ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಅಜ್ಜಂಪುರ ಪೊಲೀಸ್ ಠಾಣೆ

ದಿನಾಂಕ;26-01-2022 ರಂದು ಪಿರ್ಯಾದಿ ಅಶೋಕ ಎ.ಎಸ್. ಅನುವನಹಳ್ಳಿ  ವಾಸಿ ಇವರು ನೀಡಿದ ದೂರಿನಲ್ಲಿ ದಿನಾಂಕ 26/01/2022 ರಂದು 7.45 ಗಂಟೆ ಪಿರ್ಯಾದಿಯವರ ಚಿಕ್ಕಮ್ಮ ಶ್ರೀಮತಿ ದ್ರಾಕ್ಷಾಯಣಮ್ಮ  ಕಣಕ್ಕೆ ಹೋಗಿ ಬರುತ್ತೇನೆಂದು ಹೋದವರು ಮದ್ದೆಕರಿಯಪ್ಪನವರ ಜಮೀನಿನ ಎದುರು ಹಾದು ಹೋಗಿರುವ ಶಿವನಿ ಅಜ್ಜಂಪುರ ರಸ್ತೆಯಲ್ಲಿ ಯಾವುದೋ ಅಪರಿಚಿತ ವಾಹನದ ಚಾಲಕ ಪಿರ್ಯಾದಿ ಚಿಕ್ಕಮ್ಮನವರಿಗೆ ವಾಹನವನ್ನು ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದು ತಲೆಗೆ ಬಲವಾಗಿ ಮತ್ತು ಮೈಕೈಗೆ ಗಾಯವಾಗಿದ್ದು, ಚಿಕಿತ್ಸೆಗೆ ಭದ್ರಾವತಿಗೆ ಕರೆದುಕೊಂಡು ಹೋಗಿದ್ದು ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದು , ಅಪಘಾತಪಡಿಸಿದ ಅಪರಿಚಿತ ವಾಹನ ಚಾಲಕನ ಮೇಲೆ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಸರ್ಕಾರಿ ನೌಕರರ ಮೇಲೆ ಹಲ್ಲೆ  ಪ್ರಕರಣ

ಲಿಂಗದಹಳ್ಳಿ ಪೊಲೀಸ್ ಠಾಣೆ

ದಿನಾಂಕ;25-01-2022 ರಂದು ಪಿರ್ಯಾದಿ ಚನ್ನೇಗೌಡ ಬಿನ್ ತಿಮ್ಮೇಗೌಡ, ಕೆಂಚಾಪುರ ಶಾಖೆ ಪ್ರಭಾರ ಉಪ-ವಲಯ ಅರಣ್ಯಾಧಿಕಾರಿ ರವರು ನೀಡಿದ ದೂರಿನಲ್ಲಿ  ದಿನಾಂಕ 25/01/2022 ರಂದು ನಂದಿ ಗ್ರಾಮದ ಶಿವಕುಮಾರ ಹಾಗೂ ಇತರರು ಲಿಂಗದಹಳ್ಳಿ ರಾಜ್ಯ ಅರಣ್ಯ ಸೇರಿದ ಜಾಗದಲ್ಲಿರುವ ಗಿಡಗಳನ್ನು ಕಡಿಯುತ್ತಿರುವಾಗ ನಂದಿ ಗ್ರಾಮದ ಗಸ್ತಿನಲ್ಲಿ ವಾಚರ್ ಆದ  ನಾಗರಾಜನಾಯ್ಕ ರವರು ಪಿರ್ಯಾದಿಗೆ ಮಾಹಿತಿ ತಿಳಿಸಿದ್ದು ಪಿರ್ಯಾದಿ ಮತ್ತು ಸಿಬ್ಬಂದಿಯವರು ಘಟನೆ ನಡೆದ ಸ್ಥಳಕ್ಕೆ ಹೋದಾಗ ನಂದಿ ಗ್ರಾಮದ ಕೆಲವು ಜನರು ಗಿಡಗಳನ್ನು ಕಡಿಯುತ್ತಿದ್ದರು ಪಿರ್ಯಾಧಿ ಗಿಡಗಳನ್ನು ಕಡಿಯದಂತೆ ಹೇಳಿದಾಗ ಶಿವಕುಮಾರ ಮತ್ತು ಇತರರು ಪಿರ್ಯಾಧಿಗೆ ಅವಾಚ್ಯ ಶಬ್ದಗಳಿಂದ ಬೈದು ನಾಗರಾಜನಾಯ್ಕ ನಿಗೆ ದೊಣ್ಣೆಯಿಂದ ಹೊಡೆದು ಚಂದಮೂರ್ತಿ ಎಂಬುವನು ಪಿರ್ಯಾದಿಯ ಸಮವಸ್ತ್ರವನ್ನು ಎಳೆದಾಡಿ ಬಟ್ಟೆ ಹರಿದು ಹಾಕಿ ನೂಕಾಡಿರುತ್ತಾನೆ. ಹಾಗೂ ವಿಜಯ್ ಮತ್ತು ದೇವಪ್ಪರವರಿಗೆ ಸಹ ಹಲ್ಲೆ ಮಾಡಿರುತ್ತಾರೆ ಸರ್ಕಾರಿ ಕೆಲಸಕ್ಕೆ ಅಡ್ಡಿ ಮಾಡಿ ಹಲ್ಲೆ ನಡೆಸಿರುವ ಆರೋಪಿತರ ವಿರುದ್ದ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಲಿಂಗದಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ.

