ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ

ಗೋಣಿಬೀಡು ಪೊಲೀಸ್ ಠಾಣೆ.

ದಿನಾಂಕ:24-02-2022 ರಂದು ಗೋಣಿಬೀಡು ಠಾಣಾ ಸರಹದ್ದಿನ ಬಾಳೆಗದ್ದೆ ಗ್ರಾಮದ ಸುದೀಪ್ ಬಿನ್ ಲೇಟ್ ಬೋಬೆಗೌಡ  ಎಂಬುವನು ತಮ್ಮ ಅಂಗಡಿಯಲ್ಲಿ  ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಅರೋಪಿಯನ್ನು ವಶಕ್ಕೆ ಪಡೆದು ಆರೋಪಿ ವಶದಲ್ಲಿದ್ದ 180 ಎಂ.ಎಲ್.ನ 7 ಮತ್ತು 90 ಎಂ.ಎಲ್. ನ 48 ಟೆಟ್ರಾಪ್ಯಾಕ್ ಮದ್ಯ ಅಂದಾಜು ಬೆಲೆ 2293/- ರೂ ಅಗಿದ್ದು ಮಧ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಮೂಡಿಗೆರೆ ಸಿ.ಪಿ.ಐ. ಶ್ರೀ ಸೋಮಶೇಖರ್ ಜೆ.ಸಿ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಮೂಡಿಗೆರೆ  ಪೊಲೀಸ್ ಠಾಣೆ.

ದಿನಾಂಕ:24-02-2022 ರಂದು ಮೂಡಿಗೆರೆ ಠಾಣಾ ಸರಹದ್ದಿನ ಕೆಸವೊಳಲು ಗ್ರಾಮದ ಶ್ರೀರಾಮ ಹರಿಜನ ಕಾಲೋನಿ ವಾಸಿ ನೀಲಾ ಕೋಂ ಜಯಣ್ಣ  ಎಂಬುವರು ಮನೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಅರೋಪಿತಳನ್ನು ವಶಕ್ಕೆ ಪಡೆದು ಆರೋಪಿತಳ ವಶದಲ್ಲಿದ್ದ 5 ಲೀಟರ್  ಕಳ್ಳಭಟ್ಟಿ ಮದ್ಯ ಅಂದಾಜು ಬೆಲೆ 500/- ರೂ ಅಗಿದ್ದು ಮಧ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಮೂಡಿಗೆರೆ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಮೂಡಿಗೆರೆ ಪಿ.ಎಸ್.ಐ. ರವಿ ಜಿ.ಎ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಮೂಡಿಗೆರೆ  ಪೊಲೀಸ್ ಠಾಣೆ.

ದಿನಾಂಕ:24-02-2022 ರಂದು ಮೂಡಿಗೆರೆ ಠಾಣಾ ಸರಹದ್ದಿನ ಕೆಸವೊಳಲು ಗ್ರಾಮದ ಶ್ರೀರಾಮ ಹರಿಜನ ಕಾಲೋನಿ ವಾಸಿ ಜಯಂತಿ ಕೋಂ ಕೆ.ಬಿ. ಉದಯ  ಎಂಬುವರು ಮನೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಅರೋಪಿತಳನ್ನು ವಶಕ್ಕೆ ಪಡೆದು ಆರೋಪಿ ವಶದಲ್ಲಿದ್ದ 5 .5 ಲೀಟರ್ ಕಳ್ಳಭಟ್ಟಿಮದ್ಯ ಅಂದಾಜು ಬೆಲೆ 525/- ರೂ ಅಗಿದ್ದು ಮಧ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಮೂಡಿಗೆರೆ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಮೂಡಿಗೆರೆ ಪಿ.ಎಸ್.ಐ. ರವಿ ಜಿ.ಎ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಇಸ್ಪೀಟ್ ಜೂಜಾಟ ಪ್ರಕರಣ

ಸಿ.ಇ.ಎನ್ ಪೊಲೀಸ್ ಠಾಣೆ.

ದಿನಾಂಕ; 24/02/2022 ರಂದು ಲಕ್ಕವಳ್ಳಿ ಠಾಣಾ ಸರಹದ್ದಿನ ಕೆಂಚಿಕೊಪ್ಪ ಗ್ರಾಮದ ಭತ್ತದ ಚಿನ್ನಯ್ಯ ತೋಟದಲ್ಲಿ ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಆಟ ಅಡುತ್ತಿದ್ದ ಆರೋಫಿತರಾದ 1] ಕರಿಯಪ್ಪ ಬಿನ್ ದೊಡ್ಡಯ್ಯ, 2] ಶೇಖರ್ ಬಿನ್ ಲೇಟ್ ತಿಮ್ಮಣ್ಣ 3] ನವೀನ್ ಕುಮಾರ್ ಬಿನ್ ಕೃಷ್ಣಪ್ಪ  ರವರನ್ನು ವಶಕ್ಕೆ ಪಡೆದು ಅರೋಫಿತರು ಇಸ್ಫೀಟ್ ಜೂಜಾಡಲು ಬಳಸಿದ 5100/- ರೂ ನಗದು ಹಣ , 52 ಇಸ್ಫಿಟ್ ಎಲೆಗಳು, 3 ಬೈಕ್ ಗಳು, 3 ಮೊಬೈಲ್ ಗಳನ್ನು ಅಮಾನತ್ತುಪಡಿಸಿಕೊಂಡು ಬಂದು ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಸಿ.ಇ.ಎನ್. ಪಿ.ಐ. ಶ್ರೀ ಮುತ್ತುರಾಯ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

 ಮನುಷ್ಯ ಕಾಣೆ ಪ್ರಕರಣ

 ಕೊಪ್ಪ ಪೊಲೀಸ್ ಠಾಣೆ.

