ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ.

ಸಖರಾಯಪಟ್ಟಣ ಪೊಲೀಸ್ ಠಾಣೆ.

ದಿನಾಂಕ:25-03-2022 ರಂದು ಬೆಳಿಗ್ಗೆ 10-20 ಗಂಟೆ ಸಮಯದಲ್ಲಿ ನಾಗೇನಹಳ್ಳಿ ಗ್ರಾಮದ ಆಂಜನೇಯ ಪ್ರೌಢಶಾಲೆಯ ಮುಂಭಾಗದಲ್ಲಿರುವ ಹಳೆ ಪಿಳ್ಳೇನಹಳ್ಳಿ ರಸ್ತೆಯ ಪಕ್ಕದಲ್ಲಿ ಅಕ್ರಮವಾಗಿ ಯಾವುದೇ ಪರವಾನಗಿಯನ್ನು ಹೊಂದದೆ ಮದ್ಯ ಮಾರಾಟ ಮಾಡುತ್ತಿದ್ದ ಕೃಷ್ಣಶೆಟ್ಟಿ ಬಿನ್ ಕೆಂಚಶೆಟ್ಟಿರವರು ವಶಕ್ಕೆ ಪಡೆದು ಆತನ ಬಳಿಯಿದ್ದ 90 ಎಂ.ಎಲ್ ನ 52 ರಾಜಾವಿಸ್ಕಿಯ ಪೌಚ್  ಗಳನ್ನು ವಶಕ್ಕೆ ಪಡೆದಿದ್ದು ಮದ್ಯದ ಅಂದಾಜು ಬೆಲೆ 1,820/ರೂ ಆಗಿರುತ್ತೆ. ಅಮಾನತ್ತುಪಡಿಸಿಕೊಂಡ ಮದ್ಯ ಹಾಗೂ   ಆರೋಪಿಯ ವಿರುದ್ದ ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ಹರೀಶ್ ಹಾಗೂ ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

 

ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣ.

ಶೃಂಗೇರಿ  ಪೊಲೀಸ್ ಠಾಣೆ.

ದಿನಾಂಕ: 25-03-2022 ರಂದು ಭಾಸ್ಕರ್ ಬಿನ್ ಲೇಟ್ ಅಣ್ಣಿ  ನೀಡಿದ ದೂರಿನಲ್ಲಿ ದಿನಾಂಕ:24-03-2022 ರಂದು ರಾತ್ರಿ 10-00  ಗಂಟೆ ಸಮಯದಲ್ಲಿ ಪಿರ್ಯದುದಾರರು ಹಾಗೂ ಅವರ ಮೂರನೇ ಮಗನಾದ ರವೀಂದ್ರ ರವರು ಕೆಎ-18 ಬಿ- 6817 ಆಟೋದಲ್ಲಿ ಕೆರೆದಂಡೆ ಕಡೆಗೆ  ಹೋಗುವಾಗ ಮಾನಗಾರು ರಸ್ತೆಯಿಂದಕೆಎ- 18 ಡಬ್ಲ್ಯೂ- 7024 ಬೈಕ್ ಬಂದಿದ್ದು ಆ ಬೈಕ್ ನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಆಟೋವನ್ನು ಬಲಭಾಗದ ಚರಂಡಿಗೆ ಇಳಿಸಿದಾಗ ಪಿರ್ಯಾದುದಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು , ಅವರ ಮಗನಾದ ರವೀಂದ್ರರವರಿಗೆ ಗಂಟಲು ಹಾಗೂ ಎದೆಭಾಗಕ್ಕೆ ಪೆಟ್ಟಾಗಿದ್ದು  ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಅಪಘಾತಗೊಳಿಸಿದ ಕೆಎ-18 ಬಿ- 6817  ಆಟೋ ಚಾಲಕನ  ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಶೃಂಗೇರಿ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

 

ಅಕ್ರಮ ಗೋ ಮಾಂಸ ಮಾರಾಟ ಪ್ರಕರಣ

ನಗರ  ಪೊಲೀಸ್ ಠಾಣೆ .

