ಅಭಿಪ್ರಾಯ / ಸಲಹೆಗಳು

ಅಕ್ರಮ ದನದ ಮಾಂಸ ಮಾರಾಟ ಪ್ರಕರಣ:

ಬಸವನಹಳ್ಳಿ ಪೊಲೀಸ್ ಠಾಣೆ.

ದಿನಾಂಕ:24/10/2021 ರಂದು ಬೆಳಗ್ಗೆ 10.15 ಗಂಟೆ ಸಮಯದಲ್ಲಿ ಚಿಕ್ಕಮಗಳೂರು ನಗರದ ಉಪ್ಪಳ್ಳಿ ಶಾದುಲಿ ಮಸೀದಿಯ ಹಿಂಭಾಗದ ಶೆಡ್ನಲ್ಲಿ ಮೊಹಮ್ಮದ್ ಖುರ್ರಮ್ ಹಾಗೂ ನಾಸೀರ್ ರವರುಗಳು ಯಾವುದೇ ಪರವಾನಗಿಯಿಲ್ಲದೆ ಅಕ್ರಮವಾಗಿ ದನವನ್ನು ಕಡಿದು ಮಾಂಸವನ್ನು ಮಾರಾಟ ಮಾಡುತ್ತಿದ್ದು, ಪಂಚಾಯ್ತುದಾರರೊಂದಿಗೆ ದಾಳಿ ನಡೆಸಿ, 12 ಕೆ.ಜಿ. ದನದ ಮಾಂಸ, ಒಂದು ದನದ ತಲೆ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡು ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ. ಈ ದಾಳಿಯಲ್ಲಿ ಬಸವನಹಳ್ಳಿ ಠಾಣಾ ಪಿಎಸ್ಐ ಅಕ್ತರ್ ಪಟೇಲ್ ಹಾಗೂ ಸಿಬ್ಬಂದಿಯವರುಗಳು ಭಾಗವಹಿಸಿರುತ್ತಾರೆ.

 ಅಕ್ರಮ ಮದ್ಯ ಮಾರಾಟ ಪ್ರಕರಣ:

 ಅಲ್ದೂರು ಪೊಲೀಸ್ ಠಾಣೆ.

ದಿನಾಂಕ:24/10/2021 ರಂದು ಅಲ್ದೂರು ಠಾಣಾ ವ್ಯಾಪ್ತಿಯ ಕಾರ್ಲಗದ್ದೆ ವಾಸಿ ಗಿರೀಶ್ ಗೌಡ ಬಿನ್ ಸಿದ್ದೇಗೌಡ  ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು 350/- ರೂ ಬೆಲೆಬಾಳುವ 90 ಎಂ.ಎಲ್.ನ 10 ಓರಿಜನಲ್ ಚಾಯ್ಸ್ ವಿಸ್ಕಿಯ ಸ್ಯಾಚೆಟ್ಗಳನ್ನು ಮತ್ತು ನಗದು 50/- ರೂ ವನ್ನು ವಶಪಡಿಸಿಕೊಂಡು ಅಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ. ಈ ದಾಳಿಯಲ್ಲಿ ಅಲ್ದೂರು ಠಾಣೆಯ ಪಿಎಸ್ಐ ಜಿ.ಕೆ. ಬಸವರಾಜ್  ಹಾಗೂ ಸಿಬ್ಬಂದಿಯವರು ಭಾಗವಹಿಸಿರುತ್ತಾರೆ.

ಸಿಇಎನ್ ಅಪರಾಧ ಠಾಣೆ.

ದಿನಾಂಕ:23/10/2021 ರಂದು ಸಂಜೆ 06.20 ಗಂಟೆ ಸಮಯದಲ್ಲಿ ಚಿಕ್ಕಮಗಳೂರು ತಾಲ್ಲೂಕು ಸಿಂದಿಗೆರೆ ಗ್ರಾಮದ ಶ್ರೀ ರೇವಣ ಸಿದ್ದೇಶ್ವರ ದೇವಸ್ಥಾನಕ್ಕೆ ಸೇರಿದ ಮಳಿಗೆಯ ಮುಂಭಾಗ ಸಾರ್ವಜನಿಕ ರಸ್ತೆಯಲ್ಲಿ ಮಂಜುನಾಥ್ ಎಂಬುವವರು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿಯ ಮೇರೆಗೆ ಪಂಚಾಯ್ತುದಾರರೊಂದಿಗೆ ದಾಳಿ ನಡೆಸಿ, 90 ಎಂ.ಎಲ್. ನ 325 ಒರಿಜಿನಲ್ ಚಾಯ್ಸ್ ಡಿಲಕ್ಸ್ ವಿಸ್ಕಿ ಟೆಟ್ರಾ ಪ್ಯಾಕ್ಗಳನ್ನು ಹಾಗೂ ಆರೋಪಿಯ ವಶದಲ್ಲಿದ್ದ 1030 ರೂಗಳನ್ನು ಅಮಾನತ್ತುಪಡಿಸಿಕೊಂಡು, ಸಿಇಎನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ. ಈ ದಾಳಿಯಲ್ಲಿ ಸಿಇಎನ್ ಅಪರಾಧ ಠಾಣೆಯ ಪಿಎಸ್ಐ ರಫೀಕ್ ಎಂ.   ಹಾಗೂ ಸಿಬ್ಬಂದಿಯವರು ಭಾಗವಹಿಸಿರುತ್ತಾರೆ.

