ಅಭಿಪ್ರಾಯ / ಸಲಹೆಗಳು

ಮನುಷ್ಯ ಕಾಣೆ ಪ್ರಕರಣ.

ಸಖರಾಯಪಟ್ಟಣ  ಪೊಲೀಸ್ ಠಾಣೆ.

ದಿನಾಂಕ:-23-01-2022 ರಂದು ಚನ್ನಮ್ಮ ಕೋಂ  ಲೇಟ್ ಪುಟ್ಟಸ್ವಾಮಿ , ಜೋಡಿಹೋಚಿಹಳ್ಳಿ ಗ್ರಾಮವಾಸಿರವರು ನೀಡಿದ ದೂರಿನ ಸಾರಾಂಶವೇನೆಂದರೆ, ನನ್ನ 2 ನೇ ಮಗಳಾದ ರೇಖಾಶ್ರೀ , 23 ವರ್ಷ, ಇವಳು ಬಾಣಾವರದ ಸಿದ್ದಶ್ರೀ ಮೆಡಿಕಲ್ ನಲ್ಲಿ ಕೆಲಸ ಮಾಡುತ್ತಿದ್ದು , ದಿನಾಂಕ 22-01-2022 ರಂದು ಬೆಳಿಗ್ಗೆ 08-45 ಗಂಟೆ ಸಮಯದಲ್ಲಿ ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದು ಸಂಜೆಯಾದರೂ ಮನೆಗೆ ಬಾರದೇ ಇದ್ದುದ್ದರಿಂದ ಮೆಡಿಕಲ್ ಸ್ಟೋರ್ ಮಾಲೀಕರಿಗೆ  ಪೋನ್ ಕರೆ ಮಾಡಿ ಮಗಳ ಬಗ್ಗೆ ವಿಚಾರ ಮಾಡಿದ್ದು ಈ ದಿನ ನಿಮ್ಮ ಮಗಳು ಕೆಲಸಕ್ಕೆ ಬಂದಿರುವುದಿಲ್ಲವೆಂದು ತಿಳಿಸಿರುತ್ತಾರೆ. ಸಂಬಂಧಿಕರ, ನೆಂಟರಿಷ್ಟರ ಹಾಗೂ ಸ್ನೇಹಿತರಲ್ಲಿ ವಿಚಾರ ಮಾಡಲಾಗಿ  ಎಲ್ಲಿಯೂ ಪತ್ತೆಯಾಗದೇ ಇರುವುದರಿಂದ ನನ್ನ ಮಗಳಾದ ರೇಖಾಶ್ರೀಯನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನನ್ವಯ ಸಖರಾಯಪಟ್ಟಣ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಬೀರೂರು  ಪೊಲೀಸ್ ಠಾಣೆ

ದಿನಾಂಕ:23/01/2022 ರಂದು ಶ್ರೀಧರ್ ಬಿನ್ ಚನ್ನಬಸಪ್ಪರವರು , ಹರಿಹರ ವಾಸಿರವರು ನೀಡಿದ ದೂರಿನಲ್ಲಿ ದಿನಾಂಕ 23-01-2022 ರಂದು ಬೆಳಿಗ್ಗೆ 05-45 ಗಂಟೆ ಸಮಯದಲ್ಲಿ ನನ್ನ ಮಗನಾದ ಶರತ್ ತನ್ನ ಬಾಬ್ತು ಕೆಎ-17 ಹೆಚ್ ಜಿ- 9775 ಬೈಕಿನಲ್ಲಿ ಹಿಂಬದಿ ಸೀಟಿನಲ್ಲಿ ಸುದೀಪ್ ರವರನ್ನು ಕೂರಿಸಿಕೊಂಡು ಬೀರೂರು ಕಡೆಗೆ ಬರುತ್ತಿರುವಾಗ ಬೀರೂರು ಯಗಟಿ ಕ್ರಾಸ್ ಬಳಿ ಶರತ್ ನು ಬೈಕನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ್ದರಿಂದ, ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದ್ದು ನಿಯಂತ್ರಣ ತಪ್ಪಿ ಬೈಕ್ ಸಮೇತ ರಸ್ತೆಯ ಮೇಲೆ ಬಿದ್ದಿದ್ದರಿಂದ ಶರತ್ ನ ತಲೆಗೆ ತೀವ್ರತರಹದ ಪೆಟ್ಟಾಗಿ ಮೃತಪಟ್ಟಿದ್ದು, ಸುದೀಪ್ ಗೂ ಸಹ ತಲೆಗೆ , ಕೈಕಾಲುಗಳಿಗೆ ಪೆಟ್ಟಾಗಿರುತ್ತೆ.. ಬೈಕ್  ಚಾಲಕ ಶರತ್ ರವರ ವಿರುದ್ದ  ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಬೀರೂರು ಠಾಣೆಯಲ್ಲಿ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ.

ಅಜ್ಜಂಪುರ   ಪೊಲೀಸ್ ಠಾಣೆ.

