ಅಭಿಪ್ರಾಯ / ಸಲಹೆಗಳು

ಕಳ್ಳತನ  ಪ್ರಕರಣ

ನಗರ   ಪೊಲೀಸ್ ಠಾಣೆ.

ದಿನಾಂಕ: 25/08/2021 ರಂದು ಪಿರ್ಯಾದಿ ನರಸಿಂಹೇಗೌಡ ಬಿನ್ ಲೇಟ್ ರಾಮೇಗೌಡ, ಹೌಸಿಂಗ್ ಬೋರ್ಡ್ , ಚಿಕ್ಕಮಗಳೂರು ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನಲ್ಲಿ ದಿನಾಂಕ 04-08-2021 ರಂದು ನಾನು ಹಾಗೂ ನನ್ನ ಹೆಂಡತಿ ಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿನಲ್ಲಿರುವ ನನ್ನ ಮಗನ ಮನೆಗೆ ಹೋಗಿದ್ದೆವು. ದಿನಾಂಕ 25-08-2021 ರಂದು ಬೆಂಗಳೂರಿನಿಂದ ವಾಪಾಸ್ ಮನೆಗೆ ಬಂದು ನೋಡಲಾಗಿ ಮನೆಯ ಮುಂಬಾಗಿಲಿನ ಡೋರ್ ಲಾಕ್ ನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ಮುರಿದು ಬೆಡ್ ರೂಂನ ಬೀರುವಿನಲ್ಲಿದ್ದ ಸುಮಾರು 16,000/- ರೂ ಬೆಲೆಯ ಚಿನ್ನ ಹಾಗೂ ಬೆಳ್ಳಿಯ ಆಭರಣ ಹಾಗೂ ನಗದು ಹಣ 25,000/-ರೂ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು. ಕಳ್ಳತನ ಮಾಡಿಕೊಂಡು ಹೋಗಿರುವ ಆರೋಪಿತರುಗಳನ್ನು ಪತ್ತೆ ಮಾಡಬೇಕೆಂದು ನೀಡಿದ ಪಿರ್ಯಾದುವಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಲಿಂಗದಹಳ್ಳಿ ಪೊಲೀಸ್ ಠಾಣೆ.

ದಿನಾಂಕ: 25/08/2021 ರಂದು ಪಿರ್ಯಾದಿ  ಮಂಜುನಾಥಾಚಾರ್ ,ಆದಿಶಕ್ತಿನಗರ(ಬೆಂಕಿಪುರ) ವಾಸಿರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 24-08-2021 ರಂದು ಲಿಂಗದಹಳ್ಳಿ ಬಸ್ ನಿಲ್ದಾಣದ ಬಳಿ ಇರುವ ನನ್ನ ಛಾಯಾಚಿತ್ರ ಸ್ಟುಡಿಯೋ ದಲ್ಲಿ ಕೆಲಸ ಮುಗಿಸಿ ರಾತ್ರಿ ಸ್ಟುಡಿಯೋದ ಬಾಗಿಲ ಬೀಗ ಹಾಕಿಕೊಂಡು ಹೋಗಿದ್ದು ದಿನಾಂಕ 25-08-2021 ರಂದು ಬೆಳಗ್ಗೆ 07-30 ಗಂಟೆ ಸಮಯದಲ್ಲಿ ಸ್ಟುಡಿಯೋಗೆ ಬಂದು ನೋಡಲಾಗಿ ಸ್ಟುಡಿಯೋದ ಬಾಗಿಲ ಬೀಗ ಹೊಡೆದು ಇಂಟರ್ ಲಾಕ್  ಓಪನ್ ಮಾಡಿ ಒಂದು ಸೋನಿ ಕಂಪೆನಿಯ ವಿಡಿಯೋ ಕ್ಯಾಮೆರಾ ಹಾಗೂ 03 ಸೋನಿ ಕಂಪೆನಿಯ ಬ್ಯಾಟರಿ ಹಾಗೂ  ಒಂದು ವಿಡಿಯೋ ಲೈಟ್ ಮತ್ತು ಕೇಬಲ್ ಹಾಗೂ ವಿಡಿಯೋ ಬ್ಯಾಗ್ ಎಲ್ಲಾ ಸೇರಿ 55,500 ರೂ ಬೆಲೆಯ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು. ಕಳ್ಳತನ ಮಾಡಿಕೊಂಡು ಹೋಗಿರುವ ಆರೋಪಿತರುಗಳನ್ನು ಪತ್ತೆ ಮಾಡಬೇಕೆಂದು ನೀಡಿದ ಪಿರ್ಯಾದುವಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 26-08-2021 06:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080