ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ.

ಅಲ್ದೂರು ಪೊಲೀಸ್ ಠಾಣೆ.

ದಿನಾಂಕ:22-11-2021 ರಂದು ಮದ್ಯಾಹ್ನ ಅಲ್ದೂರು ಠಾಣಾ ಸರಹದ್ದಿನ  ಅಲ್ದೂರು ಪಟ್ಟಣದ ಮೂಡಿಗೆರೆ ರಸ್ತೆಯಲ್ಲಿ ಮೋಹನ್ ರಾಜ್ ಅರಸ್ ಬಿನ್ ರಂಗರಾಜ್ ಎಂಬುವರು ತಮ್ಮ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಆರೋಫಿಯನ್ನು ವಶಕ್ಕೆ ಪಡೆದು ಆರೋಪಿ ಬಳಿಯಿದ್ದ 90 ಎಂ.ಎಲ್. 8 ಟೆಟ್ರಾಪ್ಯಾಕ್ ಮದ್ಯವನ್ನು ಮತ್ತು 70 ರೂ ನಗದು ಹಣವನ್ನು ವಶಕ್ಕೆ ಪಡೆದು, ಮದ್ಯದ ಅಂದಾಜು ಬೆಲೆ 281/-ರೂ ಆಗಿದ್ದು, ಆರೋಪಿ ವಿರುದ್ದ  ಅಲ್ದೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ಶ್ರೀಮತಿ ಶಿವರುದ್ರಮ್ಮ ಹಾಗೂ ಸಿಬ್ಬಂದಿಗಳಾದ ಎ.ಎಸ್.ಐ ಬಸವರಾಜು ಕೆ.ಸಿ. ಸಿಬ್ಬಂದಿಗಳಾದ  ಹರ್ಷ , ಆನಂದ , ಚೇತನ  ಪೂರ್ಣೇಶ ರವರುಪಾಲ್ಗೊಂಡಿರುತ್ತಾರೆ.

ಸಖರಾಯಪಟ್ಟಣ  ಪೊಲೀಸ್ ಠಾಣೆ.

ದಿನಾಂಕ:22-11-2021 ರಂದು ಬೆಳಿಗ್ಗೆ ಸಖರಾಯಪಟ್ಟಣ ಠಾಣಾ ಸರಹದ್ದಿನ ಸ್ವಾಮಿಕಟ್ಟೆ ಗ್ರಾಮದ ಸರ್ಕಾರಿ ಶಾಲೆಯ ರಸ್ತೆಯಲ್ಲಿ  ಎಸ್.ಜಿ ಸಿದ್ದೇಗೌಡ @ ಸಿದ್ದಪ್ಪ ಬಿನ್ ಲೇಟ್ ಗೋವಿಂದಪ್ಪ  ಎಂಬುವರು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಆರೋಫಿತನನ್ನು ವಶಕ್ಕೆ ಪಡೆದು ಆರೋಪಿ ಬಳಿಯಿದ್ದ 90 ಎಂ.ಎಲ್. 40 ರಾಜಾ ವಿಸ್ಕಿಯ ಟೆಟ್ರಾಪ್ಯಾಕ್ ಮದ್ಯವನ್ನು ಮತ್ತು 160 ರೂ ನಗದು ಹಣವನ್ನು ವಶಕ್ಕೆ ಪಡೆದು, ಮದ್ಯದ ಅಂದಾಜು ಬೆಲೆ 1400/-ರೂ ಆಗಿದ್ದು, ಆರೋಪಿ ವಿರುದ್ದ  ಸಖರಾಯಪಟ್ಟಣ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ಶ್ರೀ ಹರೀಶ್ ಆರ್. ಹಾಗೂ ಸಿಬ್ಬಂದಿಗಳಾದ ಅಣ್ಣಯ್ಯ , ದೇವಸಿಂಗ್ ನಾಯ್ಕ , ಸುಂದರೇಶ್ , ಮೋಹನ್ ರವರು ಪಾಲ್ಗೊಂಡಿರುತ್ತಾರೆ.

ದನಗಳ ಕಳ್ಳತನ ಪ್ರಕರಣ

ಬಸವನಹಳ್ಳಿ ಪೊಲೀಸ್ ಠಾಣೆ.

