ಅಭಿಪ್ರಾಯ / ಸಲಹೆಗಳು

ಕಳ್ಳತನ  ಪ್ರಕರಣ

ನಗರ  ಪೊಲೀಸ್ ಠಾಣೆ.

ದಿನಾಂಕ: 23/08/2021 ರಂದು ಪಿರ್ಯಾದಿ ಧನಲಕ್ಷ್ಮಿ, ವಿಜಯನಗರ 2 ನೇ ಕ್ರಾಸ್, ಚಿಕ್ಕಮಗಳೂರು ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನಲ್ಲಿ ದಿನಾಂಕ 21-08-2012 ರಂದು ಸಂಜೆ ಮನೆಗೆ ಬೀಗ ಹಾಕಿಕೊಂಡು ದಂಟರಮುಕ್ಕಿಗೆ ಮದುವೆಗೆಂದು ಹೋಗಿದ್ದು ,ದಿನಾಂಕ 22/08/2021 ರ ರಾತ್ರಿ 10-00 ಗಂಟೆ ಸಮಯದಲ್ಲಿ ನಾವಿರುವ ಬಾಡಿಗೆ ಮನೆಯ ಮುಂಬಾಗಿಲನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ಮುರಿದು ಬೆಡ್ ರೂಂನ ಬೀರುವಿನಲ್ಲಿದ್ದ ಸುಮಾರು 2,92,000/- ರೂ ಬೆಲೆಯ ಚಿನ್ನ ಹಾಗೂ ಬೆಳ್ಳಿಯ ಆಭರಣ, 10.000/-ರೂ ಹಣವಿದ್ದ ಗೋಲಕದಡಬ್ಬ ಹಾಗೂಲಾವ ಕಂಪೆನಿಯ ಮೊಬೈಲ್ನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು, ಕಳ್ಳತನ ಮಾಡಿಕೊಂಡು ಹೋಗಿರುವ ಆರೋಪಿತರುಗಳನ್ನು ಪತ್ತೆ ಮಾಡಬೇಕೆಂದು ನೀಡಿದ ಪಿರ್ಯಾದುವಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಬಣಕಲ್  ಪೊಲೀಸ್ ಠಾಣೆ.

ದಿನಾಂಕ: 22/08/2021 ರಂದು ಪಿರ್ಯಾದಿ ನಾಗೇಶ್ಗೌಡ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನಲ್ಲಿ ದಿನಾಂಕ 21/08/2021 ರ ಸಂಜೆ 07-00 ಗಂಟೆಯಿಂದ ದಿನಾಂಕ 22-08-2021 ರಂದು ಬೆಳಿಗ್ಗೆ 06-00 ಗಂಟೆ ಮದ್ಯದಲ್ಲಿ ಅತ್ತಿಗೆರೆ ಗ್ರಾಮದ ಶೀ ಸೋಮೇಶ್ವರ ದೇವಾಲಯದ ಹೊರಭಾಗದ ಪೋರ್ಟಿಕಾಗೆ ಅಳವಡಿಸಿದ್ದ 14 ಘಂಟೆಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳತನ ಮಾಡಿಕೊಂಡು ಹೋಗಿರುವ ಆರೋಪಿತರುಗಳನ್ನು ಪತ್ತೆ ಮಾಡಬೇಕೆಂದು ನೀಡಿದ ಪಿರ್ಯಾದುವಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಗೋ ಮಾಂಸ ಮಾರಾಟ ಪ್ರಕರಣ

ನಗರ  ಪೊಲೀಸ್ ಠಾಣೆ .

