ಅಭಿಪ್ರಾಯ / ಸಲಹೆಗಳು

ಕೊಲೆ ಪ್ರಕರಣ.

ಬಸವನಹಳ್ಳಿ ಪೊಲೀಸ್ ಠಾಣೆ.

ದಿನಾಂಕ 23-09-2021 ರಂದು ಚಿಕ್ಕಮಗಳೂರು ಗೌರಿ ಕಾಲುವೆ ವಾಸಿ ಸಂತೋಷ ಐ.ಎಂ. ರವರು ನೀಡಿದ ದೂರಿನಲ್ಲಿ   ಪಿರ್ಯಾದಿ ತಾಯಿ ಶ್ರೀಮತಿ ಸುಧಾ ಇವರು ಬಾಬುಲಾಲ್ ದಿನಸಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು , ಪಿರ್ಯಾದಿ ಅಣ್ಣ ದುಷ್ಯಂತ ಐ.ಎಂ. ಮನೆಯಲ್ಲೇ ಇದ್ದು ತಾಯಿ ಯ ಹತ್ತಿರ ಪ್ರತಿದಿನ ಖರ್ಚಿಗೆ ಹಣ ಕೊಡುವಂತೆ ಗಲಾಟೆ ಮಾಡುತ್ತಿದ್ದು, ದಿನಾಂಕ 23/09/2021 ರಂದು ಪಿರ್ಯಾದಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ತಾಯಿ ಶ್ರೀಮತಿ ಸುಧಾ ಇವರೊಂದಿಗೆ ಖರ್ಚಿಗೆ ಹಣ ಕೊಡಲಿಲ್ಲವೆಂದು  ಪಿರ್ಯಾದಿ ಅಣ್ಣ ದುಷ್ಯಂತ್ ಐ.ಎಂ. ಉದ್ರೇಕಗೊಂಡು ಯಾವುದೋ ಅಯುಧದಿಂದ ಅಥವಾ ತಲೆಯನ್ನು ಗೋಟೆಗೆ ಬಲವಾಗಿ ಗುದ್ದಿ ಸಾಯಿಸಿರುವುದಾಗಿ ಪಿರ್ಯಾದಿ  ನೀಡಿದ ದೂರಿನ ಮೇರೆಗೆ ಬಸನವಹಳ್ಳಿ ಪೊಲೀಸ್ ಠಾಣೆಯಲ್ಲಿ ಆರೋಪಿ ದುಷ್ಯಂತ್ ಐ.ಎಂ.  ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಅಕ್ರಮ ಮದ್ಯ ಮಾರಾಟ  ಪ್ರಕರಣ.

ಬಾಳೆಹೊನ್ನೂರು  ಪೊಲೀಸ್ ಠಾಣೆ,

ದಿನಾಂಕ 23-09-2021 ರಂದು ಸಂಜೆ 5-00  ಗಂಟೆ ಸಮಯದಲ್ಲಿ ಬಾಳೆಹೊನ್ನೂರು ಕಡೆಯಿಂದ ಮಾಗುಂಡಿಗೆ ವೆಂಕಟೇಶ @ ಅಣ್ಣಪ್ಪ ಬಿನ್ ಅಪ್ಪೇಗೌಡ ಬನ್ನೂರು ವಾಸಿ ಈತನು ಕೆಎ-18 ಡಬ್ಲ್ಯೂ-7117 ನಂಬರಿನ ಸ್ಕೂಟಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಮದ್ಯ ಸಾಗಿಸುತ್ತಿದ್ದು ಬೈರಗುಡ್ಡ ಎಸ್ಟೇಟ್ ಬಳಿ ಆರೋಪಿಯನ್ನು ವಶಕ್ಕೆ ಪಡೆದು ಸ್ಕೂಟಿಯಲ್ಲಿ ಅಕ್ರಮವಾಗಿ ಹೊಂದಿದ್ದ  1686.24/- ರೂ ಬೆಲೆಯ 90 ಎಂ.ಎಲ್. ನ 48 ಟೆಟ್ರಾ ಪೌಚ್ ಗಳನ್ನು ಅಮಾನತ್ತುಪಡಿಸಿಕೊಂಡಿದ್ದು ಆರೋಪಿ ವೆಂಕಟೇಶ @ ಅಣ್ಣಪ್ಪ ವಿರುದ್ದ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ನಿತ್ಯಾನಂದ ಗೌಡ ಪಿ.ಡಿ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಕಡೂರು  ಪೊಲೀಸ್ ಠಾಣೆ,

ದಿನಾಂಕ 23-09-2021 ರಂದು ಕಡೂರು ಟೌನ್ ಸುಭಾಷ್ ಸರ್ಕಲ್ ನಿಂದ ಎಮ್ಮೇದೊಡ್ಡಿಗೆ ಹೋಗುವ ರಸ್ತೆಯಲ್ಲಿ ಲಕ್ಕಿ ಪುಟ್ ವೇರ್ ಹತ್ತಿರ ನಾಗರಾಜಪ್ಪ @ ನಾಗಪ್ಪ  ಬಿನ್ ಲೇಟ್ ಭೀಮಯ್ಯ ರವರು ಗಾಂಧಿನಗರಕ್ಕೆ  ಮದ್ಯ ಮಾರಾಟ ಮಾಡಲು ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದು ಆರೋಪಿಯನ್ನು ವಶಕ್ಕೆ ಪಡೆದು ಆರೋಪಿ ಅಕ್ರಮವಾಗಿ ಹೊಂದಿದ್ದ  1580.85/- ರೂ ಬೆಲೆಯ 90 ಎಂ.ಎಲ್. ನ 45 ಟೆಟ್ರಾ ಪೌಚ್ ಗಳನ್ನು ಅಮಾನತ್ತುಪಡಿಸಿಕೊಂಡಿದ್ದು ಆರೋಪಿ ನಾಗರಾಜಪ್ಪ @ ನಾಗಪ್ಪ  ವಿರುದ್ದ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ರಮ್ಯ ಎನ್.ಕೆ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 24-09-2021 08:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080