ಅಭಿಪ್ರಾಯ / ಸಲಹೆಗಳು

ಗೋ  ಹತ್ಯಾ ಪ್ರತಿಬಂಧಕ ಸಂರಕ್ಷಣಾ ಆದ್ಯಾದೇಶ-2020         

ಅಜ್ಜಂಫುರ    ಪೊಲೀಸ್ ಠಾಣೆ .

ದಿನಾಂಕ 26-06-2022 ರಂದುಮಂಜುನಾಥ ಬಿನ್ ರಾಮಚಂದ್ರ, ಜಿಜಿಎಫ್, ಎನ್,ಜಿ,ಓ ಇವರು ನೀಡಿದ ದೂರಿನ ಸಾರಾಂಶವೇನೆಂದರೆ  ಬಿಲ್ಲಹಳ್ಳಿ ಗ್ರಾಮದ ಬೀದಿಯಲ್ಲಿ ಸೈಯದ್ ಇಂತಿಯಾಜ್ ಬಿನ್ ಸೈಯದ್ ಅಜೇಬ್ ಸಾಬ್ ಎಂಬುವವರು ಕಸಾಯಿಖಾನೆಯಲ್ಲಿ ಯಾವುದೇ ಪರವಾನಗಿ ಹೊಂದದೆ ಅಕ್ರಮವಾಗಿ ದನಕರುಗಳನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಕಸಾಯಿಖಾನೆಗಳಲ್ಲಿ ದನಕರುಗಳನ್ನು ಕೂಡಿಹಾಕಿಕೊಂಡಿದ್ದು , ದಾಳಿ ನಡೆಸಿ ಕೂಡಿಹಾಖಿದ್ದ ದನಕರುಗಳನ್ನು, ದನದ ಮಾಂಸ ಹಾಗೂ ಆರೋಪಿಯನ್ನು ವಶಕ್ಕೆ ಪಡೆದು  ಅಜ್ಜಂಪುರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತಾರೆ.

ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣ.

ಕಡೂರು   ಪೊಲೀಸ್ ಠಾಣೆ.

ದಿನಾಂಕ 26-06-2022 ರಂದು ಪಿರ್ಯಾದುದಾರರಾದ ನಾಗೇಂದ್ರಪ್ಪರವರು ನೀಡಿದ ಹೇಳಿಕೆಯ ದೂರಿನ ಸಾರಾಂಶವೇನೆಂದರೆ ದಿನಾಂಕ 26-06-2022 ರಂದು ಪಿರ್ಯಾದುದಾರರು  ಕುಟುಂಬ ಸಮೇತ ಧರ್ಮಸ್ಥಳಕ್ಕೆ ಹೋಗಲೆಂದು ಬಳ್ಳಾರಿಯಿಂದ ಹೊರಟು ಕೆಎ-37 ಎನ್ -0321 ಕಾರಿನಲ್ಲಿ ಬರುತ್ತಿರುವಾಗ ಬೆಳಗಿನ ಜಾವ 03-15 ಗಂಟೆ ಸಮಯದಲ್ಲಿ ಕಾರನ್ನು ಜನಾರ್ಧನನು ಚಾಲನೆ ಮಾಡುತ್ತಿದ್ದು ,ಕಡೂರಿನಿಂದ 8 ಕಿ,ಮೀ ದೂರದಲ್ಲಿ ಹೋಗುತ್ತಿರುವಾಗ ಕಾರನ್ನು ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ್ದರಿಂದ  ಕಾರು ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಹಳ್ಳಕ್ಕೆ ಬಿದ್ದಿದ್ದರಿಂದ ಕಾರಿನಲ್ಲಿದ್ದ ಸ್ನೇಹಾಳ (12 ವರ್ಷ) ತಲೆಗೆ ಪೆಟ್ಟುಬಿದ್ದಿದ್ದು  ಸ್ಥಳದಲ್ಲಿಯೇ ಮೃತಪಟ್ಟಿದ್ದು ,ಕಾರಿನ್ಲಲಿದ್ದ  ಇತರರಿಗೂ ಸಹ ಪೆಟ್ಟಾಗಿದ್ದು ಕಾರಿನ ಚಾಲಕ ಜನಾರ್ಧನನ ವಿರುದ್ದ ಕ್ರಮಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಗಾಂಜಾ ಸೇವನೆ ಪ್ರಕರಣ,

ಬೀರೂರು ಪೊಲೀಸ್ ಠಾಣೆ.

