ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ

ಮೂಡಿಗೆರೆ  ಪೊಲೀಸ್ ಠಾಣೆ.

ದಿನಾಂಕ:23-02-2022 ರಂದು ಮೂಡಿಗೆರೆ ಠಾಣಾ ಸರಹದ್ದಿನ ಮೂಡಿಗೆರೆ ಹ್ಯಾಂಡ್ ಪೋಸ್ಟ್ ಹತ್ತಿರ ವಿಶ್ವನಾಥ ಎಂ.ಬಿ ಬಿನ್ ಲೇಟ್ ಎಂ.ಕೆ. ಬೊಮ್ಮೇಗೌಡ ಎಂಬುವನು ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಮದ್ಯವನ್ನು ತನ್ನ ಬಾಬ್ತು ಕೆಎ-01-ಜೆಸಿ 3066 ಹೊಂಡಾ ಡಿಯೋ ಸ್ಕೂಟಿಯಲ್ಲಿ  ಮದ್ಯವನ್ನು ಸಾಗಾಣಿಕೆ ಮಾಡುತ್ತಿದ್ದು, ಅರೋಪಿಯನ್ನು ವಶಕ್ಕೆ ಪಡೆದು ಆರೋಪಿ ವಶದಲ್ಲಿದ್ದ 300 ಎಂ.ಎಲ್.ನ 24 ಪ್ರೀಮಿಯಂ ಬಿಯರ್ ಬಾಟಲಿಗಳು 90 ಎಂ.ಎಲ್. ನ 30 ಕ್ಯಾಪ್ಟನ್ ಮಾರ್ಟಿನ್ ಸ್ಪೇಷಲ್ ವಿಸ್ಕಿ ಟೆಟ್ರಾಪ್ಯಾಕ್ ಮದ್ಯ ಅಂದಾಜು ಬೆಲೆ 2613/- ರೂ ಅಗಿದ್ದು ಮಧ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು  ಮೂಡಿಗೆರೆ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಮೂಡಿಗೆರೆ ಸಿ.ಪಿ.ಐ. ಶ್ರೀ ಸೋಮಶೇಖರ್ ಜೆ.ಸಿ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

 ಮನುಷ್ಯ ಕಾಣೆ ಪ್ರಕರಣ

 ಅಜ್ಜಂಪುರ ಪೊಲೀಸ್ ಠಾಣೆ.

 ದಿನಾಂಕ 24-02-2022 ರಂದು ಪಿರ್ಯಾದಿ ಶ್ರೀಮತಿ ಕಲ್ಪನಾ ಕೋಂ ರಮೇಶ ಹರಳಹಳ್ಳಿ ವಾಸಿ ರವರು ನೀಡಿದ ದೂರಿನಲ್ಲಿ ಪಿರ್ಯಾದಿ ಗಂಡ ರಮೇಶ ದಿನಾಂಕ 22-02-2022 ರಂದು ರಾತ್ರಿ 9.30 ಗಂಟೆಗೆ ಮನೆಯಿಂದ  ಹೋದವರು ವಾಪಾಸ್ಸು ಮನೆಗೆ ಬಾರದೇ ಇದ್ದು ಎಲ್ಲಾ ಕಡೆ ಹುಡುಕಾಡಿದರೂ ಸಹ ಪತ್ತೆಯಾಗಿರುವುದಿಲ್ಲ. ರಮೇಶ, 38 ವರ್ಷ, 5.4 ಅಡಿ ಎತ್ತರ, ಗೋದಿ ಮೈ ಬಣ್ಣ ಸಾದಾರಣ ಮೈಕಟ್ಟು, ಬಿಳಿ ಶರಟು ಮತ್ತು ನೀಲಿ ಪಂಚೆ ಧರಿಸಿರುತ್ತಾರೆ. ಕಾಣೆಯಾಗಿರುವ ತನ್ನ ಗಂಡನನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಇತ್ತೀಚಿನ ನವೀಕರಣ​ : 24-02-2022 07:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080