ಅಭಿಪ್ರಾಯ / ಸಲಹೆಗಳು

ಮನುಷ್ಯ ಕಾಣೆ ಪ್ರಕರಣ.

ನ.ರಾ.ಪುರ. ಪೊಲೀಸ್ ಠಾಣೆ.

ದಿನಾಂಕ 23-09-2021 ರಂದು ರಮೇಶ ಬಿನ್ ಧರ್ಮಯ್ಯ, ದೊಡ್ಡಿನತಲೆಕುಸುಬೂರು ಗ್ರಾಮವಾಸಿರವರು ನೀಡಿದ ದೂರೇನೆಂದರೆ ನನಗೆ 4 ಜನ ಹೆಣ್ಣು ಮಕ್ಕಳಿದ್ದು , 3 ನೇ ಮಗಳಾದ ಕಾವ್ಯಶ್ರೀ , 19 ವರ್ಷ ಈಕೆಯು ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡಿದ್ದು  ಮುಂದೆ ವಿದ್ಯಾಭ್ಯಾಸಕ್ಕೆ ಹೋಗದೆ ಮನೆಯಲ್ಲಿ ಇದ್ದುಕೊಂಡು ಕೆಲಸ ಹುಡುಕುತ್ತಿದ್ದಳು, ಈಗ್ಗೆ 15 ದಿನಗಳ ಹಿಂದೆ ನ,ರಾ,ಪುರದ ಬಸ್ತಪಠದ ಜಳ್ಳಹಂಕಲು ಗ್ರಾಮದಲ್ಲಿರುವ ಅವರ ಮಾವ ಹಾಲಪ್ಪರವರ ಮನೆಗೆ ಹೋಗಿದ್ದಳು, ದಿನಾಂಕ 22-09-2021 ರಂದು ಬೆಳಗ್ಗೆ 10-00 ಗಂಟೆಯಲ್ಲಿ ನ,ರಾ,ಪುರ ಟೌನ್ ಗೆ ಹೋಗಿ ಬಟ್ಟೆ ಹೊಲಿಯುವುದಕ್ಕೆ ಕೊಟ್ಟಿದ್ದನ್ನು ತೆಗೆದುಕೊಂಡು ಬರುತ್ತೇನೆಂದು ಅವರ ಅಜ್ಜಿಗೆ ಹೇಳಿ ಹೋದವಳು ಸಂಜೆಯಾದರೂ ಮನೆಗೆ ವಾಪಾಸ್ ಬಂದಿರುವುದಿಲ್ಲ . ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದ್ದು ಇಲ್ಲಿಯವರೆಗೂ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ ನನ್ನ ಮಗಳನ್ನು ಪತ್ತೆ ಮಾಡಿಕೊಡಬೇಕಾಗಿ ನೀಡಿದ ದೂರಿನ ಮೇರೆಗೆ ನ.ರಾ.ಪುರ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಅಕ್ರಮ ಮದ್ಯ ಮಾರಾಟ  ಪ್ರಕರಣ.

ಸಖರಾಯಪಟ್ಟಣ   ಪೊಲೀಸ್ ಠಾಣೆ,

ದಿನಾಂಕ 22-09-2021 ರಂದು ರಾತ್ರಿ 08-20  ಗಂಟೆ ಸಮಯದಲ್ಲಿಹುಲಿಕೆರೆಯಿಂದ ಸ್ವಾಮಿಕಟ್ಟೆಗೆ ಹೋಗುವ ರಸ್ತೆಯ ಬದಿಯಲ್ಲಿ ಪುನೀತ್ ಕೋಳಿಫಾರಂ ಬಳಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದ  ಸಿದ್ದಪ್ಪ ಬಿನ್ ಲೇಟ್ ಗೋವಿಂದಪ್ಪ, ಸ್ವಾಮಿಕಟ್ಟೆ ವಾಸಿ  ಇವನನ್ನು ವಶಕ್ಕೆ ಪಡೆದು ಆತನ ಬಳಿ ಇದ್ದ  90 ಎಂ.ಎಲ್.ನ ರಾಜಾವಿಸ್ಕಿ 79 ಟೆಟ್ರಾ ಪೌಚ್ ಗಳನ್ನುಹಾಗೂ ಮದ್ಯ ಮಾರಾಟದಿಂದ ಬಂದಂತಹ 160/- ರೂ ನಗದು ಹಣವನ್ನು  ಅಮಾನತ್ತುಪಡಿಸಿಕೊಂಡಿದ್ದು ,ಆರೋಪಿ ಸಿದ್ದಪ್ಪನ ವಿರುದ್ದ ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ.ಹರೀಶ್ .ಆರ್. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಕರ್ನಾಟಕ ಜಾನುವಾರು ಹತ್ಯಾ ಪ್ರತಿಬಂಧಕ ಸಂರಕ್ಷಣಾ ಆದ್ಯಾದೇಶ ಪ್ರಕರಣ.