ದಿನಾಂಕ: 22/08/2021 ಬೆಳಿಗ್ಗೆ 08-20 ಗಂಟೆ ಸಮಯದಲ್ಲಿ ಚಿಕ್ಕಮಗಳೂರು ನಗರದ ಶಂಕರಪುರ 2 ನೇ ಕ್ರಾಸ್ ನಲ್ಲಿರುವ ಬಾಷಾರವರ ಮನೆಯಲ್ಲಿ  ತಜ್ಜು ಹಾಗೂ ಆತನ ಸಹಚರನು ಸೇರಿಕೊಂಡು ಅಕ್ರಮವಾಗಿ  ದನವನ್ನು ಕಡಿದು ಮಾರಾಟ ಮಾಡುತ್ತಿರುವ ಬಗ್ಗೆ ದಾಳಿ ನಡೆಸಿದ್ದು , ಆರೋಪಿಯಾದ ತಜ್ಜು @ತಜಮೂಲ ಪಾಷಾ ಬಿನ್ ಬಾಷಾಸಾಬ್  ಓಡಿಹೋಗಿದ್ದು ,ಯಾವುದೇ ಪರವಾನಗಿಯನ್ನು ಹೊಂದದೆ ಅಕ್ರಮವಾಗಿ ಜಾನುವಾರುಗಳನ್ನು ಕಡಿದು ಮಾರಾಟ ಮಾಡುತ್ತಿದ್ದು, ಮನೆಯಲ್ಲಿದ್ದ  ಸುಮಾರು 45-50 ಕೆಜಿಯಷ್ಟು ದನದ ಮಾಂಸ , ಒಂದು ತೂಕ ಮಾಡುವ ಯಂತ್ರ, ಒಂದು ಚಾಕು, , 2 ಕಬ್ಬಿಣದ ಕೊಕ್ಕೆ ಮತ್ತು ಒಂದು ಕೆ.ಜಿ. ತೂಕದ ಬಟ್ಟು ಇವುಗಳನ್ನು  ವಶಕ್ಕೆ ಪಡೆದು  ಆರೋಪಿಯ ವಿರುದ್ದ ನಗರ ಪೊಲೀಸ್ ಠಾಣೆಯಲ್ಲಿ  ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಎಸ್.ಐ. ದೇವರಾಜ ಸಿದ್ದಣ್ಣ ಬಿರದರ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

ನಗರ  ಪೊಲೀಸ್ ಠಾಣೆ .

ದಿನಾಂಕ: 22/08/2021 ರಂದು 11-40 ಗಂಟೆ ಸಮಯದಲ್ಲಿ ಚಿಕ್ಕಮಗಳೂರು ನಗರದ ಶಂಕರಪುರ 2 ನೇ ಕ್ರಾಸ್ ನಲ್ಲಿರುವ ಅಬ್ದುಲ್ ರೆಹಮಾನ್ ಎಂಬಾತನು ತನ್ನ  ಮನೆಯಲ್ಲಿ  ಅಕ್ರಮವಾಗಿ  ದನವನ್ನು ಕಡಿದು ಮಾರಾಟ ಮಾಡುತ್ತಿರುವ ಬಗ್ಗೆ ದಾಳಿ ನಡೆಸಿದ್ದು , ಆರೋಪಿಯಾದ ಅಬ್ದುಲ್ ರೆಹಮಾನ್ ಬಿನ್ ಅಬ್ದುಲ್ ವಹಾಬ್ , ಶಂಕರಪುರ ವಾಸಿ ಈತನು  ಓಡಿಹೋಗಿದ್ದು ಯಾವುದೇ ಪರವಾನಗಿಯನ್ನು ಹೊಂದದೆ ಅಕ್ರಮವಾಗಿ ಜಾನುವಾರುಗಳನ್ನು ಕಡಿದು ಮಾರಾಟ ಮಾಡುತ್ತಿದ್ದು, ಮನೆಯಲ್ಲಿದ್ದ  ಸುಮಾರು 45 ಕೆಜಿಯಷ್ಟು ದನದ ಮಾಂಸ , ಒಂದು ಕಬ್ಬಿಣದ ಕತ್ತಿ,  2 ಕಬ್ಬಿಣದ ಕೊಕ್ಕೆ ಮತ್ತು  ಒಂದು ಕಬ್ಬಿಣದ ತಕ್ಕಡಿ . ಮೂರು ತೂಕದ ಬಟ್ಟು, ಒಂದು ಮುಸ್ಕಲ್, ಹಾಗೂ 1500 ರೂ ಹಣ ಇವುಗಳನ್ನು  ವಶಕ್ಕೆ ಪಡೆದು  ಆರೋಪಿಯ ವಿರುದ್ದ ನಗರ ಪೊಲೀಸ್ ಠಾಣೆಯಲ್ಲಿ  ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಎಸ್.ಐ. ದೇವರಾಜ ಸಿದ್ದಣ್ಣ ಬಿರದರ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ

ಅಕ್ರಮ ಜೂಜಾಟ  ಪ್ರಕರಣ

ನಗರ   ಪೊಲೀಸ್ ಠಾಣೆ

ದಿನಾಂಕ 22/08/2021 ರಂದು ರಾತ್ರಿ 10-00 ಗಂಟೆ  ಸಮಯದಲ್ಲಿ ಚಿಕ್ಕಮಗಳೂರು ನಗರದ ರಾಂಪುರದಲ್ಲಿರುವ ಬಾಲಾಜಿ ಕಾಂಪ್ಲೆಕ್ಸ್ ಹತ್ತಿರದ ಖಾಲಿ ಜಾಗದಲ್ಲಿ ಅಕ್ರಮವಾಗಿ ಹಣವನ್ನು ಕಟ್ಟಿ ಜೂಜಾಟವಾಡುತ್ತಿದ್ದ 1)ಅಶೋಕ ಬಿನ್ ಗಂಗಾಧರ 2)ಮೋಹನಕುಮಾರ ಬಿನ್ ಲೇಟ್ ರಂಗರಾವ್ 3) ಸುರೇಶ ಬಿನ್ ಚನ್ನೇಗೌಡ 4) ಸಚ್ಚಿನ್ ಬಿನ್ ಈರೇಗೌಡ  ಇವರುಗಳನ್ನು  ವಶಕ್ಕೆ ಪಡೆದು ಇವರುಗಳ ವಶದಲ್ಲಿದ್ದ 1) 57 ಇಸ್ಪೀಟ್ ಎಲೆಗಳು 2) ಒಂದು ಬೆಡ್ ಶೀಟ್ 3) 4 ವಿವಿಧ ಕಂಪೆನಿಯ ಮೊಬೈಲ್ ಗಳು  ಹಾಗೂ 34,820/- ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿತರ ವಿರುದ್ದ  ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಐ ಗುರುಪ್ರಸಾದ್  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣ.

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ 22-08-2021 ರಂದು 19-30 ಗಂಟೆ ಸಮಯದಲ್ಲಿ ಮಂಜುನಾಥ ರವರು ತರೀಕೆರೆಯಲ್ಲಿ ಸ್ವಂತ ಕೆಲಸ ಮುಗಿಸಿ ನಂತರ ಸ್ಟೇಷನ್ ದುಗ್ಲಾಪುರಕ್ಕೆ ಹೋಗಲೆಂದು ರಾಂಪುರ ಗೇಟ್ ಬಳಿ ತನ್ನ ಬೈಕಿನಲ್ಲಿ ಹೋಗುತ್ತಿರುವಾಗ  ಯಾವುದೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಮಂಜುನಾಥರವರು ಬೈಕಿನಿಂದ ಕೆಳಗೆ ಬಿದ್ದಿದ್ದು ತಲೆಗೆ ತೀವ್ರತರಹದ ಪೆಟ್ಟಾಗಿ ಮೃತಪಟ್ಟಿರುತ್ತಾರೆಂದು ,ಬೈಕಿಗೆ ಡಿಕ್ಕಿ ಹೊಡೆಸಿ ವಾಹನವನ್ನು ನಿಲ್ಲಿಸಿದೆ ಹೋದ ಚಾಲಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ತರೀಕೆರೆ ಠಾಣೆಯಲ್ಲಿ ಪ್ರರಕಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 23-08-2021 06:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080