ಅಭಿಪ್ರಾಯ / ಸಲಹೆಗಳು

ಅಡಿಕೆ ಕಳ್ಳತನ ಪ್ರಕರಣ

ಸಿಂಗಟಗೆರೆ ಪೊಲೀಸ್ ಠಾಣೆ.

ದಿನಾಂಕ 24-11-2021 ರಂದು ಪಿರ್ಯಾದಿ ಟಿ. ಸುನೀಲ್ ರವರು ನೀಡಿದ ದೂರಿನಲ್ಲಿ ಪಿರ್ಯಾಧಿ ಯವರ ಬಾಬ್ತು ಕರಿಕಲ್ಲ್ ಹೋಳೆ ಬಳಿ ಇರುವ 4 ಎಕೆರೆ ಜಮೀನಿನಲ್ಲಿ ದಿನಾಂಕ 22-11-2021 ರ ರಾತ್ರಿ ವೇಳೇಯಲ್ಲಿ ಯಾರೋ ಕಳ್ಳರು ಸುಮಾರು 300 ಅಡಿಕೆ ಗಿಡಗಳಲ್ಲಿ ಸುಮಾರು 90,000/- ಬೆಲೆಯ ಹಸಿ ಅಡಿಕೆ ಕಾಯಿಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳರನ್ನು ಪತ್ತೆ ಹಚ್ಚಿ  ಕಳ್ಳತನವಾಗಿರುವ ಅಡಿಕೆಯನ್ನು ಕೊಡಿಸುವಂತೆ ಕೋರಿ ನೀಡಿದ ದೂರಿನ ಮೇರೆಗೆ ಸಿಂಗಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಬೈಕ್ ಕಳ್ಳತನ ಪ್ರಕರಣ

ತರೀಕೆರೆ ಪೊಲೀಸ್ ಠಾಣೆ

ದಿನಾಂಕ:24-11-2021 ರಂದು ಪಿರ್ಯಾದಿ ಪ್ರತಾಪ್ ರವರು ನೀಡಿದ ದೂರಿನಲ್ಲಿ ಪಿರ್ಯಾದುದಾರರು ತಮ್ಮ ಬಾಬ್ತು  ಕೆಎ-66-ಜೆ-1039 ನೇ ನಂಬರಿನ ಕಪ್ಪು ಬಣ್ಣದ ಬಜಾಜ್ ಪಲ್ಸರ್ ಬೈಕ್ ನ್ನು  ದಿನಾಂಕ:26-10-2021 ರಂದು ರಾತ್ರಿ 11-00 ಗಂಟೆಗೆ ಎಂ.ಜಿ ರಸ್ತೆ ಕೆ.ಇ.ಬಿ. ಹತ್ತಿರ ಸತೀಶ್ ಎಂಬುವರ ಮನೆ ಮುಂದೆ ನಿಲ್ಲಿಸಿ ದಿನಾಂಕ:27-10-2021 ರಂದು 6-00 ಗಂಟೆ ನೋಡಿದಾಗ ಬೈಕ್ ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಬೈಕಿನ ಬೆಲೆ 66,000/- ರೂ ಗಳಾಗಿದ್ದು ಕಳ್ಳರನ್ನು ಮತ್ತು ಬೈಕ್ ನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ಮೇರೆಗೆ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ.

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ:23-11-2021 ರಂದು ಗ್ರಾಮಾಂತರ ಠಾಣಾ ಸರಹದ್ದಿನ  ಗಾಳಿಪೂಜೆ ಗ್ರಾಮದ ಕೇಶವ ಬಿನ್ ನಂಜುಂಡಪ್ಪ ತಮ್ಮ ವಾಸದ ಮನೆಯ  ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಆರೋಫಿ

ಯನ್ನು ವಶಕ್ಕೆ ಪಡೆದು ಆರೋಪಿ ಬಳಿಯಿದ್ದ 90 ಎಂ.ಎಲ್. 40  ಟೆಟ್ರಾಪ್ಯಾಕ್ ಮದ್ಯವನ್ನು ವಶಕ್ಕೆ ಪಡೆದು, ಮದ್ಯದ ಅಂದಾಜು ಬೆಲೆ 1405/-ರೂ ಆಗಿದ್ದು, ಆರೋಪಿ ವಿರುದ್ದ  ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಪಿ.ಎಸ್.ಐ. ಶ್ರೀ ಅನಿಲ್ ಕುಮಾರ್ ಟಿ. ನಾಯ್ಕ ಹಾಗೂ ಸಿಬ್ಬಂದಿಯಾದ ಲೋಹಿತ್ ರವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ.