 ದಿನಾಂಕ 24-02-2022 ರಂದು ಪಿರ್ಯಾದಿ ಪ್ರೇಮ್ ಕುಮಾರ್ ಬಿನ್ ರವಿ ಸಣ್ಣಕೆರೆ ಹಾರಂದೂರು ವಾಸಿ ರವರು ನೀಡಿದ ದೂರಿನಲ್ಲಿ ಪಿರ್ಯಾದಿ ಅಕ್ಕ ಸಿಂಚನ ಕೊಪ್ಪದಲ್ಲಿ ಸೇಲ್ಸ್ ಕೆಲಸ ಮಾಡುತ್ತಿದ್ದು,  ದಿನಾಂಕ 24-02-2022 ರಂದು ಬೆಳಿಗ್ಗೆ ಮನೆಯಿಂದ ಹೋದವಳು ವಾಪಾಸ್ಸು ಮನೆಗೆ ಬಾರದೇ ಇದ್ದು ಎಲ್ಲಾ ಕಡೆ ಹುಡುಕಾಡಿದರೂ ಸಹ ಪತ್ತೆಯಾಗಿರುವುದಿಲ್ಲ. ಸಿಂಚನ 21 ವರ್ಷ, 5.2 ಅಡಿ ಎತ್ತರ, ಗೋದಿ ಮೈ ಬಣ್ಣ, ಬಿಳಿ ಮತ್ತು ಕಪ್ಪು ಬಣ್ಣದ ಚೂಡಿದಾರ ಟಾಪ್, ಬಿಳಿ ಪ್ಯಾಂಟ್ ಧರಿಸಿರುತ್ತಾಳೆ. ಕನ್ನಡ , ತುಳು ಭಾಷೆ ಮಾತನಾಡುತ್ತಾಳೆ.  ಕಾಣೆಯಾಗಿರುವ ತನ್ನ ಅಕ್ಕನನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಕೊಪ್ಪ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ನಿರ್ಲಕ್ಷತನದಿಂದ ಸಾವು ಪ್ರಕರಣ

ಬಣಕಲ್ ಪೊಲೀಸ್ ಠಾಣೆ

 ದಿನಾಂಕ 24-02-2022 ರಂದು ಬಣಕಲ್ ಠಾಣಾ ಸರಹದ್ದಿನ ದಾಸರಹಳ್ಳಿ ವಾಸಿ ಶ್ರೀಮತಿ ಮಿನಾಕ್ಷಿ ಕೊಂ ರವಿ ಇವರು ನೀಡಿದ ದೂರಿನಲ್ಲಿ ದಿನಾಂಕ 24-02-2022 ರಂದು ಪಿರ್ಯಾದಿ ಮಗ ಪ್ರಕಾಶ್ ಈತನು ಮಿಥ್ರನ್ ರವರು ವಿಲೇಜ್ ದಿವ್ಯ ಪ್ರಸಾದ್ ರವರ ತೋಟಕ್ಕೆ ಕೆಲಸಕ್ಕೆ ಹೋಗಿದ್ದು ತೋಟದಲ್ಲಿ ಮರ ಕಡಿಯುವ ಸಮಯದಲ್ಲಿ ಟಿಂಬರ್ ವ್ಯಾಪಾರ ಮಾಡುವ ಮಿಥ್ರನ್ ಹಾಗೂ ಮರ ಕತ್ತರಿಸುತ್ತಿದ್ದ ಕೌಶಿಕ್ ರವರು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಕೆಲಸ ಮಾಡುವಾಗ ಪ್ರಕಾಶ್ ನ ಮೇಲೆ ಸಿಲ್ವರ್ ಮರ ಮುರಿದು ಪ್ರಕಾಶ್ ನ ತಲೆಯ ಮೇಲೆ ಬಿದ್ದು ತಲೆಗೆ ಪೆಟ್ಟಾಗಿ  ರಕ್ತ ಬಂದಿದ್ದು, ಚಿಕಿತ್ಸೆಗೆ ಅಸ್ಪತ್ರೆಗೆ ಸೇರಿಸಿ ಹೆಚ್ಚಿನ ಚಿಕಿತ್ಸೆಗೆ  ಕರೆದುಕೊಂಡು ಹೋಗುವಾಗ ಮಾರ್ಗ ಮದ್ಯದಲ್ಲಿ ಮೃತಪಟ್ಟಿದ್ದು , ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಕೆಲಸ ಮಾಡಿಸಿದ ಮಿಥ್ರನ್ ಹಾಗೂ ಕೌಶಿಕ್ ರವರ ವಿರುದ್ದ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 25-02-2022 08:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080