ಅಭಿಪ್ರಾಯ / ಸಲಹೆಗಳು

ಅಕ್ರಮ  ಮದ್ಯ ಮಾರಾಟ ಪ್ರಕರಣ.
ಬಸವನಹಳ್ಳಿ  ಪೊಲೀಸ್ ಠಾಣೆ.
ದಿನಾಂಕ: 25-12-2021 ರಂದು 14-45  ಗಂಟೆ ಸಮಯದಲ್ಲಿ ಎಂ.ಸಿ.ಸಿ ತಂಡದ ಮುಖ್ಯಸ್ಥರಾದ ಕೃಷ್ಣಪ್ಪ ರವರು ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ 24-12-2021 ರಂದು 12-00 ಗಂಟೆ ಸಮಯದಲ್ಲಿ  ಚಿಕ್ಕಮಗಳೂರು ನಗರಸಭಾ ಚುನಾವಣಾ ಸಂಬಂಧ  ಗಸ್ತು ನಿರ್ವಹಿಸುತ್ತಿರುವಾಗ ಬಸವನಹಳ್ಳಿಯ ಅರವಿಂದ ನಗರದ ಕೆ.ಆರ್. ಪೇಟೆ  ವಠಾರದಲ್ಲಿ ಪವನ್ ಬಿನ್ ದೊರೆಸ್ವಾಮಿ ಈತನು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡಲು ಮದ್ಯವನ್ನು ಸಂಗ್ರಹಿಸಿಟ್ಟಿದ್ದು , ನಮ್ಮಗಳನ್ನು ನೋಡಿ ತಪ್ಪಿಸಿಕೊಂಡು ಓಡಿ ಹೋಗಿದ್ದು ಆತನು ಬಿಟ್ಟುಹೋಗಿದ್ದ ಮದ್ಯವನ್ನು ಪರಿಶೀಲಿಸಲಾಗಿ 2 ರಟ್ಟಿನ ಬಾಕ್ಸ್ ನಲ್ಲಿ 180 ಎಂ,ಎಲ್ ನ ನಂ .1 ಮ್ಯಾಕ್ಸ್ ಡೊವೆಲ್ಸ್ ಓರಿಜಿನಲ್ ರಿಸರ್ವ್ ವಿಸ್ಕಿಯ 96 ಕ್ವಾಟರ್ ಬಾಟಲಿಗಳು , ಒಂದು ರಟ್ಟಿನ ಬಾಕ್ಸ್ ನಲ್ಲಿ 180 ಎಂ.ಎಲ ನಬ್ಯಾಗ್ ಪೇಪರ್ ಡಿಲೆಕ್ಸ್ ವಿಸ್ಕಿಯ 48 ಟೆಟ್ರಾ ಪೌಚ್ ಗಳು, ಇನ್ನೊಂದು ರಟ್ಟಿನ ಬಾಕ್ಸ್ ನಲ್ಲಿ 180 ಎಂ.ಎಲ್ ನ ಮ್ಯಾಕ್ಸ್ ಡೊವೆಲಸ್ ನಂ1 ಸೆಲೆಬ್ರೆಷನ್ ಡಿಲೆಕ್ಸ್ ತ್ರಿಬಲ್ ಎಕ್ಸ್ ರಮ್ ನ 24 ಟೆಟ್ರಾ ಪೌಚ್ ಗಳನ್ನು ಅಮಾನತ್ತುಪಡಿಸಿಕೊಂಡಿದ್ದು, ಮದ್ಯದ ಅಂದಾಜು ಬೆಲೆ 34,764/- ರೂ ಆಗಿರುತ್ತೆ. ಆರೋಪಿತನ ವಿರುದ್ದ  ಬಸವನಹಳ್ಳಿ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ಮಾರಣಾಂತಿಕ ಅಪಘಾತ ಪ್ರಕರಣ.
ಯಗಟಿ  ಪೊಲೀಸ್ ಠಾಣೆ.
ದಿನಾಂಕ 25-12-2021 ರಂದು ಪುನೀತ್ , ಕೆಳಗೋಟೆ , ಚಿತ್ರದುರ್ಗ ವಾಸಿರವರು  ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ 24-12-2021 ರಂದು ಸಾಗರ ಪಟ್ಟಣದಿಂದ ಅಡಿಕೆಯನ್ನು  ಲೋಡ್ ಮಾಡಿಕೊಂಡು ಪಿಬಿ - 13 ಬಿಡಿ- 7492 ಲಾರಿಯಲ್ಲಿ ನಾನು, ಚಂಚಲ್ ಸಿಂಗ್ ಮತ್ತು ಲಾರಿ ಚಾಲಕ ಸುರೇಶ್ ಸಿಂಗ್ ರವರೊಂದಿಗೆ ದೆಹಲಿಗೆ   ಹೋಗಲು ಯಗಟಿ ಹತ್ತಿರ ರಾಂಪುರ ಬಳಿ ಬರುತ್ತಿರುವಾಗ ಲಾರಿಯನ್ನು ಚಲಾಯಿಸುತ್ತಿದ್ದ ಸುರೇಶ್ ಸಿಂಗ್ ರವರು ಲಾರಿಯನ್ನು ಅತಿವೇಗ ಹಾಗೂ  ಅಜಾಗರೂಕತೆಯಿಂದ ಚಾಲನೆ  ಮಾಡಿದ್ದರಿಂದ ಲಾರಿ ಎಡಭಾಗ್ಕಕೆ ಪಲ್ಟಿ ಹೊಡೆದಿದ್ದರಿಂದ  ಲಾರಿಯಲ್ಲಿದ್ದ ಚಂಚಲ್ ಸಿಂಗ್ ಗೆ ಕಭ್ಭಿಣದ ರಾಡು ಎದೆಗೆ ತಗುಲಿದ್ದು  ,ನನಗೂ ಸಹ ಮೈಕೈ ಹಾಗೂ ಕಾಲುಗಳಿಗೆ ಪೆಟ್ಟಾಗಿರುತ್ತೆ. ಚಿಕಿತ್ಸೆ ಫಲಕಾರಿಯಾಗದೆ ಚಂಚಲ್ ಸಿಂಗ್ ರವರು ಮೃತಪಟ್ಟಿರುತ್ತಾರೆ.