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ:23-11-2021 ರಂದು ಗ್ರಾಮಾಂತರ ಠಾಣಾ ಸರಹದ್ದಿನ  ಗಾಳಿಪೂಜೆ ಗ್ರಾಮದ ಮಂಜುನಾಥ ಆರ್.  ಬಿನ್ ಲೇಟ್ ರಾಜು  ತಮ್ಮ ವಾಸದ ಮನೆಯ  ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಆರೋಫಿಯನ್ನು ವಶಕ್ಕೆ ಪಡೆದು ಆರೋಪಿ ಬಳಿಯಿದ್ದ 90 ಎಂ.ಎಲ್. 40  ಟೆಟ್ರಾಪ್ಯಾಕ್ ಮದ್ಯವನ್ನು ವಶಕ್ಕೆ ಪಡೆದು, ಮದ್ಯದ ಅಂದಾಜು ಬೆಲೆ 1826/-ರೂ ಆಗಿದ್ದು, ಆರೋಪಿ ವಿರುದ್ದ  ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಪಿ.ಎಸ್.ಐ. ಶ್ರೀ ಅನಿಲ್ ಕುಮಾರ್ ಟಿ. ನಾಯ್ಕ ಹಾಗೂ ಸಿಬ್ಬಂದಿಯಾದ ಜಯರಾಮ್  ರವರು ಪಾಲ್ಗೊಂಡಿರುತ್ತಾರೆ.

 ಕಡೂರು ಪೊಲೀಸ್ ಠಾಣೆ.

ದಿನಾಂಕ:23-11-2021 ರಂದು ಕಡೂರು ಠಾಣಾ ಸರಹದ್ದಿನ  ಚಿಕ್ಕಾಲಕಟ್ಟೆ ಗ್ರಾಮದ  ಮದ್ಯ ಮಾರಾಟ ಮಾಡಲು ಹರೀಶ ಬಿನ್ ಶೇಖರಪ್ಪ ಎಂಬುವರು ಮದ್ಯವನ್ನು ಸಾಗಾಣೀಕೆ ಮಾಡುತ್ತಿದ್ದು, ರಂಗೇನಹಳ್ಳಿ ಕ್ರಾಸ್ ಬಳಿ  ಆರೋಫಿಯನ್ನು ವಶಕ್ಕೆ ಪಡೆದು ಆರೋಪಿ ಬಳಿಯಿದ್ದ 90 ಎಂ.ಎಲ್. 34  ಟೆಟ್ರಾಪ್ಯಾಕ್ ಮದ್ಯವನ್ನು ವಶಕ್ಕೆ ಪಡೆದು, ಮದ್ಯದ ಅಂದಾಜು ಬೆಲೆ 1194/-ರೂ ಆಗಿದ್ದು, ಆರೋಪಿ ವಿರುದ್ದ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಕಡೂರು ಪಿ.ಎಸ್.ಐ. ಶ್ರೀಮತಿ ರಮ್ಯ ಎನ್. ಹಾಗೂ ಸಿಬ್ಬಂದಿಯಾದ ಸಿ.ಟಿ. ರಮೇಶ, ಚಂದ್ರಶೇಖರ, ಪೈಯಾಜ್,  ಲಿಂಗರಾಜ್,  ರವರು ಪಾಲ್ಗೊಂಡಿರುತ್ತಾರೆ.

ಕಡೂರು ಪೊಲೀಸ್ ಠಾಣೆ.

