ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಅಜ್ಜಂಫುರ ಪೊಲೀಸ್ ಠಾಣೆ.

ದಿನಾಂಕ:23/04/2022 ರಂದು ರಾತ್ರಿ ಪಿರ್ಯಾದಿ ಸುರೇಶ್ ಸಿ.ಹೆಚ್. ಬಿನ್ ಹನುಮಂತಪ್ಪ,   ಚನ್ನಾಪುರ ಅಜ್ಜಂಪುರ ತಾಲ್ಲೋಕು ವಾಸಿ, ಇವರು ನೀಡಿದ ದೂರಿನಲ್ಲಿ, ದಿನಾಂಕ:23/04/2022 ರಂದು ರಾತ್ರ್ರಿ 8-30 ಗಂಟೆ ಸಮಯದಲ್ಲಿ,  ಪಿರ್ಯಾದಿಯ ತಂದೆ ಹನುಮಂತಪ್ಪ ಇವರು, ಮನೆಯ ಮುಂದಿನ ಮುಂದಿನ ರಸ್ತೆ ದಾಟುತ್ತಿದ್ದಾಗ,  ಬೀರೂರು ಕಡೆಯಿಂದ ಬಂದ  ಕೆಎ-19-ಎಫ್-3153 ನಂಬರಿನ ಕೆ.ಎಸ್. ಆರ್.ಟಿ.ಸಿ. ಬಸ್ ನ ಚಾಲಕ, ಬಸ್ ಅನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು  ಬಂದು, ಹನುಮಂತಪ್ಪ ರವರಿಗೆ ಡಿಕ್ಕಿ ಹೊಡೆಸಿದ ಪರಿಣಾಮ, ಬಲವಾದ ಪೆಟ್ಟಾಗಿದ್ದು,  ಕೂಡಲೇ ಅಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದ್ದು  ವೈದ್ಯರು ಪರಿಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದು, ಅಪಘಾತ ಉಂಟು ಮಾಡಿದ ಬಸ್ಸಿನ ಚಾಲಕ ಹಸನಬ್ಬ ಬಿನ್ ಅಹಮ್ಮದ್ ನ ವಿರುದ್ದ ಕ್ರಮ ಕೈಗೊಳ್ಳಲು, ನೀಡಿದ ದೂರಿನ ಮೇರೆಗೆ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ದರೋಡೆ ಪ್ರಕರಣ

ನಗರ ಪೊಲೀಸ್ ಠಾಣೆ.

ದಿನಾಂಕ:24/04/2022 ರಂದು ಪಿರ್ಯಾದಿ ಹರೀಶ್ ಜಿ ರಾಯ್ಕರ್ ತರೀಕೆರೆ ಟೌನ್ ವಾಸಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯವರು ದಿನಾಂಕ 23/04/2022ರಂದು ಕುಟುಂಬದವರೊಂದಿಗೆ ತಮ್ಮ ಬಾಬ್ತು ಕಾರಿನಲ್ಲಿ ಧರ್ಮಸ್ಥಳಕ್ಕೆ ಹೋಗಿ ಮಂಗಳೂರಿನಲ್ಲಿರುವ ಸಂಬಂದಿಕರ ಮನೆಗೆ ವಾಪಾಸ್ಸು ಬರುವಾಗ ಚಿಕ್ಕಮಗಳೂರು ಸಮೀಪ ನಲ್ಲೂರು ಗೇಟ್ ಬಳಿ ಸುಮಾರು 2.05 ಗಂಟೆ ಸಮಯದಲ್ಲಿ ಬರುವಾಗ ಯಾರೋ 3 ಅಪರಿಚಿತರು ಬೈಕಿನಲ್ಲಿ ಬಂದು ಕಾರಿಗೆ ಬೈಕ್ ಅಡ್ಡಗಟ್ಟಿ ನಿಲ್ಲಿಸಿ, ಏಕಾಏಕಿ ಚಾಕು ತೋರಿಸಿ ಹೆದರಿಸಿ ಮೊಬೈಲ್ ಕಿತ್ತುಕೊಂಡಿದ್ದು, ಹಣ ಕೊಡಲು ದಮ್ಕಿ ಹಾಕಿದ್ದು, ಹಲ್ಲೆ ಮಾಡಿ ರಕ್ತಗಾಯಪಡಿಸಿದ್ದು, ಬೈಕ್ ನಂಬರ್ ನೋಡಲಾಗಿ ಕೆಎ-51-ಕ್ಯೂ-1730 ಪಲ್ಸರ್ ಬೈಕ್ ಅಗಿರುತ್ತದೆ. ಎಂದು ಸದರಿ ಅರೋಪಿತರ ವಿರುದ್ದ ಕ್ರಮ ಕೈಗೊಳ್ಳುವಂತೆ  ನೀಡಿದ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಮಹಿಳಾ ಪೊಲೀಸ್ ಠಾಣೆ.

ದಿನಾಂಕ:23-04-2022 ರಂದು ಪಿರ್ಯಾದಿ ರಿಯಾಜ್ ಅಹಮ್ಮದ್ ಬಿನ್ ಸೈಯದ್ ರಸೂಲ್, ದುಬೈ ನಗರ, ಚಿಕ್ಕಮಗಳೂರು ವಾಸಿ ಇವರು,  ನೀಡಿದ ದೂರಿನಲ್ಲಿ ಪಿರ್ಯಾದಿ ತಂಗಿ ವಹೇದ ಬಾನು ಇವಳು ಗಂಡನಿಂದ ವಿಚ್ಛೇದನೆ ಪಡೆದು ಪಿರ್ಯಾದಿಯೊಂದಿಗೆ ವಾಸವಿದ್ದು, ಇತ್ತಿಚಿಗೆ ಮಾಸಿಕ ಅಸ್ವಸ್ತಳಾಗಿದ್ದು, ದಿನಾಂಕ;21-04-2022 ರಂದು ಪಿರ್ಯಾದಿ ತಂಗಿ ಮನೆಯಲ್ಲಿ ಯಾರಿಗೂ ತಿಳಿಸದೇ ಮನೆ ಬಿಟ್ಟು ಹೋಗಿದ್ದು, ಈ ವರೆಗೂ ಹುಡಕಲಾಗಿ ಪತ್ತೆಯಾಗದೇ ಇದ್ದು, ಕಾಣೆಯಾಗಿರುತ್ತಾಳೆ. ಕಾಣೆಯಾಗಿರುವ ತನ್ನ ತಂಗಿ ವಹೇದ ಬಾನು, 42 ವರ್ಷ, 5 ಅಡಿ ಎತ್ತರ, ದುಂಡುಮುಖ, ಎಣ್ಣೆಗೆಂಪು ಮೈ ಬಣ್ಣ,  ಕಪ್ಪು ತಲೆ ಕೂದಲು, ಸಾದಾರಣ ಮೈಕಟ್ಟು, ನೀಲಿ ಬಣ್ಣದ ಚೂಡಿದಾರ ಹಾಗೂ ಬುರ್ಕಾ ಧರಿಸಿರುತ್ತಾಳೆ. ಕಾಣೆಯಾಗಿರುವ ತನ್ನ ತಂಗಿಯನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 

ಇತ್ತೀಚಿನ ನವೀಕರಣ​ : 24-04-2022 07:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080