ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ  ಪ್ರಕರಣ

ಗೋಣಿಬೀಡು ಪೊಲೀಸ್ ಠಾಣೆ

ದಿನಾಂಕ:24/10/2021 ರಂದು ಗೋಣಿಬೀಡು ಠಾಣಾ ವ್ಯಾಪ್ತಿಯ ಹಳೆಕೆರೆ ಗ್ರಾಮದಲ್ಲಿ ಪೂರ್ಣೇಶ ಬಿನ್ ಪದ್ಮೇಗೌಡ ಎಂಬುವನು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಆರೋಪಿ ಬಳಿ ಇದ್ದ ಅಮೃತ್ಸ್ ಸಿಲ್ವರ್ ಅಪ್ ರಾರೆ ಇಂಡಿಯನ್ ಬ್ರಾಂಡಿ ಯ 90 ಎಂ.ಎಲ್.  15 ಮದ್ಯದ ಟೆಟ್ರಾ ಪ್ಯಾಕ್ ಅವುಗಳ ಬೆಲೆ 419/- ರೂ ಅಗಿದ್ದು ಸದರಿ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿ ವಿರುದ್ದ ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತೆ. ಈ ಕಾರ್ಯಚರಣೆಯಲ್ಲಿ ಪಿಎಸ್ಐ ಧನಂಜಯ ಎಂ.ಆರ್. ಹಾಗೂ ಲೋಕೇಶ್ ಹೆಚ್.ಸಿ.-143, ರಾಜು ಪಿಸಿ-415 ರವೀಂದ್ರ ಪಿಸಿ-688 ರವರು ಸಿಬ್ಬಂದಿಗಳು ಪಾಲೊಂಡಿರುತ್ತಾರೆ.

ಗ್ರಾಮಾಂತರ ಪೊಲೀಸ್ ಠಾಣೆ

ದಿನಾಂಕ:24/10/2021 ರಂದು ಗ್ರಾಮಾಂತರ ಠಾಣಾ ವ್ಯಾಪ್ತಿಯ ಅತ್ತಿಗುಂಡಿ ಗ್ರಾಮದಲ್ಲಿ ಕಲ್ಲೇಶ ಶೆಟ್ಟಿ ಬಿನ್ ಸಗನ ಶೆಟ್ಟಿ, ಎಂಬುವನು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಆರೋಪಿ ಬಳಿ ಇದ್ದ 489 ಮದ್ಯದ ಟೆಟ್ರಾ ಪ್ಯಾಕ್ ಅವುಗಳ ಬೆಲೆ 22,297/- ರೂ ಅಗಿದ್ದು ಸದರಿ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತೆ. ಈ ಕಾರ್ಯಚರಣೆಯಲ್ಲಿ ಪಿ.ಐ ಸ್ವರ್ಣ ಹಾಗೂ ಸಿಬ್ಬಂದಿಗಳು ಪಾಲೊಂಡಿರುತ್ತಾರೆ.

ಕಳ್ಳತನ ಪ್ರಕರಣ

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ 25/10/2021 ರಂದು ಪಿರ್ಯಾದಿ ಅಜ್ಜಂಪುರ ತಾಲ್ಲೋಕು ಚೀರನಹಳ್ಳಿ ವಾಸಿ ಮಧು ಸಿ.ಬಿ. ರವರು ನೀಡಿದ ದೂರಿನಲ್ಲಿ ತಮ್ಮ ಮುಂದೆ ದಿನಾಂಕ 18/10/2021 ರಂದು 4 ಟಾರ್ಪಲ್ ಅಡಿಕೆಯನ್ನು ಒಣಗಲು ಹಾಕಿ ದಿನಾಂಕ;19/10/2021 ರಂದು ಬೆಳಿಗ್ಗೆ ನೋಡಲಾಗಿ ಒಣಗಲು ಹಾಕಿದ್ದ ಅಡಿಕೆಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳುವಾಗಿರುವ ಅಡಿಕೆ ಬೆಲೆ ಅಂದಾಜು 1,40,000/- ರೂ ಅಗಬಹುದು. ಕಳ್ಳರನ್ನು ಪತ್ತೆ ಮಾಡಿ, ಕಳ್ಳತನವಾಗಿರುವ ಅಡಿಕೆಯನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಅಜ್ಜಂಫುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರ

ಇತ್ತೀಚಿನ ನವೀಕರಣ​ : 25-10-2021 06:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080