ಅಭಿಪ್ರಾಯ / ಸಲಹೆಗಳು

ಕಳ್ಳತನ ಪ್ರಕರಣ.

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ:24-01-2022 ರಂದು ಪಿರ್ಯಾದಿ  ಬಿ. ಶ್ರೀಧರ ಬಿನ್ ಬಸವರಾಜು ಎಸ್.ಜೆ.ಎಂ ಕಾಲೇಜು ಹತ್ತಿರ ಹಳೆ ಗಾಳಿಹಳ್ಳಿ ಕ್ರಾಸ್  ತರೀಕೆರೆ ವಾಸಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯ ದಿನಾಂಕ;23-01-2022 ರಂದು ಬೆಳಿಗ್ಗೆ  ಮನೆಗೆ ಬೀಗ ಹಾಕಿಕೊಂಡು  ಸಂಬಂದಿಕರ ಮನೆಗೆ ಹೋಗಿದ್ದು ದಿನಾಂಕ 24-01-2022 ರಂದು ಬೆಳಿಗ್ಗೆ ಬಂದು ನೋಡಿದಾಗ ಮನೆಯ ಮುಂಬಾಗಿಲು ಮತ್ತು ಕಬ್ಬಿಣದ ಗೇಟ್ ಗೆ  ಹಾಕಿದ್ದ ಇಂಟರ್ ಲಾಕ್ ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ಮುರಿದು ಮನೆಯ ಎರಡು ಬೆಡ್ ರೂಂ ಗಳಲ್ಲಿ ಇಟ್ಟಿದ್ದ ಲಾಕರ್ ನಿಂದ ಸುಮಾರು 7,10,500/- ರೂ ಬೆಲೆಬಾಳುವ 203 ಗ್ರಾಂ ತೂಕದ ಚಿನ್ನಾಭರಣಗಳನ್ನು  ಹಾಗೂ ಸುಮಾರು 35,200/- ರೂ ಬೆಲೆಬಾಳುವ 880 ಗ್ರಾಂ ತೂಕದ ಬೆಳ್ಳಿಯ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳ್ಳರನ್ನು ಪತ್ತೆ ಮಾಡಿ ಕಳ್ಳತನವಾಗಿರುವ ಸ್ವತ್ತುಗಳನ್ನು ಕೊಡಿಸಿಕೊಡಬೇಕಾಗಿ ನೀಡಿದ ದೂರಿನ ಮೇರೆಗೆ  ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ನಗರ ಪೊಲೀಸ್ ಠಾಣೆ

ದಿನಾಂಕ;24-01-2022 ರಂದು ಪಿರ್ಯಾದಿ ಪ್ರಿಯ ಎಂ.ಡಿ. ಬಿನ್ ಎಂ.ಎನ್. ದಿನೇಶ್ ಮೂರುಮನೆಹಳ್ಳಿ ರೋಡ್, ಕೋಟೆ ಚಿಕ್ಕಮಗಳೂರು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ  ಕಡೂರಿನಿಂದ ಚಿಕ್ಕಮಗಳೂರಿಗೆ ಬಂದು ಬಸ್ ನಿಂದ ಇಳಿಯುವಾಗ ಸುಮಾರು 8 ಗ್ರಾಂ ತೂಕದ 42,285/- ರೂ ಬೆಲೆಬಾಳುವ ಬ್ರಾಸ್ ಲೈಟ್ ನ್ನು ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ. ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಬ್ರಾಸ್ ಲೈಟ್ ನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ  ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಬಾಳೆಹೊನ್ನೂರು ಪೊಲೀಸ್ ಠಾಣೆ.

ದಿನಾಂಕ: 24-01-2022 ರಂದು ಬಾಳೆಹೊನ್ನೂರು ಪೊಲೀಸ್ ಠಾಣಾ ಸರಹದ್ದಿನ ಚಿಕ್ಕಮಗಳೂರು-ಬಾಳೆಹೊನ್ನೂರು ರಸ್ತೆಯಲ್ಲಿ ತಿರುವಿನಲ್ಲಿ ಪಿರ್ಯಾದಿ  ಗುರುಮೂರ್ತಿ ಬಿ.ಸಿ. ಬಿನ್ ಚಂದ್ರೇಗೌಡ ವಾಸ ಬೆಳಸೆ ದೇವದಾನ ಇವರು ಬೆಳಸೆ  ವಾಸಿ ಹರೀಶ್ ರವರ ಮನೆಯ ಬಳಿ ಇರುವಾಗ ಚಿಕ್ಕಮಗಳೂರು ಕಡೆಯಿಂದ ಬಾಳೆಹೊನ್ನೂರು ಕಡೆಗೆ ಬರುತ್ತಿದ್ದ ಕೆಎ-11-ಎಫ್-0526 ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ ಬಸ್ ನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪರಿಣಾಮ ಬಾಳೆಹೊನ್ನೂರು ಕಡೆಯಿಂದ ಚಿಕ್ಕಮಗಳೂರು ಕಡೆಗೆ ಬರುತ್ತಿದ್ದ ಕೆಎ-16-ಇಕ್ಯೂ-0316  ಬೈಕಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಬೈಕ್ ಸವಾರ ಆರ್.ಕೃಷ್ಣಮೂರ್ತಿ ಬಿನ್ ರಾಜಣ್ಣ ವಾಸ ಗೌಡನಹಳ್ಳಿ ಚಿತ್ರದುರ್ಗ ಈತನು ರಸ್ತೆಯ ಮೇಲೆ ಬಿದ್ದು ಸ್ಥಳದಲ್ಲೆ ಮೃತಪಟ್ಟಿರುತ್ತಾನೆ. ಅಪಘಾತಕ್ಕೆ ಕಾರಣನಾದ ಕೆಎ-11-ಎಫ್-0526 ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 25-01-2022 01:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080