ದಿನಾಂಕ: 25/03/2022 ಬೆಳಿಗ್ಗೆ 09-00 ಗಂಟೆ ಸಮಯದಲ್ಲಿ ಚಿಕ್ಕಮಗಳೂರು ನಗರದ ತಮಿಳುಕಾಲೋನಿಯ ಮಸೀದಿಯ ಪಕ್ಕದಲ್ಲಿರುವ ಕೇಂಬ್ರಿಡ್ಜ್ ಶಾಲೆಯ ಹಿಂಭಾಗದಲ್ಲಿರುವ ಶೆಡ್ನಲ್ಲಿ ಹಾಗೂ ಸಂತೆಮೈದಾನದ ತಮಿಳು ಕಾಲೋನಿಯ ಕನ್ನಡ ಶಾಲೆಯ ಹಿಂಭಾಗದ ರಸ್ತೆಯಲ್ಲಿರುವ ಅನ್ಸಾರ್ ಎಂಬುವವರ ಮನೆಯಲ್ಲಿ ಅಕ್ರಮವಾಗಿ  ದನವನ್ನು ಕಡಿದು ಮಾರಾಟ ಮಾಡುತ್ತಿರುವ ಬಗ್ಗೆ ದಾಳಿ ನಡೆಸಿದ್ದು ,ಆರೋಪಿಯು ಓಡಿಹೋಗಿದ್ದು, ಯಾವುದೇ ಪರವಾನಗಿಯನ್ನು ಹೊಂದದೆ ಅಕ್ರಮವಾಗಿ ಜಾನುವಾರುಗಳನ್ನು ಕಡಿದು ಮಾರಾಟ ಮಾಡುತ್ತಿದ್ದರಿಂದ ಆರೋಪಿಯ ವಶದಲ್ಲಿದ್ದ ಸುಮಾರು 35 ಕೆಜಿಯಷ್ಟು ದನದ ಮಾಂಸ , ಒಂದು ತೂಕ ಮಾಡುವ ತಕ್ಕಡಿ, 1/2, 1 ಹಾಗೂ 2 ಕೆ.ಜಿ.ತೂಕದ ಬಟ್ಟುಗಳು, ಒಂದು ಕತ್ತಿ, ಒಂದು ಮುಸ್ಕುಲ್ಲಾ (ಚರ್ಮವನ್ನು ಸುಲಿಯುವ ಸಾಧನ) ಇವುಗಳನ್ನು  ವಶಕ್ಕೆ ಪಡೆದು  ಆರೋಪಿಯ ವಿರುದ್ದ ನಗರ ಪೊಲೀಸ್ ಠಾಣೆಯಲ್ಲಿ  ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಎಸ್.ಐ. ನಾಗೇಂದ್ರನಾಯ್ಕ್  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

 

ಕರ್ನಾಟಕ ಜಾನುವಾರು ಕಳ್ಳತನ ಹಾಗೂ ಹತ್ಯಾ ಪ್ರತಿಬಂಧಕ ಸಂರಕ್ಷಣಾ ಆದ್ಯಾದೇಶ-2020

ತರೀಕೆರೆ  ಪೊಲೀಸ್ ಠಾಣೆ .

ದಿನಾಂಕ 25-03-2022 ರಂದು ಪಿರ್ಯಾದುದಾರರಾದ ಮಂಜುನಾಥ ರವರು ನೀಡಿದ ದೂರಿನ ಸಾರಾಂಶವೇನೆಂದರೆ , ಪಿರ್ಯಾದುದಾರರು ಜಿಜಿಎಫ್ ನಲ್ಲಿ ಎನ್ಜಿಓ ಆಗಿ ಕಾರ್ಯ ನಿರ್ವಹಿಸುತ್ತಿದ್ದು ದಿನಾಂಕ 25-03-2022 ರಂದು ಸ್ಥಳೀಯರಿಂದ ಬಂದ ಮಾಹಿತಿ ಮೇರೆಗೆ ಬೆಳಗ್ಗೆ 07-00 ಗಂಟೆ ಸಮಯದಲ್ಲಿ ತರೀಕೆರೆ ನಗರದ ಕೋಡಿಕ್ಯಾಂಪ್ (ಚಿಕ್ಕಕೆರೆ) ಮತು ಖಬರಸ್ಥಾನ್  ರಸ್ತೆಯ ಬೀದಿಗಳಲ್ಲಿ ಯಾವುದೇ ಪರವಾನಗಿಯನ್ನು ಪಡೆಯದೆ ಗೋಮಾಂಸದ ಮಳಿಗೆಗಳಲ್ಲಿ 10 ಕ್ಕಿಂತ ಹೆಚ್ಚು ಜಾನುವಾರುಗಳನ್ನು ಕಡಿದು ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಮಳಿಗೆಗಳಲ್ಲಿ ಕೂಡಿಹಾಕಿಕೊಂಡಿದ್ದು , ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ , ಕಸಾಯಿಖಾನೆ ಮಳಿಗೆಗಳಲ್ಲಿದ್ದ ದನಕರುಗಳು ಹಾಗೂ ದನಕರುಗಳ ಚರ್ಮಮಾಂಸವನ್ನು ಅಮಾನತ್ತುಪಡಿಸಿಕೊಂಡು ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ  ಕೈಗೊಂಡಿರುತ್ತಾರೆ.

