ಅಭಿಪ್ರಾಯ / ಸಲಹೆಗಳು

ಅಕ್ರಮ ಜಾನುವಾರು ಕಳ್ಳತನ ಹಾಗೂ ಹತ್ಯಾ ಪ್ರಕರಣ.

ಮೂಡಿಗೆರೆ   ಪೊಲೀಸ್ ಠಾಣೆ.

ದಿನಾಂಕ:24-08-2021 ರಂದು ಬೆಳಗಿನ ಜಾವ 03-30 ಗಂಟೆ ಸಮಯದಲ್ಲಿ ರಾತ್ರಿ ರೌಂಡ್ಸ್ಸ ಕರ್ತವ್ಯದಲ್ಲಿದ್ದು ಕುನ್ನಳ್ಳಿ ಮಾರ್ಗವಾಗಿ ಬೀಜುವಳ್ಳಿ ಮುಖಾಂತರ ಮೂಡಿಗೆರೆ ಬರುತ್ತಿರುವಾಗ ಸುಂಡೇಕೆರೆ ಹಳ್ಳದ ಪಕ್ಕದ ಸ್ಮಶಾನದ ಮುಂಭಾಗ ಕೆಎ-04 ಎಫ್- 4998 ಇನ್ನೋವಾ ವಾಹನವನ್ನು ನಿಲ್ಲಿಸಿ, ವಾಹನವನ್ನು ಪರಿಶೀಲಿಸಲಾಗಿ ಒಂದು ಹೋರಿ ಕರುವನ್ನು ಹಿಂಸಾತ್ಮಕವಾಗಿ ವಾಹನದ ಹಿಂಭಾಗ ತುಂಬಿದ್ದು , ನೀಲಿ ಬಣ್ಣದ ಟಾರ್ಪಲ್ ಹಾಗೂ ಮೂರು ಬಿಳಿ ಬಣ್ಣದ ಪ್ಲಾಸ್ಟಿಕ್ ಹಗ್ಗಗಳು  ಇದ್ದು ಸದರಿ ಹೋರಿ ಕರುವನ್ನು ಕಳ್ಳತನ ಮಾಡಿ ಕಡಿದು ಮಾಂಸ ಮಾಡುವ ಉದ್ದೇಶದಿಂದ ಸಾಗಾಣಿಕೆ ಮಾಡುತ್ತಿರುವುದಾಗಿ ಆರೋಪಿಗಳು ತಿಳಿಸಿದ್ದು ನಿಜಾಮುದ್ದೀನ್ ಬಿನ್ ಮೊಹಮದ್ , ಆಶಿಕ್ ಪಾಷಾ ಬಿನ್ ಸೈಯದ್ ಮುಜಾಯಿದ್  ಹಾಗೂ ಮೊಹಮದ್ ಮಸೂದ್ ರವರುಗಳು  ಯಾವುದೇ ಪರವಾನಗಿಯನ್ನು ಹೊಂದದೆ ದನವನ್ನು ಕಳ್ಳತನ ಮಾಡಿ ಸಾಗಾಟ ಮಾಡುತ್ತಿದ್ದರಿಂದ  ಮೂಡಿಗೆರೆ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಎಸ್.ಐ.ರವಿ.ಜಿ.ಎ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ.

ಬಣಕಲ್ ಪೊಲೀಸ್ ಠಾಣೆ.

ದಿನಾಂಕ 24-08-2021 ರಂದು ಪಿರ್ಯಾದಿ ಶ್ರೀಮತಿ.ಸುಧಾರವರು ನೀಡಿದ ದೂರಿನಲ್ಲಿ ಪಿರ್ಯಾದಿ ಗಂಡನಾದ ಚಂದನ್ 40ವರ್ಷ  ಇವರು ದಿನಾಂಕ 20/08/2021 ರಂದು ಬೆಳಗ್ಗೆ ಅವರ ತಮ್ಮ ದೀಪಕ್ ರವರ ಮನೆ ಸಾಲಿಗ್ರಾಮಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ಅಲ್ಲಿಗೂ ಹೋಗದೆ ವಾಪಾಸ್ ಮನೆಗೆ ಬಂದಿರುವುದಿಲ್ಲ .ಎಲ್ಲಾ ಕಡೆ ಹುಡುಕಿದರೂ ಸಹ ಪತ್ತೆಯಾಗಿಲ್ಲವೆಂದು ಚಂದನ್ ರವರನ್ನು ಪತ್ತೆ ಮಾಡಿಕೊಡಬೇಕೆಂದು  ನೀಡಿದ ದೂರಿನ ಮೇರೆಗೆ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಲಿಂಗದಹಳ್ಳಿ ಪೊಲೀಸ್ ಠಾಣೆ.

