ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಸಾಗಾಣಿಕೆ  ಪ್ರಕರಣ

ಪಂಚನಹಳ್ಳಿ ಪೊಲೀಸ್ ಠಾಣೆ.

ದಿನಾಂಕ:22-06-2022 ರಂದು ಪಂಚನಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಚೌಡಿಪಾಳ್ಯ ಗ್ರಾಮದ ಶ್ರೀ ಮಲಿಯಮ್ಮ ದೇವಾಲಯದ ಬಳಿ ಇರುವ ಸಿಮೆಂಟ್ ಕಟ್ಟೆಯ ಬಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ, ನಾಗರಾಜ ಬಿನ್ ಮಾದಿಹಾಳಪ್ಪ ವಾಸ ಚೌಡಿಪಾಳ್ಯ ಗ್ರಾಮ ಈತನನ್ನು  ವಶಕ್ಕೆ ಪಡೆದು, ಅರೋಪಿತನ ವಶದಲ್ಲಿ ಇದ್ದ 90 ಎಂ.ಎಲ್. ನ 40 ಟೆಟ್ರಾಪ್ಯಾಕ್ ಮದ್ಯವನ್ನು ಅಂದಾಜು ಬೆಲೆ 1405/- ರೂ ಅಗಿದ್ದು ಸ್ಕೂಟಿಯನ್ನು ಮತ್ತು ಮದ್ಯವನ್ನು ಅಮಾನತ್ತುಪಡಿಸಿಕೊಂಡಿದ್ದು, ಆರೋಪಿತನ ವಿರುದ್ದ ಪಂಚನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಂಚನಹಳ್ಳಿ ಠಾಣಾ ಪಿ.ಎಸ್.ಐ. ಜಿ.ಕೆ. ಪವಿತ್ರ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಪಂಚನಹಳ್ಳಿ ಪೊಲೀಸ್ ಠಾಣೆ.

ದಿನಾಂಕ:22-06-2022 ರಂದು ಪಂಚನಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಚೌಡಿಪಾಳ್ಯ ಗೇಟ್ ಬಸ್ ನಿಲ್ದಾಣದ  ಶ್ರೀ ಬಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ, ಲಕ್ಷ್ಮೀಕಾಂತ ಬಿನ್ ಗಂಗಾಧರಪ್ಪ ವಾಸ ಚೌಡಿಪಾಳ್ಯ ಗ್ರಾಮ ಈತನನ್ನು  ವಶಕ್ಕೆ ಪಡೆದು, ಅರೋಪಿತನ ವಶದಲ್ಲಿ ಇದ್ದ 90 ಎಂ.ಎಲ್. ನ 40 ಟೆಟ್ರಾಪ್ಯಾಕ್ ಮದ್ಯವನ್ನು ಅಂದಾಜು ಬೆಲೆ 1405/- ರೂ ಅಗಿದ್ದು ಸ್ಕೂಟಿಯನ್ನು ಮತ್ತು ಮದ್ಯವನ್ನು ಅಮಾನತ್ತುಪಡಿಸಿಕೊಂಡಿದ್ದು, ಆರೋಪಿತನ ವಿರುದ್ದ ಪಂಚನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಂಚನಹಳ್ಳಿ ಠಾಣಾ ಪಿ.ಎಸ್.ಐ. ಜಿ.ಕೆ. ಪವಿತ್ರ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಬೀರೂರು ಪೊಲೀಸ್ ಠಾಣೆ.

ದಿನಾಂಕ;22/06/2022 ರಂದು ಪಿರ್ಯಾದಿ ಮಂಜುನಾಥ ರಾವ್ ಬಿನ್ ರಾಜಶೇಖರ ರಾವ್, ವಾಸ ಶಿವಾಜಿನಗರ, ಬೀರೂರು ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯ ಹೆಂಡತಿ ಕಾವ್ಯ ಜಾಧವ್ ಇವಳು ದಿನಾಂಕ; 20/06/2022 ರಂದು ಸಂಜೆ  ಮನೆಯಿಂದ ಹೋದವಳು, ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು, ಈವರೆಗೆ ಹುಡಕಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ಮಗಳು ಕಾವ್ಯ ಜಾಧವ್, 24 ವರ್ಷ,  5 ಅಡಿ ಎತ್ತರ,  ದುಂಡುಮುಖ,  ಎಣ್ಣೆಗೆಂಪು ಮೈ ಬಣ್ಣ, ಕನ್ನಡ, ಹಿಂದಿ ಬಾಷೆ ಮಾತಾನಾಡುತ್ತಾಳೆ,  ಬಿಳಿ ಬಣ್ಣದ ಚೂಡಿದಾರ ಟಾಪ್  ಮತ್ತು ಪಿಂಕ್ ಬಣ್ಣದ ಲೆಗ್ಗಿನ್ಸ್  ಧರಿಸಿರುತ್ತಾರೆ. ಕಾಣೆಯಾಗಿರುವ ಹೆಂಡತಿ ಕಾವ್ಯ ಜಾಧವ್ ರವರನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಲ್ದೂರು ಪೊಲೀಸ್ ಠಾಣೆ.

