ಅಭಿಪ್ರಾಯ / ಸಲಹೆಗಳು

ಸೈಬರ್ ಪ್ರಕರಣ

ಸಿ.ಎ.ಎನ್ ಪೊಲೀಸ್ ಠಾಣೆ

ದಿನಾಂಕ:21-12-2021ರಂದುಶ್ರೀಮತಿ.ಸಪ್ತಮಿ,ಕೆಂಜಿಗೆಗ್ರಾಮ,ಮೂಡಿಗೆರೆ ತಾಲ್ಲೂಕುರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 20-12-2021 ರಂದು ಪಿರ್ಯಾದುದಾರರ ಮೊಬೈಲ್ ನಂಬರ್ ಗೆ ಯಾರೋ ಅನಾದೇಯ ನಂಬರ್ ನಿಂದ ಕರೆ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್  ಏಜೆಂಟ್ ಎಂದು ಪರಿಚಯಿಸಿಕೊಂಡು ಪಿರ್ಯಾದುದಾರರ ಬ್ಯಾಂಕ್  ಅಕೌಂಟ್ ನಂಬರ್ ನಿಂದ ಒಟ್ಟು 90,900/- ರೂ ಗಳನ್ನು ಯುಪಿಐ ನಿಂದ ಹಣವನ್ನು ವರ್ಗಾವಣೆ ಮಾಡಿಸಿಕೊಂಡು  ಮೋಸ ಮಾಡಿರುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ  ನೀಡಿದ ದೂರಿನ ಮೇರೆಗೆ ಸಿ.ಎ.ಎನ್  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಮನುಷ್ಯ ಕಾಣೆ ಪ್ರಕರಣ.

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ: 21-12-2021 ರಂದು  ತರೀಕೆರೆ  ಠಾಣಾ ಸರಹದ್ದಿನ ಎಂ.ಸಿ ಹಳ್ಳಿ ಗ್ರಾಮದ ವಾಸಿ ಭೈರೇಶರವರು ನೀಡಿದ ದೂರಿನಲ್ಲಿ  ದಿನಾಂಕ 13-12-2021 ಪಿರ್ಯಾದಿಯವರ ಹೆಂಡತಿ ಶಶಿಕಲಾರವರನ್ನು  ಅವರ ದೊಡ್ಡಪ್ಪನ ಮಗನಾದ ಅಣ್ಣಪ್ಪನಾಯ್ಕ ಆಧಾರ್ ಕಾರ್ಡ್ ಮಡಿಸುತ್ತೇನೆಂದು ಮನೆಯಿಂದ ಕರೆದುಕೊಂಡು ಹೋಗಿದ್ದು , ಇಲ್ಲಿಯವರೆಗೂ ಮನೆಗೆ ವಾಪಾಸ್ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಿದರೂ ಪತ್ತೆ ಅಗಿಲ್ಲವೆಂದು ಕಾಣೆಯಾಗಿರುವ ನನ್ನ ಹೆಂಡತಿ ಶಶಿಕಲಾ ಇವರ ಚಹರೆ ಕೋಲುಮುಖ , 23 ವರ್ಷ, ಎಣ್ಣೆಗೆಂಪು ಮೈಬಣ್ಣ,  ಸಾದಾರಣ ಮೈ ಕಟ್ಟು 5.2. ಅಡಿ ಎತ್ತರವಿದ್ದು ,ಕನ್ನಡ ಬಾಷೆ ಮಾತನಾಡುತ್ತಾರೆ. ಹಸಿರು ವೇಲ್, ಕಪ್ಪು ಪ್ಯಾಂಟ್,  ಹಳದಿ ಕಲರ್ ಟಾಪ್ ಧರಿಸಿದ್ದು  ಇವರನ್ನು ಪತ್ತೆ ಮಾಡಿ ಕೊಡುವಂತೆ ಕೋರಿ ನೀಡಿದ ದೂರಿನ ಮೇರೆಗೆ ತರೀಕೆರೆ   ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ನಗರ  ಪೊಲೀಸ್ ಠಾಣೆ.

