ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಹಾಗೂ ಕೊವಿಡ್ 19 ನಿಯಮ ಉಲ್ಲಂಘನೆ  ಪ್ರಕರಣ.

ಲಕ್ಕವಳ್ಳಿ  ಪೊಲೀಸ್  ಠಾಣೆ.

ದಿನಾಂಕ: 26/05/2021 ರಂದು ಲಕ್ಕವಳ್ಳಿ  ಠಾಣಾ ಸರಹದ್ದಿನ ಹಳೆ ಲಕ್ಕವಳಿಯ ಪೊಲೀಸ್ ಕ್ವಾಟ್ರಸ್ ಹಿಂಭಾಗದ ಭದ್ರಾ ಹೊಲೆಯ ಕಡೆಯಿಂದ ಹೊಳೆಯ ದಿಣ್ಣೆಯಲ್ಲಿ ಶ್ರೀ ಮಾರಿಕಾಂಬ ದೇವರ ಗದ್ದುಗೆಯ ಸಿಮೆಂಟ್ ದಾರಿಯಲ್ಲಿ ಮಣಿ ಬಿನ್ ಆರ್ಮುಗಂ  ಎಂಬುವವನು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ  ದಾಳಿ ಮಾಡಿದ್ದು ಆರೋಪಿ ಮಣಿ ಬಿನ್ ಆರ್ಮುಗಂನನ್ನು  ವಶಕ್ಕೆ ಪಡೆದು ಆತನು ಹೊಂದಿದ್ದ  180 ಎಂ.ಎಲ್ ನ ಆಪೀಸರ್ಸ್ ಚಾಯ್ಸ್ ಸಪೆಷಲ್ ವಿಸ್ಕಿಯ  17 ಪೌಚ್ ಗಳು ಹಾಗೂ 90 ಎಂ.ಎಲ್ ನ ಓರಿಜಿನಲ್ ಚಾಯ್ಸ್ ಡಿಲೆಕ್ಸ್ ವಿಸ್ಕಿಯ 14 ಟೆಟ್ರಾ ಪೌಚ್ಗಳು ಮದ್ಯದ  ಬೆಲೆ 2293/-ರೂನ ಮದ್ಯ ವಶಪಡಿಸಿಕೊಂಡು ಕೋರನಾ ಸಾಂಕ್ರಾಮಿಕ ರೋಗ ಹೆಚ್ಚು ಹೆಚ್ಚಾಗಿ ಹರಡುತ್ತಿರುವ ಬಗ್ಗೆ ತಿಳಿದಿದ್ದರೂ ಸಹ ಕೋವಿಡ್ -19  ಲಾಕ್ ಡೌನ್ ಆದೇಶವನ್ನು ಉಲ್ಲಂಘನೆ ಮಾಡಿದ್ದು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್ಐ. ಮೇಘ ಟಿ.ಎನ್. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಸಖರಾಯಪಟ್ಟಣ   ಪೊಲೀಸ್  ಠಾಣೆ.

ದಿನಾಂಕ: 26/05/2021 ರಂದು ಸಖರಾಯಪಟ್ಟಣ ಠಾಣಾ ಸರಹದ್ದಿನ ತೃಪ್ತಿ ಡಾಬಾದ ಬಳಿ ಬಾಣಾವರಕ್ಕೆ ಹೋಗುವ ರಸ್ತೆಯಲ್ಲಿ ಗಸ್ತು ಮಾಡುತ್ತಿರುವಾಗ ಮೋಟಾರ್ ಸೈಕಲ್ನಲ್ಲಿ ಒಬ್ಬ ಸವಾರನು ಮಾಸ್ಕ್ ಇಲ್ಲದೆ ಬರುತ್ತಿದ್ದು ಆತನನ್ನು ತಡೆದು ನಿಲ್ಲಿಸಿ ಹೆಸರು ವಿಳಾಸ ಕೇಳಿ ಮೋಟಾರ್ ಸೈಕಲ್ ನನ್ನು ತಪಾಸಣೆ ಮಾಡಿದಾಗ ಒಂದು ಪ್ಲಾಸ್ಟಿಕ್ ಚೀಲದಲ್ಲಿ 90 ಎಂ.ಎಲ್ ನ ನಂ1 ಹೈವೆ ದಿಲೆಕ್ಸ್ ವಿಸ್ಕಿಯ 37 ಟೆಟ್ರಾ ಪೌಚ್ಗಳಿದ್ದು ಮದ್ಯ ಮಾರಾಟದ ಬಗ್ಗೆ ಯಾವುದೇ ಪರವಾನಗಿ ಹೊಂದಿಲ್ಲವೆಂದು ತಿಳಿಸಿದ್ದರಿಂದ ಆರೋಪಿಯನ್ನು, ಮದ್ಯವನ್ನು ಹಾಗೂ ಕೆಎ-18 ವೈ 5199 ಮೋಟಾರ್ ಸೈಕಲ್ನನ್ನು ವಶಕ್ಕೆ ಪಡೆದುಕೊಂಡು  ಕೊರೊನಾ ಸಾಂಕ್ರಾಮಿಕ ರೋಗ ಹೆಚ್ಚು ಹೆಚ್ಚಾಗಿ ಹರಡುತ್ತಿರುವ ಬಗ್ಗೆ ತಿಳಿದಿದ್ದರೂ ಸಹ ಕೋವಿಡ್ -19  ಲಾಕ್ ಡೌನ್ ಆದೇಶವನ್ನು ಉಲ್ಲಂಘನೆ ಮಾಡಿದ್ದು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್ಐ. ಹರೀಶ್ ಆರ್. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಕೊವಿಡ್ 19 ನಿಯಮ ಉಲ್ಲಂಘನೆ  ಪ್ರಕರಣ.

