ಅಭಿಪ್ರಾಯ / ಸಲಹೆಗಳು

ಕೊವಿಡ್ 19 ನಿಯಮ ಉಲ್ಲಂಘನೆ  ಪ್ರಕರಣ.

ಬಸವನಹಳ್ಳಿ   ಪೊಲೀಸ್  ಠಾಣೆ

ದಿನಾಂಕ: 25/05/2021 ರಂದು ಬಸವನಹಳ್ಳಿ ಠಾಣಾ ವ್ಯಾಪ್ತಿ ವಿಜಯಪುರ ಜೆ.ವಿ.ಎಸ್. ಶಾಲೆಯ ಎದುರು ಟ್ರಾನ್ಸ್ ಪಾರಮ್ -18 ಜಿಮ್ ನಲ್ಲಿ ತುಂಬಾ ಹುಡುಗರು ಜಿಮ್ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಪರಿಶೀಲಿಸಲಾಗಿ ಸುಮಾರು 5 ಜನ ಜಿಮ್ ಮಾಡುತ್ತಿದ್ದು,  ಸರ್ಕಾರದ ಆದೇಶ ಮತ್ತು ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ಕೊವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ಕೆಲವು ನಿರ್ಭಂದನೆಗಳ ಆದೇಶದ ಕೊವಿಡ್ ನಿಯಾಮಾವಳಿಗಳನ್ನು ಉಲ್ಲಂಘಿಸಿದ, ಜಿಮ್ ಮಾಲೀಕರಾದ ಪ್ರೀತಮ್, ಜಿಮ್ ಕ್ಲಿನರ್ ವಿಲ್ಸನ್ ಹಾಗೂ ಜಿಮ್ ಮಾಡುತ್ತಿದ್ದ  1. ವಿವೇಕ್ ಪಿ. 2. ಮನೋಜ್ ಎ  3. ಗಣೇಶ್ ಆಚಾರ್ಯ ರವರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮರಳು ಕಳ್ಳತನ  ಪ್ರಕರಣ

ಜಯಪುರ   ಪೊಲೀಸ್  ಠಾಣೆ

ದಿನಾಂಕ: 25/05/2021 ರಂದು ಜಯಪುರ ಠಾಣಾ ಸರಹದ್ದಿನ ದಯಂಬಳ್ಳಿ ಗ್ರಾಮದ ಕೆಳಕೊಪ್ಪ ಹಳ್ಳದಲ್ಲಿ ಯಾರೋ ಇಬ್ಬರು ಅಸಾಮಿಗಳು ಒಂದು ಟ್ರ್ಯಾಕ್ಟರ್ ನಲ್ಲಿ ಮರಳು ತುಂಬಿಸುತ್ತಿರುವುದಾಗಿ, ಸದರಿ ಮರಳನ್ನು ಕೂಳೂರು ಮಾರ್ಗವಾಗಿ ತೆಗೆದುಕೊಂಡು ಹೋಗುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಕೂಳೂರು ಗ್ರಾಮದ ಮುಂಡೊಳಲು ಸಮೀಪ ಹೋಗುತ್ತಿರುವಾಗ ಆರೋಪಿತರು ಕೆಎ-13-2903 ಮತ್ತು ಟ್ರಾಲಿ ನಂ ಕೆಎ-18-ಎಂ-1295 ನ ಟ್ರ್ಯಾಕ್ಟರ್ ನಲ್ಲಿ ಯಾವುದೇ ಪರವಾನಗಿ ಇಲ್ಲದೆ ಸುಮಾರು 4000/- ರೂ ಬೆಲೆಬಾಳುವ ಮರಳನ್ನು ಕೆಳಕೊಪ್ಪ ಹಳ್ಳದಿಂದ ಕಳ್ಳತನ ಮಾಡಿ ತುಂಬಿಕೊಂಡು ಸಾಗಾಟ ಮಾಡಲು ಹೊಗುತ್ತಿದ್ದ ಅರೋಪಿತರ ವಿರುದ್ದ ಪ್ರಕರಣ  ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.  ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ಕೆ.ಎಸ್. ಸತೀಶ್ ಮತ್ತು  ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ಲಕ್ಕವಳ್ಳಿ  ಪೊಲೀಸ್  ಠಾಣೆ.

ದಿನಾಂಕ: 25/05/2021 ರಂದು ಲಕ್ಕವಳ್ಳಿ  ಠಾಣಾ ಸರಹದ್ದಿನ ಲಕ್ಕವಳ್ಳಿ ಮುಖ್ಯ ಬಸ್ ನಿಲ್ದಾಣದ ಪಕ್ಕದ ಮಾರುಕಟ್ಟೆಗೆ ಹೋಗುವ ಕಚ್ಚಾ ರಸ್ತೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು,  ಬಂದ ಖಚಿತ ಮಾಹಿತಿ ಮೇರೆಗೆ, ದಾಳಿ ಮಾಡಿದ್ದು ಆರೋಪಿ ಶಶಿ ಬಿನ್ ಮಾಗುಂಡ ನನ್ನು  ವಶಕ್ಕೆ ಪಡೆದು ಆತನು ಹೊಂದಿದ್ದ  90 ಎಂ.ಎಲ್ ನ CAPTAIN MARTINS SPECIAL WHISKY ಯ 48   ಪೌಚ್ ಗಳು ಬೆಲೆ 1686/-ರೂ ನ ಮದ್ಯ ವಶಪಡಿಸಿಕೊಂಡು ಕೋರನಾ ಸಾಂಕ್ರಾಮಿಕ ರೋಗ ಹೆಚ್ಚು ಹೆಚ್ಚಾಗಿ ಹರಡುತ್ತಿರುವ ಬಗ್ಗೆ ತಿಳಿದಿದ್ದರೂ ಸಹ ಕೋವಿಡ್ -19  ಲಾಕ್ ಡೌನ್ ಆದೇಶವನ್ನು ಉಲ್ಲಂಘನೆ ಮಾಡಿದ್ದು ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ  ಪಿ.ಎಸ್ಐ. ಮೇಘ ಟಿ.ಎನ್.  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 25-05-2021 06:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080