ಅಭಿಪ್ರಾಯ / ಸಲಹೆಗಳು

ಕೊವಿಡ್ 19 ನಿಯಮ ಉಲ್ಲಂಘನೆ  ಪ್ರಕರಣ.

ಮೂಡಿಗೆರೆ   ಪೊಲೀಸ್  ಠಾಣೆ

ದಿನಾಂಕ: 23/05/2021 ರಂದು ಮೂಡಿಗೆರೆ ತಹಶೀಲ್ದಾರ್ರವರು  ನೀಡಿದ ದೂರಿನ ಸಾರಾಂಶವೇನೆಂದರೆ ಸರ್ಕಾರದ ಆದೇಶ ಸಂಖ್ಯೆ ಆರ್ ಡಿ  158ಟಿಎನ್ ಆರ್2020 ದಿನಾಂಕ 21-04-2021 ಮಾನ್ಯ ಜಿಲ್ಲಾಧಿಕಾರಿಗಳ ಆದೇಶ ಸಂಖ್ಯೆ ಜೆ1ಎಂಎಜಿಸಿಆರ್ 215/2019-20 ದಿನಾಂಕ 19-05-2021 ರ ಆದೇಶದಂತೆ ಕೊವಿಡ್ -19 ಸಾಂಕ್ರಾಮಿಕ ರೋಗದ ಸಂಬಂಧ ಕೆಲವಿ ನಿರ್ಭಂದನೆಗಳ ಆದೇಶವನ್ನು ಹೊರಡಿಸಿದ್ದು ದಿನಾಂಕ 23-05-2021 ರಂದು ಮೂಡಿಗೆರೆ ಪಟ್ಟಣದಲ್ಲಿ ಕೊವಿಡ್ ಸಂಬಂಧ ಪರಿಶೀಲನೆ ಮಾಡುತ್ತಿರುವಾಗ ದೊಡ್ಡಿಬೀದಿಯಲ್ಲಿ ಅಸ್ಲಾಂಪಾಷಾ ಬಿನ್ ಯೂಸಫ್ ಯಾವುದೇ ಅನುಮತಿಯನ್ನು ಪಡೆಯದೆ ಮದುವೆ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಸುಮಾರು 30- 32 ಜನರು ಸೇರಿದ್ದು  ಕೊವಿಡ್ ನಿಯಾಮಾವಳಿಗಳನ್ನು ಉಲ್ಲಂಘಿಸಿರುವ ಅಸ್ಲಾಂಪಾಷಾ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ಕೊವಿಡ್ 19 ನಿಯಮ ಉಲ್ಲಂಘನೆ  ಪ್ರಕರಣ ಹಾಗೂ ಅಪಘಾತ ಪ್ರಕರಣ

