ಅಭಿಪ್ರಾಯ / ಸಲಹೆಗಳು

ಅಕ್ರಮ ಗಾಂಜಾ ಸಾಗಾಣಿಕೆ ಪ್ರಕರಣ

ಕೊಪ್ಪ ಪೊಲೀಸ್ ಠಾಣೆ.

ದಿನಾಂಕ:23/10/2021 ರಂದು ಕೊಪ್ಪ ತಾಲ್ಲೋಕು ಕೊಪ್ಪ ಟೌನ್ ಮೇಲಿನ ಪೇಟೆ ಬಳಿ ಅಕ್ರಮ ಗಾಂಜಾವನ್ನು ಬೈಕಿನಲ್ಲಿ  ಸಾಗಾಣಿಕೆ ಮಾಡುತ್ತಿದ್ದ ಆರೋಫಿತರಾದ 1. ಸಂತೋಷ ಬಿನ್ ಕೇಶವಮೂರ್ತಿ 2. ಮಹಮ್ಮದ್ ನೌಶಾದ್ ಬಿನ್ ಲೇಟ್ ಇಸ್ಮಾಯಿಲ್ ರವರನ್ನು ವಶಕ್ಕೆ ಪಡೆದು, ಅರೋಪಿತರು ಅಕ್ರಮವಾಗಿ ಸಾಗಿಸುತ್ತಿದ್ದ 650 ಗ್ರಾಂ ಗಾಂಜಾ ವನ್ನು  ಹಾಗೂ ಕೆಎ-18- ವಿ 4155 ಬೈಕ್ ನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತರ ವಿರುದ್ದ ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಶ್ರೀನಾಥ ರೆಡ್ಡಿ ವಿ.  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ  ಪ್ರಕರಣ

ಗ್ರಾಮಾಂತರ ಪೊಲೀಸ್ ಠಾಣೆ

ದಿನಾಂಕ:23/10/2021 ರಂದು ಚಿಕ್ಕಮಗಳೂರು ತಾಲ್ಲೋಕು ಮಾವಿನಹಳ್ಳ ಗ್ರಾಮದಲ್ಲಿ ಶರಣ್ ಕುಮಾರ್  ರವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಆರೋಪಿಯನ್ನು ವಶಕ್ಕೆ ಪಡೆದು, ಆರೋಪಿತನು ಅಕ್ರಮವಾಗಿ ಹೊಂದಿದ್ದ ಓರಿನಲ್ ಚಾಯಸ್ ಡಿಲಕ್ಸ್  ವಿಸ್ಕಿಯ 90 ಎಂ.ಎಲ್. ನ 48 ಟೆಟ್ರಾಪ್ಯಾಕ್ ಒಟ್ಟು ಮದ್ಯದ ಬೆಲೆ 1686/- ರೂ ಗಳಾಗಿದ್ದು, ಸದರಿ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತನ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಮಹಾಂತೇಶ್ ಜಿ.  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಬಸವನಹಳ್ಳಿ ಪೊಲೀಸ್  ಠಾಣೆ

ದಿನಾಂಕ:23/10/2021 ರಂದು ಚಿಕ್ಕಮಗಳೂರು ನಗರದ ನೆಹರು ರಸ್ತಯಲ್ಲಿ ಇರುವ ಸಂಜೀವಪ್ಪ ಬಿನ್ ಲೇಟ್ ನರಸಿಂಹಪ್ಪ    ರವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಆರೋಪಿಯನ್ನು ವಶಕ್ಕೆ ಪಡೆದು, ಆರೋಪಿತನು ಅಕ್ರಮವಾಗಿ ಹೊಂದಿದ್ದ ಓರಿನಜಲ್ ಚಾಯ್ಸ್ ಡಿಲಕ್ಸ್ ವಿಸ್ಕಿಯ 10 ಪೌಚ್,  351/- ರೂ  ಬೆಲೆಬಾಳುವ ಮದ್ಯವನ್ನು , 3 ಖಾಲಿ ಪೌಚ್ ಗಳನ್ನು ಹಾಗೂ ಮದ್ಯ ಮಾರಾಟಮಾಡಿದ ಹಣ 200/- ರೂ ನಗದನ್ನು  ಅಮಾನತ್ತುಪಡಿಸಿಕೊಂಡು ಬಂದು ಆರೋಪಿತನ ವಿರುದ್ದ ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಕಿರಣ್ ಕುಮಾರ್ ಪಿ.  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಬಾಳೂರು ಪೊಲೀಸ್  ಠಾಣೆ.

