪಿಕ್ಅಪ್ ವಾಹನದಲ್ಲಿ 1) ಶ್ರೀನಿವಾಸ, ದಾಸನಕೂಡಿಗೆ 2) ಶರತ್ , ದಾಸನಕೂಡಿಗೆ ವಾಸಿ ಇವರುಗಳು ಗಹೂಡ್ಸ್ ವಾಹನದಲ್ಲಿ ಎತ್ತಿನಗುಡ್ಡವನ್ನು ತುಂಬಿಕೊಂಡು ಬರುತ್ತಿದ್ದು ದನವನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಸಾಗಾಣಿಕೆ ಮಾಡುತ್ತಿರುವುದಾಗಿ ತಿಳಿಸಿದ್ದು , ಯಾವುದೇ ಪರವಾನಗಿಯನ್ನು ಹೊಂದದೆ ದನವನ್ನು ಕಡಿದು ಮಾಂಸಮಾಡಿ ಮಾರಾಟ ಮಾಡುವ ಉದ್ದೇಶದಿಂದ ಗೂಡ್ಸ್ ವಾಹನದಲ್ಲಿ ದನಗಳನ್ನು ಸಾಗಾಣಿಕೆ ಮಾಡುತ್ತಿದ್ದ ಆರೋಪಿತರ ವಿರುದ್ದ  ಹರಿಹರಪುರ   ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತಾರೆ.
 

ಇತ್ತೀಚಿನ ನವೀಕರಣ​ : 21-10-2021 06:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080