ಅಭಿಪ್ರಾಯ / ಸಲಹೆಗಳು

ಅಕ್ರಮ  ಮದ್ಯ ಮಾರಾಟ ಪ್ರಕರಣ

ಬಾಳೂರು ಪೊಲೀಸ್ ಠಾಣೆ.

ದಿನಾಂಕ 26.05.2022 ರಂದು ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಹಲಸಿನ ಮರ ಬಸ್ ನಿಲ್ದಾಣದ ಬಳಿ ಬಾಳೂರು ದರ್ಬರ್ ಪೇಟೆ ವಾಸಿ ವಿನ್ಸೆಂಟ್ ಡಿಸೋಜಾರವರು ತಮ್ಮ ದಿನಸಿ ಅಂಗಡಿಯಲಿ ್ಲ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಆರೋಪಿ ವಿನ್ಸೆಂಟ್ ಡಿಸೋಜಾರವರನ್ನು ವಶಕ್ಕೆ ಪಡೆದು  2437/- ರೂ ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತನ ವಿರುದ್ದ ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ .ಪವನ್ಕುಮಾರ್  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಬಸವನಹಳ್ಳಿ ಪೊಲೀಸ್ ಠಾಣೆ.

ದಿನಾಂಕ 26.05.2022 ರಂದು ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಲ್ಲಂಪುರ ಬಸ್ ನಿಲ್ದಾಣದ ಮುಂಭಾಗದ ರಸ್ತೆ ಬದಿಯಲ್ಲಿ  ಪ್ರಸನ್ನಕುಮಾರ ಬಿನ್ ಹುಲಿಯಪ್ಪಗೌಡ, ದಾಸರಹಳ್ಳಿ ವಾಸಿ ಈತನು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಆರೋಪಿ ಪ್ರಸನ್ನಕುಮಾರ್ನನ್ನು ವಶಕ್ಕೆ ಪಡೆದು 1230/- ರೂ ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತನ ವಿರುದ್ದ ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ ಕಿರಣ್ಕುಮಾರ್ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ 26.05.2022 ರಂದು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಇಂದಿರಾಗಾಂಧಿ ಬಡಾವಣೆಯ 1 ನೇ ಕ್ರಾಸ್ ನಲ್ಲಿರುವ ಗಂಗಮ್ಮ ಕೋಂ ಗಂಗಪ್ಪ, ಇಂದಿರಾಗಾಂಧಿ ಬಡಾವಣೆ ವಾಸಿ ಈತನು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಆರೋಪಿತಳನ್ನು  ವಶಕ್ಕೆ ಪಡೆದು , ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತಳ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಗ್ರಾಮಾಂತರ ಠಾಣಾ ಪಿಸಿ ಚಿಂತನ್ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಯಗಟಿ  ಪೊಲೀಸ್ ಠಾಣೆ.

ದಿನಾಂಕ 26.05.2022 ರಂದು ಯಗಟಿ ಪೊಲೀಸ್ ಠಾಣಾ ವ್ಯಾಪ್ತಿಯ ಮುಗಳಿಕಟ್ಟೆ ಗ್ರಾಮದ ಮಹಾಲಿಂಗಪ್ಪರವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಆರೋಪಿ ಮಹಾಲಿಂಗಪ್ಪನನ್ನು ವಶಕ್ಕೆ ಪಡೆದು 1580/- ರೂ ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತನ ವಿರುದ್ದ ಯಗಟಿ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ ಶಶಿಕುಮಾರ್ ವೈ,ಎಸ್. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಮಲ್ಲಂದೂರು ಪೊಲೀಸ್ ಠಾಣೆ.

ದಿನಾಂಕ 25.05.2022 ರಂದು ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೆಳಕುಂತಿ ಗ್ರಾಮದ ಸಂತೋಷಬಿನ್ ಚಂದ್ರೇಗೌಡ  ಎಂಬುವವರು ನೀರಿನ ಟ್ಯಾಂಕ್ ಮುಂಬಾಗದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಆರೋಪಿ ಸಂತೋಷನನ್ನು ವಶಕ್ಕೆ ಪಡೆದು  1098/- ರೂ ಬೆಲೆಯ ಮದ್ಯವನ್ನು ಹಾಗೂ 250/-ರೂ ನಗದು ಹಣವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತನ ವಿರುದ್ದ ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ .ರವೀಶ್ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ 25.05.2022 ರಂದು ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಎಂ.ಸಿ ಹಳ್ಳಿ ಗ್ರಾಮದಲ್ಲಿ ಅರುಣ್ಕುಮಾರ್  ಎಂಬುವವರಿಗೆ ಸೇರಿದ ಪ್ರಾವಿಜನ್ ಸ್ಟೋರ್ ಎದುರು ಸಾರ್ವಜನಿಕ ರಸ್ತೆಯಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ನೀಡುವುದಲ್ಲದೆ ಜಾಗವನ್ನು ನೀಡಿ ಸಹಕರಿಸುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿದ್ದು ಅರುಣ್ಕುಮಾರ್ ರವರು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ನೀಡುತ್ತಿದ್ದು ಆತನನ್ನು ವಶಕ್ಕೆ ಪಡೆದು ಮದ್ಯವನ್ನು ಹಾಗೂ 180/- ರೂ ನಗದು ಹಣವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತನ ವಿರುದ್ದ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ .ಅನಿಲ್ಕುಮಾರ್ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಗಾಂಜಾ ಮಾರಾಟ ಪ್ರಕರಣ.

