ಅಭಿಪ್ರಾಯ / ಸಲಹೆಗಳು

ಕಳ್ಳತನ ಪ್ರಕರಣ.

ಬಾಳೆಹೊನ್ನೂರು ಪೊಲೀಸ್ ಠಾಣೆ.

ದಿನಾಂಕ 22-10-2021 ರಂದು ಶಶಿಕುಮಾರರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 21-10-2021 ರಂದು ಸಂಜೆ 05-30 ಗಂಟೆ ಸಮಯದಲ್ಲಿ ಬಾಳೆಹೊನ್ನೂರು ಪಟ್ಟಣದ ಕರ್ನಾಟಕ ಬ್ಯಾಂಕ್ನಲ್ಲಿ ಕರ್ತವ್ಯ ಮುಗಿಸಿಕೊಂಡು ಬ್ಯಾಂಕ್ಗೆ ಬೀಗ ಹಾಕಿಕೊಂಡು ಹೋಗಿದ್ದು ,ಎಂದಿನಂತೆ ದಿನಾಂಕ 22-10-2021 ರಂದು ಬೆಳಿಗ್ಗೆ 09-45 ಗಂಟೆ ಸಮಯದಲ್ಲಿ ಪುನಃ ನಾನು ಹಾಗೂ ಹಿರಿಯಣ್ಣಯ್ಯರವರು ಕರ್ತವ್ಯಕ್ಕೆಂದು ಬ್ಯಾಂಕ್ಗೆ ಬಂದಿದ್ದು ,ಬ್ಯಾಂಕ್ನ ಹಿಂಬದಿಯಲ್ಲಿರುವ ಮದ್ಯದ ಕಿಟಕಿಯ ಕೆಳಭಾಗದ 3 ಸರಳುಗಳನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ  ಮುರಿದು ಒಳಪ್ರವೇಶಿಸಿ ಬ್ಯಾಂಕಿನ ಒಳಭಾಗದ ಕಂಪ್ಯೂಟರ್, ಪ್ರಿಂಟರ್ ಹಾಗೂ ಇತರೆ ಉಪಕರಣಗಳನ್ನು  ಹಾಳುಮಾಡಿ , ಹಣಕ್ಕಾಗಿ ಹುಡುಕಾಟಮಾಡಿರುವುದು ಕಂಡುಬಂದಿದ್ದು ಯಾವುದೇ ಹಣ ಹಾಗೂ ವಸ್ತಗಳು ಕಳ್ಳತನವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದಿಲ್ಲ. ಬ್ಯಾಂಕಿನ ಸುಮಾರು 20,000 ರಿಂದ 25,000 ರೂ ಬೆಲೆಯ ಕಂಪ್ಯೂಟರ್ ಉಪಕರಣಗಳನ್ನು ನಷ್ಟ ಮಾಡಿದ್ದು , ಬ್ಯಾಂಕ್ ನಲ್ಲಿ ಕಳ್ಳತನ ಮಾಡಲು ಪ್ರಯತ್ನಿಸಿರುವ ಕಳ್ಳರನ್ನು ಪತ್ತೆ ಮಾಡಬೇಕೆಂದು ನೀಡಿದ ದೂರಿನ ಮೇರೆಗೆ ಬಾಳೆಹೊನ್ನೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣ .

ಕಡೂರು   ಪೊಲೀಸ್ ಠಾಣೆ

 ದಿನಾಂಕ 21/10/2021 ರಂದು ಪಿರ್ಯಾದಿ ಸೋಮ್ಲಾನಾಯ್ಕ ಬಿನ್ ನಿಂಬ್ಯಾನಾಯ್ಕ, ಮಲ್ಲೇದೇವಿಹಳ್ಳಿ ವಾಸಿರವರು ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿವಸ ಸಂಜೆ 04-30 ಗಂಟೆ ಸಮಯದಲ್ಲಿ ನನ್ನ ಹೆಂಡತಿಯಾದ  ಜಯಾಬಾಯಿಯವರನ್ನು ನನ್ನ ಬಾಬ್ತು ಕೆಎ-66 ಕೆ- 1329 ಟಿವಿಎಸ್ ನಲ್ಲಿ ಹಿಂಬದಿಯಲ್ಲಿ ಕೂರಿಸಿಕೊಂಡು ಕಡೂರಿಗೆ ಬರುತ್ತಿರುವಾಗ ಮಲ್ಲೇಶ್ವರ ಗ್ರಾಮದ ಶುದ್ದಗಂಗಾ ಘಟಕದ ಸಮೀಪದ ಎಸ್ ಹೆಚ್ 152 ರಸ್ತೆಯಲ್ಲಿ ಹೋಗುವಾಗ್ಗೆ ಕಡೂರು ಕಡೆಯಿಂದ ಬಂದ ಕೆಎ-17 ಸಿ- 6428 ವಾಹನದ ಚಾಲಕ ವಾಹನವನ್ನು  ಅತಿವೇಗ ಹಾಗೂ ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ಅವನ ವಾಹನದ ಎಡಬದಿಯ ಮುಂಭಾಗದ ಕನ್ನಡಿಯನ್ನು ಜಯಾಬಾಯಿಯವರಿಗೆ ತಗುಲಿಸಿ ಅಪಘಾತಮಾಡಿದ್ದರಿಂದ ,ನನ್ನ ಹೆಂಡತಿ ಜಯಾಬಾಯಿಯವರು ಕೆಳಗೆ ಬಿದ್ದು ತಲೆಗೆ ತೀವ್ರತರಹದ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು , ಅಪಘಾತಗೊಳಿಸಿದ ವಾಹನ ಚಾಲಕನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಜೂಜಾಟ ಪ್ರಕರಣ.

