ಅಭಿಪ್ರಾಯ / ಸಲಹೆಗಳು

ಮನುಷ್ಯ ಕಾಣೆ ಪ್ರಕರಣ.

ಕಳಸ ಪೊಲೀಸ್ ಠಾಣೆ.

ದಿನಾಂಕ:-24-01-2022 ರಂದು ಪಿರ್ಯಾದಿ ಅರ್ಚನ ಜಿ ಬಿನ್ ಲೇಟ್ ಗುತ್ಯಪ್ಪ ವಾಸ ಪ್ಲೋರಾ ಎಸ್ಟೇಟ್, ತನೂಡಿ ಗ್ರಾಮ ಕಳಸ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯ ಮಾವ ಮಂಜಪ್ಪ ಇವರ ಮಗಳು ಅಕ್ಷತಾ ದಿನಾಂಕ 22/01/2022 ರಂದು ಮನೆಯಲ್ಲಿ ಇದ್ದವಳು ದಿನಾಂಕ 23/01/2022 ರ ಬೆಳಿಗ್ಗೆ ನೋಡಲಾಗಿ ಮನೆಯಿಂದ ಕಾಣೆಯಾಗಿದ್ದು,  ವಿಚಾರ ಮಾಡಲಾಗಿ  ಎಲ್ಲಿಯೂ ಪತ್ತೆಯಾಗದೇ ಇರುವುದರಿಂದ ನನ್ನ ಮಾವನ ಮಗಳಾದ ಅರ್ಚನಳ ಚಹರೆ ; 20 ವರ್ಷ, 4 ಅಡಿ ಎತ್ತರ, ಸಾದಾರಣ ಮೈ ಕಟ್ಟು , ಗೋದಿ ಮೈ ಬಣ್ಣ, ದುಂಡುಮುಖ,  ಕಾಣೆಯಾಗಿರುವ ನನ್ನ ಮಾವನ ಮಗಳಾದ ಅರ್ಚನಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನನ್ವಯ ಕಳಸ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಇಸ್ಪೀಟ್ ಜೂಜಾಟ ಪ್ರಕರಣ.

ಕಡೂರು ಪೊಲೀಸ್ ಠಾಣೆ.

ದಿನಾಂಕ:-23-01-2022 ರಂದು ಕಡೂರು ಠಾಣಾ ಸರಹದ್ದಿನ ಕಡೂರು ಪಟ್ಟಣದ ಕುವೆಂಪುನಗರದ ಗುಡಿಸಲುಗಳ ಖಾಲಿ ಜಾಗದಲ್ಲಿ ಆರೋಪಿತರುಗಳಾದ  1]  ಪ್ರಕಾಶ ಬಿನ್ ಚಂದ್ರಪ್ಪ 2] ಗಿರೀಶ್ ಬಿನ್ ನಾಗಪ್ಪ 3] ಸಂತೋಷ ಬಿನ್ ಹನುಮಂತಪ್ಪ 4] ಶ್ರೀನಿವಾಸ ಬಿನ್ ಗೋವಿಂದಪ್ಪ 5] ರಾಘವೇಂದ್ರ ಬಿನ್ ರಾಜಪ್ಪ ರವರನ್ನು ವಶಕ್ಕೆ ಪಡೆದು ಆರೋಪಿತರು ಇಸ್ಪೀಟ್ ಜೂಜಾಟ ಆಡಲು ಬಳಸಿದ್ದ 5300/- ರೂ ನಗದು ಹಣವನ್ನು ಮತ್ತು 52 ಇಸ್ಪೀಟ್ ಎಲೆಗಳು ಹಾಗೂ ಒಂದು ಟಾರ್ಪಲ್ ನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿಗಳ ವಿರುದ್ದ   ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ರಮ್ಯ ಮತ್ತು ಪ್ರೋಬೆಷನರಿ ಪಿ.ಎಸ್.ಐ. ಶ್ರೀಗುರು ಸಜ್ಜನ್ ,  ಮಂಜುನಾಥ ಸಿಬ್ಬಂದಿಯವರಾದ ಓಂಕಾರ, ಎಲ್. ಎಸ್ , ಬಿ.ಎನ್. ಕುಮಾರ್, ಲಿಂಗರಾಜು ರವರು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 24-01-2022 07:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080