ಅಭಿಪ್ರಾಯ / ಸಲಹೆಗಳು

ಅಕ್ರಮ ಮಟ್ಕಾ ಜೂಜಾಟ  ಪ್ರಕರಣ

ತರೀಕೆರೆ  ಪೊಲೀಸ್ ಠಾಣೆ

ದಿನಾಂಕ 25.06.2021 ರಂದು ತರೀಕೆರೆ ಠಾಣಾ ಸರಹದ್ದಿನ ತರೀಕೆರೆ ಟೌನ್ ಗಾಳಿಹಳ್ಳಿ ಕ್ರಾಸ್,ನ ಬನಶಂಕರಿ ದೇವಾಲಯದ ಮುಂಭಾಗದಲ್ಲಿ ಯಾರೋ ಇಬ್ಬರು ಆಸಾಮಿಗಳು ಅಕ್ರಮವಾಗಿ ಮಟ್ಕಾ  ಜೂಜಾಟವಾಡಿಸುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ ಮಟ್ಕಾ ಜೂಜಾಟವಾಡಲು ಹಣ ಕಟ್ಟುತ್ತಿದ್ದವರು ಓಡಿ ಹೋಗಿದ್ದು ಮಟ್ಕಾ ಆಡಿಸುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಸುನೀಲ್ @ ಕೃಷ್ಣಮೂರ್ತಿ ,ಗಾಳಿಹಳ್ಳಿ ಕ್ರಾಸ್, ತರೀಕೆರೆ ಟೌನ್ 2) ಚಂದನ್ ಬಿನ್ ರೇವಣ್ಣ, ತಿಮ್ಮಯ್ಯನ ಬೀದಿ, ತರೀಕೆರೆ ಟೌನ್ ಎಂದು ತಿಳಿಸಿದ್ದು ಕಾನೂನು ಬಾಹಿರವಾಗಿ ಮಟ್ಕಾ  ಜೂಜಾಟವಾಡಿಸುತ್ತಿದ್ದ  ಆರೋಪಿಗಳನ್ನು ವಶಕ್ಕೆ  ಪಡೆದು ಅವರುಗಳ   ವಶದಲ್ಲಿದ್ದ ಒಂದು ಮಟ್ಕಾ ಚೀಟಿ, ಒಂದು ಬಾಲ್ ಪೆನ್ ಎರಡು ಮೊಬೈಲ್ ಗಳು ಹಾಗೂ 1720 /-ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿತನ  ವಿರುದ್ದ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಕೆ.ಎನ್.ರಾಘವೇಂದ್ರ. ಪಿ.ಐ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ .

ಬೀರೂರು  ಪೊಲೀಸ್ ಠಾಣೆ.

ದಿನಾಂಕ 24.06.2021 ರಂದು ಬೀರೂರು ಪಟ್ಟಣದಲ್ಲಿ ರೌಂಡ್ಸ್ ನಲ್ಲಿರುವಾಗ ಬಿ.ಕೋಡಿಹಳ್ಳಿ ರಸ್ತೆಯಲ್ಲಿರುವ ಅಂಡರ್ ಬ್ರಿಡ್ಜ್ ಬಳಿ ಪುರಿಭಟ್ಟಿ  ರಸ್ತೆಯ ತಿರುವಿನಲ್ಲಿ ಒಬ್ಬ ಆಸಾಮಿಯು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿದ್ದು ಬಿ.ಕೋಡಿಹಳ್ಳಿ ರಸ್ತೆಯಲ್ಲಿರುವ ಅಂಡರ್ ಬ್ರಿಡ್ಜ್ ಬಳಿ ಪುರಿಭಟ್ಟಿ  ರಸ್ತೆಯ ತಿರುವಿನಲ್ಲಿ ಒಬ್ಬ ಆಸಾಮಿಯು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು ,ಮದ್ಯ ಮಾರಾಟ ಮಾಡುತ್ತಿದ್ದ ಆಸಾಮಿಯ ಹೆಸರು ವಿಳಾಸ ತಿಳಿಯಲಾಗಿ  ರವಿನಾಯ್ಕ ಬಿನ್ ಚಂದ್ರಾನಾಯ್ಕ, ಮುಂಡ್ರೆ ತಾಂಡ್ಯ ಗ್ರಾಮ ವಾಸಿಯಾಗಿದ್ದು , ಆತನ ಬಳಿಯಿದ್ದ  ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ  90 ಎಂ.ಎಲ್ ನ ರಾಜಾವಿಸ್ಕಿಯ 55  ಮದ್ಯದ ಪೌಚ್ ಗಳಿದ್ದು ,ಮದ್ಯದ ಅಂದಾಜು ಬೆಲೆ 1932/- ರೂ ಆಗಿದ್ದು ಆರೋಪಿತನ ವಿರುದ್ದ ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ಬಸವರಾಜು  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