ದಿನಾಂಕ 22.11.2021 ರಂದು ಬೆಳಗಿನ ಜಾವ 4.00 ಗಂಟೆ ಸಮಯದಲ್ಲಿ  ಬಸವನಹಳ್ಳಿ ಠಾಣಾ ಹಾಲೇನಹಳ್ಳಿ ಬಳಿ ಚೆಕ್ ಪೋಸ್ಟ್ ನಲ್ಲಿ ವಾಹನಗಳನ್ನು ತಪಾಸಾಣೆ ಮಾಡುತ್ತಿದ್ದ ಸಮಯದಲ್ಲಿ ಶಾಂತವೇರಿಯಿಂದ ಕೆಎ-12-ಎಬಿ-3427 ರ ಮಹೀಂದ್ರಾ ಕಂಪನಿಯ ವಾಹನದಲ್ಲಿ 5 ದನಗಳನ್ನು ಕಳ್ಳತನ ಮಾಡಿಕೊಂಡು ವಾಹನದಲ್ಲಿ ಹಿಂಸಾತ್ಮಕವಾಗಿ ದನಗಳನ್ನು ಮಂಗಳೂರಿಗೆ ಸಾಗಿಸಿ ಕಡಿದು ಮಾಂಸ ಮಾಡಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ವಾಹನ ಮತ್ತು ದನಗಳನ್ನು ವಶಕ್ಕೆ ಪಡೆದು ಆರೋಪಿತರಾದ 1. ನಿಸಾರ್ ಬಿನ್ ಮೈಯದ್ದಿ ಜೋಗಟ್ಟೆ ತೋಗೂರು ವಾಸಿ, 2. ನೌಷದ್ ಬಿನ್ ರಫೀಕ್ ಗುರುಪುರ ಕೈಕಂಬ ವಾಸಿ, ಹಾಗೂ ವಾಹನ ಚಾಲಕ ಇರ್ಷಾದ್ ಬಿನ್ ಇಸ್ಮಾಯಿಲ್ ವಾಸ ಗಂಜಿಮಠ ಬಡಗುಲಿ ಪಾಡಿ ರವರನ್ನು  ವಶಕ್ಕೆ ಪಡೆದುಕೊಂಡಿದ್ದು ,  ಇರ್ಪಾನ್  ಮಲಾರ್  ವಾಸಿ ಈತನು ತಪ್ಪಿಸಿಕೊಂಡು ಓಡಿ ಹೋಗಿದ್ದು, ಅರೋಫಿತರನ್ನು , ವಾಹನ ಹಾಗೂ ದನಗಳನ್ನು  ವಶಕ್ಕೆ ಪಡೆದುಕೊಂಡು ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪ್ರೋಬೆಷನರಿ ಡಿವೈ.ಎಸ್.ಪಿ. ಗಿರಮಲ್ಲ ಹೆಚ್. ತಲಕಟ್ಟಿ ಮತ್ತು ಎ.ಎಸ್.ಐ. ರವಿಶಂಕರ್, ಸಿಬ್ಬಂದಿಗಳಾದ ವಿರೂಪಾಕ್ಷ, ಸುನಿಲ್ ಕುಮಾರ್. ಶ್ರೀಕಾಂತ್ ಮೋರೆ. ಹಾಗೂ ಲಕ್ಷ್ಮೀಶ  ರವರು ಪಾಲ್ಗೊಂಡಿರುತ್ತಾರೆ. 

ಮನುಷ್ಯ ಕಾಣೆ ಪ್ರಕರಣ

ಪಂಚನಹಳ್ಳಿ ಪೊಲೀಸ್ ಠಾಣೆ.

ದಿನಾಂಕ-21-11-2021 ರಂದು ಪಂಚನಹಳ್ಳಿ ಠಾಣಾ ಸರಹದ್ದಿನ ಉಪ್ಪಿನಹಳ್ಳಿ ವಾಸಿ ಶ್ರೀಮತಿ ಶಾಂತಮ್ಮ ಕೋಂ ವೇದಾಮೂರ್ತಿ, ರವರು ನೀಡಿದ ದೂರಿನಲ್ಲಿ ದಿನಾಂಕ:18-11-2021 ರಂದು ಪಿರ್ಯಾಧಿಯವರ ಮಗಳು ಮೇಘನಾ ಇವರು ಸಂಜೆ ಹುಟ್ಟುಹಬ್ಬದ ಪ್ರಯುಕ್ತ ಚಾಕಲೇಟ್ ಹಂಚಲು ಹೋದವಳು ವಾಪಾಸ್ಸು ಈವರೆಗೂ ಮನೆಗೆ ಬಾರದೇ ಇದ್ದು, ಎಲ್ಲಾ ಕಡೆ ಹುಡುಕಾಡಿದರು ಪತ್ತೆಯಾಗಿಲ್ಲವೆಂದು ಮೇಘನಾ ರವರ ಚಹರೆ ಹೆಸರು ಮೇಘನಾ ಯು.ವಿ. ಬಿನ್ ವೇದಾಮೂರ್ತಿ 18 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ದುಂಡುಮುಖ ಧರಿಸಿದ ಬಟ್ಟೆ ನೇರಲೆ ಬಣ್ಣದ ಚೂಡಿದಾರ ಧರಿಸಿರುತ್ತಾರೆ.  ಕಾಣೆಯಾಗಿರುವ ತನ್ನ ಮಗಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಪಂಚನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಯಗಟಿ ಪೊಲೀಸ್ ಠಾಣೆ