ದಿನಾಂಕ: 21-12-2021 ರಂದು  ನಗರ ಠಾಣಾ ಸರಹದ್ದಿನ ಗೌರಿಕಾಲುವೆ  ಗ್ರಾಮದ ವಾಸಿ ನಾಗರತ್ನರವರು ನೀಡಿದ ದೂರಿನಲ್ಲಿ  ದಿನಾಂಕ 13-12-2021 ಪಿರ್ಯಾದಿಯವರ ಗಂಡ ನಾಗೇಶ್ರವರು ವಿಪರೀತ ಕುಡಿಯುವ ಅಭ್ಯಾಸವಿದ್ದು , ಮಾರ್ಕೋ ಮೆಸ್ ಹತ್ತಿರ ತಲೆಸುತ್ತು ಬಂದು ಬಿದ್ದಿದ್ದು ತಲೆಗೆ ಪೆಟ್ಟಾಗಿದ್ದರಿಂದ ಅವರನ್ನು ಚಿಕ್ಕಮಗಳೂರಿನ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು ,ದಿನಾಂಕ 15-12-2021 ರಂದು ಬೆಳಿಗ್ಗೆ ಬಾತ್ ರೂಂಗೆ ಹೋಗುತ್ತೇನೆಂದು ಹೇಳಿ ನನ್ನನ್ನು ತಳ್ಳಿ ಓಡಿಹೋಗಿದ್ದು ,ಇಲ್ಲಿಯವರೆಗೂ ಅವರು ಬಂದಿರುವುದಿಲ್ಲ.  ಎಲ್ಲಾ ಕಡೆ ಹುಡುಕಿದರೂ ಪತ್ತೆ ಅಗಿಲ್ಲವೆಂದು ಕಾಣೆಯಾಗಿರುವ ನನ್ನ ಗಂಡ ನಾಗೇಶ್  ಇವರ ಚಹರೆ 42 ವರ್ಷ, ಎಣ್ಣೆಗೆಂಪು ಮೈಬಣ್ಣ,  ಬೋಳತಲೆಯಾಗಿದ್ದು, ಕಪ್ಪುಕುದಲು ಗಡ್ಡ ಬಿಟ್ಟಿರುತ್ತಾರೆ, ಸಾದಾರಣ ಮೈ ಕಟ್ಟು 5.5 ಅಡಿ ಎತ್ತರವಿದ್ದು ,ಕನ್ನಡ ಬಾಷೆ ಮಾತನಾಡುತ್ತಾರೆ. ತುಂಬು ತೋಳಿನ ಬಿಳಿಯಶರ್ಟ್ , ಸಿಮೆಂಟ್ ಕಲ್ಲರ್ ನ ಪ್ಯಾಂಟ್, ಕಪ್ಪು ಬಣ್ಣದ ಜರ್ಕಿನ್ ಧರಿಸಿರುತ್ತಾರೆ. ಇವರನ್ನು ಪತ್ತೆ ಮಾಡಿ ಕೊಡುವಂತೆ ಕೋರಿ ನೀಡಿದ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ಕರ್ನಾಟಕ ಜಾನುವಾರು ಕಳ್ಳತನ ಹಾಗೂ  ಹತ್ಯಾ ಪ್ರತಿಬಂಧಕ ಸಂರಕ್ಷಣಾ ಆದ್ಯಾದೇಶ-2020      

ತರೀಕೆರೆ   ಪೊಲೀಸ್ ಠಾಣೆ .

