ಅಭಿಪ್ರಾಯ / ಸಲಹೆಗಳು

ಅಕ್ರಮ ಸ್ಪೋಟಕ ಕಾಯ್ದೆ ಪ್ರಕರಣ,

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ 22-09-2021 ರಂದು ಬೆಳಗ್ಗೆ 09-00 ಗಂಟೆ ಸಮಯದಲ್ಲಿ ಪಿರುಮೇನಹಳ್ಳಿ ಗ್ರಾಮದ ಸರ್ವೇ ನಂಬರ್ 22 ರ ಕಲ್ಲುಕೊರೆಯಲ್ಲಿ  ಸುನೀಲ್  ಮತ್ತು ದೊರೆ ಎಂಬುವವರು ಯಾವುದೇ ಪರವಾನಗಿಯನ್ನು ಪಡೆಯದೆ ಅನಧಿಕೃತವಾಗಿ  ಕಲ್ಲುಗಣಿಗಾರಿಕೆ ನಡೆಸಲು  ಗುಪ್ತವಾಗಿ ಸ್ಪೋಟಕಗಳನ್ನು ಬಳಸಿ ಕಲ್ಲುಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಮಾಹಿತಿ ಬಂದಿದ್ದರ ಮೇರೆಗೆ ಬೆಳಗ್ಗೆ 10-15 ಗಂಟೆ ಸಮಯಕ್ಕೆ ಸಿಬ್ಬಂದಿಗಳೊಂದಿಗೆ ಸದರಿ ಸ್ಥಳಕ್ಕೆ  ಹೋಗಿ ನೋಡಲಾಗಿ ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಸುತ್ತಿರುವುದು ಕಂಡುಬಂದಿದ್ದು, ಸ್ಥಳದಲ್ಲಿದ್ದ ರಾಘವೇಂದ್ರ ಬಿನ್ ಹನುಮಂತ. ಸುರೇಶ್ ರವರ ಕೋರೆಯಲ್ಲಿ ಪೋರ್ಮೆನ್ ಕೆಲಸ, ಹಟ್ಟಿಗ್ರಾಮ, ಲಿಂಗಸೂರು ತಾಲ್ಲೂಕು  ಇವನನ್ನು ವಶಕ್ಕೆ ಪಡೆದಿದ್ದು, ಈತನನ್ನು ವಿಚಾರ ಮಾಡಲಾಗಿ ದಿನಾಂಕ 21-09-2021 ರಂದು ಸುರೇಶ್ರವರು ಅವರ ಕೋರೆಗೆ ತಂದಿದ್ದ ಸ್ಫೋಟಕಗಳನ್ನು  ಸುನೀಲ್ ಹಾಗೂ ದೊರೆ ಎಂಬುವವರು ಈ ಜಾಗವನ್ನು ತೋರಿಸಿ ಸ್ಫೋಟಕಗಳನ್ನು ಹಾಕಿ ಕಲ್ಲುಬಂಡೆಗಳನ್ನು ಸಿಡಿಸು ಎಂದು ತಿಳಿಸಿದ ಮೇರೆಗೆ ಸ್ಪೋಟಕ ವಸ್ತಗಳನ್ನು ಹಾಕಿ ಕಲ್ಲುಬಂಡೆಗಳನ್ನು ಈ ಸ್ಥಳದಲ್ಲಿ ಸಿಡಿಸಿರುತ್ತೇನೆಂದು ತಿಳಿಸಿದ್ದು, ಸ್ಥಳದಲ್ಲಿದ್ದ ಕಲ್ಲುಬಂಡೆಯನ್ನು ಸಿಡಿಸಲು ಉಪಯೋಗಿಸಿದ ತುಂಡು ತುಂಡಾದ ತಂತಿ ಹಾಗೂ ವೈರ್ ಗಳನ್ನು ಅಮಾನತ್ತುಪಡಿಸಿಕೊಂಡು ಆರೋಪಿಗಳಾದ ಸುರೇಶ, ದೊರೆ, ಸುನೀಲ್ ಹಾಗೂ ರಾಘವೇಂದ್ರರವರ ವಿರುದ್ದ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ.ಕೃಷ್ವಾನಾಯ್ಕ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಗೋ ಹತ್ಯಾ ಪ್ರಕರಣ.