ಆದ್ದರಿಂದ ಲಾರಿ ಚಾಲಕಸುರೇಶ್ ಸಿಂಗ್ ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಯಗಟಿ   ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಅಕ್ರಮ  ಮದ್ಯ ಮಾರಾಟ ಪ್ರಕರಣ.
ಬಸವನಹಳ್ಳಿ  ಪೊಲೀಸ್ ಠಾಣೆ.
ದಿನಾಂಕ: 24-12-2021 ರಂದು 17-30  ಗಂಟೆ ಸಮಯದಲ್ಲಿ ಎಂ.ಸಿ.ಸಿ ತಂಡದ ಮುಖ್ಯಸ್ಥರಾದ ರಾಕೇಶ್ ರವರು ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ 24-12-2021 ರಂದು 14-45 ಗಂಟೆ ಸಮಯದಲ್ಲಿ ಚಿಕ್ಕಮಗಳೂರು ನಗರಸಭಾ ಚುನಾವಣಾ ಸಂಬಂಧ  ಗಸ್ತು ನಿರ್ವಹಿಸುತ್ತಿರುವಾಗ  ಕೆ.ಇ.ಬಿ ಕಾಂಪೌಂಡ್  ಒಳಗಡೆ ಕೆಂಪನಹಳ್ಳಿ ಕಡೆಗೆ ಕಾರ್  ನಂಬರ್ ಕೆಎ-18 ಪಿ-1557  ರಲ್ಲಿ ಮದ್ಯವನ್ನು ತೆಗೆದುಕೊಂಡು ಹೋಗುತ್ತಿದ್ದ  ಮಂಜುನಾಥ ಬಿನ್ ರಾಮೇಗೌಡ  ಈತನನ್ನು ವಶಕ್ಕೆ ಪಡೆದು ಆತನ ಬಳಿ 5 ರಟ್ಟಿನ ಬಾಕ್ಸ್ ನಲ್ಲಿದ್ದ 180 ಎಂ.ಎಲ್ ನ 240 ಟೆಟ್ರಾ ಪೌಚ್ ಗಳನ್ನು ವಶಕ್ಕೆ ಪಡೆದಿದ್ದು, ಮದ್ಯದ ಅಂದಾಜು ಬೆಲೆ 3,00.00/- ರೂ ಆಗಿರುತ್ತೆ. ಆರೋಪಿತನ ವಿರುದ್ದ  ಬಸವನಹಳ್ಳಿ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ಅಕ್ರಮ  ಮದ್ಯ ಮಾರಾಟ ಪ್ರಕರಣ.
ಗೋಣಿಬೀಡು   ಪೊಲೀಸ್ ಠಾಣೆ.
ದಿನಾಂಕ: 24-12-2021 ರಂದು 11-00  ಗಂಟೆ ಸಮಯದಲ್ಲಿ  ಗೋಣಿಬೀಡು ಠಾಣಾ ಸರಹದ್ದಿನ ಸಾಲುಮರ ಗ್ರಾಮದಲ್ಲಿ ಸತೀಶ ಎಂಬುವವರು ಅಂಗಡಿಯ ಕಟ್ಟೆಯ ಮೇಲೆ  ಅಕ್ರಮವಾಗಿ ಮದ್ಯವನ್ನು ಮಾರಾಟ  ಮಾಡುತ್ತಿದ್ದ ಸತೀಶ ಬಿನ್ ಚನ್ನಯ್ಯ ಈತನನ್ನು  ವಶಕ್ಕೆ ಪಡೆದು ಆತನ ಬಳಿ ಇದ್ದ  90  ಎಂ.ಎಲ್ ನ 6 ಟೆಟ್ರಾ ಪೌಚ್ ಗಳನ್ನು ವಶಕ್ಕೆ ಪಡೆದಿದ್ದು, ಮದ್ಯದ ಅಂದಾಜು ಬೆಲೆ 167/- ರೂ ಆಗಿರುತ್ತೆ. ಆರೋಪಿತನ ವಿರುದ್ದ  ಗೋಣಿಬೀಡು   ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ, ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ.ಧನಂಜಯ್  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

 

ಇತ್ತೀಚಿನ ನವೀಕರಣ​ : 25-12-2021 06:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080