ಗ್ರಾಮಾಂತರ   ಪೊಲೀಸ್  ಠಾಣೆ

ದಿನಾಂಕ: 23/05/2021 ರಂದು ಪಿರ್ಯಾದುದಾರರಾದ ಕುಮಾರರವರು  ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದುದಾರರು ಕೆಎ-18 ಸಿ-4752 ಟಿಪ್ಪರ್ ನಲ್ಲಿ ಜಲ್ಲಿಯನ್ನು ಲೋಡ್ ಮಡಿಕೊಂಡು ಹರಿಹರದಳ್ಳಿ ಮಾರ್ಗವಾಗಿ ಚಿಕ್ಕಮಗಳೂರಿಗೆ ಬರುತ್ತಿರುವಾಗ ವಿದ್ಯಾ ಕಾಫಿ ಕ್ಯೂರಿಂಗ್ ಮುಂದಿನ ರಸ್ತೆ ತಿರುವಿನಲ್ಲಿ ಬರುತ್ತಿರುವಾಗ ಎದುರುಗಡೆಯಿಂದ ಬಂದ ಕೆಎ-18 ಇಇ- 4090 ಬೈಕಿನ ಚಾಲಕ ಹಿಂಬದಿಯಲ್ಲಿ ಒಬ್ಬರನ್ನು  ಕೂರಿಸಿಕೊಂಡು ಬೈಕನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಟಿಪ್ಪರ್ ನ ಹಿಂಬದಿಯ ಚಕ್ರಕ್ಕೆ ಡಿಕ್ಕಿ ಹೊಡೆಸಿ  ಬೈಕ್ ಸಮೇತ ರ್ಸತೆ ಮೇಲೆ ಬಿದ್ದಿದ್ದು ಚಾಲಕನ ಕಾಲಿಗೆ ಪೆಟ್ಟಾಗಿದ್ದು, ಪೆಟ್ಟಾಗಿದ್ದವನನ್ನು ಉಪಚರಿಸುತ್ತಿರುವಾಗ ಬೈಕ್ ನ ಹಿಂಬದಿಯ ಸವಾರ ಅವರ ಕಡೆಯವರಿಗೆ ಪೋನ್ ಮಾಡಿದ್ದು 8-9 ಜನರು ಬಂದಿದ್ದು ಅದರಲ್ಲಿ 2-3 ಜನರು ಟಿಪ್ಪರ್ ನ ಮುಂದಿನ ಗ್ಲಾಸ್ ಗೆ ಕಲ್ಲಿನಿಂದ ಹೊಡೆದು ಜಖಂಗೊಳಿಸಿದ್ದು ಸರ್ಕಾರವು ಹೊರಡಿಸಿರುವ ಕೊವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿರುವವರ  ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ಅಕ್ರಮ ಮದ್ಯ ಮಾರಾಟ &ಕೊವಿಡ್ 19 ನಿಯಮ ಉಲ್ಲಂಘನೆ  ಪ್ರಕರಣ.

ಕೊಪ್ಪ  ಪೊಲೀಸ್  ಠಾಣೆ

ದಿನಾಂಕ: 23/05/2021 ರಂದು ಕೊಪ್ಪ  ಠಾಣಾ ಸರಹದ್ದಿನ ಹರಂದೂರು ಗ್ರಾಮದ ವಾಸಿ ಎಪ್ರೇಜಾ ಡಿಸೋಜ ರವರ  ಮನೆಯ ಹಿಂಭಾಗದಲ್ಲಿ  ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು  ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದು ಆರೋಪಿಗಳಾದ ಪ್ರದೀಪ ಬಿನ್ ಲಕ್ಷ್ಮಣ ಹಾಗೂ ಇಂದಿರಾ ಕೋಂ ಲಕ್ಷ್ಮಣ ಪೂಜಾರಿ ಎಂದು ತಿಳಿಸಿದ್ದು  ಆರೋಪಿಗಳನ್ನು ವಶಕ್ಕೆ ಪಡೆದು  180 ಎಂ.ಎಲ್ ನ ಬ್ಯಾಗ್ ಪೇಪರ್ ಡಿಲೆಕ್ಸ್ ವಿಸ್ಕಿಯ  13 ಪೌಚ್ ಗಳು ಹಾಗೂ  180 ಎಂ.ಎಲ್.ನ ರ್ಯಾಡಿಕೋ 8 ಪಿಎಂ ವಿಸ್ಕಿಯ  7 ಟೆಟ್ರಾ ಪ್ಯಾಕ್  ಬೆಲೆ 1380/-ರೂ ನ ಮದ್ಯ ವಶಪಡಿಸಿಕೊಂಡು ಕೋರನಾ ಸಾಂಕ್ರಾಮಿಕ ರೋಗ ಹೆಚ್ಚು ಹೆಚ್ಚಾಗಿ ಹರಡುತ್ತಿರುವ ಬಗ್ಗ ತಿಳಿದಿದ್ದರೂ ಸಹ ಕೋವಿಡ್ -19  ಲಾಕ್ ಡೌನ್ ಆದೇಶವನ್ನು ಉಲ್ಲಂಘನೆ ಮಾಡಿದ್ದು ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್ಐ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 24-05-2021 06:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080