ದಿನಾಂಕ:23-11-2021 ರಂದು ಕಡೂರು ಠಾಣಾ ಸರಹದ್ದಿನ  ಬುಕ್ಕಸಾಗರ ಕೆರೆಕೋಡಿ ಗ್ರಾಮದ  ಮಂಜುನಾಥ ಬಿನ್ ಹನುಮಂತಪ್ಪ ಎಂಬುವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಆರೋಫಿಯನ್ನು ವಶಕ್ಕೆ ಪಡೆದು ಆರೋಪಿ ಬಳಿಯಿದ್ದ 90 ಎಂ.ಎಲ್. 35 ಟೆಟ್ರಾಪ್ಯಾಕ್ , 180 ಎಂ.ಎಲ್. ನ 6  ಟೆಟ್ರಾಪ್ಯಾಕ್ ಮದ್ಯವನ್ನು ವಶಕ್ಕೆ ಪಡೆದು, ಮದ್ಯದ ಅಂದಾಜು ಬೆಲೆ 1826/-ರೂ ಆಗಿದ್ದು, ಆರೋಪಿ ವಿರುದ್ದ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಕಡೂರು ಪಿ.ಎಸ್.ಐ. ಶ್ರೀಮತಿ ರಮ್ಯ ಎನ್. ಹಾಗೂ ಸಿಬ್ಬಂದಿಯಾದ ಸಿ.ಟಿ. ರಮೇಶ್ ಓಂಕಾರ, ಮಧುಕುಮಾರ್ ರವರು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಬಾಳೆಹೊನ್ನೂರು ಪೊಲೀಸ್ ಠಾಣೆ

ದಿನಾಂಕ:23-11-2021 ರಂದು ಬನ್ನೂರು ಜಕನಕ್ಕಿ ವಾಸಿ ಪಿರ್ಯಾದಿ ನಾರಾಯಣ ಬಿನ್ ಬೀರಯ್ಯ ರವರು ನೀಡಿದ ದೂರಿನಲ್ಲಿ ದಿನಾಂಕ:22-11-2021 ರಂದು  ನನ್ನ ಮಗಳಾದ ತಾರಾ, 23 ವರ್ಷ, ಇವಳು ನಮ್ಮ ಮನೆಯ ಕಾರ್ಯಕ್ರಮಕ್ಕೆ ಬಂದಿದ್ದು ಕಾರ್ಯಕ್ರಮ ಮುಗಿಸಿಕೊಂಡು ಸಂಜೆ ಬಾಳೇಹೊನ್ನೂರು ಬಸ್ ನಿಲ್ದಾಣಕ್ಕೆ ಬಿಟ್ಟಿದ್ದು, ತಾರಾಳು ಕೂದುವಳ್ಳಿಗೆ ಹೋಗದೇ ಕಾಣೆಯಾಗಿದ್ದು, ಎಲ್ಲಾ ಕಡೆ ಹುಡುಕಿದರೂ ಸಹ ಈ ವರೆಗೂ ಪತ್ತೆ ಅಗಿರುವುದಿಲ್ಲ. ಅದ್ದರಿಂದ ಕಾಣೆಯಾಗಿರುವ ತನ್ನ ಮಗಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ  ಬಾಳೇಹೊನ್ನೂರು ಠಾಣೆಯಲ್ಲಿ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮರಳು ಕಳ್ಳತನ ಪ್ರಕರಣ

ಲಕ್ಕವಳ್ಳಿ ಪೊಲೀಸ್ ಠಾಣೆ.

ದಿನಾಂಕ: 23-11-2021 ರಂದು ಲಕ್ಕವಳ್ಳಿ ಠಾಣಾ ಸೋಂಪುರದಲ್ಲಿ  ಗೋಪಾಲ ಗ್ರಾಮದ ಹುರುಳಿಬೋರೆ ಯ ಗಿಡ್ಡಪ್ಪ ರವರ ಹಾಳು ಜಮೀನಿನಲ್ಲಿ ಅದೇ ಗ್ರಾಮದ ಸೋಮ ಮತ್ತು ಕೇಶವ ಎಂಬುವರು ಸುಮಾರು 4 ಟ್ಯಾಕ್ಟರ್ ನಷ್ಟು ಮರಳನ್ನು ಅಕ್ರಮವಾಗಿ ಮರಳನ್ನು ಕಳ್ಳತನ ಮಾಡಿಕೊಂಡು ಬಂದು ದಾಸ್ತಾನು ಮಾಡಿದ್ದು, ಸದರಿ ಮರಳನ್ನು ಅಮಾನತ್ತುಪಡಿ ಸಿಕೊಂಡು ಬಂದು ಅರೋಪಿತರಾದ ಸೋಮ ಮತ್ತು ಕೇಶವ ಎಂಬುವರ ವಿರುದ್ದ  ಲಕ್ಕವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಕೆ. ಕೃಷ್ಣನಾಯ್ಕ ಹಾಗೂ ಸಿಬ್ಬಂದಿಯವರಾದ ಸಿದ್ದೇಶ್, ಮಧು ವೈ.ಎಸ್. ಸತೀಶ ರವರು ಪಾಲ್ಗೊಂಡಿರುತ್ತಾರೆ. 