 

ಕಳ್ಳತನ ಪ್ರಕರಣ.

ಬಾಳೆಹೊನ್ನೂರು ಪೊಲೀಸ್ ಠಾಣೆ,

ದಿನಾಂಕ 25-03-2022 ರಂದು ಪಿರ್ಯಾದುದಾರರಾದ  ರವರು ನೀಡಿದ ದೂರೇನೆಂದರೆ ದಿನಾಂಕ 24-03-2022 ರಂದು ನಾನು ನನ್ನ ಹೆಂಡತಿ ನಪೀಶಾ ಮಿಶ್ರಿಯಾ ,ಅಕ್ಕ, ತಾಯಿ ಹಾಗೂ ಮಗಳು ಊಟ ಮಾಡಿ ಮನೆಯ ಬಾಗಿಲುಗಳನ್ನು ಲಾಕ್  ಮಾಡಿಕೊಂಡು , ರಂಜಾನ್  ಹಬ್ಬದ ಪ್ರಯುಕ್ತ ನಮ್ಮ ಮನೆಯನ್ನು ನಾನು ಮಲಗುತ್ತಿದ್ದ ರೂಂ ನ್ನು ಕ್ಲೀನ್ ಮಾಡುತ್ತಿದ್ದರಿಂದ ಬೇರೆ ರೂಂನಲ್ಲಿ ಮಲಗಿಕೊಂಡಿದ್ದು , ದಿನಾಂಕ 25-03-2022 ರಂದು ರಾತ್ರಿ ಸುಮಾರು 02-15 ಗಂಟೆ ಸಮಯದಲ್ಲಿ ನನ್ನ ಅಕ್ಕ ಎದ್ದು ಬಂದು ನನ್ನನ್ನು ಎಬ್ಬಿಸಿ ಏಕೆ ನೀನು ಮಲಗುತ್ತಿದ್ದ ರೂಂ ಹಾಗೂ ಮನೆಯ ಮುಂಬಾಗಿಲನ್ನು ಲಾಕ್  ಮಾಡದೆ ಮಲಗಿದ್ದೀಯಾ ಎಂದು ಕೇಳಿದ್ದು , ನಾನು ರೂಂ ಒಳಗೆ ಹೋಗಿ ನೋಡಲಾಗಿ ವಾಲ್ ರೂಫ್ ನಲ್ಲಿ ಇಟ್ಟಿದ್ದ 1,50,00/- ರೂ ನಗದು ಹಣ 45 ಗ್ರಾಂ 250 ಮಿಲಿ ಬಂಗಾರದ ವಡವೆಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು , ಕಳ್ಳರನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ  ಕೈಗೊಂಡಿರುತ್ತಾರೆ.

 

ಅಕ್ರಮ ಮಟ್ಕಾ ಜೂಜಾಟ  ಪ್ರಕರಣ.

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ:24-03-2022 ರಂದು 13-00 ಗಂಟೆ ಸಮಯದಲ್ಲಿ ತರೀಕೆರೆ ಟೌನ್ನ ಚಿಕ್ಕೆರೆ ಪಕ್ಕದಲ್ಲಿರುವ ಈಶ್ವರ ದೇವಾಲಯದ ಮುಂಭಾಗದ ರಸ್ತೆಯಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಮಟ್ಕಾ ಜೂಜಾಟವಾಡಿಸುತ್ತಿದ್ದ ಟಿ.ಕೃಷ್ಣಬಿನ್ ಲೇಟ್ ತಿಮ್ಮಾಬೋವಿ, ಬೋವಿಕಾಳೋನಿ , ಕೋಡಿಕ್ಯಾಂಪ್ ವಾಸಿ ಈತನನ್ನು  ವಶಕ್ಕೆ ಪಡೆದು  ಆತನ  ವಶದಲ್ಲಿದ್ದ 1) ಮಟ್ಕಾ ನಂಬರ್ಗಳನ್ನು ಬರೆದಿರುವ ಒಂದು ಹಾಳೆ 2) ಒಂದು ಪೆನ್ 3) 2100 ರೂ ನಗದು ಹಣವನ್ನು ಅಮಾನತ್ತುಪಡಿಸಿಕೊಂಡು  ಆರೋಪಿಗಳ ವಿರುದ್ದ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ಕೃಷ್ಣಾನಾಯ್ಕ ಹಾಗೂ ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

 

 

 

 

ಇತ್ತೀಚಿನ ನವೀಕರಣ​ : 25-03-2022 06:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080