ಅಭಿಪ್ರಾಯ / ಸಲಹೆಗಳು

ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ:-  

ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ, ದಿನಾಂಕ: 26/06/2021 ರಂದು ಚಿಕ್ಕಮಗಳೂರು ಜಿಲ್ಲೆಯ ಡ್ರಗ್ ಡಿಸ್ಪೋಸಲ್ ಕಮಿಟಿ ಅಧ್ಯಕ್ಷರಾದ ಶ್ರೀ ಅಕ್ಷಯ್ ಎಂ.ಹೆಚ್. ಐ.ಪಿ.ಎಸ್. ಪೊಲೀಸ್ ಅಧೀಕ್ಷಕರು, ಚಿಕ್ಕಮಗಳೂರು ಜಿಲ್ಲೆ. ಸಮಿತಿಯ ಸದಸ್ಯರುಗಳಾದ ಶ್ರೀ ಏಗನಗೌಡರ್, ಪೊಲೀಸ್ ಉಪಾಧೀಕ್ಷಕರು, ತರೀಕೆರೆ ಉಪವಿಭಾಗ, ತರೀಕೆರೆ. ಶ್ರೀ ಡಿ.ಟಿ.ಪ್ರಭು, ಪೊಲೀಸ್ ಉಪಾಧೀಕ್ಷಕರು, ಚಿಕ್ಕಮಗಳೂರು ಉಪವಿಭಾಗ, ಚಿಕ್ಕಮಗಳೂರು ಮತ್ತು  ಶ್ರೀಮತಿ ಶ್ವೇತಾ, ಪರಿಸರ ಅಧಿಕಾರಿ, ಚಿಕ್ಕಮಗಳೂರು. ರವರ ಉಪಸ್ಥಿತಿಯಲ್ಲಿ, ಹಾಸನ ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಜೀವ ವೈದ್ಯಕೀಯ ತ್ಯಾಜ್ಯ ನಿರ್ವಹಣ ಘಟಕ  V. V. INCIN SOLUTIONS PVT. LTD. Hassan. ದ ಕುಲುಮೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳು ದಾಳಿ ಮಾಡಿ ಅಮಾನತ್ತುಪಡಿಸಿಕೊಂಡ ಒಟ್ಟು 52 ಪ್ರಕರಣಗಳಲ್ಲಿ 157.082 ಕಿ.ಗ್ರಾಂ  ಗಾಂಜಾವನ್ನು ಜಿಲ್ಲಾ ಡ್ರಗ್ ಡಿಸ್ಪೋಸಲ್ ಕಮಿಟಿ ವತಿಯಿಂದ ನಾಶಪಡಿಸಿರುತ್ತೆ.

ಅಕ್ರಮ ಮದ್ಯ ಮಾರಾಟ ಪ್ರಕರಣ .

ಗ್ರಾಮಾಂತರ   ಪೊಲೀಸ್ ಠಾಣೆ.

ದಿನಾಂಕ 25/06/2021 ರಂದು ಕೆ.ಬಿ.ಹಾಳ್ ಚೆಕ್ ಪೋಸ್ಟ್   ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ ರಟ್ಟಿನ ಬಾಕ್ಸ್ ನಲ್ಲಿ ಯಾವುದೇ ಪರವಾನಗಿ ಇಲ್ಲದೆ  ತ್ಯಾಗರಾಜ್ ಎಂಬುವವರು ಅಕ್ರಮವಾಗಿ ಮದ್ಯವನ್ನು ತೆಗೆದುಕೊಂಡು ಹೋಗುತ್ತಿದ್ದು ದಾಳಿ ಮಾಡಿದಾಗ ಓಡಿಹೋಗಲು ಪ್ರಯತ್ನಿಸಿದವನನ್ನು  ಹಿಡಿದುಕೊಂಡು ಆತನ ಬಳಿಯಿದ್ದ ರಟ್ಟಿನ ಬಾಕ್ಸ್ ಪರಿಶೀಲಿಸಲಾಗಿ 90 ಎಂ.ಎಲ್ ನ ಒರಿಜಿನಲ್ ಚಾಯ್ಸ್ ಡಿಲೆಕ್ಸ್ ವಿಸ್ಕಿಯ 96 ಮದ್ಯದ ಪೌಚ್ ಗಳಿದ್ದು,  ಮದ್ಯದ ಅಂದಾಜು ಬೆಲೆ 3372/- ರೂ ಆಗಿದ್ದು ಆರೋಪಿತನ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ಗೆನೋಜಾ.ಕೆ.ಟಿ.  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

 

ಅಕ್ರಮ ಮದ್ಯ ಮಾರಾಟ ಪ್ರಕರಣ .

ಗ್ರಾಮಾಂತರ   ಪೊಲೀಸ್ ಠಾಣೆ.

