ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಹಾಗೂ ಕೊವಿಡ್ 19 ನಿಯಮ ಉಲ್ಲಂಘನೆ  ಪ್ರಕರಣ.

ಲಕ್ಕವಳ್ಳಿ   ಪೊಲೀಸ್  ಠಾಣೆ

ದಿನಾಂಕ: 23/05/2021 ರಂದು ಲಕ್ಕವಳ್ಳಿ ಠಾಣಾ ಸರಹದ್ದಿನ ಹುರುಳಿಬೋರೆ ಗ್ರಾಮದ ವಾಸಿ ಮಣೀಕಂಠ ಬಿನ್ ಈಶ್ವರಪ್ಪ  ತನ್ನ ಮನೆಯ ಮುಂಭಾಗದಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು  ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದು ಅರೋಪಿಯಿಂದ 180 ಎಂ.ಎಲ್ ನ ಅಫಿಸರ್ಸ್ ಚಾಯಸ್ ಸ್ಪೇಷಲ್ ವಿಸ್ಕಿಯ 23 ಪೌಚ್ ಗಳು ಹಾಗೂ  90 ಎಂ.ಎಲ್.ನ ಓರಿಜನಲ್ ಚಾಯಸ್ ಡಿಲಕ್ಸ್ ವಿಸ್ಕಿಯ 5 ಟೆಟ್ರಾ ಪ್ಯಾಕ್  ಬೆಲೆ 2583/-ರೂ ನ ಮದ್ಯ ವಶಪಡಿಸಿಕೊಂಡು ಕೋರನಾ ಸಾಂಕ್ರಾಮಿಕ ರೋಗ ಹೆಚ್ಚು ಹೆಚ್ಚಾಗಿ ಹರಡುತ್ತಿರುವ ಬಗ್ಗ ತಿಳಿದಿದ್ದರೂ ಸಹ ಕೋವಿಡ್ -19  ಲಾಕ್ ಡೌನ್ ಆದೇಶವನ್ನು ಉಲ್ಲಂಘನೆ ಮಾಡಿದ್ದು ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್ಐ. ಮೇಘ ಟಿ.ಎನ್. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ

ಲಿಂಗದಹಳ್ಳಿ   ಪೊಲೀಸ್  ಠಾಣೆ

ದಿನಾಂಕ: 23/05/2021 ರಂದು ಲಕ್ಕವಳ್ಳಿ ಠಾಣಾ ಸರಹದ್ದಿನ ಕೃಷ್ಣಾಪುರ ಗ್ರಾಮದ ವಾಸಿ ತಂಗರಾಜು ಎಂ. ಬಿನ್ ಲೇಟ್ ಮುನಿಸ್ವಾಮಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು  ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದು ಅರೋಪಿಯಿಂದ 90 ಎಂ.ಎಲ್ ನ ಓರಿಜನಲ್ ಚಾಯಸ್ ಡಿಲಕ್ಸ್ ವಿಸ್ಕಿಯ 95 ಟೆಟ್ರಾ ಪ್ಯಾಕ್  ಬೆಲೆ 3338/- ರೂ ನ ಮದ್ಯ  ಮತ್ತು ಮದ್ಯ ಮಾರಾಟ ಮಾಡಿದ ಹಣ 50/- ರೂ ಗಳನ್ನು ವಶಪಡಿಸಿಕೊಂಡು ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್ಐ. ರಫೀಕ್ ಎಂ,  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ

ಕೊವಿಡ್ 19 ನಿಯಮ ಉಲ್ಲಂಘನೆ  ಪ್ರಕರಣ

ನಗರ  ಪೊಲೀಸ್  ಠಾಣೆ

ದಿನಾಂಕ: 22/05/2021 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ನಗರ ಠಾಣಾ ಸರಹದ್ದಿನ ಬೇಲೂರು ರಸ್ತೆಯಲ್ಲಿರುವ ಕೋಟೆ ಸರ್ಕಲ್ ಎದುರು ಇರುವ ಗೋಪಾಲ ಎಂಬುವವರು ತನ್ನ ಮನೆಯ ಒಳಗಡೆ ಸುಮಾರು 10-15 ಜರನ್ನು ಗುಂಪಾಗಿ ಸೇರಿಸಿಕೊಂಡು ಮದ್ಯ ಸೇವನೆ ಮಾಡಿಸುತ್ತಿರುತ್ತಾರೆ ಎಂದು ಮಾಹಿತಿ ಮೇರೆಗೆ  ದಾಳಿ  ದಾಳಿ ಮಾಡಿದಾಗ ಸುಆಮರು 10-15 ಜನರು ಗುಂಪು ಸೇರಿಕೊಂಡು ಮದ್ಯ ಪಾನ ಮಾಡುತ್ತಿದ್ದು ಪಿರ್ಯಾದಿಯವರನ್ನು ನೋಡಿ ಎಲ್ಲರೂ ಓಡಿ ಹೋಗಿ ತಪ್ಪಿಸಿಕೊಂಡಿರುತ್ತಾರೆ. ಹಾಗೂ ಸದರಿ ಮನೆಯ ಮಾಲೀಕರಾದ ಗೋಪಾಲ ರವರು ಸಹಾ ಅಲ್ಲಿಂದ ಓಡಿ ಹೋಗಿ ತಪ್ಪಿಸಿಕೊಂಡಿರುತ್ತಾರೆ. ಸದರಿ ಸ್ಥಳದಲ್ಲಿ 15 ಪ್ಲಾಸ್ಟಿಕ್ ಲೋಟ ಮತ್ತು 2 ಲೀಟರ್ ನ 4 ನೀರಿನ ಬಾಟಲಿಗಳು ಹಾಗೂ 90. ಎಂ.ಎಲ್.ನ 15 ಮದ್ಯ ದ ಪೌಚ್ ಗಳೂ ಇದ್ದು  ಮದ್ಯ ವಶಪಡಿಸಿಕೊಂಡು  ಕೋರನಾ ಸಾಂಕ್ರಾಮಿಕ ರೋಗ ಹೆಚ್ಚು ಹೆಚ್ಚಾಗಿ ಹರಡುತ್ತಿರುವ ಬಗ್ಗ ತಿಳಿದಿದ್ದರೂ ಸಹ ಕೋವಿಡ್ -19  ಲಾಕ್ ಡೌನ್ ಆದೇಶವನ್ನು ಉಲ್ಲಂಘನೆ ಮಾಡಿದ್ದು, ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್ಐ. ಶಂಭುಲಿಂಗಯ್ಯ ಎಂ.ಈ.  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 23-05-2021 07:21 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080