ಕೊಪ್ಪ   ಪೊಲೀಸ್ ಠಾಣೆ,

ದಿನಾಂಕ 22-09-2021 ರಂದು 11.00  ಗಂಟೆ ಸಮಯದಲ್ಲಿ ಕೊಪ್ಪ ಠಾಣಾ ಸರಹದ್ದಿನ  ನುಗ್ಗಿ ಗ್ರಾಮದ ವಾಸಿ ಹರೀಶ್  ಎಂಬುವರು ತಮ್ಮ ಅಡಿಕೆ ತೋಟದಲ್ಲಿ ಒಂದು ಹೋರಿಯನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ವನನ್ನು ವಶಕ್ಕೆ ಪಡೆದು ಆತನ ಬಳಿ ಇದ್ದ ಮಾಂಸವನ್ನು ಅಮಾನತ್ತುಪಡಿಸಿಕೊಂಡು  ಆರೋಪಿ ಹರೀಶ  ವಿರುದ್ದ ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಸಾಗಾಟ  ಪ್ರಕರಣ.

ಗ್ರಾಮಾಂತರ   ಪೊಲೀಸ್ ಠಾಣೆ,

ದಿನಾಂಕ 22-09-2021 ರಂದು 13-45  ಗಂಟೆ ಸಮಯದಲ್ಲಿ ವಡೆಯರಪುರ ವಾಸಿ ಕುಮಾರ್ ಕೆ.ಸಿ. ಬಿನ್ ಚಾತಪ್ಪ ರವರು ಅಕ್ರಮವಾಗಿ ಮದ್ಯವನ್ನು ಸಮಾರಾಟ ಮಾಡುತ್ತಿದ್ದವನನ್ನು ವಶಕ್ಕೆ ಪಡೆದು ಆತನ ಬಳಿ ಇದ್ದ  90 ಎಂ.ಎಲ್.ನ ಓರಿಜನಲ್ ಚಾಯ್ಸ್ ಡಿಲಕ್ಸ್ ವಿಸ್ಕಿಯ 55 ಟೆಟ್ರಾ ಪೌಚ್ ಗಳನ್ನು ಅಮಾನತ್ತುಪಡಿಸಿಕೊಂಡಿದ್ದು ,ಮದ್ಯದ ಅಂದಾಜು ಬೆಲೆ 1932.15/- ರೂ ಆಗಿರುತ್ತೆ. ಆರೋಪಿ ಕೆ.ಸಿ. ಕುಮಾರ್ ನ  ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ಮಹಾಂತೇಶ್  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಬಾಳೂರು   ಪೊಲೀಸ್ ಠಾಣೆ,

ದಿನಾಂಕ 21-09-2021 ರಂದು 15-40  ಗಂಟೆ ಸಮಯದಲ್ಲಿ ಕೂವೆ ಗ್ರಾಮದ ಕೆ.ತಲಗೂರು ಹ್ಯಾಂಡ್ ಪೋಸ್ಟ್ ನಲ್ಲಿ ಹಾದುಹೋಗಿರುವ ಬಾಳೆಹೊನ್ನೂರು ಕೊಟ್ಟೆಗೆಹಾರ ರಸ್ತೆಯ ಬದಿಯಲ್ಲಿ ಮಾಗುಂಡಿ ಕಡೆಯಿಂದ ಕೆ.ತಲಗೂರು ಕಡೆಗೆ ಬಂದ ಕೆಎ-03 ಎಂಇ- 3397 ಮಾರುತಿ ಕಾರಿನಲ್ಲಿ ಅಕ್ರಮವಾಗಿ ಮದ್ಯವನ್ನು ಸಾಗಾಟ ಮಾಡುತ್ತಿದ್ದ ಕೆ.ಪಿ.ಜಗದೀಶ ಬಿನ್ ಪುಟ್ಟೇಗೌಡ ಈತನನ್ನು ವಶಕ್ಕೆ ಪಡೆದು ಕಾರಿನಲ್ಲಿದ್ದ 90 ಎಂ.ಎಲ್.ನ ಕ್ಯಾಪ್ಟನ್ ಮಾರ್ಟಿನ್ ಸ್ಪೆಷಲ್ ವಿಸ್ಕಿಯ 96 ಟೆಟ್ರಾ ಪೌಚ್ ಗಳನ್ನು ಅಮಾನತ್ತುಪಡಿಸಿಕೊಂಡಿದ್ದು ,ಮದ್ಯದ ಅಂದಾಜು ಬೆಲೆ 3372/- ರೂ ಆಗಿರುತ್ತೆ. ಆರೋಪಿ ಜಗದೀಶನ  ವಿರುದ್ದ ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ಶ್ರೀಮತಿ. ರೇಣುಕಮ್ಮ  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮೂಡಿಗೆರೆ    ಪೊಲೀಸ್ ಠಾಣೆ,

