ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಪಂಚನಹಳ್ಳಿ ಪೊಲೀಸ್ ಠಾಣೆ.

ದಿನಾಂಕ:22/04/2022 ರಂದು ಪಿರ್ಯಾದಿ ಶಾಂತಪ್ಪ ಬಿನ್ ಮರಿಯಪ್ಪ ಕೋಡಿಹಳ್ಳಿ, ಬೆಲಗೂರು ವಾಸಿ, ಇವರು ನೀಡಿದ ದೂರಿನಲ್ಲಿ, ದಿನಾಂಕ:21/04/2022 ರಂದು ಪಿರ್ಯಾದಿಯ ಮಗ ಎಸ್. ಜಯಣ್ಣ ಮತ್ತು ಮಹಾಂತೇಶ್ ರವರು ಮಹಾಂತೇಶ್ ರವರು ಗಾರೆ ಕೆಲಸಕ್ಕೆಂದು ಕೆಎ-16-ಇಕ್ಯೂ-4966 ಕಂಚುಗಲ್ ಗ್ರಾಮಕ್ಕೆ ಹೊಗಿ ವಾಪಸ್ಸು ಬರುವಾಗ ಅನಂದಪುರ ಮತ್ತು ಮರವಂಜಿ ಮದ್ಯೆ ರಸ್ತೆಯಲ್ಲಿ ಮಹಾಂತೇಶ್ ನು ಬೈಕ್ ಅನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು  ಬಂದು ಸಡನ್ ಬೈಕಿನ ಬ್ರೇಕ್ ಹಾಕಿದ್ದ ಪರಿಣಾಮ, ಬೈಕಿನ ಹಿಂಭಾಗದಲ್ಲಿ ಕುಳೀತಿದ್ದ ಜಯಣ್ಣ ರಸ್ತೆಯ ಮೇಲೆ ಬಿದ್ದು  ಬಲವಾದ ಪೆಟ್ಟಾಗಿದ್ದು,  ಸ್ಥಳದಲ್ಲೆ ಮೃತಪಟ್ಟಿರುತ್ತಾರೆ. ಅಪಘಾತ ಉಂಟು ಮಾಡಿದ ಬೈಕ್ ಚಾಲಕನ ವಿರುದ್ದ ಕ್ರಮ ಕೈಗೊಳ್ಳಲು, ನೀಡಿದ ದೂರಿನ ಮೇರೆಗೆ ಪಂಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ಬಾಳೆಹೊನ್ನೂರು ಪೊಲೀಸ್ ಠಾಣೆ.

ದಿನಾಂಕ;21/04/2022 ರಂದು ಬಾಳೂರು ಠಾಣಾ ಸರಹದ್ದಿನ ಮಾಳಿಗನಾಡು ಗ್ರಾಮದ ವಾಸಿಯಾದ ಬಿ.ಬಿ. ಗೋಪಾಲಶೆಟ್ಟಿ ಬಿನ್ ಪುಟ್ಟಶೆಟ್ಟಿ ಎಂಬುವರು ತನ್ನ ಅಂಗಡಿ ಮುಂಭಾಗದಲ್ಲಿ ಸಾರ್ವಜನಿಕರಿಗೆ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದು ಆರೋಪಿತನನ್ನು ವಶಕ್ಕೆ ಪಡೆದು, ಅಕ್ರಮವಾಗಿ  ಹೊಂದಿದ್ದ 90 ಎಂ.ಎಲ್ ನ 46 ಟೆಟ್ರಾಪ್ಯಾಕ್ ಮದ್ಯ ಅಂದಾಜು ಬೆಲೆ ರೂ 1615/- ಅಗಿದ್ದು, ಸದರಿ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಬಾಳೂರು ಪಿ.ಎಸ್.ಐ. ಪವನಕುಮಾರ್ ಸಿ.ಸಿ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಮಟ್ಕಾ ಜೂಜಾಟ ಪ್ರಕರಣ

