ಅಭಿಪ್ರಾಯ / ಸಲಹೆಗಳು

ನಿರ್ಲಕ್ಷತನದಿಂದ ಸಾವು ಪ್ರಕರಣ

ಬಾಳೂರು ಪೊಲೀಸ್ ಠಾಣೆ

 ದಿನಾಂಕ;26-02-2022 ರಂದು ಬಾಳೂರು ಠಾಣಾ ಸರಹದ್ದಿನ ಕೂವೆ ಗ್ರಾಮದ ಇಂದ್ರಾವತಿ ಎಸ್ಟೇಟ್ ಕೂಲಿ ಲೈನ್ ವಾಸಿಯಾದ ಶೇಖರಪ್ಪ ಬಿನ್ ಕುಡುಪ್ಪ  ಇವರು ನೀಡಿದ ದೂರಿನಲ್ಲಿ ದಿನಾಂಕ;26-02-2022 ರಂದು ಪಿರ್ಯಾದಿ ಮಗಳು ಪ್ರಾಥನಾ 7 ವರ್ಷ ಇವಳು ಎಸ್ಟೇಟ್ ನಲ್ಲಿ ಇರುವ ನೀರು ಕುಡಿಯುವ ಬಾವಿಗೆ ಅಕಸ್ಮಿಕವಾಗಿ ಬಿದ್ದು ಸಾವನಪ್ಪಿದ್ದು, ಇಂದ್ರಾವತಿ ಎಸ್ಟೇಟ್ ಮಾಲೀಕರು ನೀರು ಕುಡಿಯುವ ಬಾವಿಗೆ ಯಾವುದೇ ಬೇಲಿಯನ್ನು ನಿಮರ್ಿಸದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಇದುದರಿಂದ ತನ್ನ ಮಗಳು ಬಾವಿಯಲ್ಲಿ ಬಿದ್ದು ಸಾವನಪ್ಪಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳದೆ ನನ್ನ ಮಗಳ ಸಾವಿಗೆ ಕಾರಣರಾದ ಎಸ್ಟೇಟ್ ಮಾಲೀಕ ರವರ ವಿರುದ್ದ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಡೂರು ಪೊಲೀಸ್ ಠಾಣೆ

 ದಿನಾಂಕ:25-02-2022 ರಂದು ಕಡೂರು ಠಾಣಾ ಸರಹದ್ದಿನ  ಚನ್ನಾಫುರ ವಾಸಿ ಜಯಣ್ಣ ಬಿನ್ ಲೇಟ್ ಬಸಪ್ಪ ಇವರು ನೀಡಿದ ದೂರಿನಲ್ಲಿ ದಿನಾಂಕ:25-02-2022 ರಂದು ಪಿರ್ಯಾದಿ ಮಗ ಚಂದ್ರಪ್ಪ ನನ್ನು ಕಲೀಂವುಲ್ಲಾ ಷರೀಪ್  ಈತನು ರಾಮನಹಳ್ಳಿ  ಕೋಳಿ ಫಾರಂ ಕೆಲಸಕ್ಕೆ ಕರೆದುಕೊಂಡು ಹೋಗಿದ್ದು,  ಕಲೀಂವುಲ್ಲಾ ಷರೀಪ್ ರವರು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ನನ್ನ ಮಗನನ್ನು ವಿದ್ಯುತ್ ಕಂಬಕ್ಕೆ ಹತ್ತಿಸಿದ್ದರಿಂದ ವಿದ್ಯುತ್ ಸ್ಪರ್ಶವಾಗಿ ಮೃತಪಟ್ಟಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಕೆಲಸ ಮಾಡಿಸಿದ ಕಲೀಂವುಲ್ಲಾ ಷರೀಪ್ ರವರ ವಿರುದ್ದ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ಮೂಡಿಗೆರೆ  ಪೊಲೀಸ್ ಠಾಣೆ.

