ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ತರೀಕೆರೆ ಪೊಲೀಸ್  ಠಾಣೆ.

ದಿನಾಂಕ;22-05-2022 ರಂದು ಪಿರ್ಯಾದಿ ಶ್ರೀಮತಿ ಮಾಲಾ ಕೊಂ ಮೂರ್ತಿ ಭದ್ರಾವತಿ ಟೌನ್ ವಾಸಿ ರವರು  ನೀಡಿದ ದೂರಿನಲ್ಲಿ ದಿನಾಂಕ;22-05-2022 ರಂದು ಪಿರ್ಯಾದಿ ಗಂಡ ಮೂರ್ತಿ ಇವರು ಬೆಳಿಗ್ಗೆ 5.30 ಗಂಟೆ ಸಮಯದಲ್ಲಿ ಭದ್ರಾವತಿಯಿಂದ ಲಿಂಗದಹಳ್ಳಿ ನೆಂಟರ ಮನೆಗೆ ಕೆಎ-11-ಝಡ್-3663 ಓಮಿನಿ ಕಾರಿನಲ್ಲಿ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ, ಬೆಳಿಗ್ಗೆ 6.30 ಗಂಟೆ ಸಮಯದಲ್ಲಿ  ಎಂ.ಸಿ. ಹಳ್ಳಿ ಬಳಿ ಎದುರುಗಡೆಯಿಂದ ಬಂದ ಕೆಎ-20-ಸಿ-4133 ರ ಬಸ್ ಚಾಲಕ  ಬಸ್ಸನ್ನು  ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಓಮಿನಿಗೆ ಡಿಕ್ಕಿ ಹೊಡೆಸಿದ ಪರಿಣಾಮ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಅಪಘಾತಕ್ಕೆ ಕಾರಣನಾದ ಬಸ್ ಚಾಲಕನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ.

ಸಖರಾಯಪಟ್ಟಣ ಪೊಲೀಸ್ ಠಾಣೆ.

ದಿನಾಂಕ:21-05-2022 ರಂದು ಸಖರಾಯಪಟ್ಟಣ ಪೊಲೀಸ್ ಠಾಣಾ ಸರಹದ್ದಿನ ಟಿ.ಬಿ. ಕಾವಲ್  ಗ್ರಾಮದ ವಾಸಿ ಯೋಗೀಶ ಪಿ.ಕೆ. ಬಿನ್ ಲೇಟ್ ಕೃಷ್ಣನಾಯ್ಕ  ಈತನು ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಅರೋಪಿತನನ್ನು ವಶಕ್ಕೆ ಪಡೆದು ಆರೋಪಿತನ ವಶದಲ್ಲಿ ಇದ್ದ 180 ಎಂ.ಎಲ್. ನ 12 ಟೆಟ್ರಾಪ್ಯಾಕ್ ಮದ್ಯವನ್ನು ಅಮಾನತ್ತುಪಡಿಸಿಕೊಂಡಿದ್ದು, ಮದ್ಯದ ಅಂದಾಜು ಬೆಲೆ 1890/- ರೂ ಗಳಾಗಿರುತ್ತೆ. ಆರೋಪಿತ ವಿರುದ್ದ ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಸಖರಾಯಪಟ್ಟಣ ಠಾಣಾ ಪಿ.ಎಸ್.ಐ. ನವೀನ ಎನ್.ಪಿ.  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ  ಪ್ರಕರಣ.

ಮಹಿಳಾ ಪೊಲೀಸ್ ಠಾಣೆ.

ದಿನಾಂಕ;22-05-2022 ರಂದು ಅಸ್ಮಾಬಾನು ಕೊಂ ಶೌಕತ್ ಅಲಿ, ಅದಿಶಕ್ತಿನಗರ, ಚಿಕ್ಕಮಗಳೂರು ವಾಸಿ, ರವರು ನೀಡಿದ ದೂರೇನೆಂದರೆ, ಪಿರ್ಯಾದುದಾರರ ಮಗಳು ನೇಹಾ ಮಗುವಿನೊಂದಿಗೆ ಮನೆಯಲ್ಲಿ ಇದ್ದವಳು ದಿನಾಂಕ;22/05/2022 ಬೆಳಿಗ್ಗೆ 5.00 ಗಂಟೆಗೆ ನೋಡಲಾಗಿ ಮನೆಯಿಂದ ಮಗುವಿನೊಂದಿಗೆ ಕಾಣೆಯಾಗಿದ್ದು  ಈವರೆಗೂ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ  ಶ್ರೀಮತಿ ನೇಹಾ,  20 ವರ್ಷ,  4.5 ಅಡಿ ಎತ್ತರ, ದುಂಡುಮುಖ , ಗೋದಿ ಮೈ ಬಣ್ಣ, ಸಾದಾರಣ ಮೈಕಟ್ಟು , ಕನ್ನಡ, ಉರ್ದು ಬಾಷೆ ಮಾತನಾಡುತ್ತಾಳೆ. ಕಾಣೆಯಾದಾಗ ಹಸಿರು ಬಣ್ಣದ ಚೂಡಿದಾರ ಕಪ್ಪು ಬಣ್ಣದ ಬುರ್ಕಾ ಧರಿಸಿರುತ್ತಾಳೆ ಮತ್ತು ಮಗು ಅಲಿಜಾ, 1 1/2  ವರ್ಷ, ಬಿಳಿ ಬಣ್ಣ,  ಕಾಣೆಯಾಗಿರುವ ಮಗಳು ಶ್ರೀಮತಿ ನೇಹಾ ಮತ್ತು ಮಗುವನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ   ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮಹಿಳಾ ಪೊಲೀಸ್ ಠಾಣೆ.

ದಿನಾಂಕ;21-05-2022 ರಂದು ದೀಪು ಎ.ಯು. ಬಿನ್ ಉಮೇಶ ಶೆಟ್ಟಿ, ವಾಸ 2 ನೇಕ್ರಾಸ್, ಅಲ್ಲಂಪುರ, ಚಿಕ್ಕಮಗಳೂರು  ವಾಸಿ ರವರು ನೀಡಿದ ದೂರೇನೆಂದರೆ, ಪಿರ್ಯಾದುದಾರರ ಹೆಂಡತಿ ಅರ್ಪಿತ ಮನೆಯಲ್ಲಿ ಇದ್ದವಳು ದಿನಾಂಕ;21/05/2022 ಮನೆಯಲ್ಲಿ ಇದ್ದವಳು ವಾಪಾಸ್ಸು ಮನೆಯಿಂದ ಕಾಣೆಯಾಗಿದ್ದು,  ಈವರೆಗೂ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ  ಶ್ರೀಮತಿ ಅರ್ಪಿತ  20 ವರ್ಷ,  5 ಅಡಿ ಎತ್ತರ,  ಕೋಲು ಮುಖ , ಎಣ್ಣೆಗೆಂಪು ಮೈ ಬಣ್ಣ, ಸಾದಾರಣ ಮೈಕಟ್ಟು , ಕನ್ನಡ, ಬಾಷೆ ಮಾತನಾಡುತ್ತಾಳೆ. ಕಾಣೆಯಾದಾಗ ಹಳದಿ ಬಣ್ಣದ ಚೂಡಿದಾರ, ಧರಿಸಿರುತ್ತಾಳೆ ಕಾಣೆಯಾಗಿರುವ ಶ್ರೀಮತಿ ಅರ್ಪಿತ ಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ  ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

 

ಇತ್ತೀಚಿನ ನವೀಕರಣ​ : 22-05-2022 06:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080