ಅಭಿಪ್ರಾಯ / ಸಲಹೆಗಳು

ಅಕ್ರಮ  ಮದ್ಯ ಮಾರಾಟ ಪ್ರಕರಣ

ಕಡೂರು ಪೊಲೀಸ್ ಠಾಣೆ.

ದಿನಾಂಕ 25.05.2022 ರಂದು ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯ ಗೆದ್ಲೇಹಳ್ಳಿ ಬೋವಿ ಕಾಲೋನಿಯಲ್ಲಿ ಆರತಿ ಎಂಬುವವರು ಚಿಲ್ಲರೆ ಅಂಗಡಿ ಹಿಂಭಾಗದ ಖಾಲಿ ಜಾಗದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರತಿ ಕೋಂ ದಯಾನಂದ, ಗೆದ್ಲೇಹಳ್ಳೀ ಗ್ರಾಮ ಈಕೆಯನ್ನು ವಶಕ್ಕೆ ಪಡೆದು  ಆರೋಪಿತಳು ಅಕ್ರಮವಾಗಿ ಹೊಂದಿದ್ದ  ಮದ್ಯವನ್ನು  ಆಮಾನತ್ತುಪಡಿಸಿಕೊಂಡು ಬಂದು ಆರೋಪಿತಳ ವಿರುದ್ದ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ .ರಮ್ಯ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣ.

ಬೀರೂರು ಪೊಲೀಸ್ ಠಾಣೆ.

ದಿನಾಂಕ 25-05-2022 ರಂದು ಹೇಮಂತ್ ಕುಮಾರ್ ಬಿನ್ ಯಶವಂತಕುಮಾರ್, ಹಿರೇನಲ್ಲೂರು ವಾಸಿರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 23-05-2022 ರಂದು ಪಿರ್ಯಾದುದಾರರ ಅತ್ತೆಯ ಮಗನಾದ ಹರೀಶ್ ರವರು ಸ್ವಂತ ಕೆಲಸದ ನಿಮಿತ್ತ ಕೆಎ- 66 ಜೆ- 1140 ಬೀರೂರಿಗೆ ಬಂದಿದ್ದು ,ವಾಪಾಸ್ ಅಜ್ಜಂಪುರ ರಸ್ತೆಯ ಯಗಟಿ ಕ್ರಾಸ್ ಬಳಿ ಹೋಗುತ್ತಿರುವಾಗ ಎದುರುಗಡೆಯಿಂದ ಬಂದ ಕೆಎ-16 ಇಸಿ- 7161 ಬೈಕಿನ ಚಾಲಕ ವೆಂಕಟೇಶ, ಗರೀಂಬೀಳು, ಹೊಸದುರ್ಗವಾಸಿ ಈತನು ಬೈಕನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಹರೀಶ್ ರವರ ಬೈಕಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಹರೀಶರವರ ತಲೆಯ ಹಿಂಭಾಗಕ್ಕೆ, ಬಲಮೊಣಕಾಲಿಗೆ ಪೆಟ್ಟಾಗಿದ್ದು ಆರೋಪಿ ವೆಂಕಟೇಶ್ರವರಿಗೂ ತಲೆಗೆ ಪೆಟ್ಟಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ಚಾಲಕ ವೆಂಕಟೇಶರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ  ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಜೂಜಾಟ ಪ್ರಕರಣ.

ಬೀರೂರು  ಪೊಲೀಸ್ ಠಾಣೆ.

ದಿನಾಂಕ 24.05.2022ರಂದು ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೀರೂರು ಪಟ್ಟಣದ ವೀರಭದ್ರೇಶ್ವರ ನಗರಕ್ಕೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ 1) ಅನಿಲ್ 2) ಅರುಣ್ ಕುಮಾರ್ 3) ವಸಂತ4) ಗುರುಮೂರ್ತಿ 5) ಗಿರೀಶ 6) ರಾಜಪ್ಪ ರವರುಗಳನ್ನು ವಶಕ್ಕೆ ಪಡೆದು ,ಆರೋಪಿತರ ವಶದಲ್ಲಿದ್ದ 15,700/- ನಗದು ಹಣ, 52 ಇಸ್ಪೀಟ್ ಎಲೆಗಳು, ಒಂದು ಎಮರ್ಜೆನ್ಸಿ ಲೈಟ್ , ಒಂದು ಮಾಸಲು ಹಸಿರು ಬಣ್ಣದ ಹೂವುಗಳೀರುವ ಬೆಡ್ ಶೀಟ್ ಇವುಗಳನ್ನು  ವಶಕ್ಕೆ ಪಡೆದು ಆರೋಪಿತರ ವಿರುದ್ದ ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿರುತ್ತಾರೆ.ಈ ಕಾರ್ಯಚರಣೆಯಲ್ಲಿ ಬೀರೂರು ಠಾಣಾ ಪಿ.ಎಸ್.ಐ.ವಿಶ್ವನಾಥ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ.

ಮಹಿಳಾ ಪೊಲೀಸ್ ಠಾಣೆ.

ದಿನಾಂಕ 24-05-2022 ರಂದು ರಾಘವೇಂದ್ರ , ಉಂಡೇದಾಸರಹಳ್ಳಿ ವಾಸಿರವರು ನೀಡಿದ ದೂರಿನ ಸಾರಾಂಶವೇನೆಂದರೆ , ಪಿರ್ಯಾದುದಾರರು ಈಗ್ಗೆ 13 ವರ್ಷಗಳ ಹಿಂದೆ ತಂಪಿತಾರವರನ್ನು ಪ್ರೀತಿಸಿ ಮದುವೆಯಾಗಿದ್ದು , ಮದುವೆಯಾದಾಗಿನಿಂದಲೂ ನನಗೂ ನನ್ನ ಹೆಂಡತಿಗೂ ಸಂಸಾರದ ವಿಚಾರದಲ್ಲಿ ಸಣ್ಣಪುಟ್ಟ್ ಗಲಾಟೆಯಾಗುತ್ತಿದ್ದು, ದಿನಾಂಕ 21-05-2022 ರಂದು ನನ್ನ ಹೆಮಡತಿ ತಂಪಿತಾರವರು ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಚೀಟಿ ಬರೆದಿಟ್ಟು ಹೋಗಿದ್ದು, ಸಂಬಂದಿಕರ, ಪರಿಚಯಸ್ಥರ ಮನೆಗಳಲ್ಲಿ ಹುಡುಕಾಡಲಾಗಿ ಎಲ್ಲಿಯೂ ಪ್ತತೆಯಗಿರುವುದಿಲ್ಲ.ಕಾಣೆಯಾದ ತಂಪಿತಾ ಕೋಂ ರಾಘವೇಂದ್ರ , 34 ವರ್ಷ, 4.8 ಅಡಿ ಎತ್ತರ, ದುಂಡುಮುಖ, ಗೋಧಿಮೈಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಬಾಷೆ ಮಾತನಾಡುತ್ತಾಳೆ.ಕಾಣೆಯಾಗಿರುವ ತಂಪಿತಾರವರನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿರುತ್ತಾರೆ.

 

ಇತ್ತೀಚಿನ ನವೀಕರಣ​ : 25-05-2022 06:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080