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ:21/04/2022 ರಂದು ತರೀಕೆರೆ ನಗರದ ಗಣಪತಿ ಪ್ಯಾಂಡಲ್ ಹಿಂಭಾಗದ ತಾಯರ್ ರಸ್ತೆಯಲ್ಲಿ  ಪ್ರವೀಣ್@ ಅಲಿಯಾಸ್ ಪ್ರವೀಣ್ ಆಚಾರಿ  ಬಿನ್ ಲೇಟ್ ನಾಗರಾಜ ಬಾಬುರಾವ್ ಮತ್ತು ಶಿವಣ್ಣ ಕೋಡಿಕ್ಯಾಂಪ್ ತರೀಕೆರೆ ಎಂಬುವರು ಅಕ್ರಮವಾಗಿ ಸಾರ್ವಜನಿಕರಿಗೆ ಮಟ್ಕಾ ಜೂಜಾಟ ಆಡಿಸುತ್ತಿದ್ದ ಅರೋಪಿತರವರನ್ನು ವಶಕ್ಕೆ ಪಡೆದು ಆರೋಪಿತನು ಸಾರ್ವಜನಿಕರಿಂದ ಸಂಗ್ರಹಿಸಿದ ಹಣ 20,500/-ರೂ ನಗದು ಹಣ, ಒಂದು ಮಟ್ಕಾ ನಂಬರಿನ ಚೀಟಿ ಮತ್ತು ಒಂದು ಬಾಲ್ ಪೆನ್ನು ಅನ್ನು ಅಮಾನತ್ತುಪಡಿಸಿಕೊಂಡು ಬಂದು ನಗರ ಪೊಲೀಸ್ ಠಾಣೆಯಲ್ಲಿ ಆರೋಪಿತರ ವಿರುದ್ದ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಸಿ.ಇ.ಎನ್. ಪೊಲೀಸ್ ಠಾಣೆಯ ಪಿ.ಎಸ್.ಐ. ನಾಸೀರ್ ಹುಸೇನ್ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ:21/04/2022 ರಂದು ತರೀಕೆರೆ ನಗರದ ವಾಲ್ಮೀಕಿ ನಾಯಕರ ಬೀದಿಯ ಬೇಡರ ಕಣಪ್ಪ ದೇವಸ್ಥಾನದ ಬಳಿ 1] ಸಂಜಯ್ ಕುಮಾರ್ ಟಿ.ಕೆ. ಬಿನ್ ಕೃಷ್ಣಮೂರ್ತಿ 2] ವಿನಯ್ ಟಿ.ಕೆ. ಬಿನ್ ಕೃಷ್ಣಮೂರ್ತಿ ವಾಸ ನಾಯಕರ ಬೀದಿ ತರೀಕೆರೆ ಟೌನ್   ಎಂಬುವರು ಅಕ್ರಮವಾಗಿ ಸಾರ್ವಜನಿಕರಿಗೆ ಮಟ್ಕಾ ಜೂಜಾಟ ಆಡಿಸುತ್ತಿದ್ದ ಅರೋಪಿತರವರನ್ನು ವಶಕ್ಕೆ ಪಡೆದು ಆರೋಪಿತರು ಸಾರ್ವಜನಿಕರಿಂದ ಸಂಗ್ರಹಿಸಿದ ಹಣ 50,290/-ರೂ ನಗದು ಹಣ, ಒಂದು ಮಟ್ಕಾ ನಂಬರಿನ ಚೀಟಿ ಮತ್ತು ಒಂದು ಬಾಲ್ ಪೆನ್ನು ಅನ್ನು ಅಮಾನತ್ತುಪಡಿಸಿಕೊಂಡು ಬಂದು ನಗರ ಪೊಲೀಸ್ ಠಾಣೆಯಲ್ಲಿ ಆರೋಪಿತರ ವಿರುದ್ದ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಸಿ.ಇ.ಎನ್. ಪೊಲೀಸ್ ಠಾಣೆಯ ಪಿ.ಐ. ಮುತ್ತುರಾಜ್. ಹೆಚ್. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ನಗರ ಪೊಲೀಸ್ ಠಾಣೆ.

ದಿನಾಂಕ:21/04/2022 ರಂದು ಚಿಕ್ಕಮಗಳೂರು ನಗರದ ಟಿಪ್ಪುನಗರದ ಬಳಿ ಖಾದರ್ ಬಾಷ ಬಿನ್ ರೆಹಮತ್ತುಲ್ಲಾ   ಎಂಬುವರು ಅಕ್ರಮವಾಗಿ ಸಾರ್ವಜನಿಕರಿಗೆ ಮಟ್ಕಾ ಜೂಜಾಟ ಆಡಿಸುತ್ತಿದ್ದ ಅರೋಪಿತರವರನ್ನು ವಶಕ್ಕೆ ಪಡೆದು ಆರೋಪಿತನು ಸಾರ್ವಜನಿಕರಿಂದ ಸಂಗ್ರಹಿಸಿದ ಹಣ 1550/-ರೂ ನಗದು ಹಣ, ಒಂದು ಮಟ್ಕಾ ನಂಬರಿನ ಚೀಟಿ ಮತ್ತು ಒಂದು ಬಾಲ್ ಪೆನ್ನು ಅನ್ನು ಅಮಾನತ್ತುಪಡಿಸಿಕೊಂಡು ಬಂದು ನಗರ ಪೊಲೀಸ್ ಠಾಣೆಯಲ್ಲಿ ಆರೋಪಿತರ ವಿರುದ್ದ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಡಿ.ಸಿ.ಐ.ಬಿ. ಪೊಲೀಸ್ ಠಾಣೆಯ ಪಿ.ಎಸ್.ಐ. ಗೋವಿಂದ ನಾಯ್ಕ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ನಗರಪೊಲೀಸ್ ಠಾಣೆ.

ದಿನಾಂಕ:21/04/2022 ರಂದು ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆಯಲ್ಲಿರುವ ರುಚಿ ಚಿಕನ್ ಬಳಿ ಜಬೀ ಬಿನ್ ಇಲಿಯಾಸ್  ವಾಸ ಸಂತೆ ಮಾರ್ಕೆಟ್ ಚಿಕ್ಕಮಗಳೂರು ಎಂಬುವರು ಅಕ್ರಮವಾಗಿ ಸಾರ್ವಜನಿಕರಿಗೆ ಮಟ್ಕಾ ಜೂಜಾಟ ಆಡಿಸುತ್ತಿದ್ದ ಅರೋಪಿತರವರನ್ನು ವಶಕ್ಕೆ ಪಡೆದು ಆರೋಪಿತನು ಸಾರ್ವಜನಿಕರಿಂದ ಸಂಗ್ರಹಿಸಿದ ಹಣ 6150/-ರೂ ನಗದು ಹಣ, ಒಂದು ಮಟ್ಕಾ ನಂಬರಿನ ಚೀಟಿ ಮತ್ತು ಒಂದು ಬಾಲ್ ಪೆನ್ನು ಅನ್ನು ಅಮಾನತ್ತುಪಡಿಸಿಕೊಂಡು ಬಂದು ನಗರ ಪೊಲೀಸ್ ಠಾಣೆಯಲ್ಲಿ ಆರೋಪಿತರ ವಿರುದ್ದ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ. ಕೆ.ಎಸ್. ಸತೀಶ್  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 22-04-2022 06:50 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080