ದಿನಾಂಕ:-22-01-2022 ರಂದು ಜಯಮ್ಮ ಕೋಂ ತಿಪ್ಪೇಶಪ್ಪ, ಗುಟ್ಟಿಕಟ್ಟೆ ಗೊಲ್ಲರಹಟ್ಟಿ, ಹೊಸದುರ್ಗ ತಾಲ್ಲೂಕು ವಾಸಿರವರು ನೀಡಿದ ದೂರಿನ ಸಾರಾಂಶವೇನೆಂದರೆ, ನನ್ನ 2 ನೇ ಮಗಳಾದ ಜ್ಯೋತಿ , 19 ವರ್ಷ, ಇವಳು ದಿನಾಂಕ 21-01-2022 ರಂದು ನನ್ನ ತಾಯಿಯ ಊರಾದ ಅಜ್ಜಂಪುರ ತಾಲ್ಲೂಕು ಅರಬಲಗೊಲ್ಲರಹಟ್ಟಿಗೆ ಹೋಗಿದ್ದು, ನನ್ನ ತಾಯಿ ಕರಿಯಮ್ಮರೊಂದಿಗೆ ಇದ್ದು , ನನ್ನ ತಾಯಿ ಕೆಲಸಕ್ಕೆ ಹೋಗಿ ಸಂಜೆ 05-00 ಗಂಟೆಗೆ ಕೆಲಸ ಮುಗಿಸಿ ಮನೆಗೆ ಬಂದು ನೋಡಿದಾಗ ನನ್ನ ಮಗಳು ಜ್ಯೋತಿ ಮನೆಯಲ್ಲಿ  ಕಾಣದ ಕಾರಣ ನನಗೆ ಪೋನ್ ಮಾಡಿ ನಿನ್ನ ಮಗಳು ಮನೆಗೆ ಬಂದಿದ್ದಾಳ ಎಂದು ಕೇಳಿದ್ದು ನಾನು ಬಂದಿಲ್ಲವೆಂದು ತಿಳಿಸಿದೆನು. ಸಂಬಂಧಿಕರ, ನೆಂಟರಿಷ್ಟರ ಹಾಗೂ ಸ್ನೇಹಿತರಲ್ಲಿ ವಿಚಾರ ಮಾಡಲಾಗಿ  ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ನನ್ನ ಮಗಳ ಚಹರೆ ಕು// ಜ್ಯೋತಿ, 19 ವರ್ಷ, 5 ಅಡಿ ಎತ್ತರ , ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕನ್ನಡ ಮಾತನಾಡುತ್ತಾಳೆ. ಗುಲಾಬಿ ಬಣ್ಣದ ಡ್ರಸ್ ಧರಿಸಿರುತ್ತಾಳೆಂದು , ಕಾಣೆಯಾಗಿರುವ ಜ್ಯೋತಿಯನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನನ್ವಯ ಅಜ್ಜಂಪುರ   ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಡೂರು   ಪೊಲೀಸ್ ಠಾಣೆ.

ದಿನಾಂಕ:-22-01-2022 ರಂದು ಯಶೋಧ  ಕೋಂ  ಮಂಜುನಾಥ, ದೊಡ್ಡಪೇಟೆ  ಗ್ರಾಮವಾಸಿರವರು ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ಈಗ್ಗೆ 18 ವರ್ಷಗಳ ಹಿಂದೆ ನನ್ನ ಗಂಡನನ್ನು ಬಿಟ್ಟು , ನನ್ನ ಮಗಳಾದ ಮಮತಾರವರೊಂದಿಗೆ ಅಂಗಡಿಯನ್ನು ಇಟ್ಟುಕೊಂಡು ವಾಸವಾಗಿದ್ದು , ದಿನಾಂಕ 21-01-2022 ರಂದು ಸಂಜೆ 04-00 ಗಂಟೆ ಸಮಯದಲ್ಲಿ ನನ್ನ ಮಗಳಾದ ಮಮತಾಳು ಹಾಳು ತರುತ್ತೇನೆಂದು ಅಂಗಡಿಗೆ ಹೋಗಿದ್ದು , ಸಂಜೆಯಾದರೂ ಮನೆಗೆ ವಾಪಾಸ್ ಬಂದಿರುವುದಿಲ್ಲ. ಅಕ್ಕಪಕ್ಕದ ಮನೆಗಳಲ್ಲಿ ಸಂಬಂಧಿಕರ, ನೆಂಟರಿಷ್ಟರ ಹಾಗೂ ಸ್ನೇಹಿತರಲ್ಲಿ ವಿಚಾರ ಮಾಡಲಾಗಿ  ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ನನ್ನ ಮಗಳ ಚಹರೆ ಮಮತ, 20 ವರ್ಷ, 154 ಸೆಂ.ಮೀ. ಎತ್ತರ , ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕನ್ನಡ ಮಾತನಾಡುತ್ತಾಳೆ. ಹಳದಿ ಬಣ್ಣದ ಚೂಡಿದಾರ್  ಧರಿಸಿರುತ್ತಾಳೆಂದು,ಕಾಣೆಯಾಗಿರುವ  ಮಮತಾಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನನ್ವಯ ಕಡೂರು   ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 23-01-2022 06:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080