ಮಲ್ಲಂದೂರು   ಪೊಲೀಸ್  ಠಾಣೆ.

ದಿನಾಂಕ: 26/05/2021 ರಂದು ಪಿರ್ಯಾದುದಾರರು ಕೊವಿಡ್ 19 ಮಾರ್ಗಸೂಚಿಗಳನ್ನು ಪಾಲಿಸುವ ಸಂಬಂಧ ಆವತಿ ಹೋಬಳಿಗೆ ವಿಶೇಷ ದಂಡಾಧಿಕಾರಿಯಾಗಿ ನೇಮಕಗೊಂಡಿದ್ದು ಗಸ್ತು ಮಾಡುತ್ತಿರುವಾಗ  ಬೆಟ್ಟದಮಳಲಿ ನಾಗೇಶ್ ಗೌಡರವರ ತೋಟಕ್ಕೆ ಅಸ್ಸಾಂನಿಂದ ಕೂಲಿ ಕಾರ್ಮಿಕರು ಬಸ್ಸಿನಲ್ಲಿ ಬಂದಿರುವ ಬಗ್ಗೆ ಮಾಹಿತಿ ನೀಡಿ ಪರಿಶೀಲಿಸಿ ಎಂದು ತಿಳಿಸಿದ ಮೇರೆಗೆ ತಂಡದವರೊಂದಿಗೆ ಬೆಟ್ಟದಮಳಲಿ ನಾಗೇಶ್ ಗೌಡರವರ ತೋಟಕ್ಕೆ ಹೋಗಿ ಪರಿಶೀಲಿಸಲಾಗಿ ದಿನಾಂಕ 24-05-2021 ರಂದು ಬೆಟ್ಟದಮಳಲಿ ನಾಗೇಶ್ ಗೌಡರವರು ಒಟ್ಟು 47 ಜನ ಕೂಲಿ ಕಾರ್ಮಿಕರನ್ನು ಅಸ್ಸಾಂನಿಂದ ತಮ್ಮ ತೋಟಕ್ಕೆ ಕರೆಸಿಕೊಂಡಿದ್ದು ಅದರಲ್ಲಿ 21 ಜನ ಗಂಡು ಹಾಗೂ 26 ಜನ ಹೆಣ್ಣು ಕೂಲಿ ಕಾರ್ಮಿಕರಿರುತ್ತಾರೆ . ಕರ್ನಾಟಕದಲ್ಲಿ ಕೊವಿಡ್ 19 ವಿಪತ್ತು ನಿರ್ವಹಣಾ ಮಾರ್ಗಸೂಚಿಗಳನ್ನು ಹಾಗೂ ಜಿಲ್ಲಾಡಳಿತ ,ಚಿಕ್ಕಮಗಳೂರು ಇವರ ಆದೇಶಗಳನ್ನು ಉಲ್ಲಂಘನೆ ಮಾಡಿ ಒಂದೇ ಬಸ್ಸಿನಲ್ಲಿ 47 ಜನ ಕೂಲಿ ಕಾರ್ಮಿಕರನ್ನು ಕರೆಸಿರುವ ಬೆಟ್ಟದಮಳಲಿ ನಾಗೇಶ್ ಗೌಡರವರ ವಿರುದ್ದ ಕ್ರಮಕೈಗೊಳ್ಳಬೇಕೆಂದು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ .

ಕಳ್ಳತನ  ಪ್ರಕರಣ

ಅಜ್ಜಂಪುರ  ಪೊಲೀಸ್  ಠಾಣೆ

ದಿನಾಂಕ: 25/05/2021 ರಂದು ಪಿರ್ಯಾದುದಾರರಾದ ಮಧುಕುಮಾರ ಬಿನ್ ಕರಿಯಪ್ಪರವರು  ಠಾಣೆಗೆ ಬಂದು  ನೀಡಿದ ದೂರಿನ ಸಾರಾಂಶವೇನೆಂದರೆ ಈಗ್ಗೆ 2 ವರ್ಷಗಳಿಂದಲೂ ಶ್ರೀ.ಗಿರಿಲಕ್ಷ್ಮಿ ಎಂಟರ್ ಪ್ರೈಸಸ್ ಮೊಬೈಲ್ ಅಂಗಡಿಯನ್ನು ನಡೆಸುತ್ತಿದ್ದು ಲಾಕ್ ಡೌನ್ ಇದ್ದುದ್ದರಿಂದ ದಿನಾಂಕ 09-05-2021 ರಂದು ಅಂಗಡಿಯ ಬಾಗಿಲು ತೆರೆದು ಮೊಬೈಲ್ ಗಳನ್ನು ಪರಿಶೀಲಿಸಿಕೊಂಡು ಪುನಃ ಅಂಗಡಿಯ ಬಾಗಿಲು ಹಾಕಿಕೊಂಡು ಹೋಗಿದ್ದು ದಿನಾಂಕ 25-05-2021 ರಂದು ಪಿರ್ಯಾದುದಾರರ ಮಾವ ಸುರೇಶರವರು ಪೋನ್ ಮಾಡಿ  ನಿನ್ನ ಅಂಗಡಿಯ ಶೆಟರ್ ಗೆ ಅಳವಡಿಸಿದ್ದ ಬೀಗವನ್ನು  ಯಾರೋ ಮುರಿದಿರುವುದಾಗಿ ತಿಳಿಸಿದ್ದು ಕೂಡಲೇ ಅಂಗಡಿಯ ಒಳಗೆ ಹೋಗಿ ನೋಡಲಾಗಿ ಅಂಗಡಿಯೊಳಗಿದ್ದ ಸುಮಾರು 16 ಮೊಬೈಲ್ ಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಸದರಿ ಮೊಬೈಲ್ಗಳ ಅಂದಾಜು ಬೆಲೆ ಸುಮಾರು 2,68,290/- ರೂ ಆಗಿರುತ್ತೆ. ಕಳ್ಳತನ ಮಾಡಿಕೊಂಡು ಹೋಗಿರುವ ಮೊಬೈಲ್ಗಳನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರನ್ನು ಸ್ವೀಕರಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ಗ್ರಾಮಾಂತರ  ಪೊಲೀಸ್  ಠಾಣೆ.

ದಿನಾಂಕ: 25/05/2021 ರಂದು ಗ್ರಾಮಾಂತರ ಠಾಣಾ ಸರಹದ್ದಿನ ಲಕ್ಯಾ ಗ್ರಾಮದ ರಸ್ತೆ ಬದಿಯ ಸಾರ್ವಜನಿಕ ಸ್ಥಳದಲ್ಲಿ ಗುರುಶಾಂತಪ್ಪ ಎಂಬುವವರು  ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು  ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದು ಆರೋಪಿ ಗುರುಶಾಂತಪ್ಪನನ್ನು  ವಶಕ್ಕೆ ಪಡೆದು ಆತನು ಹೊಂದಿದ್ದ  90 ಎಂ.ಎಲ್. ನ ಕ್ಯಾಪ್ಟನ್ ಮಾರ್ಟಿನ್ ಸ್ಪೇಷಲ್ ವಿಸ್ಕಿಯ 57 ಟೆಟ್ರಾ ಪೌಚ್ ಗಳು ಹಾಗೂ 90 ಎಂ.ಎಲ್.ನ ಓರಿಜಿನಲ್ ಚಾಯ್ಸ್ ಡಿಲೆಕ್ಸ್ ವಿಸ್ಕಿಯ 4 ಟೆಟ್ರಾ ಪೌಚ್ಗಳು ಮದ್ಯದ ಅಂದಾಜು  ಬೆಲೆ 2283/-ರೂ ಹಾಗೂ ಮದ್ಯ ಮಾರಾಟದಿಂದ ಬಂದ 170 ರೂ ಹಣವನ್ನು ಮದ್ಯವನ್ನು  ವಶಪಡಿಸಿಕೊಂಡು  ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಸತ್ಯನಾರಾಯಣ. ಪಿ.ಐ. ಡಿ.ಸಿ.ಐ.ಬಿ. ಘಟಕ  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

 

ಇತ್ತೀಚಿನ ನವೀಕರಣ​ : 26-05-2021 07:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080