ದಿನಾಂಕ 24-08-2021 ರಂದು ಪಿರ್ಯಾದಿ ಮನುರವರು ನೀಡಿದ ದೂರಿನಲ್ಲಿ ಪಿರ್ಯಾದಿಯ ಮೊದಲನೆಯ ಮಗನಾದ ಪರಮೇಶ, 21 ವರ್ಷ .ಈತನು 2020 ರ ಸೆಪ್ಟೆಂಬರ್ ತಿಂಗಳಿನಲ್ಲಿ ಕೆಲಸಕ್ಕೆಂದು ಹುಬ್ಬಳ್ಳಿಗೆ ಕೆಲಸಕ್ಕೆಂದು ಹೋದವನು 2 ತಿಂಗಳು ಪಿರ್ಯಾದಿಯವರ ಸಂಪರ್ಕದಲ್ಲಿದ್ದು , ನಂತರ ಪೋನ್ ಮಾಡಿದರೂ ಸ್ವಿಚ್ ಆಫ್ ಬರುತ್ತಿದ್ದು ಇಷ್ಟು ದಿನವಾದರೂ ಸಹ ಮನೆಗೆ ವಾಪಾಸ್ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಿದರೂ ಸಹ ಪತ್ತೆಯಾಗಿಲ್ಲವೆಂದು ನನ್ನ ಮಗ ಪರಮೇಶನನ್ನನ ಪತ್ತೆ ಮಾಡಿಕೊಡಬೇಕೆಂದು  ನೀಡಿದ ದೂರಿನ ಮೇರೆಗೆ ಲಿಂಗದಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಜೂಜಾಟ  ಪ್ರಕರಣ.

ಗ್ರಾಮಾಂತರ    ಪೊಲೀಸ್ ಠಾಣೆ.

ದಿನಾಂಕ 23-08-2021 ರಂದು ಠಾಣಾ ನ್ಯಾಯಾಲಯದ ಸಿಬ್ಬಂದಿಯು ಠಾಣಾ ಎನ್.ಸಿ.ಆರ್.ನಂ 442/2021 ನ್ನು ಪ್ರಕರಣ ದಾಖಲಿಸಲು ತಂದು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ ,ದಿನಾಂಕ 16/08/2021 ರಂದು ಬೆಳಗ್ಗೆ  10-00 ಗಂಟೆ  ಸಮಯದಲ್ಲಿ ಮುಗುಳವಳ್ಳಿಯಿಂದ ಆರದಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯ ಬದಿಯಲ್ಲಿರುವ ಅಂಬೇಡ್ಕರ್ ಪ್ರೌಢಶಾಲೆಯ ಆವರಣದಲ್ಲಿ ಅಕ್ರಮವಾಗಿ ಹಣವನ್ನು ಕಟ್ಟಿ ಜೂಜಾಟವಾಡುತ್ತಿದ್ದ 7 ಜನ ಆರೋಪಿಗಳನ್ನು ವಶಕ್ಕೆ ಪಡೆದು   ಇವರುಗಳ ವಶದಲ್ಲಿದ್ದ 1) 57 ಇಸ್ಪೀಟ್ ಎಲೆಗಳು 2) ಕೆಂಪು ಬಣ್ಣದ ಪಂಚೆ ಹಾಗೂ 5,300 /- ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿತರ ವಿರುದ್ದ  ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಐ. ಶ್ರೀಮತಿ.ಸ್ವರ್ಣ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮಟ್ಕಾ ಜೂಜಾಟ ಪ್ರಕರಣ.

ಮೂಡಿಗೆರೆ  ಪೊಲೀಸ್ ಠಾಣೆ.