ದಿನಾಂಕ 25.06.2021 ರಂದು ಕಛೇರಿಯಲ್ಲಿರುವಾಗ್ಗೆ ಪೊಲೀಸ್ ಉಪಾಧೀಕ್ಷಕರು, ಡಿ.ಸಿ.ಆರ್.ಬಿ ವಿಭಾಗರವರಿಗೆ ಚಿಕ್ಕಮಗಳೂರು ನಗರದ ಎಸ್ ಟಿ ಜೆ ಕಾಲೇಜಿನ ಪಕ್ಕದಲ್ಲಿರುವ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿಯು  ಸಾರ್ವಜನಿಕರಿಗೆ ಮದ್ಯವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ದಾಳಿ ಮಾಡಲು ತಿಳಿಸಿದ್ದರ ಮೇರೆಗೆ ದಾಳಿ ನಡೆಸಿದ್ದು ನಗರದ ಬೇಲೂರು ರಸ್ತೆಯಲ್ಲಿರುವ  ಎಸ್ ಟಿ ಜೆ ಕಾಲೇಜಿನ ಪಕ್ಕದಲ್ಲಿರುವ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿಯು  ಸಾರ್ವಜನಿಕರಿಗೆ ಮದ್ಯವನ್ನು ಮಾರಾಟ ಮಾಡುತ್ತಿದ್ದು  ಆತನನ್ನು ವಶಕ್ಕೆ ಪಡೆದು ಹೆಸರು ವಿಳಾಸ ತಿಳಿಯಲಾಗಿ ಗೋಪಾಲ ಬಿನ್ ಕೃಷ್ಣಪ್ಪ, ದೋಣಿಖಣ ವಾಸಿ ಎಂದು ತಿಳಿಸಿದ್ದು ಆತನ ಬಳಿಯಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ 180 ಎಂ.ಎಲ್ ನ ಮ್ಯಾಕ್ ಡೊವೆಲ್ಸ್ ನಂ1 ಡಿಲೆಕ್ಸ್  ರಮ್ ನ 3 ಟೆಟ್ರಾ ಪೌಚ್ ಗಳು, 180 ಎಂ.ಎಲ್ ನ ಓಲ್ಡ್ ತವೆರಿನ್ ನ 09 ಪೌಚ್ ಗಳು, 180 ಎಂ.ಎಲ್ ನ ಬ್ಯಾಗ್ ಪೇಪರ್ ವಿಸ್ಕಿಯ 27 ಟೆಟ್ರಾ ಪೌಚ್ಗಳು, 180 ಎಂ.ಎಲ್ ನ ಆಪೀಸರ್ಸ್ ಚಾಯ್ಸ್ ವಿಸ್ಕಿಯ 2 ಟೆಟ್ರಾ ಪೌಚ್ ಗಳಿದ್ದು , ಒಟ್ಟು 10 ಲೀಟರ್446 ಮಿ.ಲೀ ಮದ್ಯವನ್ನು ವಶಕ್ಕೆ ಪಡೆದಿದ್ದು, ಮದ್ಯದ ಅಂದಾಜು ಬೆಲೆ 5746/- ರೂ ಆಗಿದ್ದು ಆರೋಪಿತ ಗೋಪಾಲನ ವಿರುದ್ದ ನಗರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ.ಪುದ್ದು, ಡಿಸಿಐಬಿ. ವಿಭಾಗ  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

ಅಕ್ರಮ ಜೂಜಾಟ  ಪ್ರಕರಣ

ತರೀಕೆರೆ  ಪೊಲೀಸ್ ಠಾಣೆ

ದಿನಾಂಕ 25.06.2021 ರಂದು ತರೀಕೆರೆ ಟೌನ್ ಬೆಟ್ಟದಹಳ್ಳಿ  ಗ್ರಾಮದ ಮುಂದೆ ಭದ್ರಾ ಮೇಲ್ದಂಡೆ ಚಾನಲ್ ಮುಂದೆ ಕೆರೆ ಪಕ್ಕದ ಜಾಗದಲ್ಲಿ 9-10 ಜನರು ಸೇರಿಕೊಂಡು ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟವಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ಬೆಟ್ಟದಹಳ್ಳಿ  ಗ್ರಾಮದ ಮುಂದೆ ಭದ್ರಾ ಮೇಲ್ದಂಡೆ ಚಾನಲ್ ಮುಂದೆ ಕೆರೆ ಪಕ್ಕದ ಜಾಗದಲ್ಲಿ 9-10 ಜನರು ಸೇರಿಕೊಂಡು ಅಕ್ರಮವಾಗಿ ಕಾನೂನು ಬಾಹಿರವಾಗಿ ಇಸ್ಪೀಟ್ ಜೂಜಾಟವಾಡುತ್ತಿದ್ದ  9 ಜನರನ್ನು ವಶಕ್ಕೆ  ಪಡೆದು ಆರೋಪಿತರುಗಳ ವಶದಲ್ಲಿದ್ದ ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲ,52 ಇಸ್ಪೀಟ್ ಎಲೆಗಳು ಹಾಗೂ 12,500 /-ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿತರುಗಳ ವಿರುದ್ದ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ರಾಘವೇಂದ್ರ ಕೆ.ಎನ್.  ಪಿ.ಐ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಗೋಣೀಬೀಡು ಪೊಲೀಸ್ ಠಾಣೆ

ದಿನಾಂಕ 26.06.2021 ರಂದು ಗೋಣೀಬೀಡು ಠಾಣಾ ಸರಹದ್ದಿನ ಹಿರೇಶಿಗರ ಹರೀಶ್ ಬಿನ್ ವೀರಭದ್ರಪ್ಪ ರವರು ಠಾಣೆಗೆ ಹಾಜರಾಗಿ ದಿನಾಂಕ 24.06.2021 ಪಿರ್ಯಾದಿಯರವರ ತಂದೆ ವೀರಭದ್ರಪ್ಪ ರವರು ಮದ್ಯಾಹ್ನ 3.30 ಗಂಟೆಗೆ  ಮನೆಯಿಂದ ಹಸುವನ್ನು  ಮೇಯಿಸಲು ಹೋದವರು ವಾಪಾಸ್ ಮನೆಗೆ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಿದರು ಸಿಕ್ಕಿರುವುದಿಲ್ಲ. ಕಾಣೆಯಾಗಿರುವ  ತಮ್ಮ ತಂದೆಯನ್ನು ಪತ್ತೆ ಮಾಡಿಕೊಡುವಂತೆ ನೀಡಿದ ಪಿರ್ಯಾದಿನ ಮೇರೆಗೆ ಗೋಣೀಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 26-06-2021 07:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080