ಅಭಿಪ್ರಾಯ / ಸಲಹೆಗಳು

ರಸ್ತೆ ಅಪಘಾತ ಪ್ರಕರಣ

ಬೀರೂರು  ಪೊಲೀಸ್ ಠಾಣೆ .

ದಿನಾಂಕ 24.07.2021 ರಂದು ಸಚಿನ್ ಸಿ.ಜೆ. ಬಿನ್ ಜಯಣ್ಣ ಸಿ.ಎಂ. ವಾಸ ಕೆ. ಚಟ್ನಳ್ಳಿ ರವರು  ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 23/07/2021 ರಂದು  ಸಂಜೆ ಸಮಯದಲ್ಲಿ ಪಿರ್ಯಾದುದಾರರು ಕೆಎ-18 ಎನ್-5322 ನಂಬರಿನ ಮಾರುತಿ ಸುಜುಕಿ ಇಕೋ ವ್ಯಾನ್ ವಾಹನದಲ್ಲಿ ಕಡೂರಿನಿಂದ ಚಟ್ನಳ್ಳಿ ಕಡೆಗೆ ಹೋಗುತ್ತಿರುವಾಗ ಬೀರೂರು 2 ನೇ ರೈಲ್ವೆ ಗೇಟ್ ಬಳಿ ಎದುರುಗಡೆಯಿಂದ ಅರೋಪಿತನು ಕೆಎ-53 ಎಂ.ಸಿ. 4531 ನಂಬರಿನ ಇನ್ನೋವಾ ಕಾರ್ ಅತೀವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಡಿಕೊಂಡು ಬಂದು ಪಿರ್ಯಾದಿ ವಾಹನದ ಬಲಬದಿಗೆ ಡಿಕ್ಕಿ ಹೊಡೆಸಿ ಅಪಘಾತ ಮಾಡಿದ್ದು ಎರಡೂ ವಾಹನಗಳು ಜಖಂ ಅಗಿದ್ದು ಪಿರ್ಯಾದುದಾರರ ಬಲಕಾಲಿಗೆ ಮಂಡಿಯ ಕೆಳಗೆ ಪೆಟ್ಟಾಗಿರುವುದಾಗಿ ಕೆಎ-53 ಎಂ.ಸಿ. 4531 ಕಾರಿನ ಚಾಲಕನ ಮೇಲೆ ಕ್ರಮ ತೆಗೆದುಕೊಳ್ಳಲು  ನೀಡಿದ ಪಿರ್ಯಾದಿನ ಮೇರೆಗೆ  ಬೀರೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಕಡೂರು  ಪೊಲೀಸ್ ಠಾಣೆ .

ದಿನಾಂಕ 23.07.2021ರಂದು ಶಾಂತಲಾ ಕೋಂ ಕೃಷ್ಣಾ, ವೆಂಕಟೇಶನಗರ ವಾಸಿರವರು ಠಾಣೆಗೆ ಹಾಜರಾಗಿ ನೀಡಿದದೂರಿನ ಸಾರಾಂಶವೇನೆಂದರೆ ಈಗ್ಗೆ 6 ವರ್ಷಗಳ ಹಿಂದೆ ಕೃಷ್ಣರೊಂದಿಗೆ ವಿವಾಹವಾಗಿದ್ದು ನಮಗೆ 9 ತಿಂಗಳ ಹೆಣ್ಣು ಮಗಳಿರುತ್ತಾಳೆ. ನನ್ನ ಗಂಡ ಕೃಷ್ಣಾರವರು ಕಡೂರಿನ ಎಪಿಎಂಸಿಯಲ್ಲಿ ಟಮೊಟೋ ಮಂಡಿ ಮಾಡಿಕೊಂಡಿರುತ್ತಾರೆ. ದಿನಾಂಕ 17-07-2021 ರಂದು ಮನೆಯಿಂದ ಹೊರಗಡೆ ಹೋದವರು ಇಲ್ಲಿಯವರೆಗೂ ಮನೆಗೆ ಬಂದಿರುವುದಿಲ್ಲ ಸಂಬಂಧಿಕರ ,ನೆಂಟರಿಷ್ಟರ ಮನೆಗಳಲ್ಲಿ ವಿಚಾರ ಮಾಡಲಾಗಿ ಇದುವರೆಗೂ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ ನನ್ನ ಗಂಡ ಕೃಷ್ಣಾನನ್ನು ಪತ್ತೆ ಮಾಡಿಕೊಡಿಕೊಡುವಂತೆ ನೀಡಿದ ಪಿರ್ಯಾದಿನ ಮೇರೆಗೆ  ಕಡೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಜೂಜಾಟ  ಪ್ರಕರಣ

