ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ:21/03/2022 ರಂದು ಪಿರ್ಯಾದಿ ಶ್ರೀಮತಿ ಲತಾಮಣಿ ಹೆಚ್. ಕೊಂ ಮಹೇಶ್ವರಪ್ಪ  ಚೀರನಹಳ್ಳಿ ಶಿವನಿ ಹೋಬಳಿ ವಾಸಿ ಇವರು ನೀಡಿದ ದೂರಿನಲ್ಲಿ ದಿನಾಂಕ: 21/03/2022 ರಂದು ಪಿರ್ಯಾದಿ ಮಗ ಶಿವಕುಮಾರ್ ಈತನು  ರಂಗಸ್ವಾಮಿ @ ರಂಗನಾಥ ನನ್ನು ಕೆಎ-66-ಕೆ-6459 ರ ಬೈಕಿನಲ್ಲಿ ಚೀರನಹಳ್ಳಿಯಿಂದ ಶಿವನಿಗೆ ಹೋಗುವ ರಸ್ತೆಯಲ್ಲಿರುವ ದಂದೂರು ಗೇಟ್ ಹತ್ತಿರ   ಹೋಗುತ್ತಿರುವಾಗ ಶಿವನಿ ಕಡೆಯಿಂದ ಕೆಎ-18-ಟಿಎ-9702 ರ ಟ್ಯಾಕ್ಟರ್ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಶಿವಕುಮಾರ್  ಚಾಲಾಯಿಸುತ್ತಿದ್ದ  ಬೈಕಿಗೆ ಡಿಕ್ಕಿ ಪರಿಣಾಮ ಶಿವಕುಮಾರ್ ಗೆ ತಲೆಗೆ ಮತ್ತು ಎದೆಗೆ ಬಲವಾದ  ಪೆಟ್ಟಾಗಿದ್ದು, ಚಿಕಿತ್ಸೆಗೆ ಅಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ ಎಂದು ತಿಳಿಸಿದ್ದು,  ಅಪಘಾತ ಉಂಟು ಮಾಡಿದ ಕೆಎ-18-ಟಿಎ-9702 ರ ಟ್ಯಾಕ್ಟರ್ ವಾಹನದ ಚಾಲಕನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಗಾಂಜಾ ಮಾರಾಟ ಪ್ರಕರಣ

ಬಸವನಹಳ್ಳಿ ಪೊಲೀಸ್ ಠಾಣೆ.

ದಿನಾಂಕ:21-03-2022 ರಂದು ಬಸವನಹಳ್ಳಿ ಠಾಣಾ ಸರಹದ್ದಿನ  ಗೌರಿ ಕಾಲುವೆ ಡಯಟ್ ಕಾಲೇಜ್ ಮೈದಾನದ ಹಿಂಭಾಗದಲ್ಲಿರುವ ಚಾನಲ್  ರಸ್ತೆಯಲ್ಲಿ ಸಾಕೀಬ್ ಬಿನ್ ಅಪ್ಸರ್ ಮದೀನ ಮಸೀದಿ ಹತ್ತಿರ ಶರಿಫ್ ಗಲ್ಲಿ ಚಿಕ್ಕಮಗಳೂರು ವಾಸಿ ಈತನು  ಅಕ್ರಮವಾಗಿ ಗಾಂಜಾ ಸೊಪ್ಪನ್ನು ಮಾರಾಟ ಮಾಡಲು ತಂದಿದ್ದು  ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದು ಆರೋಫಿತನ ವಶದಲ್ಲಿದ್ದ 3 ಗ್ರಾಂ ತೂಕದ 40 ಗಾಂಜಾ ಪ್ಯಾಕೇಟ್ ಗಳು ಬೆಲೆ 12,000/- ರೂ ಹಾಗೂ 154 ಗ್ರಾಂ ತೂಕದ ಗಾಂಜಾಪುಡಿಯ ಒಂದು ಪ್ಲಾಸ್ಟಿಕ್ ಕವರ್ ಬೆಲೆ 15,400/- ರೂ  ಅಗಿದ್ದು ಗಾಂಜಾ ಪ್ಯಾಕೇಟ್ ಗಳನ್ನು ಅಮಾನತ್ತುಪಡಿಸಿಕೊಂಡು ಬಂದು  ಅರೋಪಿತನಿಗೆ ಗಾಂಜಾವನ್ನು ಮಾರಾಟ ಮಾಡಲು ಮುದಾಸೀರ್ ನೀಡಿದ್ದು,  ಆರೋಪಿತರ ವಿರುದ್ದ ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆ ಕಡೂರು ಪಿ.ಎಸ್.ಐ. ಕಿರಣ್ ಕುಮಾರ್ ಪಿ.  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಬಂದೂಕು ಪ್ರಕರಣ

ಬಾಳೆಹೊನ್ನೂರು ಪೊಲೀಸ್ ಠಾಣೆ.

ದಿನಾಂಕ:22-03-2022 ರಂದು ಪಿರ್ಯಾಧಿ ಪರಶುರಾಮ್ ಸಿ.ಎಸ್. ಉಪ-ವಲಯ ಅರಣ್ಯಾಧಿಕಾರಿ ಮಾಗುಂಡಿ ವಿಭಾಗ, ಇವರು ನೀಡಿದ ದೂರಿನಲ್ಲಿ ದಿನಾಂಕ:21-03-2022 ರಂದು  ಪಿರ್ಯಾದಿ ಮತ್ತು ಅವರ ಸಿಬ್ಬಂದಿ ಶಿವಶಂಕರ್ ರವರು ನೇಮನಹಳ್ಳಿ-ಹಲಸೂರು ಮೀಸಲು ಅರಣ್ಯದಲ್ಲಿ ಗಸ್ತು ತಿರುಗುತ್ತಿರುವಾಗ ಬಾಳೆಹೊನ್ನೂರು ಕಡೆಗೆ ವೇಗವಾಗಿ ಬೈಕ್ ನಲ್ಲಿ ನೇಮನಹಳ್ಳಿ ವಾಸಿ ಅವಿನಾಶ್ ಎಂಬುವನು ಹೋಗುತ್ತಿದ್ದು ಅವನನ್ನು ಬೆನ್ನಟ್ಟಿ ಹೋಗುತ್ತಿದ್ದಾಗ ಅತನು ತನ್ನ ಕೈಯಲ್ಲಿದ್ದ ನಾಡ ಬಂದೂಕನ್ನು  ಬಿಳಿಸಿಕೊಂಡು ಹೋಗಿದ್ದು ಆರೋಪಿತನು ಅಕ್ರಮವಾಗಿ ನಾಡ ಬಂದೂಕನ್ನು ಹೊಂದಿದ್ದು ಆತನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ದ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

 

ಇತ್ತೀಚಿನ ನವೀಕರಣ​ : 22-03-2022 06:48 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080