ಅಭಿಪ್ರಾಯ / ಸಲಹೆಗಳು

ರಸ್ತೆ ಅಪಘಾತ ಪ್ರಕರಣ

ಯಗಟಿ  ಪೊಲೀಸ್ ಠಾಣೆ .

ದಿನಾಂಕ 26.07.2021 ರಂದು  ಪ್ರವೀಣ್ ಕುಮಾರ್ ಬಿನ್ ನಾಗಣ್ಣ, ಯಗಟಿ ರವರು  ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 26/07/2021 ರಂದು  ಕೆಎ-66 0777 ಆಟೋದಲ್ಲಿ ಕಡೂರಿಗೆ ಹೋಗಿ ಮದ್ಯಾಹ್ನ 3-15 ಗಂಟೆ ಸಮಯದಲ್ಲಿ 9 ನೇ ಮೈಲಿಕಲ್ಲಿನಿಂದ ಯಗಟಿಗೆ ಬರುವಾಗ ಯಗಟಿ ಕಡೆಯಿಂದ ಬಂದ ಕೆಎ-17 ಸಿ- 2489 ಬುಲೇರೋ ವಾಹನದ ಚಾಲಕ ವಾಹನವನ್ನು ಅತವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಆಟೋಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ನನಗೆ ಹಾಗೂ ಆಟೋದಲ್ಲಿ ಪ್ರಯಾಣಿಸುತ್ತಿದ್ದ ನಿಜಗುಣ ಹಾಗೂ ರಾಜಪ್ಪ ರವರಿಗೂ ಸಹ ಬಲಗಾಲು, ಬಲಗೈ ಹಾಗೂ ಎದೆಗೆ ಪೆಟ್ಟಾಗಿರುತ್ತೆ.  ಬುಲೇರೋ ವಾಹನದ ಚಾಲಕ ಅಭಿನಂದನ್ ಬಿನ್ ಬಸವರಾಜಪ್ಪ, ಲಿಂಗದಹಳ್ಳಿ ವಾಸಿರವರ ವಿರುದ್ದ  ಕ್ರಮ ತೆಗೆದುಕೊಳ್ಳಲು  ನೀಡಿದ ಪಿರ್ಯಾದಿನ ಮೇರೆಗೆ  ಯಗಟಿ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ವಂಚನೆ  ಪ್ರಕರಣ

ಸಿ.ಇ.ಎನ್.  ಪೊಲೀಸ್ ಠಾಣೆ .

ದಿನಾಂಕ 26.07.2021 ರಂದು ಪಿರ್ಯಾದಿ ತರೀಕೆರೆ ಟೌನ್ ತುದಿಪೇಟೆ ವಾಸಿ ಚಂದ್ರಶೇಖರಪ್ಪ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯವರ ಮಗನ ಮೊಬೈಲ್ ನಂಬರ್ ಗೆ ದಿನಾಂಕ;18/07/2021 ರಂದು  ಲಾಟರಿಯಲ್ಲಿ 25,00,000/- ರೂ ಗೆದ್ದಿರುವ ಬಗ್ಗೆ ಮೇಸೆಜ್ ಬಂದಿದ್ದು ನಂತರ ಗೆದ್ದಿರುವ ಹಣವನ್ನು ಪಡೆಯಲು 10,101 ರೂ ಖಾತೆಗೆ ಹಾಕಲು ವ್ಯಾಟ್ಸಾಪ್ ನಲ್ಲಿ  ತಿಳಿಸಿದ್ದು ನಂತರ ಮತ್ತೆ 25,000/- ರೂ ಹಾಗೂ ಪುನಃ 42,000/- ಗಳನ್ನು ಖಾತೆಗೆ ಜಮೆ ಮಾಡಿಸಿಕೊಂಡು ಮತ್ತೆ ಪುನಃ  ಹಣವನ್ನು ಬಿಡಿಸಲು ಹಣವನ್ನು ಹಾಕುವಂತೆ ತಿಳಿಸಿದ್ದು , ಪಿರ್ಯಾದಿ ಮತ್ತು ಅವರ ಮಗ ಈ ಬಗ್ಗೆ ಪರಿಚಯಸ್ಥರಲ್ಲಿ ವಿಚಾರ ತಿಳಿಸಿದ್ದು ಅವರು ಮೋಸ ಹೋಗಿರುವ ಬಗ್ಗೆ ತಿಳಿದು  ತಮಗೆ ಮೋಸ ಮಾಡಿದವರ ವಿರುದ್ದ  ಕ್ರಮ ತೆಗೆದುಕೊಳ್ಳಲು  ನೀಡಿದ ಪಿರ್ಯಾದಿನ ಮೇರೆಗೆ  ಸಿ.ಇ. ಎನ್.  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 26-07-2021 07:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080