ದಿನಾಂಕ 21-09-2021 ರಂದು 13-45  ಗಂಟೆ ಸಮಯದಲ್ಲಿ ಗಂಗನಮಕ್ಕಿ ಹೆಚ್ ಪಿ ಪೆಟ್ರೋಲ್ ಬಂಕ್ ಎದುರು ಪ್ರೇಮರಾಜು ಬಿನ್ ಲೇಟ್ ರಾಮಯ್ಯ, ಹಾಲೂರು ಗ್ರಾಮ ವಾಸಿ ಈತನು ಕೈ ಹಿಡಿ ಇರುವ ಚೀಲದಲ್ಲಿ ಅಕ್ರಮವಾಗಿ ಮದ್ಯವನ್ನು ಇಟ್ಟುಕೊಂಡು ಹೋಗುತ್ತಿದ್ದು ಸದರಿ ಆಸಾಮಿಯನ್ನು ವಶಕ್ಕೆ ಪಡೆದು ಆತನ ಬಳಿ ಕೈ ಹಿಡಿಯಿರುವ ಚೀಲದಲ್ಲಿದ್ದ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಆರೋಪಿ ಪ್ರೇಮರಾಜನ ವಿರುದ್ದ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ರವಿ.ಜಿ.ಎ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಕಳ್ಳತನ ಪ್ರಕರಣ.

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ 21-09-2021 ರಂದು ನಾಗರಾಜು, ಅಜ್ಜಂಪುರ ವಾಸಿರವರು ನೀಡಿದ ದೂರೇನೆಂದರೆ  ದಿನಾಂಕ 20-09-2021 ರಂದು ಸಂಜೆ 18-30 ಗಂಟೆ ಸಮಯದಲ್ಲಿ ಕೆಎ-50 ವೈ- 1415 ಬೈಕನ್ನು ತಮಟದಹಳ್ಳಿಯ ಗೇಟ್ ಹತ್ತಿರ ರಸ್ತೆಯ ಬದಿಯಲ್ಲಿ ನಿಲ್ಲಿಸಿ ನಮ್ಮ ಪರಿಚಯಸ್ಥರ ಮನೆಗೆ ಹೋಗಿ ಮಾತನಾಡಿಕೊಂಡು ವಾಪಾಸ್ ರಾತ್ರಿ 08-00 ಗಂಟೆಗೆ ಬಂದು ನೋಡಿದಾಗ ನಿಲ್ಲಿಸಿ ಹೋಗಿದ್ದ ಬೈಕ್ ಕಾಣಲಿಲ್ಲ. ಪರಿಚಯಸ್ಥರ  ಬಳಿ ವಿಚಾರಿಸಿದರೂ ಪತ್ತೆಯಾಗಿರುವುದಿಲ್ಲ. ಯಾರೋ ಕಳ್ಳರು ನನ್ನ ಬೈಕನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಬೈಕನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ  ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ಇತ್ತೀಚಿನ ನವೀಕರಣ​ : 22-09-2021 07:14 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080