ನಗರ ಪೊಲೀಸ್ ಠಾಣೆ.

ದಿನಾಂಕ:25-01-2022 ರಂದು ಪಿರ್ಯಾದಿ ವಿಶಾಲಾಕ್ಷಿ ಕೋಂ ಬಾಲರಾಜ್ ರವರು ನೀಡಿದ ದೂರಿನಲ್ಲಿ ದಿನಾಂಕ; 24-01-2022 ರಂದು ಪಿರ್ಯಾಧಿ ಗಂಡ ಬಾಲರಾಜ್ ಬೆಳಿಗ್ಗೆ ಮನೆಯಿಂದ ಕಟಿಂಗ್ಗೆ ಹೋಗಿದ್ದು ಸಂಜೆಯಾದರೂ ಮನೆಗೆ ವಾಪಾಸ್ ಬಂದಿರುವುದಿಲ್ಲ, ಆಗ ನೆಂಟರಿಷ್ಟರು ಮತ್ತು ಸ್ನೇಹಿತರ ಬಳಿ ವಿಚಾರಿಸಲಾಗಿ  ಪತ್ತೆಯಾಗಿರುವುದಿಲ್ಲ ಬಾಲರಾಜ್ ರವರು 2 ವರ್ಷದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಕಾಣೆಯಾಗಿರುವ ತನ್ನ ಗಂಡ ಬಾಲರಾಜ್ ಪತ್ತೆ ಮಾಡುವಂತೆ ಕೋರಿ ನೀಡಿದ ದೂರಿನ ಮೇರೆಗೆ  ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ಕಡೂರು ಪೊಲೀಸ್ ಠಾಣೆ

ದಿನಾಂಕ;25-01-2022 ರಂದು ಪಿರ್ಯಾದಿ ಚಂದ್ರಕಾಂತ ಬಿನ್ ಚಂದ್ರೇಗೌಡ ಇವರು ನೀಡಿದ ದೂರಿನಲ್ಲಿ ಬಂಜೇನಹಳ್ಳಿ ಗ್ರಾಮದ ಈಶ್ವರಪ್ಪ ನವರ ಜಮೀನಿನಲ್ಲಿ ಆಳವಡಿಸಿರುವ ಜಿಯೋ ಟವರ್ ನಲ್ಲಿ ಮಾನಿಟರ್ ಸೆಲ್ ಗೆ ಹಾಕಿದ್ದ ಸುಮಾರು 70 ಲೀಟರ್ ಡಿಸೇಲ್ ನ್ನು ಕೃಷ್ಣಕುಮಾರ್ ಹೊಸಕೊಪ್ಪಲು, ಜ್ಞಾನೇಶ್ ನೀರಗುಂದ, ಅನುರಾಜ ಮಲ್ಲಪ್ಪನಹಳ್ಳಿ ವಾಸಿಗಳು ಕೆಎ-02-ಎಎಫ್-2818 ಕಾರಿನಲ್ಲಿ ಕಳವು ಮಾಡಿಕೊಂಡು ಹೋಗುತ್ತಿದ್ದು ,ಗ್ರಾಮಸ್ಥರು ಕೂಗಿಕೊಂಡಾಗ ಆರೋಪಿತರು ಕಾರನ್ನು ಹಾಗೂ ಡಿಸೇಲ್ ತುಂಬಿದ 4 ಕ್ಯಾನ್ ನಲ್ಲಿ  70 ಲೀಟರ್ ಬೆಲೆ 6500/- ರೂ ಗಳಾಬಹುದು ಬಿಟ್ಟು ಹೋಗಿದ್ದು. ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ  ನೀಡಿದ ದೂರಿನ ಮೇರೆಗೆ  ಕಡೂರು  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 26-01-2022 07:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080