ದಿನಾಂಕ:25-02-2022 ರಂದು ಮೂಡಿಗೆರೆ ಠಾಣಾ ಸರಹದ್ದಿನ ಕೆಸವೊಳಲು ಗ್ರಾಮದ ಶ್ರೀರಾಮ ಹರಿಜನ ಕಾಲೋನಿ ವಾಸಿ ಅನು ಕೋಂ ಕೆ.ಎಂ.ಸಚಿನ್ ಎಂಬುವರು ಮನೆಯಲ್ಲಿ ಅಕ್ರಮವಾಗಿ ಕಳ್ಳಭಟ್ಟಿಮದ್ಯ ಮಾರಾಟ ಮಾಡುತ್ತಿದ್ದು ಅರೋಪಿತಳನ್ನು ವಶಕ್ಕೆ ಪಡೆದು ಆರೋಪಿ ವಶದಲ್ಲಿದ್ದ 7 ಲೀಟರ್ ಕಳ್ಳಭಟ್ಟಿಮದ್ಯ ಅಂದಾಜು ಬೆಲೆ 700/- ರೂ ಅಗಿದ್ದು ಮಧ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಮೂಡಿಗೆರೆ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಮೂಡಿಗೆರೆ ಪಿ.ಎಸ್.ಐ. ರವಿ ಜಿ.ಎ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ; 25/02/2022 ರಂದು ಅಜ್ಜಂಫುರ ಠಾಣಾ ಸರಹದ್ದಿನ ತಮ್ಮಟದಳ್ಳಿ ಗ್ರಾಮದ ರುದ್ರಪ್ಪ ಬಿನ್ ಲೇಟ್ ಬಸಪ್ಪ ರವರು  ನೀಡಿದ ದೂರಿನಲ್ಲಿ ಪಿರ್ಯಾದಿ ಮಗನ ಬಾಬ್ತು ಬೈಕ್  ಕೆಎ-18-ವಿ-6575 ಹಿರೋ ಪ್ಯಾಷನ್ ಪ್ರೋ ಬೈಕ್ ನ್ನು ದಿನಾಂಕ;15/02/2022 ರಂದು ರಾತ್ರಿ 7-30 ಗಂಟೆಗೆ ಅಂತರಘಟ್ಟೆ ಜಾತ್ರೆಗೆ ತೆಗೆದುಕೊಂಡು ಹೋಗಿದ್ದು ಬೈಕ್ ನಿಲ್ಲಿಸಿ ಪೂಜೆಗೆ ಹೋಗಿ ವಾಪಾಸ್ಸು ಬಂದು ನೋಡಲಾಗಿ ಯಾರೋ ಕಳ್ಳರು ಬೈಕ್ ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳುವಾಗಿರುವ ಬೈಕ್ ನ ಬೆಲೆ ಸುಮಾರು 25,000/- ರೂ ಗಳಾಗಿದ್ದು ಕಳುವಾಗಿರುವ ಬೈಕ್ ನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಅಜ್ಜಂಪುರ ಠಾಣೆಯಲ್ಲಿ ಪ್ರರಕಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ದನದ ಮಾಂಸ ಮಾರಾಟ ಪ್ರಕರಣ

ಬಸವನಹಳ್ಳಿ ಪೊಲೀಸ್ ಠಾಣೆ.

ದಿನಾಂಕ;25/02/2022 ರಂದು ಡಾ: ಗುರುಪ್ರಸಾದ್ ಸಹಾಯಕ ನಿರ್ದೇಶಕರು, ಪಶುಪಾಲನಾ ಇಲಾಖೆ ರವರು ನೀಡಿದ ದೂರಿನಲ್ಲಿ ಮಲ್ಲಂದೂರು ರಸ್ತೆಯಲ್ಲಿರುವ ಕುರೇಷಿ ಹೋಟೇಲ್ ನಲ್ಲಿ ಅಕ್ರಮವಾಗಿ ದನದ ಮಾಂಸವನ್ನು ಇಟ್ಟುಕೊಂಡು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ದಾಳಿ ಮಾಡಿ ಹೋಟೆಲ್ ನಲ್ಲಿ ಇದ್ದ ಸುಮಾರು 5 ಕೆ.ಜಿ. ದನದಮಾಂಸ ಹಾಗೂ ಸುಮಾರು 200 ಗ್ರಾಂ ಬೇಯಿಸಿದ ದನದಮಾಂಸವನ್ನು ವಶಕ್ಕೆ ಪಡೆದುಕೊಂಡು ಬಂದು ಅರೋಫಿ ಕುರೇಷಿ ವಿರುದ್ದ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 ಮನುಷ್ಯ ಕಾಣೆ ಪ್ರಕರಣ

 ಬಾಳೆಹೊನ್ನೂರು ಪೊಲೀಸ್ ಠಾಣೆ.

 ದಿನಾಂಕ;25-02-2022 ರಂದು ಪಿರ್ಯಾದಿ ಶಿವ ಬಿನ್ ವೆಂಕಟಪ್ಪ, ವಾಟಕೂಡಿಗೆ, ಬಿ.ಕಣಬೂರು ಗ್ರಾಮ ವಾಸಿ ರವರು ನೀಡಿದ ದೂರಿನಲ್ಲಿ ಪಿರ್ಯಾದಿ ತಮ್ಮ ಲಕ್ಷ್ಮಣ ರವರು ದಿನಾಂಕ;19-02-2022 ರಂದು ಬೆಳಿಗ್ಗೆ ಮನೆಯಿಂದ ಸಿ.ಕೆ. ಮದುಗುಣಿ ಮನೆಗೆ ಹೋಗುತ್ತೇನೆಂದು ಹೋದವನು ಮನೆಗೆ ಹೋಗದೇ ಇದ್ದು,  ಎಲ್ಲಾ ಕಡೆ ಹುಡುಕಾಡಿದರೂ ಸಹ ಪತ್ತೆಯಾಗಿರುವುದಿಲ್ಲ. ಲಕ್ಷ್ಮಣ,  38 ವರ್ಷ, 5.4 ಅಡಿ ಎತ್ತರ, ಎಣ್ಣೆಗೆಂಪು ಮೈ ಬಣ್ಣ, ನೀಲಿ ಬಣ್ಣದ ಚೌಕಳಿ ಶರಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ , ತುಳು ಭಾಷೆ ಮಾತನಾಡುತ್ತಾನೆ.  ಕಾಣೆಯಾಗಿರುವ ತನ್ನ ತಮ್ಮ ಲಕ್ಷ್ಮಣನನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಬಾಳೆಹೊನ್ನೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 

 

 

 

ಇತ್ತೀಚಿನ ನವೀಕರಣ​ : 26-02-2022 07:48 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080