ದಿನಾಂಕ 23-08-2021 ರಂದು ಠಾಣಾ ನ್ಯಾಯಾಲಯದ ಸಿಬ್ಬಂದಿಯು ಠಾಣಾ ಎನ್.ಸಿ.ಆರ್.ನಂ 198/2021 ನ್ನು ಪ್ರಕರಣ ದಾಖಲಿಸಲು ತಂದು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ, ದಿನಾಂಕ 21/08/2021 ರಂದು ಮದ್ಯಾಹ್ನ 12-40  ಗಂಟೆ  ಸಮಯದಲ್ಲಿ ಬಿದರಹಳ್ಳಿ ಗ್ರಾಮದ ಸಾರ್ವಜನಿಕ ಬಸ್ ನಿಲ್ದಾಣದ  ಒಳಭಾಗದಲ್ಲಿ ಮಟ್ಕಾ ಜೂಜಾಟವಾಡಿಸುತ್ತಿದ್ದ ಜಹೀರ್ ಬಿನ್ ಅಬ್ದುಲ್ ರಶೀದ್ ಸಾಬ್, ಬಿದರಹಳ್ಳಿ ಗ್ರಾಮ ವಾಸಿ  ಈತನನ್ನು ವಶಕ್ಕೆ ಪಡೆದು ಆತನ ವಶದಲ್ಲಿದ್ದ 1) ಒಂದು ಮಟ್ಕಾ ಚೀಟಿ 2) ಒಂದು ಬಾಲ್ ಪೆನ್  ಹಾಗೂ 950 /- ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿತನ  ವಿರುದ್ದ  ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ.ರವಿ.ಜಿ.ಎ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಜ್ಜಂಪುರ ಪೊಲೀಸ್ ಠಾಣೆ.

ಅಕ್ರಮ ಸ್ಪೋಟಕ ವಸ್ತುಗಳ ಸಾಗಾಟ ಪ್ರಕರಣ.

ದಿನಾಂಕ 23-08-2021 ರಂದು ಸಂಜೆ 04-30 ಗಂಟೆ ಸಮಯದಲ್ಲಿ ಬಗ್ಗವಳ್ಳಿ ಕ್ರಾಸ್ ಹತ್ತಿರ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಬೀರೂರು ಕಡೆಯಿಂದ ಬರುತ್ತಿದ್ದ  ಟಿವಿಎಸ್ ವಹನದ ಚಾಲಕನು ನಮ್ಮಗಳನ್ನು ನೋಡಿ ವಾಹನವನ್ನು ಏಕಾಏಕಿ ತಿರುಗಿಸಿಕೊಂಡು ಹೋಗಲು ಪ್ರಯತ್ನಿಸಿದ್ದು ಮೊಪೆಡ್ನ್ನು ಹಿಂಬಾಲಿಸಿ ಹಿಡಿದು ಹೆಸರು ಕೇಳಲಾಗಿ ನಾರಾಯಣ ಬಿನ್ ವೆಂಕಟೇಶ, ತುರುವನಹಳ್ಳಿ ಗ್ರಾಮ ವಾಸಿ ಎಂದು ತಿಳಿಸಿದ್ದು ಯಾವುದೇ ಪರವಾನಗಿಯನ್ನು ಹೊಂದದೆ  ಅಕ್ರಮವಾಗಿ ಬಂಡೆ ಸಿಡಿಸುವ  ಉದ್ದೇಶದಿಂದ ಸ್ಪೋಟಕ ವಸ್ತುಗಳನ್ನು ಸಾಗಾಣಿಕೆ ಮಾಡುತ್ತಿದ್ದ ಆರೋಪಿಯನ್ನು ಹಾಗೂ ವಾಹನದ ಬ್ಯಾಗ್ನಲ್ಲಿದ್ದ ಒಂದು ಪ್ಲಾಸ್ಟಿಕ್ ಡಬ್ಬಿಯಲ್ಲಿ ಒಟ್ಟು 10 ಕ್ಯಾಂಡಿಯಂತಹ ಎಕ್ಸ್ ಪ್ಲೋಸಿವ್ ಜೆಲ್ , 14 ಮೀಟರ್ ಇರುವ ಸೇಪ್ಟಿ ಫ್ಯೂಸ್ ಬತ್ತಿ ಹಾಗೂ ಕೆಎ-66 ಹೆಚ್ 7088 ನಂಬರಿನ ಟಿವಿಎಸ್ ಮೊಪೆಡ್ ನ್ನು ಅಮಾನತ್ತುಪಡಿಸಿಕೊಂಡು ಆರೋಪಿ ವಿರುದ್ದ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ.ಬಸವರಾಜು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 24-08-2021 06:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080