ದಿನಾಂಕ-21-11-2021 ರಂದು ಯಗಟಿ ಠಾಣಾ ಸರಹದ್ದಿನ ಯಗಟಿಪುರ ವಾಸಿ ಶ್ರೀ ಪ್ರಸನ್ನಕುಮಾರ ರವರು ನೀಡಿದ ದೂರಿನಲ್ಲಿ ಪಿರ್ಯಾಧಿಯವರ ಮಗಳು ಪಿ.ಚೈತ್ರಾ ಇವಳು  ದಿನಾಂಕ:20-11-2021 ರಂದು ರಾತ್ರಿ 10.40 ಗಂಟೆಯಲ್ಲಿ ಬಾತ್ ರೂಂ ಗೆ ಎಂದು ಮನೆಯ ಹಿಂಬದಿಗೆ ಹೋದವಳು ವಾಪಾಸ್ಸು ಈವರೆಗೂ ಮನೆಗೆ ಬಾರದೇ ಇದ್ದು, ಎಲ್ಲಾ ಕಡೆ ಹುಡುಕಾಡಿದರು ಪತ್ತೆಯಾಗಿಲ್ಲವೆಂದು ಪಿ ಚೈತ್ರಾ  ರವರ ಚಹರೆ 21 ವರ್ಷ, 5 ಅಡಿ ಎತ್ತರ, ಕೋಲುಮುಖ, ಕೆಂಪು ಮೈಬಣ್ಣ, ಧರಿಸಿದ ಬಟ್ಟೆ ಟೀ ಶರಟು, ನೈಟ್ ಬ್ಲೂ ಪ್ಯಾಂಟ್ ಧರಿಸಿರುತ್ತಾರೆ. ಕಾಣೆಯಾಗಿರುವ ತನ್ನ ಮಗಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಯಗಟಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಳ್ಳತನಕ್ಕೆ ಪ್ರಯತ್ನ ಪ್ರಕರಣ

ನಗರ ಪೊಲೀಸ್ ಠಾಣೆ

ದಿನಾಂಕ 21-11-2021 ರಂದು  ನಗರ ಠಾಣಾ ಸರಹದ್ದಿನ  ಎ.ಐ.ಟಿ. ಸರ್ಕಲ್ ಬಳಿ ಒಂದು ಬೀಗ ಹಾಕಿರುವ ಅಂಗಡಿಯ ಮುಂದೆ ಒಬ್ಬ ವ್ಯಕ್ತಿ  ಅಂಗಡಿಗೆ ಹಾಕಿದ ಬೀಗವನ್ನು ಅಲ್ಲಾಡಿಸುತ್ತಿದ್ದು  ಗಸ್ತಿನಲ್ಲಿ ಸಮವಸ್ತ್ರದಲ್ಲಿದ್ದ ಪಿರ್ಯಾದಿಯವರನ್ನು ನೋಡಿ ಅಲ್ಲಿಂದ ಓಡಲಾರಂಭಿಸಿದ ವ್ಯಕ್ತಿಯನ್ನು ವಶಕ್ಕೆ ಪಡೆದು ಆತನ  ಹೆಸರು ಅನಂದ ಬಿನ್ ಬಸವರಾಜ ಅಗಿದ್ದು ಆತನು ಕಳ್ಳತನ ಮಾಡಲು  ಬಳಸಿದ ಕಬ್ಬಿಣದ ರಾಡನ್ನು ಅಮಾನತ್ತುಪಡಿಸಿಕೊಂಡು ಬಂದು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.  ಈ ಕಾರ್ಯಚರಣೆಯಲ್ಲಿ ಸಿಬ್ಬಂದಿಗಳಾದ ಶಶಿಧರ ಎಲ್.ಡಿ. ಮತ್ತು ಗಿರೀಶ್ ರವರು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 22-11-2021 07:38 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080