ಬಾಳೆಹೊನ್ನೂರು ಪೊಲೀಸ್ ಠಾಣೆ.

ದಿನಾಂಕ 21-10-2021 ರಂದು ಸಂಜೆ 05-30 ಗಂಟೆ ಸಮಯದಲ್ಲಿ        ಕಡಬಗೆರೆ ವಿನೋದ್ ರವರ ಅಡಿಕೆ ತೋಟದ ಜಾಗದಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟವಾಡುತ್ತಿದ್ದ 1) ಸತೀಶ 2) ಅಜಿತ್ 3) ಗಣೇಶ 4) ಗಣೇಶ 5) ಬಾಲು 6) ಸತೀಶ 7) ಸಂತೋಷ 8) ಸಚಿನ್ 9) ಮಾದೇಶ ಇವರುಗಳನ್ನು ವಶಕ್ಕೆ ಪಡೆದು ಅವರುಗಳ ಬಳಿಯಿದ್ದ 52 ಇಸ್ಪೀಟ್ ಎಲೆಗಳು, ಒಂದು ಖಾಕಿ ರಟ್ಟು, ಒಂದು ಕೆಂಪು ಬಣ್ಣದ ಸ್ಕೂಟಿ ಹಾಗೂ 720/- ರೂ ನಗದು ಹಣವನ್ನು ಅಮಾನತ್ತುಪಡಿಸಿಕೊಂಡು ಆರೋಪಿತರ ವಿರುದ್ದ ಬಾಳೆಹೊನ್ನೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.ಈ ಕಾರ್ಯಾಚರಣೆಯಲ್ಲಿ ಪಿ.ಎಸ್. ಐ ನಿತ್ಯಾನಂದಗೌಡ .ಪಿ.ಡಿ. ಹಾಗೂ ಸಿಬ್ಬಂದಿಗಳು ಪಾಲ್ಡೊಂಡಿರುತ್ತಾರೆ.

ಕಳ್ಳತನ ಪ್ರಕರಣ.

ನಗರ  ಪೊಲೀಸ್ ಠಾಣೆ.

ದಿನಾಂಕ 21-10-2021 ರಂದು ಪ್ರಸನ್ನ ಬಿನ್  ಸಣ್ಣೇಗೌಡ, ಬೈರವೇಶ್ವರ ಲೇಔಟ್, ಯರೇಹಳ್ಳಿ ರಸ್ತೆ, ಚಿಕ್ಕಮಗಳೂರು ಟೌನ್ವಾಸಿರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 20-10-2021 ರಂದು ಬೆಳಗ್ಗೆ ಮನೆಯ ಬೀಗವನ್ನು ಹಾಕಿಕೊಂಡು ಸಂಸಾರ ಸಮೇತ ಮೂಡಿಗೆರೆಯಲ್ಲಿರುವ ತೋಟಕ್ಕೆ ಹೋಗಿದ್ದು ವಾಪಾಸ್ ದಿನಾಂಕ 21-10-2021 ರಂದು ಸಂಜೆ ಸುಮಾರು 06-00 ಗಂಟೆ ಸಮಯದಲ್ಲಿ ಮನೆಗೆ ಬಂದಾಗ ಮನೆಯ ಮುಖ್ಯದ್ವಾರವು ಸ್ವಲ್ಪ ತೆರೆದಿದ್ದು ಯಾರೋ ಕಳ್ಳರು ಮನೆಯ ಬೀಗವನ್ನು ಮುರಿದು ಒಳಪ್ರವೇಶಿಸಿ ಬೆಡ್ ರೂಂನ ವಾರ್ಡ್ ರೂಪ್ ನಲ್ಲಿಟ್ಟಿದ್ದ ಸುಮಾರು 132 ಗ್ರಾಮ ತೂಕದ ಚಿನ್ನದ ಒಡವೆಗಳು , 18 ಗ್ರಾಂ ತೂಕದ ಬೆಳ್ಳಿಯ ವಸ್ತುಗಳು ಹಾಗೂ 80,000/- ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು  ಹೋಗಿರುತ್ತಾರೆ. ಕಳ್ಳತನವಾಗಿರುವ ವಸ್ತಗಳ ಅಂದಾಜು ಮೌಲ್ಯ 6,42, 720/ ರೂ ಗಳಾಗಿರುತ್ತೆ, ನಮ್ಮ ಮನೆಗೆ ಪ್ರವೇಶ ಮಾಡಿ ಚಿನ್ನ ಹಾಗೂ ಬೆಳ್ಳಿಯ ವಸ್ತುಗಳನ್ನು ಕಳ್ಳತನಮಾಡಿಕೊಂಡು ಹೋಗಿರುವ  ಕಳ್ಳರನ್ನು ಪತ್ತೆ ಮಾಡಬೇಕೆಂದು ನೀಡಿದ ದೂರಿನ ಮೇರೆಗೆ ಬಾಳೆಹೊನ್ನೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 22-10-2021 05:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080