ಅಭಿಪ್ರಾಯ / ಸಲಹೆಗಳು

ಅಕ್ರಮ ಇಸ್ಪೀಟ್ ಜೂಜಾಟ ಪ್ರಕರಣ

ಯಗಟಿ  ಪೊಲೀಸ್ ಠಾಣೆ.

ದಿನಾಂಕ:25-11-2021 ರಂದು ಮದ್ಯಾಹ್ನ ಯಗಟಿ ಠಾಣಾ ಸರಹದ್ದಿನ  ಯಗಟಿ ಯಿಂದ ಪುರಕ್ಕೆ ಹೋಗುವ ರಸ್ತೆಯಲ್ಲಿ ಕೆಪಿಟಿಸಿಎಲ್ ಹಿಂಭಾಗದ ಪೇಪರ್ ಶಂಕರ್ ರವರ ಜಮೀನಿನಲ್ಲಿ  ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ ಆರೋಪಿತರಾದ 1. ಜಯಣ್ಣ ಬಿನ್ ಚಂದ್ರಶೇಖರ 2. ಮಲ್ಲೇಶ ಬಿನ್ ರುದ್ರಪ್ಪ 3. ಬಸವರಾಜು ಬಿನ್ ಮಂಜಪ್ಪ, 4. ಪಿ.ಟಿ. ಮಂಜಪ್ಪ ಬಿನ್ ತಿಮ್ಮಕೊಂಡ ಬೋವಿ 5. ಮಲ್ಲಕಾರ್ಜುಜನ ಬಿನ್ ನೀಲಕಂಠಪ್ಪ, ರವರನ್ನು ವಶಕ್ಕೆ ಪಡೆದು ಆರೋಪಿತರಾದ 1. ಕೇಶವ @ ಕೆಂಚ್ ಬಿನ್ ಪರಮೇಶ್ವರಪ್ಪ  2. ಮಂಜುನಾಥ ಬಿನ್ ಕೆಂಚಪ್ಪ  3. ದೇವರಾಜ  ಬಿನ್ ಚಂದ್ರಪ್ಪ ರವರು ಓಡಿ ಹೋಗಿದ್ದು ಆರೋಪಿತರು  ಇಸ್ಪೀಟ್ ಜೂಜಾಡಲು ಬಳಸಿದ್ದ 1490/-ರೂ ನಗದು ಹಣ,  52 ಇಸ್ಪೀಟ್ ಎಲೆಗಳು ಹಾಗೂ ಒಂದು ಬಿಳಿ ಪ್ಲಾಸ್ಟಿಕ್ ಚೀಲವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತರ ವಿರುದ್ದ ಯಗಟಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಯಗಟಿ ಠಾಣಾ ಪಿ.ಎಸ್.ಐ. ಶ್ರೀ ಶಶಿಕುಮಾರ್ ವೈ. ಎಸ್. ಹಾಗೂ ಸಿಬ್ಬಂದಿಯವರಾದ ನಾಗರಾಜ್ , ದೇವರಾಜ್ ,  ಸಚಿನ್  ರವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ.

ಮಲ್ಲಂದೂರು  ಪೊಲೀಸ್ ಠಾಣೆ.

ದಿನಾಂಕ:25-11-2021 ರಂದು ಮಲ್ಲಂಧೂರು ಠಾಣಾ ಸರಹದ್ದಿನ  ಚನ್ನಗೊಂಡನಹಳ್ಳಿ  ಗ್ರಾಮದ ಮರಳುಸಿದ್ದಪ್ಪ ರವರು ತಮ್ಮ ಅಂಗಡಿ ಹಿಂಭಾಗದಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಆರೋಫಿಯನ್ನು ವಶಕ್ಕೆ ಪಡೆದು ಆರೋಪಿ ಬಳಿಯಿದ್ದ 90 ಎಂ.ಎಲ್. 15 ಟೆಟ್ರಾಪ್ಯಾಕ್ ಮದ್ಯವನ್ನು ಮತ್ತು 220 ರೂ ನಗದು ಹಣವನ್ನು ವಶಕ್ಕೆ ಪಡೆದು, ಮದ್ಯದ ಅಂದಾಜು ಬೆಲೆ 526/-ರೂ ಆಗಿದ್ದು, ಆರೋಪಿ ವಿರುದ್ದ ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಮಲ್ಲಂಧೂರು ಪಿ.ಎಸ್.ಐ. ಶ್ರೀಮತಿ ನಂದಿನಿ ಶೆಟ್ಟ್ಟಿ  ಹಾಗೂ ಸಿಬ್ಬಂದಿಯಾದ ನಿಂಗರಾಜ್, ಮಧುಕುಮಾರ್,  ರವರು ಪಾಲ್ಗೊಂಡಿರುತ್ತಾರೆ.

ಮಲ್ಲಂದೂರು  ಪೊಲೀಸ್ ಠಾಣೆ.