ಹರಿಹರಪುರ ಪೊಲೀಸ್ ಠಾಣೆ.

ದಿನಾಂಕ 23-11-2021 ರಂದು ಹರಿಹರಪುರ ಠಾಣಾ ಸರಹ್ದದಿನ ಕೆಸವುವಿನಹೊಂಡಾದ ಬಳಿ ಕುಡಿನಲ್ಲಿ ಕಡೆಯಿಂದ ಕೊಪ್ಪ ಕಡೆಗೆ ಕೆಎಲ್-02- ಎಅರ್-2041 ರ ಲಾರಿಯಲ್ಲಿ ಅಕ್ರಮವಾಗಿ ಮರಳನ್ನು  ಹಳ್ಳದಿಂದ ಕಳ್ಳತನ ಮಾಡಿಕೊಂಡು ಬಂದು ಸಾಗಾಣಿಕೆ ಮಾಡುತ್ತಿದ್ದು  ಹರಿಹರಪುರ ಬಸ್ ನಿಲ್ದಾಣ ದ ಬಳಿ ಲಾರಿಯನ್ನು  ಮತ್ತು 7 ಟನ್ ಮರಳನ್ನು ಅಂದಾಜು ಬೆಲೆ 10,000/- ರೂ ವನ್ನು ಅಮಾನತ್ತುಪಡಿಸಿಕೊಂಡು ಲಾರಿಯ ಚಾಲಕ ನಾಗರಾಜ್ ಬಿನ್ ಪುಟ್ಟಯ್ಯ ನನ್ನು ವಶಕ್ಕೆ ಪಡೆದು ಹರಿಹರಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಶ್ರೀ ವಿಠಲ್ ವಾಡವಾಣಿ ಮತ್ತು ಸಿಬ್ಬಂದಿಯವರಾದ ಡಿ.ವಿ. ಗಂಗಾಧರಪ್ಪ ಸಿಪಿಸಿ ಪ್ರೇಮ್ ಸಾಗರ್ ನಾಯ್ಕ ರವರು ಪಾಲ್ಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣ

ಬೀರೂರು ಪೊಲೀಸ್ ಠಾಣೆ.

ದಿನಾಂಕ:23-11-2021 ರಂದು  ಪಿರ್ಯಾದಿ ಗಂಡ ಇ. ಕೃಷ್ಣ ಮೂರ್ತಿ, 56 ವರ್ಷ,  ರವರು ಕೆಎ-05-ಎಜಿ-224 ನಂಬರಿನ ಟಿಪ್ಪರ್ ಲಾರಿಯಲ್ಲಿ ಎಂ. ಸ್ಯಾಂಡ್ ತುಂಬಿಕೊಂಡು ನೆರಲೇಕೆರೆ ಗ್ರಾಮಕ್ಕೆ ಹೋಗಿ ಅನ್ ಲೋಡ್ ಮಾಡಿ ಕಡೂರಿಗೆ  ಬರಲು ಬರುತ್ತಿರುವಾಗ ತರೀಕೆರೆ- ಬೀರೂರು ಮದ್ಯ ಕೊರಟಗೆರೆ ಗೇಟ್ ಬಳಿ ಎನ್ ಹೆಚ್.-206 ರಸ್ತೆಯಲ್ಲಿ ಲಾರಿಯನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಬದಿಯ ಮರಕ್ಕೆ ಡಿಕ್ಕಿ ಹೊಡೆಸಿದ್ದು ಅಪಘಾತದಲ್ಲಿ ಲಾರಿ ಚಾಲನೆ ಮಾಡುತ್ತಿದ್ದ ಇ ಕೃಷ್ಣಮೂರ್ತಿ ರವರು ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 24-11-2021 06:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080