ರಸ್ತೆ ಅಪಘಾತ ಪ್ರಕರಣ

 ಕಡೂರು  ಪೊಲೀಸ್ ಠಾಣೆ

ದಿನಾಂಕ 24.06.2021 ರಂದು ಪಿರ್ಯಾದುದಾರರಾದ ಪುಟ್ಟಪ್ಪ ಬಿನ್ ರಾಮಕೃಷ್ಣಪ್ಪ, ವಿ.ಸಿದ್ದರಹಳ್ಳಿ, ಕಡೂರು ತಾಲ್ಲೂಕುರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯ ತಮ್ಮ ಗಂಗಾಧರವರು ತಮ್ಮ ಗ್ರಾಮದಲ್ಲಿ ಹೊಸದಾಗಿ ಮನೆ ನಿರ್ಮಾಣ ಮಾಡುತ್ತಿದ್ದು  ಈ ದಿವಸ ಪಿರ್ಯಾದಿಯ ತಂದೆಯವರಾದ  ರಾಮಕೃಷ್ಣರವರು ಮನೆಯ ಕಾಮಗಾರಿ ನೋಡಿಕೊಂಡು ಮದ್ಯಾಹ್ನ ಊಟಕ್ಕೆಂದು ತಮ್ಮ ಗ್ರಾಮದ  ಮೋಹನಕುಮಾರವರ ಮನೆಯ ಮುಂದಿನ ಬಾಸೂರು-ಕಡೂರು ಟಾರು ರಸ್ತೆಯ ಮಣ್ಣಿನ ರಸ್ತೆಯಲ್ಲಿ ಬರುತ್ತಿರುವಾಗ್ಗೆ ಕಡೂರು ಕಡೆಯಿಂದ ಬಂದ ಕೆಎ-18 ಯು 8711 ಬೈಕಿನ ಚಾಲಕ  ಬೈಕನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದುದಾರರ ತಂದೆಗೆ ಡಿಕ್ಕಿ ಹೊಡೆಸಿದ ಪರಿಣಾಮ ತಲೆಗೆ, ಎದೆಗೆ ಹಾಗೂ ಮುಖಕ್ಕೆ ಪೆಟ್ಟಾಗಿದ್ದು ಚಿಕಿತ್ಸೆಗಾಗಿ ಕಡೂರು ಸರ್ಕಾರಿ ಆಸ್ಪತ್ರೆಗೆ  ಕರೆದುಕೊಂಡು ಹೋಗಿ ವೈದ್ಯರ ಬಳಿ ತೋರಿಸಲಾಗಿ ಮೃತಪಟ್ಟಿರುವುದಾಗಿ ತಿಳಿಸಿದ್ದು ಚಾಲಕ ಶಿವರಾಜ ಬಿನ್ ಮಹಾಲಿಂಗಪ್ಪರವರ ವಿರುದ್ದ ಕಡೂರು  ಠಾಣೆಯಲ್ಲಿ  ಪ್ರಕರಣ ದಾಖಲಿಸಿ ತನಿಖೆ  ಕೈಗೊಂಡಿರುತ್ತಾರೆ

ಇತ್ತೀಚಿನ ನವೀಕರಣ​ : 25-06-2021 07:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080