ಸಖರಾಯಪಟ್ಟಣ ಪೊಲೀಸ್ ಠಾಣೆ.

ದಿನಾಂಕ:23/10/2021 ರಂದು ಸಂಜೆ 06.35 ಗಂಟೆ ಸಮಯದಲ್ಲಿ ಸಖರಾಯಪಟ್ಟಣ ಠಾಣಾ ವ್ಯಾಪ್ತಿಯ ಕೇತುಮಾರನಹಳ್ಳಿಯಿಂದ ಕೆ. ಗೊಲ್ಲರಹಟ್ಟಿಗೆ ಹೋಗುವ ರಸ್ತೆಯಲ್ಲಿರುವ ಹರೀಶ ಕೆ.ಎಸ್. ಎಂಬುವವನು ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆಂದು ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ, 3583/- ರೂ ಬೆಲೆಬಾಳುವ 90 ಎಂ.ಎಲ್.ನ 102 ರಾಜವಿಸ್ಕೀ ಸ್ಯಾಚೆಟ್ಗಳನ್ನು ವಶಪಡಿಸಿಕೊಂಡು ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ. ಈ ದಾಳಿಯಲ್ಲಿ ಸಖರಾಯಪಟ್ಟಣ ಠಾಣೆಯ ಪಿಎಸ್ಐ ಹರೀಶ್ ಹಾಗೂ ಸಿಬ್ಬಂದಿಯವರು ಭಾಗವಹಿಸಿರುತ್ತಾರೆ.

ಕಳವು ಪ್ರಕರಣ:

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ:23/10/2021 ರ ರಾತ್ರಿ ವೇಳೆಯಲ್ಲಿ ಚಿಕ್ಕಮಗಳೂರು ತಾಲ್ಲೂಕು, ಚಿಕ್ಕೊಳಲೆ ಗ್ರಾಮದದಲ್ಲಿ ಭುವನ್ ಎಂಬುವವರಿಗೆ ಸೇರಿದ ರವಿ ಪ್ರಕಾಶ್ ಎಸ್ಟೇಟ್ನ ಮನೆಯಲ್ಲಿ ದೇವರ ಕೋಣೆಯಲ್ಲಿ ದೇವರಿಗೆ ಅಲಂಕರಿಸಿದ್ದ 250 ಗ್ರಾಂ ತೂಕದ 100 ಬೆಳ್ಳಿ ನಾಣ್ಯಗಳನ್ನು, 40 ಗ್ರಾಂ ತೂಕದ ಚಿನ್ನದ ಹೆಜ್ಜಡಿಕೆ ಸರವನ್ನು, 10 ಗ್ರಾಂ ತೂಕದ ಚಿನ್ನದ ತಾಳಿಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವು ಮಾಡಿಕೊಡು ಹೋಗಿರುವ ಚಿನ್ನ ಮತ್ತು ಬೆಳ್ಳಿ ಒಡವೆಗಳ ಒಟ್ಟು ಮೌಲ್ಯ 2,15,000 ರೂಗಳಾಗಿರುತ್ತದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತೆ.

ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣ:

ಕಡೂರು ಪೊಲೀಸ್ ಠಾಣೆ.  

ದಿನಾಂಕ:24/10/2021 ರಂದು ಬೆಳಗ್ಗೆ 09.15 ಗಂಟೆ ಸಮಯದಲ್ಲಿ ಪಿರ್ಯಾದಿ ಶ್ರೀಮತಿ ತ್ರಿವೇಣಿ ಮತ್ತು ಅವರ ಗಂಡ ಹರೀಶ್ ರವರುಗಳು ಕೆಎ-66 ಕೆ-0066 ರ ಬಜಾಜ್ ಪ್ಲಾಟಿನಾ ಬೈಕಿನಲ್ಲಿ ಕೊರಚರಹಟ್ಟಿ ಸೋಮೇಂದ್ರಪ್ಪ ರವರ ತೋಟದ ಮುಂದಿನ ರಸ್ತೆಯಲ್ಲಿ ಕೂಲಿ ಕೆಲಸಕ್ಕೆಂದು ಹೋಗುತ್ತಿರುವಾಗ ಎದುರುಗಡೆಯಿಂದ ಬಂದಂತಹ ಇನ್ನೂ ನೊಂದಣಿಯಾಗದ ಬಜಾಜ್ ಕಂಪನಿಯ ಸಿಟಿ-110 ಬೈಕನ್ನು ತೇಜು ಎಂಬುವವನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆಸಿದ್ದು, ಪಿಯರ್ಾದಿ ಹಾಗೂ ಪಿರ್ಯಾದಿಯ ಗಂಡನಿಗೆ ರಕ್ತಗಾಯಗಳಾಗಿದ್ದು, ತೇಜು ರವರ ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಈ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತೆ.

ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣ:

ನ.ರಾ. ಪುರ ಪೊಲೀಸ್ ಠಾಣೆ.

ದಿನಾಂಕ:23/10/2021 ರಂದು ಮದ್ಯಾಹ್ನ 03.45 ಗಂಟೆ ಸಮಯದಲ್ಲಿ ಪಿರ್ಯಾದಿ ಶ್ರೀಮತಿ ಧನ್ಯರವರ ತಂದೆ ಶ್ರೀ ಚಂದ್ರಶೇಖರ್ ಹೆಚ್.ಟಿ. ರವರು ಸಂತೆಗೆಂದು ನ.ರಾ. ಪುರ ಪಟ್ಟಣಕ್ಕೆ ಬಂದಿದ್ದು, ನ.ರಾ. ಪುರ ಪಟ್ಟಣದ ಮುಖ್ಯ ರಸ್ತೆಯ ಫಾರೆಸ್ಟ್ ಕಛೇರಿಯ ಮುಭಾಗದಲ್ಲಿ ತರಕಾರಿ ತೆಗೆದುಕೊಳ್ಳುತ್ತಿರುವಾಗ ಅಲ್ಲೆ ಪಾರ್ಕ್ ಮಾಡಿದ್ದ ಕೆಎ-43 ಎಂ-5649 ರ ಇನ್ನೋವಾ ಕಾರಿನ ಚಾಲಕ ಯಾವುದೇ ಮುನ್ಸೂಚನೆಯನ್ನು ನೀಡದೇ ಕಾರನ್ನು ರಿವರ್ಸ್ ತೆಗೆದಿದ್ದು, ಇದೇ ಸಮಯಕ್ಕೆ ಕೆಎ-18 ಇಹೆಚ್-6589 ರ ಬೈಕಿನ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಇನ್ನೋವಾ ಕಾರಿಗೆ ಡಿಕ್ಕಿ ಹೊಡೆಸಿದ್ದು, ನಂತರ ಪಕ್ಕದಲ್ಲಿ ತರಕಾರಿ ತೆಗೆದುಕೊಳ್ಳುತ್ತಿದ್ದ ಪಿರ್ಯಾದಿಯ ತಂದೆ ಹಾಗೂ ಪಕ್ಕದಲ್ಲಿದ್ದ ಕವಿತಾ ಎಂಬುವವರಿಗೆ ಡಿಕ್ಕಿ ಹೊಡೆಸಿದ್ದು, ಪಿರ್ಯಾದಿಯ ತಂದೆಯವರು ಕೆಳಗೆ ಬಿದ್ದು ತಲೆ ಮತ್ತು ಎದಗೆ ತೀವ್ರ ಪೆಟ್ಟಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ಈ ಸಂಬಂಧ ನ.ರಾ. ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತೆ. 

ಮನುಷ್ಯ ಕಾಣೆ ಪ್ರಕರಣ

ಮೂಡಿಗೆರೆ ಪೊಲೀಸ್ ಠಾಣೆ.

 ದಿನಾಂಕ 23/10/2021 ರಂದು ಮೂಡಿಗೆರೆ ಬಿಳುಗುಳ ವಾಸಿ ಪಿರ್ಯಾದಿ ಅನಿನಾಶ್  ಬಿನ್ ರಮೇಶ ಎಂಬುವರು ನೀಡಿದ ದೂರಿನಲ್ಲಿ ದಿನಾಂಕ 23/10/2021 ರಂದು ಮದ್ಯಾಹ್ನ ಸಮಯದಲ್ಲಿ ಅಕ್ಕು ರವರು ಅಂಗಡಿಗೆ ಹೋಗಿದ್ದು ನಂತರ ಮನೆಗೆ ವಾಪಸ್ಸು ಬಂದಿಲ್ಲವೆಂದು ಕಾಣೆಯಾಗಿರುವ ಅಕ್ಕು, 75 ವರ್ಷ , ಗೋದಿ ಮೈ ಬಣ್ಣ , ಸಾದಾರಣ ಮೈಕಟ್ಟು, ಹಳದಿ ಬಣ್ಣದ ಸೀರೆ ಧರಿಸಿರುವುದಾಗಿ ನೀಡಿದ ದೂರನ್ನು ಸ್ವೀಕರಿಸಿ, ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 24-10-2021 07:50 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080