ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ. 

ಕಡೂರು  ಪೊಲೀಸ್ ಠಾಣೆ.

ದಿನಾಂಕ:22/02/2022 ರಂದು ಪಿರ್ಯಾದಿ ಪ್ರಶಾಂತ ನಾಯ್ಕ ಬಿನ್ ಚಂದ್ರನಾಯ್ಕ  ಬೇಲನಹಳ್ಳಿ ತಾಂಡ್ಯ  ವಾಸಿ ಇವರು ನೀಡಿದ ದೂರಿನಲ್ಲಿ ದಿನಾಂಕ;21/02/2022 ರಂದು ಪಿರ್ಯಾದಿ ತಮ್ಮ ಕೆಎ-18-ಟಿ-9087 ಟ್ಯಾಕ್ಟರ್ ನಲ್ಲಿ ಮಣ್ಣು ತುಂಬುವ ಕೆಲಸಕ್ಕೆ ಹೋಗಿದ್ದು, ಪಿರುಮೇನಹಳ್ಳಿಯಲ್ಲಿ ಮಣ್ಣು ತುಂಬಿಸುತ್ತಿದ್ದ ಸಮಯದಲ್ಲಿ ಟ್ಯಾಕ್ಟರ್ ಚಾಲಕ ಅಜಾಗರೂಕತೆಯಿಂದ ಟ್ಯಾಕ್ಟರ್ ಚಾಲನೆ ಮಾಡಿ ಟ್ಯಾಕ್ಟರ್ ಪಲ್ಟಿಯಾಗಿ ಟ್ಯಾಕ್ಟರ್ ಚಾಲಕ ರಾಕೇಶ್ ಮತ್ತು ಪುನಿತ್ ಗೂ ಸಹ ಪೆಟ್ಟಾಗಿದ್ದು ಪುನಿತ್ ಸ್ಥಳದಲ್ಲೇ ಸಾವನಪ್ಪಿದ್ದು  ಪುನಿತ್ ರವರ ಸಾವಿಗೆ ಕಾರಣವಾಗಿರುವ  ಕೆಎ-18-ಟಿ-9087 ಟ್ಯಾಕ್ಟರ್ ಚಾಲಕ ರಾಕೇಶ್ ರವರ  ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ಮೂಡಿಗೆರೆ ಪೊಲೀಸ್ ಠಾಣೆ.

ದಿನಾಂಕ:21-02-2022 ರಂದು ಮೂಡಿಗೆರೆ ಠಾಣಾ ಸರಹದ್ದಿನ ಕೊಲ್ಲಿಬೈಲ್ ಕ್ರಾಸ್ ನಿಂದ ಬಿಳುಗುಳ  ರಸ್ತೆಯ ಬದಿಯಲ್ಲಿ ಬ್ಯಾಂಕ್ ಅಫ್ ಬರೋಡದ ಎದುರು ವೇಲು ಬಿನ್ ಸುಬ್ಬಯ್ಯ ನು  ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ಅರೋಪಿಯನ್ನು ವಶಕ್ಕೆ ಪಡೆದು ಆರೋಪಿ ವಶದಲ್ಲಿ 4 ಲೀಟರ್ 50 ಎಂ.ಎಲ್.ನ ಮದ್ಯ ಅಂದಾಜು ಬೆಲೆ 1580/- ರೂ ಅಗಿದ್ದು ಮಧ್ಯವನ್ನು ಮತ್ತು ಮದ್ಯ ಮಾರಾಟ ಮಾಡಿದ ನಗದು ಹಣ 100/- ರೂ ವನ್ನು ಅಮಾನತ್ತುಪಡಿಸಿಕೊಂಡು ಬಂದು  ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ರವಿ ಜಿ.ಎ.  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 22-02-2022 07:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080