ಸಿ.ಇ.ಎನ್. ಪೊಲೀಸ್ ಠಾಣೆ.

ದಿನಾಂಕ 26-05-2022 ರಂದುಮದ್ಯಾಹ್ನ 12-15 ಗಂಟೆ ಸಮಯದಲ್ಲಿ  ಚಿಕ್ಕಮಗಳೂರು ತಾಲ್ಲೂಕು ಭಕ್ತರಹಳ್ಳಿಗ್ರಾಮದ ಬಸವನಕೋಡಿ-ಸಿಂದಿಗೆರೆ ರಸ್ತೆಯಲ್ಲಿರುವ ಭಕ್ತರಹಳ್ಳಿಗೆ ಹೋಗುವ ಕ್ರಾಸ್ನಲ್ಲಿರುವ ಅರಳಿ ಮರದ ಹತ್ತಿರ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ 1) ದಾನೇಂದ್ರ ಬಿನ್ ಲೇಟ್  ಗೋವಿಂದೇಗೌಡ 2) ಸಲ್ಮಾನ್ ಬಿನ್ ಪ್ಯಾರು 3) ಅತಾವುಲ್ಲಾ ಬಿನ್ ಅಬೀವುಲ್ಲಾ ಇವರುಗಳನ್ನು ವಶಕ್ಕೆ ಪಡೆದು 1) 30,000/-ರೂ ಬೆಲೆಯ 1 ಕೆ.ಜಿ.150 ಗ್ರಾಂ ತೂಕದ ಒಣ ಗಾಂಜಾ 2) ಗಾಂಜಾ ಮಾರಾಟದಿಂದ ಸಂಗ್ರಹಿಸಿದ್ದ 1450 /- ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿತರ ವಿರುದ್ದ ಸಿ.ಇ.ಎನ್. ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಐ. ಮುತ್ತುರಾಜು ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಗಾಂಜಾ ಸೇವನೆ ಪ್ರಕರಣ.

ಅಜ್ಜಂಪುರ  ಪೊಲೀಸ್ ಠಾಣೆ.

ದಿನಾಂಕ 25-05-2022 ರಂದು ರಾತ್ರಿ 08-40 ಗಂಟೆ ಸಮಯದಲ್ಲಿ  ಬುಕ್ಕಾಂಬೂದಿ ಗ್ರಾಮದಲ್ಲಿ ಇಮ್ರಾನ್ ಬಿನ್ ಫಕ್ರುದ್ದೀನ್, ಮಾಕನಹಳ್ಳಿ, ಅಜ್ಜಂಪುರ ತಾಲ್ಲೂಕು ವಾಸಿ ಈತನು ಗಾಂಜಾ ಸೇವನೆ ಮಾಡಿದ್ದು ,ಸದರಿ ಆಸಾಮಿಯನ್ನು ವಶಕ್ಕೆ ಪಡೆದು ಆರೋಪಿತನ ವಿರುದ್ದ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ.ಖಾದರ್ ಬಾಷಾ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಅಜ್ಜಂಪುರ  ಪೊಲೀಸ್ ಠಾಣೆ.

ದಿನಾಂಕ 25-05-2022 ರಂದು ರಾತ್ರಿ 08-40 ಗಂಟೆ ಸಮಯದಲ್ಲಿ  ಬುಕ್ಕಾಂಬೂದಿ ಗ್ರಾಮದಲ್ಲಿ ಇಮ್ರಾನ್ ಬಿನ್ ಫಕ್ರುದ್ದೀನ್, ಮಾಕನಹಳ್ಳಿ, ಅಜ್ಜಂಪುರ ತಾಲ್ಲೂಕು ವಾಸಿ ಈತನು ಗಾಂಜಾ ಸೇವನೆ ಮಾಡಿದ್ದು ,ಸದರಿ ಆಸಾಮಿಯನ್ನು ವಶಕ್ಕೆ ಪಡೆದು ಆರೋಪಿತನ ವಿರುದ್ದ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ.ಖಾದರ್ ಬಾಷಾ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಅಜ್ಜಂಪುರ  ಪೊಲೀಸ್ ಠಾಣೆ.

