ಅಭಿಪ್ರಾಯ / ಸಲಹೆಗಳು

ಅಕ್ರಮ ಗಾಂಜಾ ಸೇವನೆ ಪ್ರಕರಣ

ಗ್ರಾಮಾಂತರ  ಪೊಲೀಸ್ ಠಾಣೆ.

ದಿನಾಂಕ:25/06/2022 ರಂದು ಮದ್ಯಾಹ್ನ1.00 ಗಂಟೆ  ಗ್ರಾಮಾಂತರ ಠಾಣಾ ಸರಹದ್ದಿನ ಇಂದಾವರದ ಬಳಿ ದರ್ಶನ್ ಸಿ.ಎನ್. ಬಿನ್ ನಟರಾಜ್ , ವಾಸ ಹೊಸಮನೆ ಬಡಾವಣೆ, ಚಿಕ್ಕಮಗಳೂರು ವಾಸಿ ಈತನು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಾದಕ ವಸ್ತುವನ್ನು ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ, ಸದರಿ ಅಸಾಮಿಯನ್ನು ವಶಕ್ಕೆ ಪಡೆದು, ಸದರಿ ಅಸಾಮಿಯು ಮಾದಕ ವಸ್ತುವನ್ನು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ಅರೋಫಿತನ ವಿರುದ್ದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣಾ ಪಿ.ಎಸ್.ಐ. ಮುದ್ದಪ್ಪ  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಬಣಕಲ್ ಪೊಲೀಸ್ ಠಾಣೆ.

ದಿನಾಂಕ:25/06/2022 ರಂದು ಬಣಕಲ್ ಠಾಣಾ ಸರಹದ್ದಿನ  ಬಗ್ಗಸಗೋಡು ಗ್ರಾಮದಲ್ಲಿ  ಸಯ್ಯದ್ ಹಾಕೀಬ್ ಬಿನ್ ಸಯ್ಯದ್ ಪ್ಯಾರೋ ವಾಸ ಜೆ.ಎಂ. ರೋಡ್ ಮೂಡಿಗೆರೆ ಈತನು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಾದಕ ವಸ್ತುವನ್ನು ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ, ಸದರಿ ಅಸಾಮಿಗಳನ್ನು ವಶಕ್ಕೆ ಪಡೆದು, ಸದರಿ ಅಸಾಮಿಗಳು ಮಾದಕ ವಸ್ತುವನ್ನು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ಅರೋಫಿತರ ವಿರುದ್ದ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಬಣಕಲ್ ಠಾಣಾ ಪಿ.ಎಸ್.ಐ. ಶ್ರೀಮತಿ ಗಾಯತ್ರಿ   ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಅನಾಮದೇಯ ವ್ಯಕ್ತಿ ಸಾವು ಪ್ರಕರಣ

ನಗರ ಪೊಲೀಸ್ ಠಾಣೆ.

ದಿನಾಂಕ:24-06-2022 ರಂದು ಪಿರ್ಯಾದಿ ಚನ್ನಕೇಶವ, ಡಿ ಗ್ರೂಪ್ ನೌಕರ ಮಲ್ಲೇಗೌಡ ಸಾರ್ವಜನಿಕ ಅಸ್ಪತ್ರೆ ಇವರು ನೀಡಿದ ದೂರಿನಲ್ಲಿ ಚಿಕ್ಕಮಗಳೂರು ಸರ್ಕಾರಿ ಅಸ್ಪತ್ರೆಯ ಹಿರಿಯ ನಾಗರೀಕರ ವಾರ್ಡ್ ಮುಂಭಾಗದಲ್ಲಿ ಹಾಕಿರುವ ಚೇರ್ ಬಳಿ ಅಶ್ರಯ ಪಡೆಯಲು ಬಂದಿದ್ದ ಯಾರೋ ಅಪರಿಚಿತ ವ್ಯಕ್ತಿ, ವಾರ್ಡ್ ಮುಂಭಾಗ ಬಂದು ಪ್ಯಾಂಟ್ ಬಿಚ್ಚಿ ಚಡ್ಡಿಯಲ್ಲಿ ಮಲಗಿದ್ದವನು, ಈ ದಿನ ಬೆಳಿಗ್ಗೆ ನೋಡಲಾಗಿ ಮೃತಪಟ್ಟಿರುವುದಾಗಿ, ಈತನ ಹೆಸರು ಗೋತ್ತಿರುವುದಿಲ್ಲವೆಂದು, ಮೃತನು ಹಸಿರು ಬಣ್ಣದ ಅಂಡರ್ ವೇರ್, ಕಾಫಿ ಮತ್ತು ಬಿಳಿ ಬಣ್ಣದ ಹೂವಿನ ಚಿತ್ರ ಇರುವ ಶರ್ಟ್ ಧರಿಸಿರುತ್ತಾನೆ. ಈ ವ್ಯಕ್ತಿಯ ಚಹರೆ ದುಂಡುಮುಖ, ಎಣ್ಣೆಗೆಂಪು ಮೈ ಬಣ್ಣ ಹೊಂದಿದ್ದು, ಈತನ ವಯಸ್ಸು ಸುಮಾರು 40 ರಿಂದ 45 ವರ್ಷಗಳಾಗಿರುಬಹುದು, ಮೃತದೇಹವನ್ನು ಶವಗಾರದಲ್ಲಿ ಇಟ್ಟಿರುವುದಾಗಿ,  ಅದುದರಿಂದ ಅಪರಿಚಿತ ವ್ಯಕ್ತಿ ವಾರಸುದಾರರನ್ನು ಪತ್ತೆ ಮಾಡುವಂತೆ ನೀಡುವಂತೆ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅನಾಮದೇಯ ಹೆಂಗಸು ಸಾವು ಪ್ರಕರಣ

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ:24-06-2022 ರಂದು ಪಿರ್ಯಾದಿ ಲೋಕೇಶ ಟಿ.ಜಿ. ಬಿನ್ ಗಣೇಶ, ತ್ಯಾಗರಾಜ ನಗರ, ತರೀಕೆರೆ ವಾಸಿ ಇವರು ನೀಡಿದ ದೂರಿನಲ್ಲಿ ಪಿರ್ಯಾಧಿಯು ದಿನಾಂಕ;24/06/2022 ರಂದು ಬೆಳಿಗ್ಗೆ 9.30 ಗಂಟೆ ಸಮಯದಲ್ಲಿ ತರೀಕೆರೆ ಪಟ್ಟಣದ ಬಯಲು ರಂಗಮಂದಿರದ ಕಟ್ಟಡದ ಒಳಗೆ ಅನಾಥ ಬಿಕ್ಷುಕಿ ಹೆಂಗಸಿನ ಶವವಿದ್ದು, ವಯಸ್ಸು ಸುಮಾರು 60 ರಿಂದ 65 ವರ್ಷಗಳಾಗಿರುಬಹುದು, ಸದರಿ ಹೆಂಗಸು ಅನಾರೋಗ್ಯದಿಂದ ಮೃತಪಟ್ಟಿರುವುದಾಗಿರುತ್ತದೆ. ಅದುದರಿಂದ ಅಪರಿಚಿತ ಮಹಿಳೆ ವಾರಸುದಾರರನ್ನು ಪತ್ತೆ ಮಾಡುವಂತೆ ನೀಡುವಂತೆ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 25-06-2022 08:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080