ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಹಾಗೂ ಕೊವಿಡ್ 19 ನಿಯಮ ಉಲ್ಲಂಘನೆ  ಪ್ರಕರಣ. 

ಗ್ರಾಮಾಂತರ  ಪೊಲೀಸ್  ಠಾಣೆ

ದಿನಾಂಕ: 22/05/2021 ರಂದು ಗ್ರಾಮಾಂತರ ಠಾಣಾ ಸರಹದ್ದಿನ ಇಂದಾವರ ಗ್ರಾಮದ ಕೆರೆಕೋಡಮ್ಮ ದೇವಾಲಯದ ಮುಂದಿನ ರಸ್ತೆಯಲ್ಲಿ ಸಚ್ಚಿನ್ ಎಂಬ ವ್ಯಕ್ತಿ  ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆಂದು  ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದು ಅರೋಪಿಯಿಂದ 90 ಎಂ.ಎಲ್.ನ ಓರಿಜನಲ್ ಚಾಯಸ್ ಡಿಲಕ್ಸ್ ವಿಸ್ಕಿಯ 25 ಟೆಟ್ರಾ ಪ್ಯಾಕ್  ಬೆಲೆ 878/- ರೂ ನ ಮದ್ಯ ವಶಪಡಿಸಿಕೊಂಡು ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್ಐ. ಮುದ್ದಪ್ಪ ಬಿ.ಇ.  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಸಖರಾಯಪಟ್ಟಣ  ಪೊಲೀಸ್  ಠಾಣೆ

ದಿನಾಂಕ: 22/05/2021 ರಂದು ಸಖರಾಯಪಟ್ಟಣ ಠಾಣಾ ಸರಹದ್ದಿನ ಉದ್ದೊಬೊರನಹಳ್ಳಿ ಗ್ರಾಮದಿಂದ ಬಿಳೆಕಲ್ಲಹಳ್ಳಿಗೆ  ಹೋಗುವ ಮೂಡ್ಲ ಓಣಿ ರಸ್ತೆಯಲ್ಲಿ  ಯಾರೋ ಅಕ್ರಮವಾಗಿ ಸಾರ್ವಜನಿಕರನ್ನು  ಗುಂಪುಕಟ್ಟಿಕೊಂಡು ಕೊವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿ ಶೀವಯ್ಯ ಬಿನ್ ಲೇ: ಹೋಂಗಯ್ಯ  ವಾಸ ಬಿಳೆಕಲ್ಲಹಳ್ಳಿ ಈತನನ್ನು  ವಶಕ್ಕೆ ಪಡೆದು ಆತನ ಬಳಿ ಇದ್ದ 90 ಎಂ.ಎಲ್.ನ ರಾಜಾವಿಸ್ಕಿಯ 54 ಟೆಟ್ರಾ ಪೌಚ್  ಮದ್ಯದ ಅಂದಾಜು ಬೆಲೆ 1897/ರೂ ಆಗಿರುತ್ತೆ.ಆರೋಫಿ ಬಳಿ ಇದ್ದ ಮದ್ಯ ಮಾರಾಟ ದಿಂದ ಬಂದ ಹಣ  100/- ರೂ ವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ  ಕಾರ್ಯಾಚರಣೆಯಲ್ಲಿ ಪಿ.ಎಸ್ಐ. ಹರೀಶ್    ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ

ಅಕ್ರಮ ಮದ್ಯ ಮಾರಾಟ

ಬೀರೂರು  ಪೊಲೀಸ್  ಠಾಣೆ

ದಿನಾಂಕ: 22/05/2021 ರಂದು ಬೀರೂರು  ಠಾಣಾ ಸರಹದ್ದಿನ ಬೀರೂರು ಪಟ್ಟಣದ ಮಹಾನವಮಿ ಬಯಲಿನ ಮುಂದೆ ಸ್ಮಶಾನಕ್ಕೆ ಹೋಗುವ ರಸ್ತೆಯ ಪಂಪ್ ಹೌಸ್ ಮುಂಭಾಗದಲ್ಲಿ ಶ್ರೀಕಂಠಪ್ಪ ಬಿನ್ ಕರಿಯಪ್ಪ ವಾಸ ಸರಸ್ವತಿಪುರಂ ಬೀರೂರು ಈತನು  ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆಂದು  ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದು ಅರೋಪಿಯಿಂದ ಬೆಲೆ 1456/- ರೂ ನ ವಿವಿಧ ಬಗೆಯ ಮದ್ಯ ವಶಪಡಿಸಿಕೊಂಡು ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್ಐ. ವಿಶ್ವನಾಥ ಎನ್.ಸಿ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಬೀರೂರು  ಪೊಲೀಸ್  ಠಾಣೆ

