ಅಭಿಪ್ರಾಯ / ಸಲಹೆಗಳು

ಕಳ್ಳತನ ಪ್ರಕರಣ.

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ 25-08-2021 ರಂದು ಪಿರ್ಯಾದಿ ಸೋಮಶೇಖರ, ಹೂವೇನಹಳ್ಳಿ ರವರು ನೀಡಿದ ದೂರೇನೆಂದರೆ 24-08-2021 ರಂದು ರಾತ್ರಿ ಹೂವೇನಹಳ್ಳಿ ಗ್ರಾಮದ ಶನೇಶ್ವರ ದೇವಾಲಯದ ಪೂಜೆಯನ್ನು ಕೊಂಬುಗತ್ತಿ ಗ್ರಾಮದ ಶೇಖರ್ ರವರು ಪೂಜೆ ಮಾಡಿ ಬೀಗವನ್ನು ಹಾಕಿಕೊಂಡು ಹೋಗಿದ್ದು, ದಿನಾಂಕ 25-08-2021 ರಂದು ಬೆಳಗ್ಗೆ 06-30 ಗಂಟೆಗೆ ಪೂಜೆಯನ್ನು ಮಾಡಲು ಶೇಖರ್ ರವರು ಬಂದು ನೋಡಿದಾಗ ದೇವಾಲಯದ ಮುಂಬಾಗಿಲಿಗೆ ಹಾಕಿದ್ದ ಬೀಗವನ್ನು ಯಾರೋ ಕಳ್ಳರು  ಯಾವುದೋ ಆಯುಧದಿಂದ ಮೀಟಿ ಮುರಿದು 600 ಗ್ರಾಂ ತೂಕದ ಒಟ್ಟು 7 ಬೆಳ್ಳಿಯ ಛತ್ರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳ್ಳತನ ಮಾಡಿಕೊಂಡು ಹೋಗಿರುವ ಕಳ್ಳರನ್ನು ಪತ್ತೆ ಮಾಡಬೇಕೆಂದು ನೀಡಿದ ದೂರಿನ ಮೇರೆಗೆ  ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಸೈಬರ್ ಪ್ರಕರಣ.

ಸಿ.ಇ.ಎನ್ ಪೊಲೀಸ್ ಠಾಣೆ.

ದಿನಾಂಕ 25-08-2021 ರಂದು ಶ್ರೀಮತಿ. ಶ್ರೀಲೇಖಾ ರವರು ನೀಡಿದ ದೂರೆನೇಂದರೆ ದಿನಾಂಕ 22-08-2021 ರಂದು ತಮ್ಮ ಮೊಬೈಲ್ ಗೆ  ಜಿಯೋ ಲೋಗ್ ಇರುವ ಮೇಕ್ ಮನಿ ಈಸೀಯರ್ ಎಂಬ ಲಿಂಕ್ ಬಂದಿದ್ದು ಜಿಯೋ ಕಂಪೆನಿಯದೆಂದುಭಾವಿಸಿ  ವೈಯಕ್ತಿಕ ಡಿಟೇಲ್ಸ್ ನ್ನು ಭರ್ತಿ ಮಾಡಿ ಕಳೂಹಿಸಿದ್ದು ನನ್ನನ್ನು ನಂಬಿಸಿ ನನ್ನ ಬ್ಯಾಂಕ್ ಅಕೌಂಟ್ ನಿಂದ ಒಟ್ಟು 89,920 ರೂ ಗಳನ್ನು ಹಾಕಿಸಿಕೊಂಡು ಮೋಸ ಮಾಡಿದ್ದು ಮೋಸ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಸಿ.ಇ.ಎನ್. ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ.

ಬಣಕಲ್  ಪೊಲೀಸ್ ಠಾಣೆ,

ದಿನಾಂಕ 24-08-2021 ರಂದು ಕೋಳೂರು ಗ್ರಾಮದ ವಾಸಿಯಾದ ನಾರಾಯಣ  ಎಂಬುವವರು ತಮ್ಮ ಮನೆಯ ಮುಂದಿನ ಅಂಗಳದಲ್ಲಿ  ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಆರೋಪಿಯನ್ನು ವಶಕ್ಕೆ ಪಡೆದು ಆರೋಪಿತನು ಅಕ್ರಮವಾಗಿ ಹೊಂದಿದ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಬಣಕಲ್  ಠಾಣೆಯಲ್ಲಿ ಪ್ರಕರಣ ದಾಖಲಿಸಿ  ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ಶ್ರೀಮತಿ ಗಾಯತ್ರಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಮಟ್ಕಾ ಜೂಜಾಟ ಪ್ರಕರಣ.

ತರೀಕೆರೆ  ಪೊಲೀಸ್ ಠಾಣೆ.

ದಿನಾಂಕ 24-08-2021 ರಂದು ಸಂಜೆ 05-30 ಗಂಟೆ ಸಮಯದಲ್ಲಿ  ತರೀಕೆರೆ ಟೌನ್ನ ಚಿಕ್ಕೆರೆ ಹತ್ತಿರ  ಯಾರೋ ಒಬ್ಬ ಆಸಾಮಿ ಅಕ್ರಮವಾಗಿ ಜೂಜಾಟವಾಡಿಸುತ್ತಿದ್ದ ಮನ್ಸೂರ್ ಬಿನ್ ಷರೀಫ್ ಸಾಬ್, ಬನಶಂಕರಿ ಬಡಾವಣೆ, ತರೀಕೆರೆ ಟೌನ್  ಈತನನ್ನು ವಶಕ್ಕೆ ಪಡೆದು  ಆತನ ವಶದಲ್ಲಿದ್ದ 1) ಒಂದು ಮಟ್ಕಾ ಚೀಟಿ 2) ಒಂದು ಬಾಲ್ ಪೆನ್  ಹಾಗೂ 1420 /- ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿತನ  ವಿರುದ್ದ  ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಐ.ರಾಘವೇಂದ್ರ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 25-08-2021 05:52 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080