ದಿನಾಂಕ 21-12-2021 ರಂದು ಮದ್ಯಾಹ್ನ 12-15  ಗಂಟೆ ಸಮಯದಲ್ಲಿ ತರೀಕೆರೆ ಪಟ್ಟಣದ ಕಡೆಯಿಂದ ಕೆಎ-14 ಎ- 5629 ಗೂಡ್ಸ್  ವಾಹನದಲಿದ್ದ  1) ಶಬಾಜ್ ಬೇಗ್  ಬಿನ್ ಉಸ್ಮಾನ್ ಬೇಗ್  , ಭದ್ರಾ ಕಾಲೋನಿ , ಭದ್ರಾವತಿ ತಾ. 2) ಶೌಕತ್ ಬಿನ್ ಇಸ್ಮಾಯಿಲ್ ಬೇಗ್ , ಭದ್ರಾ ಕಾಲೋನಿ , ಭದ್ರಾವತಿ ತಾ. ಇವರುಗಳು ಒಂದು ಮಿನಿ ಗೂಡ್ಸ್ ವಾಹನದಲ್ಲಿ 2 ಎತ್ತಿನ ಕರುಗಳನ್ನು  ಹಿಂಸಾತ್ಮಕವಾಗಿ ತುಂಬಿಕೊಂಡು ಬಂದಿದ್ದು , ಈ ಬಗ್ಗೆ ಆರೋಪಿಗಳನ್ನು ವಿಚಾರ ಮಾಡಲಾಗಿ ಭದ್ರಾವತಿಗೆ ಹೋಗೋಣವೆಂದು ವಾಪಾಸ್ ಬೆಟ್ಟದಹಳ್ಳಿಯಿಂದ ಈ ಕಡೆಗೆ ಬರುತ್ತಿರುವಾಗ ರಸ್ತೆಯ ಪಕ್ಕ ಯಾರೂ ಜನರು ಇಲ್ಲದೇ ಇರುವ ಪ್ರದೇಶದಲ್ಲಿ ಹೊಲದಲ್ಲಿ ಮೇಯುತ್ತಿದ್ದ ಕರುಗಳನ್ನು  ಕಳ್ಳತನ ಮಾಡಿ ಕಡಿದು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಸಾಗಾಣಿಕೆ ಮಾಡುತ್ತಿರುವುದಾಗಿ ತಿಳಿಸಿದ್ದು , ಯಾವುದೇ ಪರವಾನಗಿಯನ್ನು ಹೊಂದದೆ ದನವನ್ನು ಕಳ್ಳತನ ಮಾಡಿ ಕಡಿದು ಮಾಂಸಮಾಡಿ ಮಾರಾಟ ಮಾಡುವ ಉದ್ದೇಶದಿಂದ ಗೂಡ್ಸ್ ವಾಹನದಲ್ಲಿ ದನಗಳನ್ನು ಸಾಗಾಣಿಕೆ ಮಾಡುತ್ತಿದ್ದ ಆರೋಪಿತರ ವಿರುದ್ದ  ತರೀಕೆರೆ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಎಸ್.ಐ. ಕೃಷ್ಣಾನಾಯ್ಕ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

ಅಪಘಾತ ಪ್ರಕರಣ.

ಕೊಪ್ಪ  ಪೊಲೀಸ್ ಠಾಣೆ.

ದಿನಾಂಕ:20-12-2021 ರಂದು ಹರಿಹರಪುರ ಗ್ರಾಮದ ವಾಸಿ ಪೃಥ್ವಿರಾಜ್ ಎಂಬುವರು ನೀಡಿದ ದೂರಿನಲ್ಲಿ ದಿನಾಂಕ: 21/12/2021 ರಂದು ಬೆಳಗ್ಗೆ 10-00 ಗಂಟೆ ಸಮಯದಲ್ಲಿ ನಾನು ಕೆಎ-18 ಯು-6234 ಬೈಕಿನಲ್ಲಿ ಹರಿಹರಪುರದ ಬಿ.ಜೆ.ಕಟ್ಟೆಯ ಮುಂಭಾಗದ ರಸ್ತೆಯ ತಿರುವಿನಲ್ಲಿ ಹೊಗುತ್ತಿರುವಾಗ ಎದುರುಗಡೆಯಿಂದ ಬಂದ ಕೆಎ-41 ಎಂ-5634 ಕಾರಿನ ಚಾಲಕ ಮೊಹಮದ್ ಷರೀಫ್ ರವರು  ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ನನ್ನ ಬೈಕಿಗೆ ಡಿಕ್ಕಿ ಹೊಡೆಸಿದ ಪರಿಣಾಮ ನಾನು ಬೈಕ್ ಸಮೇತ ಕೆಳಗೆ ಬಿದ್ದಿದ್ದು ಬಲಗೈ, ಕಾಲಿನ ಮಂಡಿಗೆ ಪೆಟ್ಟಾಗಿರುತ್ತೆ.  ಅಪಘಾತಗೊಳಿಸಿದ ಕಾರಿನ ಚಾಲಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು  ನೀಡಿದ ದೂರಿನ ಮೇರೆಗೆ ಕೊಪ್ಪ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಇತ್ತೀಚಿನ ನವೀಕರಣ​ : 21-12-2021 06:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080