ಗ್ರಾಮಾಂತರ  ಪೊಲೀಸ್ ಠಾಣೆ

ದಿನಾಂಕ 23/07/2021 ರಂದು ಪಿರ್ಯಾದಿಯವರಾದ ಸ್ವರ್ಣ, ಪಿಐರವರು  ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ 18-07-2021 ರಂದು ಮಾಚೇನಹಳ್ಳಿ ಗ್ರಾಮದ ಬಸವರಾಜ್ ಎಂಬುವವರ ಜಮೀನಿನಲ್ಲಿರುವ ಕಟ್ಟಡದ ಮುಂಭಾಗದಲ್ಲಿ ವಿದ್ಯುತ್ ಕಂಬದ ಕೆಳಗೆ ಹಲವು ಜನರು ಸೇರಿಕೊಂಡು ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟವಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ಮಾಚೇನಹಳ್ಳಿ ಗ್ರಾಮದ ಬಸವರಾಜ್ ಎಂಬುವವರ ಜಮೀನಿನಲ್ಲಿರುವ ಕಟ್ಟಡದ ಮುಂಭಾಗದಲ್ಲಿ ವಿದ್ಯುತ್ ಕಂಬದ ಕೆಳಗೆ ಹಲವು ಜನರು ಸೇರಿಕೊಂಡು ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟವಾಡುತ್ತಿದ್ದು  ಕಾನೂನು ಬಾಹಿರವಾಗಿ ಇಸ್ಪೀಟ್ ಜೂಜಾಟವಾಡುತ್ತಿದ್ದ 9 ಜನರಲ್ಲಿ 8 ಜನರನ್ನು ವಶಕ್ಕೆ ಪಡೆದಿದ್ದು ಒಬ್ಬ ಆಸಾಮಿಯು ಓಡಿಹೋಗಿರುತ್ತಾನೆ. ಆರೋಪಿತರುಗಳ ವಶದಲ್ಲಿದ್ದ ಒಂದು ಬೆಡ್ ಶೀಟ್ ,52 ಇಸ್ಪೀಟ್ ಎಲೆಗಳು, ಹಾಗೂ 15,300/-ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿತರುಗಳ ವಿರುದ್ದ ಗ್ರಾಮಾಂತರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಐ. ಸ್ವರ್ಣ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಕೊಟ್ಟಿಗೆ ಮನೆ ಕುಸಿದು ಸಾವು ಪ್ರಕರಣ

ಗ್ರಾಮಾಂತರ  ಪೊಲೀಸ್ ಠಾಣೆ

ದಿನಾಂಕ 23-07-2021 ರಂದು ಬೆಳಗ್ಗೆ 08-00 ಗಂಟೆ ಸಮಯದಲ್ಲಿ ಒಂದು ವಾರದಿಂದ ಆಗುತ್ತಿರುವ ವಿಪರೀತ ಮಳೆಯಿಂದಾಗಿ ಚಿಕ್ಕಮಗಳೂರು ತಾಲ್ಲೂಕು ಕ್ಯಾತನಬೀಡು ಗ್ರಾಮದಲ್ಲಿ  ಕೊಟ್ಟಿಗೆ ಮನೆ ಕುಸಿದು ಬಿದ್ದು  ಕೊಟ್ಟಿಗೆಯ ಒಳಗಡೆಯಲ್ಲಿದ್ದ  ಬಸವೇಗೌಡ ಬಿನ್ ಲೇಟ್ ಮಲ್ಲಯ್ಯ, 65 ವರ್ಷ  ಹಾಗೂ  ಒಂದು ಎತ್ತು  ಮೃತಪಟ್ಟಿದ್ದು  ಈ ಬಗ್ಗೆ ಗ್ರಾಮಾಂತರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 24-07-2021 07:48 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080