ದಿನಾಂಕ:22/10/2021 ರಂದು ಮೂಡಿಗೆರೆ ತಾಲ್ಲೋಕು ಕೂವೆ ಗ್ರಾಮದಲ್ಲಿ ಡೇನಿಯಲ್ ಡಿಸೋಜಾ ಬಿನ್ ರೈಮನ್ ಡಿಸೋಜ  ರವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಆರೋಪಿಯನ್ನು ವಶಕ್ಕೆ ಪಡೆದು, ಆರೋಪಿತನು ಅಕ್ರಮವಾಗಿ ಹೊಂದಿದ್ದ ಕ್ಯಾಪ್ಟನ್ ಮಾರ್ಟಿನ್ ಸ್ಪೇಷಲ್ ವಿಸ್ಕಿಯ 90 ಎಂ.ಎಲ್. ನ 34 ಟೆಟ್ರಾಪ್ಯಾಕ್ ಒಟ್ಟು ಮದ್ಯದ ಬೆಲೆ 1194/- ರೂ ಗಳಾಗಿದ್ದು, ಸದರಿ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತನ ವಿರುದ್ದ ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ತಿಪ್ಪೇಶ್  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಅಲ್ದೂರು ಪೊಲೀಸ್  ಠಾಣೆ

ದಿನಾಂಕ:22/10/2021 ರಂದು ಚಿಕ್ಕಮಗಳೂರು ತಾಲ್ಲೋಕು ಅಲ್ದೂರು ಹೋಬಳಿ ಕೆಳಗೂರು ಗ್ರಾಮದಲ್ಲಿ ಮೊಗಣ್ಣಗೌಡ ಬಿನ್ ತಿಮ್ಮೇಗೌಡ   ರವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಆರೋಪಿಯನ್ನು ವಶಕ್ಕೆ ಪಡೆದು, ಆರೋಪಿತನು ಅಕ್ರಮವಾಗಿ ಹೊಂದಿದ್ದ ಬೆಲೆ 226/- ರೂ  ಬೆಲೆಬಾಳುವ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತನ ವಿರುದ್ದ ಅಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಜಿ.ಕೆ. ಬಸವರಾಜ್  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಇಸ್ಪೀಟ್ ಜೂಜಾಟ ಪ್ರಕರಣ

ಬಣಕಲ್ ಪೊಲೀಸ್ ಠಾಣೆ.

ದಿನಾಂಕ:22/10/2021 ರಂದು ಮೂಡಿಗೆರೆ ತಾಲ್ಲೋಕು ಜಕ್ಕಳಿ ಗ್ರಾಮದಿಂದ ಕೆಂಜಿಗೆಗೆ ಹೋಗುವ ರಸ್ತೆಯಲ್ಲಿ ಗ್ರಾಮದಲ್ಲಿ ಅಕ್ರಮ ಇಸ್ಪೀಟ್ ಜೂಜಾಟ ಆಡುತ್ತಿದ್ದ ಆರೋಫಿತರಾದ 1. ಸುಂದ್ರೇಶ್ ಬಿನ್ ಲಕ್ಷ್ಮಣಗೌಡ 2. ಮಾದವಗೌಡ  ಬಿನ್ ಮಂಜೇಗೌಡ 3. ಸುರೇಶ ಬಿನ್ ಪುಟ್ಟೇಗೌಡ 4. ಜೆ.ಅರ್. ಶಂಕ್ರೇಗೌಡ ಬಿನ್ ಲೇಟ್ ಜೆ.ಡಿ. ರಾಮೇಗೌಡ ರವರನ್ನು ವಶಕ್ಕೆ ಪಡೆದು, ಅರೋಪಿತರು ಇಸ್ಪೀಟ್ ಆಡಲು ಉಪಯೋಗಿಸಿದ 52 ಇಸ್ಪೀಟ್ ಎಲೆಗಳು, 1450/- ರೂ ನಗದು ಹಣ ಮತ್ತು ರೆಗ್ಸಿನ್ಸ್ ಟಾರ್ಪಲ್ ನ್ನು  ಅಮಾನತ್ತುಪಡಿಸಿಕೊಂಡು ಬಂದು ಆರೋಪಿತರವಿರುದ್ದ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಸತೀಶ್ ಕೆ.ಎಸ್. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಕಳ್ಳತನಕ್ಕೆ ಪ್ರಯತ್ನ  ಪ್ರಕರಣ

ನಗರ ಪೊಲೀಸ್ ಠಾಣೆ.

ದಿನಾಂಕ:23/10/2021 ರಂದು ಪಿರ್ಯಾಧಿ ಮೋಹನ್ ರಾಜ್ ರವರು ನೀಡಿದ ದೂರಿನಲ್ಲಿ  ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ನಲ್ಲಿರುವ ಕೆನರಾ ಬ್ಯಾಂಕ್ ಎ.ಟಿ.ಎಂ. ಮಿಷನ್ ನನ್ನು ದಿನಾಂಕ 22/10/2021 ರ ರಾತ್ರಿ 11.00 ಯ ನಂತರ ಬೆಳಿಗ್ಗೆ 5.00 ಗಂಟೆ ಒಳಗೆ ಯಾರೋ ಕಳ್ಳರು ಎ.ಟಿ.ಎಂ  ಮೀಷನ್ ಸ್ಕ್ರಿನರ್ ಹಾಗೂ ಮುಂಭಾಗದ ಮೇಲಿನ ಕವಚ ಕಿತ್ತೊ ಹಾಕಿ ಕಳವು ಮಾಡಲು ಪ್ರಯತ್ನಿಸಿರುವುದಾಗಿ ನೀಡಿದ ದೂರಿನ ಮೇರೆಗೆ ನಗರ ಠಾಣೆಯಲ್ಲಿ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ಇತ್ತೀಚಿನ ನವೀಕರಣ​ : 23-10-2021 07:47 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080