ನಗರ    ಪೊಲೀಸ್ ಠಾಣೆ,

ದಿನಾಂಕ 22-09-2021 ರಂದು 11.00  ಗಂಟೆ ಸಮಯದಲ್ಲಿ ಚಿಕ್ಕಮಗಳೂರು ನಗರ  ಠಾಣಾ ಸರಹದ್ದಿನ ಮಾರ್ಕೆಟ್ ರಸ್ತೆಚಾಮುಂಡಿ ಕಾಫಿ ಕ್ಯೂರಿಂಗ್ ಹಿಂಭಾಗದಲ್ಲಿ ಎಲ್ಲಿಂದಲ್ಲೋ ದನಗಳನ್ನು ಕಳ್ಳತನ ಮಾಡಿಕೊಂಡು ಬಂದು ಅಕ್ರಮವಾಗಿ ದನಗಳನ್ನು ಕಡಿಯುವ ಜಾಗದಲ್ಲಿ ಕಟ್ಟಿಹಾಕಿದ್ದು ಜೀಪಿನಲ್ಲಿದ್ದ ನಮ್ಮಗಳನ್ನು ನೋಡಿ ಸ್ಥಳದಲ್ಲಿದ್ದ ಆಸಾಮಿಗಳು ಓಡಿಹೋಗಿದ್ದು, ಸದರಿ ಸ್ಥಳವು ಖಾಲೀದ್ ಬಿನ್ ಪಾಜ್ಲು ರೆಹಮಾನ್ ರವರ ಶೆಡ್ ಆಗಿರುತ್ತೆ. ಓಡಿಹೋದವರ ಹೆಸರು ತಿಳಿಯಲಾಗಿ ತಮಿಳು ಕಾಲೋನಿ ವಾಸಿಗಳಾದಇಕ್ಬಾಲ್, ಫಾರೂಕ್, ಸಲ್ಮಾನ್ ಖಾನ್, ಸುಹೇಲ್ ಬಾಷಾ, ಇರ್ಪಾನ್ ಸಂಧಿ ಆಗಿದ್ದು  ,ಸದರಿ ಸ್ಥಳದಲ್ಲಿ 4 ಜಾನುವಾರುಗಳಿದ್ದು, ಹರಿತವಾದ ಎರಡು ಕತ್ತಿ, ತೂಕ ಮಾಡುವ ತಕ್ಕಡಿ, 4 ಕಬ್ಬಿಣದ ಕೊಕ್ಕೆಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ದ ನಗರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ.ಶಂಭುಲಿಂಗಯ್ಯ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ  ಪ್ರಕರಣ.

ಸಿ.ಇ.ಎನ್.   ಪೊಲೀಸ್ ಠಾಣೆ,

ದಿನಾಂಕ 20-09-2021 ರಂದು ಸಂಜೆ 06-00 ಗಂಟೆ ಸಮಯದಲ್ಲಿ ಪಿಳ್ಳೇನಹಳ್ಳಿ ಗ್ರಾಮದ ಹೈಸ್ಕೂಲ್  ಶಾಲಾ ಆವರಣದ ಹತ್ತಿರ ಇರುವ ನರ್ಸರಿ ಮುಂಭಾಗ  ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದ  ಶಿವಶಂಕರನಾಯ್ಕ @ ಶಿವು ಇವನನ್ನು ವಶಕ್ಕೆ ಪಡೆದು ಆತನ ಬಳಿ ಇದ್ದ  90 ಎಂ.ಎಲ್.ನ ಓರಿಜನಲ್ ಚಾಯ್ಸ್ ಡಿಲಕ್ಸ್ ವಿಸ್ಕಿಯ 192 ಟೆಟ್ರಾ ಪೌಚ್ ಗಳನ್ನು ಅಮಾನತ್ತುಪಡಿಸಿಕೊಂಡಿದ್ದು ,ಮದ್ಯದ ಅಂದಾಜು ಬೆಲೆ 6,744/- ರೂ ಆಗಿರುತ್ತೆ. ಆರೋಪಿ ಶಿವಶಂಕರನಾಯ್ಕನ  ವಿರುದ್ದ ಸಿ.ಇ.ಎನ್. ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಐ..ರಕ್ಷಿತ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 23-09-2021 06:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080