ಅಭಿಪ್ರಾಯ / ಸಲಹೆಗಳು

ಮನುಷ್ಯ ಕಾಣೆ ಪ್ರಕರಣ

ಸಖರಾಯಪಟ್ಟಣ ಪೊಲೀಸ್ ಠಾಣೆ.

ದಿನಾಂಕ 25/07/2021 ರಂದು ಎಸ್. ಬಿದರೆ ವಾಸಿ ಪಿರ್ಯಾದಿ ಶ್ರೀ ರಮೇಶ ಬಿನ್ ರಂಗಶೆಟ್ಟಿ ರವರು ನೀಡಿದ ದೂರಿನಲ್ಲಿ  ತನ್ನ ಹೆಂಡತಿ ಶಂಕರಮ್ಮ ಇವಳು ದಿನಾಂಕ 24/07/2021 ರಂದು ರಾತ್ರಿ ಸುಮಾರು 11-00ಗಂಟೆ ಸಮಯದಲ್ಲಿ ಮನೆಯಲ್ಲಿ ಎಂದಿನಂತೆ ಮಲಗಿದ್ದು , ಪಿರ್ಯಾದಿ ತಂದೆ ರಾತ್ರಿ ರಂಗಶೆಟ್ಟಿ ನೋಡಿದಗ ಪಿರ್ಯಾದಿ ಹೆಂಡತಿ ಮನೆ ಬಿಟ್ಟು ಹೋಗಿರುವ ವಿಚಾರ ತಿಳಿದು ಹುಡುಕಡಾಲಾಗಿ ತನ್ನ ಹೆಂಡತಿ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ತನ್ನ ಹೆಂಡತಿ ವಿವರ ಶಂಕರಮ್ಮ , 28 ವರ್ಷ ದೆವಾಂಗ ಶೆಟ್ಟಿ ಜಾತಿ , ಸಾದಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣ ಎತ್ತರ 5.1 ಅಡಿ ಕನ್ನಡ ಬಾಷೆ ಮಾತಾನಾಡುತ್ತಾಳೆ  ಕಾಣೆಯಾಗಿರುವ ತನ್ನ ಹೆಂಡತಿಯನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರನ್ನು ಸ್ವೀಕರಿಸಿಕೊಂಡು ಸಖರಾಯಪಟ್ಟಣ   ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ರಸ್ತೆ ಅಪಘಾತ ಪ್ರಕರಣ

ಮೂಡಿಗೆರೆ ಪೊಲೀಸ್ ಠಾಣೆ .

ದಿನಾಂಕ 24.07.2021 ರಂದು  ಮಹಮದ್ ಅಶ್ಪೀಯಾನ್ ಬಿನ್ ಮೊಹಿದ್ದೀನ್ ಇಕ್ಬಾಲ್ ರವರು  ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 24/07/2021 ರಂದು  ನಾನು, ನನ್ನ ಮಾವ ಅಶ್ವಕ್ ಅಹಮದ್ , ತಾಯಿ ದಿಲ್ ಶಾದ್ ಹಾಗೂ ತಂಗಿ ಅಫ್ರಾ ರವರು ಕೆ -20 ಎಂಬಿ- 5256 ಕಾರಿನಲ್ಲಿ ಬೆಂಗಳೂರಿಗೆ ಹೋಗುತ್ತಿದ್ದಾಗ ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಮುತ್ತಿಗೆಪುರದ ಸಮೀಪ ಕಾರನ್ನು ಚಾಲನ್ ಮಾಢುತ್ತಿದ್ದ  ಅಶ್ವಾಕ್  ಅಹಮದ್ರವರು ಕಾರನ್ನು ಅತೀವೇಗ ಹಾಗು ಅಜಾಗರೂಕತೆ ಯಿಂದ ಚಾಲನೆ ಮಾಡಿಕೊಂಡು ಬಂದು ಬಲಬದಿಯ ಮರಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ಅಶ್ವಾಕ್  ಅಹಮದ್ರವರಿಗೆ ತಲೆಗೆ , ಕೈಗೆ ಹಾಗೂ ಹೊಟ್ಟೆಗೆ ಪೆಟ್ಟಾಗಿದ್ದು ನನಗೂ, ದಿಲ್ ಶಾದ್ ಹಾಗೂ ಅಫ್ರಾರವರಿಗೂ ಸಹ ಪೆಟ್ಟಾಗಿರುತ್ತೆ ಕಾರಿನ ಚಾಲಕನ ಮೇಲೆ ಕ್ರಮ ತೆಗೆದುಕೊಳ್ಳಲು  ನೀಡಿದ ಪಿರ್ಯಾದಿನ ಮೇರೆಗೆ  ಮೂಡಿಗೆರೆ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಸೈಬರ್ ಪ್ರಕರಣ

ಸಿ.ಇ.ಎನ್ ಪೊಲೀಸ್ ಠಾಣೆ

ದಿನಾಂಕ 24-07-2021 ರಂದು ಇಕ್ರಾಂ ಫರ್ವಿಜ್ , ರಾಮನಹಳ್ಳಿ ವಾಸಿರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ19-07-2021 ರಂದು ನನ್ನ ಮೊಬೈಲ್ ನಂಬರ್  ಗೆ ಅಪರಿಚಿತ  ಮೊಬೈಲ್ನಿಂದ  ಎಸ್.ಎಂ. ಎಸ್ ಬಂದಿದ್ದು ನಿಮ್ಮ ಬ್ಯಾಂಕ್ ಅಕೌಂಟ್ ಸಸ್ಪೆಂಡ್ ಆಗಲಿದ್ದು ನೀವು ಕೇವೈಸಿ ಅಪ್ ಡೇಟ್ ಮಾಡಬೇಕೆಂದು ಇದ್ದುದ್ದರಿಂದ ಎಸ್.ಎಂ.ಎಸ್ ನ್ನು ಕ್ಲಿಕ್ ಮಾಡಿದಾಗ ಅದರಲ್ಲಿ ಎಸ್.ಬಿ.ಐ ಬ್ಯಾಂಕ್ನ ವೆಬ್ಸೈಟ್ನಂತೆ ಕಾಣುತ್ತಿದ್ದ ಫಾರ್ಮೆಟ್ ಇದ್ದುದ್ದರಿಂದ ಬ್ಯಾಂಕ್ ಫಾರ್ಮೆಟ್ ಎಂದು ಭಾವಿಸಿ ಬ್ಯಾಂಕ್ ಅಕೌಂಟ್ ಡಿಟೇಲ್ಸ್ ಭರ್ತಿ ಮಾಡಿದ್ದರಿಂದ ಎಸ್ ಬಿ ಐ ಬ್ಯಾಂಕ್ ಅಕೌಂಟ್ ನಂಬರ್  ನಿಂದ ಒಟ್ಟು 27,000/- ರೂ ಹಣವನ್ನು  ಡ್ರಾ ಮಾಡಿರುತ್ತಾರೆ. ಈ ರೀತಿಯಾಗಿ ನಂಬಿಸಿ ಮೋಸದಿಂದ ನನ್ನ ಬ್ಯಾಂಕ್ ಖಾತೆಯಿಂದ ಒಟ್ಟು 27.000/-ರೂ ಡ್ರಾ ಮಾಡಿ ಮೋಸ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳುವಂತೆ ನೀಡಿದ  ದೂರನ್ನು ಸ್ವೀಕರಿಸಿಕೊಂಡು ಸಿ.ಇ.ಎನ್  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

 

 

 

 

 

ಇತ್ತೀಚಿನ ನವೀಕರಣ​ : 25-07-2021 07:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080