ದಿನಾಂಕ 25-05-2022 ರಂದು ರಾತ್ರಿ 09-30 ಗಂಟೆ ಸಮಯದಲ್ಲಿ  ಮಾಕನಹಳ್ಳಿ ಕೆರೆಯ ಬಳಿ ಪೈರೋಜ್ಖಾನ್  ಬಿನ್ ಬುಡೇನ್ ಸಾಬ್, ಮಾಕನಹಳ್ಳಿ, ಅಜ್ಜಂಪುರ ತಾಲ್ಲೂಕು ವಾಸಿ ಈತನು ಗಾಂಜಾ ಸೇವನೆ ಮಾಡಿದ್ದು ,ಸದರಿ ಆಸಾಮಿಯನ್ನು ವಶಕ್ಕೆ ಪಡೆದು ಆರೋಪಿತನ ವಿರುದ್ದ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ.ಖಾದರ್ ಬಾಷಾ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ

ಅಕ್ರಮ ಜೂಜಾಟ ಪ್ರಕರಣ.

ಸಿ.ಇ.ಎನ್.  ಪೊಲೀಸ್ ಠಾಣೆ.

ದಿನಾಂಕ 25.05.2022ರಂದು ಚಿಕ್ಕಮಗಳೂರು ನಗರದ ಕಲ್ಲುದೊಡ್ಡಿ ಶಾಂತಿನಗರ ಪೌರಕಾರ್ಮಿಕರಿಗೆ ನಿರ್ಮಿಸುತ್ತಿರುವ ಕಟ್ಟಡಗಳ ಲೇಔಟ್ ಒಳಭಾಗದ ಸಾರ್ವಜನಿಕ ರಸ್ತೆಯಲ್ಲಿ ್ಲ ಅಕ್ರಮವಾಗಿ ಜೂಜಾಡುತ್ತಿದ್ದ 1) ವೆಂಕಟೇಶ@ ವಿಷ್ಣು 2) ಜಗದೀಶ 3) ವೆಂಕಟೇಶ4) ಸ್ವಾಮಿ 5) ಅಜಯ್ 6)ಅಜ್ಜು ರವರುಗಳನ್ನು ವಶಕ್ಕೆ ಪಡೆದು ,ಆರೋಪಿತರ ಬಳಿಯಿದ್ದ  8,720/- ನಗದು ಹಣ, 52 ಇಸ್ಪೀಟ್ ಎಲೆಗಳು, ಒಂದು ಹಸಿರು ಬಣ್ಣದ ಪ್ಲಾಸ್ಟಿಕ್ ಕವರ್ ಇವುಗಳನ್ನು  ವಶಕ್ಕೆ ಪಡೆದು ಆರೋಪಿತರ ವಿರುದ್ದ ಸಿ.ಇ.ಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿರುತ್ತಾರೆ.ಈ ಕಾರ್ಯಚರಣೆಯಲ್ಲಿ ಸಿ.ಇ.ಎನ್ ಠಾಣಾ ಪಿ.ಐ.ಮುತ್ತಿರಾಜು ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.                                              

ಕಳ್ಳತನ ಪ್ರಕರಣ.

ನ.ರಾ.ಪುರ ಪೊಲೀಸ್ ಠಾಣೆ.

ದಿನಾಂಕ 25-05-2022 ರಂದು ಪದ್ಮಾವತಿ ಕೋಂ ರಮೇಶ್, ನ,ರಾ.ಪುರ ವಾಸಿರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 11-05-2022 ರಂದುಮದ್ಯಾಹ್ನ 12-00 ಗಂಟೆ ಸಮಯದಲ್ಲಿ  ನನ್ನ ತಾಯಿಯಾದ ಲಕ್ಷ್ಮೀದೇವಿಯವರು ನ.ರಾ,ಪುರ ಪಟ್ಟಣದ ಕೋಟೆ ಮಾರಿಕಾಂಭ ಜಾತ್ರೆಗೆ ಹೋಗಿದ್ದು , ದೇವರ ದರ್ಶನಕ್ಕೆ ದೇವಸ್ಥಾನದ ಒಳಗಡೆ ಹೋದಾಗ ಜನಜಂಗುಳಿ ಇದ್ದು , ದೇವರ ದರ್ಶನ ಪಡೆದು ಹೊರಗಡೆ ಬಂದು ನೋಡಿದಾಗ ಕೊರಳಿನಲ್ಲಿದ್ದ 20 ಗ್ರಾಂ ತೂಕದ ಚಿನ್ನದ ಸರ ಕೊರಳಿನಲ್ಲಿ ಇರುವುದಿಲ್ಲ. ಪಿರ್ಯಾದಿಯವರ ಕೊರಳಿನಲ್ಲಿದ್ದ ಚಿನ್ನದ ಸರವನ್ನು ದೇವಸ್ಥಾನದ ಒಳಗಡೆ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕಳ್ಳರನ್ನು ಹಾಗೂ ಸರವನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ನ.ರಾ.ಪುರ. ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

 

ಇತ್ತೀಚಿನ ನವೀಕರಣ​ : 26-05-2022 06:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080