ದಿನಾಂಕ: 22/05/2021 ರಂದು ಬೀರೂರು  ಠಾಣಾ ಸರಹದ್ದಿನ ಬೀರೂರು ಪಟ್ಟಣದ ಭಗಿರಥ ಸರ್ಕಲ್ ಬಳಿ ಬಿ.ಎನ್. ಪ್ರಭಾಕರ ಬಿನ್ ಲೇಟ್ ನಂಜುಂಡಪ್ಪ  ರವರು ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆಂದು  ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದು ಅರೋಪಿಯಿಂದ 90 ಎಂ.ಎಲ್. ನ ರಾಜಾ ವಿಸ್ಕಿಯ 54 ಟೆಟ್ರಾ ಪ್ಯಾಕ್ ನ  ಬೆಲೆ 1890/- ರೂ ನ ವಿವಿಧ ಬಗೆಯ ಮದ್ಯ ಮತ್ತು ಸ್ಕೂಟಿಯನ್ನು ವಶಪಡಿಸಿಕೊಂಡು ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ  ಪಿ.ಎಸ್ಐ. ಬಸವರಾಜ್ ಹೆಚ್. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ

ಬೀರೂರು  ಪೊಲೀಸ್  ಠಾಣೆ

ದಿನಾಂಕ: 21/05/2021 ರಂದು ಬೀರೂರು  ಠಾಣಾ ಸರಹದ್ದಿನ ಕುಡ್ಲೂರು ಗ್ರಾಮದ ಮಲ್ಲಿಕಾಜರ್ುನಪ್ಪ ಬಿನ್ ರಂಗಪ್ಪ  ರವರು ಕೊರಟಿಗೆರೆ ರಸ್ತೆಯಲ್ಲಿ ಸ್ಕೂಟಿಯಲ್ಲಿ  ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆಂದು  ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದು ಅರೋಪಿಯಿಂದ ಬೆಲೆ 3262/- ರೂ ನ ವಿವಿಧ ಬಗೆಯ ಮದ್ಯ ಮತ್ತು ಸ್ಕೂಟಿಯನ್ನು ವಶಪಡಿಸಿಕೊಂಡು ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆ ಯಲ್ಲಿ ಪಿ.ಎಸ್ಐ. ಬಸವರಾಜ್ ಹೆಚ್. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಕೊವಿಡ್ 19 ನಿಯಮ ಉಲ್ಲಂಘನೆ  ಪ್ರಕರಣ. 

ಮಲ್ಲಂದೂರು  ಪೊಲೀಸ್  ಠಾಣೆ

ದಿನಾಂಕ:22/05/2021 ರಂದು ದಯಾನಂದ ಎ.ಎಸ್.  ವಿಶೇಷ ಕಾರ್ಯ ನಿರ್ವಾಹಕ ದಂಢಾದಿಕಾರಿ ರವರು ನೀಡಿದ ದೂರಿನಲ್ಲಿ  ದಿನಾಂಕ; 22/05/2021 ರಂದು ಪಿರ್ಯಾದಿಯವರು ಮತ್ತು ಇತರೆ ಅಧಿಕಾರಿಯವರೊಂದಿಗೆ ವಸ್ತಾರೆ ಹೋಬಳಿ ಉಳುವಾಗಿಲು ಗ್ರಾಮದ ಕೋವಿಡ್ -19 ರೋಗಿಗಳ ಮನೆಗಳಿಗೆ ಬೆಳಿಗ್ಗೆ 9.00 ಗಂಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವ ವೇಳೆಯಲ್ಲಿ   ಆನಂದ ಬಿನ್ ಕೊರಗಪ್ಪ ಮತ್ತು ಆತನ ಮಗ ಶಿವು,  ವಾಸ ಉಳುವಾಗಿಲು, ಇವರು ಕೋವಿಡ್ -19 ಪಾಸಿಟಿವ್ ರೋಗಿಗಳಾಗಿದ್ದು, ಮನೆಯಲ್ಲಿ ಇಲ್ಲದೇ ಇರುವುದು ಕಂಡು ಬಂದಿರುತ್ತದೆ. ಸದರಿಯವರು ಕೋವಿಡ್ -19 ರೋಗಿಗಳಾಗಿರುವುದರಿಂದ ಕಡ್ಡಾಯವಾಗಿ 14 ದಿನ ಮನೆಯಲ್ಲೆ ಇರಬೇಕೆಂದು ಸರ್ಕಾರವು ಹೊರಡಿಸಿರುವ ಕೊವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿರುತ್ತಾರೆ ಅದ್ದರಿಂದ ಇಬ್ಬರೂ ವ್ಯಕ್ತಿಗಳ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಅರೋಪಿತರ ವಿರುದ್ದ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

 

ಇತ್ತೀಚಿನ ನವೀಕರಣ​ : 22-05-2021 09:17 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080