ದಿನಾಂಕ:24-11-2021 ರಂದು ಮಲ್ಲಂಧೂರು ಠಾಣಾ ಸರಹದ್ದಿನ  ಜಕ್ಕನಹಳ್ಳಿ ಸಂಪಿಗೆಕಟ್ಟೆ  ಸರ್ಕಲ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಚೆನ್ನಗೊಂಡನಹಳ್ಳಿ ಗ್ರಾಮದ ಪುನಿತ್ ಕುಮಾರ್ ಬಿನ್ ಮಲ್ಲಯ್ಯ  ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಆರೋಫಿಯನ್ನು ವಶಕ್ಕೆ ಪಡೆದು ಆರೋಪಿ ಬಳಿಯಿದ್ದ 90 ಎಂ.ಎಲ್. 15 ಟೆಟ್ರಾಪ್ಯಾಕ್ ಮದ್ಯವನ್ನು ಮತ್ತು 110 ರೂ ನಗದು ಹಣವನ್ನು ವಶಕ್ಕೆ ಪಡೆದು, ಮದ್ಯದ ಅಂದಾಜು ಬೆಲೆ 526/-ರೂ ಆಗಿದ್ದು, ಆರೋಪಿ ವಿರುದ್ದ ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಮಲ್ಲಂಧೂರು ಪಿ.ಎಸ್.ಐ. ಶ್ರಿಮತಿ ನಂದಿನಿ ಶೆಟ್ಟ್ಟಿ  ಹಾಗೂ ಸಿಬ್ಬಂದಿಯಾದ ನಿಂಗರಾಜ್, ಉಮೇಶ್,  ಮಧುಕುಮಾರ್,  ರವರು ಪಾಲ್ಗೊಂಡಿರುತ್ತಾರೆ.

ಅಲ್ದೂರು  ಪೊಲೀಸ್ ಠಾಣೆ.

ದಿನಾಂಕ:24-11-2021 ರಂದು ಅಲ್ದೂರು ಠಾಣಾ ಸರಹದ್ದಿನ  ಬನ್ನೂರು ಕ್ರಾಸ್  ಬಳಿ ಪ್ರಮೋದ್ ಸಿ.ಎಂ. ಬಿನ್ ಮಂಜಪ್ಪ ಗೌಡ ಜೇನುಗದ್ದೆ ವಾಸಿ ಈತನು  ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡಲು ಕೆಎ-18-ಸಿ-1741 ರ ಬುಲೇರೋ ಪಿಕ ಅಪ್ ಗೂಡ್ಸ್ ವಾಹನದಲ್ಲಿ ಮದ್ಯ ಸಾಗಾಣಿಕೆ ಮಾಡುತ್ತಿದ್ದು, ಆರೋಫಿಯನ್ನು ವಶಕ್ಕೆ ಪಡೆದು ಆರೋಪಿ ಬಳಿಯಿದ್ದ 90 ಎಂ.ಎಲ್. 480 ಟೆಟ್ರಾಪ್ಯಾಕ್ ಮದ್ಯವನ್ನು ಮತ್ತು 350 ಎಂ.ಎಲ್. ನ 8 ಟಿನ್  ಮದ್ಯವನ್ನು  ವಶಕ್ಕೆ ಪಡೆದು, ಮದ್ಯದ ಅಂದಾಜು ಬೆಲೆ 17581/-ರೂ ಆಗಿದ್ದು, ಆರೋಪಿ ವಿರುದ್ದ ಅಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಅಲ್ದೂರು ವೃತ್ತ ನಿರೀಕ್ಷಕರಾದ ಶ್ರೀ ಸತ್ಯನಾರಾಯಣ ಕೆ. ಮತ್ತು ಪಿ.ಎಸ್.ಐ  ಶ್ರೀಮತಿ ಶಿವರುದ್ರಮ್ಮ ಎಸ್ ಹಾಗೂ ಸಿಬ್ಬಂದಿಯಾದ ರಂಗೇಗೌಡ , ಮಂಜುನಾಥ,  ಆನಂದ ಕೆ.ಸಿ., ಶಶಿಧರ ಜೆ.ಸಿ.  ರವರು ಪಾಲ್ಗೊಂಡಿರುತ್ತಾರೆ.

ಹಸು  ಕಳ್ಳತನ ಪ್ರಕರಣ

ಯಗಟಿ  ಪೊಲೀಸ್ ಠಾಣೆ.

ದಿನಾಂಕ:25-11-2021 ರಂದು ಯಗಟಿ ಠಾಣಾ ವ್ಯಾಪ್ತಿ  ಪುರ ವಾಸಿ ಪಿರ್ಯಾದಿ ಪ್ರಸನ್ನ ಕುಮಾರ್ ಬಿನ್ ಮಲ್ಲೇಶಪ್ಪ ರವರು ನೀಡಿದ ದೂರಿನಲ್ಲಿ  ಪಿರ್ಯಾಧಿಯವರು ಸಿಂದಿ ಹಸುಗಳನ್ನು ಸಾಕಿಕೊಂಡಿದ್ದು ದಿನಾಂಕ:19-11-2021 ರಂದು ರಾತ್ರಿ  ಹಸುಗಳನ್ನು ದನದ ಕೊಟ್ಟಿಗೆಗೆ ಕಟ್ಟಿ ಹಾಕಿ ಬೀಗ ಹಾಕಿಕೊಂಡು  ದಿನಾಂಕ:20-11-2021 ರಂದು ಬೆಳಿಗ್ಗೆ 5-30 ಗಂಟೆಗೆ ಹೋಗಿ ಕೊಟ್ಟಿಗೆಯನ್ನು ನೋಡಲಾಗಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಅಂದಾಜು ಬೆಲೆ 1,20,000/- ರೂ ನ 3 ಸಿಂಧಿ ಹಸುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ . ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಹಸುಗಳನ್ನು ಪತ್ತೆ ಮಾಡಿಕೊಡುವಂತೆ ಕೋರಿ ನೀಡಿದ ದೂರಿನ ಮೇರೆಗೆ ಯಗಟಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 25-11-2021 08:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080