ದಿನಾಂಕ;23/06/2022 ರಂದು ಪಿರ್ಯಾದಿ ಶ್ರೀಮತಿ ಭಾಗ್ಯಲಕ್ಷ್ಮೀ ಕೋಂ ರಾಹುಲ್ ಬಿ.ಆರ್, ವಾಸ ಬಸರವಳ್ಳಿ, ಅವತಿ ಹೋಬಳಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯ ಗಂಡ ರಾಹುಲ್ ಬಿ.ಆರ್. ಇವನು ದಿನಾಂಕ; 10/05/2022 ರಂದು ಚಿಕ್ಕಮಗಳೂರಿಗೆ ಹೋಗಿ ಬರುತ್ತೇನೆಂದು ಮನೆಯಿಂದ ಹೋದವರು, ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು, ಈವರೆಗೆ ಹುಡಕಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ತನ್ನ ಗಂಡ ರಾಹುಲ್ ಬಿ.ಆರ್, 32 ವರ್ಷ,  5.9 ಅಡಿ ಎತ್ತರ, ಸಾದಾರಣ ಮೈ ಕಟ್ಟು,  ಕನ್ನಡ, ಇಂಗ್ಲಿಷ್ ಹಿಂದಿ ಬಾಷೆ ಮಾತಾನಾಡುತ್ತಾನೆ,  ಬ್ಲೂ ಜೀನ್ಸ್ ಪ್ಯಾಂಟ್, ಬ್ಲೂ ಟೀ ಶರಟು, ಬ್ಲ್ಯೂ ಸ್ಲಿಪ್ಪರ್ ಧರಿಸಿರುತ್ತಾರೆ. ಕಾಣೆಯಾಗಿರುವ  ರಾಹುಲ್ ಬಿ.ಆರ್. ರವರನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಅಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ;22/06/2022 ರಂದು ಪಿರ್ಯಾದಿ ರಕ್ಷಿತ್ ಜಿ.ಡಿ. ಬಿನ್ ದಕ್ಷಿಣ ಮೂರ್ತಿ, ವಾಸ ಗಿರಿಯಾಪುರ, ಅಜ್ಜಂಪುರ ವಾಸಿ ಇವರು ನೀಡಿದ ದೂರಿನಲ್ಲಿ ದಿನಾಂಕ;22/06/2022 ರಂದು ಪಿರ್ಯಾದಿ ತಂದೆ ದಕ್ಷಿಣ ಮೂರ್ತಿ ಇವರನ್ನು ಶ್ರೇಯಸ್ ಕೆಎ-66-ಜೆ-1345 ರ ಮೋಟಾರು ಬೈಕಿನಲ್ಲಿ ಕೂಡಿಸಿಕೊಂಡು ರಂಗಾಪುರ ಕ್ರಷರ್ ಹತ್ತಿರ ಬ್ರಿಡ್ಜ್ ಮುಂದೆ  ಬರುತ್ತಿರುವಾಗ  ಬೈಕ್ ಅನ್ನು  ಅತೀವೇಗ ಚಾಲನೆ ಮಾಡಿಕೊಂಡು  ಬಂದು  ಬೈಕ್ ನಿಯಂತ್ರಣ ತಪ್ಪಿ ರಸ್ತೆಯ ಬಲಬದಿಯ ಪುಟ್ ಪಾತ್ ಗೆ ಬಿಳಿಸಿದ ಪರಿಣಾಮ ದಕ್ಷಿಣ ಮೂರ್ತಿ ಪೆಟ್ಟಾಗಿದ್ದು, ದಕ್ಷಿಣ ಮೂರ್ತಿ ರವರಿಗೆ ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಚಿಕಿತ್ಸೆ ಕೊಡಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಅಪಘಾತಪಡಿಸಿದ ಬೈಕಿನ  ಚಾಲಕನ ವಿರುದ್ದ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿರುತ್ತಾರೆ

ಇತ್ತೀಚಿನ ನವೀಕರಣ​ : 23-06-2022 07:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080