ದಿನಾಂಕ 26-06-2022 ರಂದು ಮದ್ಯಾಹ್ನ 12-15 ಗಂಟೆ ಸಮಯದಲ್ಲಿ ಬೀರೂರು ಠಾಣಾ ಸರಹದ್ದಿನ ಬೀರೂರು ಪಶು ಆಸ್ಪತ್ರೆ ಬಳಿ ರಬ್ಬಾನಿ ಬಿನ್ ಸನ್ನವುಲ್ಲಾ , 23 ವರ್ಷ, ಮುಸ್ಲಿಂ ಜನಾಂಗ, ವಾಸ ಕೆ.ಇ.ಬಿ. ಹಿಂಭಾಗ, ಬೀರೂರು ಟೌನ್ ಈತನು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಾದಕ ವಸ್ತವನ್ನು ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ ,ಸದರಿ ಆಸಾಮಿಯನ್ನು ವಶಕ್ಕೆ ಪಡೆದು, ಸದರಿ ಆಸಾಮಿಯು ಮಾದಕ ವಸ್ತವನ್ನು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿದ್ದು, ಆರೋಪಿತನ ವಿರುದ್ದ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಬೀರೂರು ಪೊಲೀಸ್ ಠಾಣಾ ಪಿ.ಎಸ್.ಐ.ವಿಶ್ವನಾಥ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ

ಬೀರೂರು ಪೊಲೀಸ್ ಠಾಣೆ.

ದಿನಾಂಕ 26-06-2022 ರಂದು ಮದ್ಯಾಹ್ನ 01-30  ಗಂಟೆ ಸಮಯದಲ್ಲಿ ಬೀರೂರು ಠಾಣಾ ಸರಹದ್ದಿನ ಬೀರೂರಿನ ಮಹಾನವಮಿ ಬಯಲಿನಿಂದ ಸ್ಮಶಾನಕ್ಕೆ ಹೋಗುವ ರಸ್ತೆಯಲ್ಲಿ  ಆಸೀಫ್  ಬಿನ್ ಯಾಸೀನ್, 26 ವರ್ಷ, ಮುಸ್ಲಿಂ ಜನಾಂಗ, ವಾಸ ಸರಸ್ವತಿಪುರಂ 1 ನೇ ತಿರುವು, ಬೀರೂರು  ಟೌನ್ ಈತನು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಾದಕ ವಸ್ತವನ್ನು ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ ,ಸದರಿ ಆಸಾಮಿಯನ್ನು ವಶಕ್ಕೆ ಪಡೆದು, ಸದರಿ ಆಸಾಮಿಯು ಮಾದಕ ವಸ್ತವನ್ನು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿದ್ದು, ಆರೋಪಿತನ ವಿರುದ್ದ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಬೀರೂರು ಪೊಲೀಸ್ ಠಾಣಾ ಪಿ.ಎಸ್.ಐ.ವಿಶ್ವನಾಥ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ

ಬೀರೂರು ಪೊಲೀಸ್ ಠಾಣೆ.

ದಿನಾಂಕ 26-06-2022 ರಂದು ಮದ್ಯಾಹ್ನ 03-15  ಗಂಟೆ ಸಮಯದಲ್ಲಿ ಬೀರೂರು ಠಾಣಾ ಸರಹದ್ದಿನ ಬೀರೂರಿನಿಂದ  ಲಿಂಗದಹಳ್ಳಿಗೆ  ಹೋಗುವ ರಸ್ತೆಯಲ್ಲಿ  ಯುವರಾಜ ಬಿನ್ ಕೃಷ್ಣಮೂರ್ತಿ, 20 ವರ್ಷ, ತಮಿಳು ಜನಾಂಗ, ಮೆಕಾನಿಕ್ ಕೆಲಸ, ವಾಸ ಮಾರಿದಿಬ್ಬ, ಲಕ್ಕವಳ್ಳಿ, ತರೀಕೆರೆ ವಾಸಿ ಈತನು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಾದಕ ವಸ್ತವನ್ನು ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ ,ಸದರಿ ಆಸಾಮಿಯನ್ನು ವಶಕ್ಕೆ ಪಡೆದು, ಸದರಿ ಆಸಾಮಿಯು ಮಾದಕ ವಸ್ತವನ್ನು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿದ್ದು, ಆರೋಪಿತನ ವಿರುದ್ದ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಬೀರೂರು ಪೊಲೀಸ್ ಠಾಣಾ ಪಿ.ಎಸ್.ಐ.ವಿಶ್ವನಾಥ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.  

ಎನ್.ಆರ್. ಪುರ   ಪೊಲೀಸ್ ಠಾಣೆ.

ದಿನಾಂಕ 25-06-2022 ರಂದು ಸಂಜೆ 06-05   ಗಂಟೆ ಸಮಯದಲ್ಲಿ ಎನ್.ಆರ್.ಪುರ  ಠಾಣಾ ಸರಹದ್ದಿನ ಲಿಂಗಾಫುರ ಗ್ರಾಮದ ಜೈಲ್ ಬಿಲ್ಡಿಂಗ್ ಹತ್ತಿರ ಸಂಜು ಬಿನ್ ರಾಜು, 23 ವರ್ಷ, ಟಿ.ಬಿ.ರಸ್ತೆ, ನ.ರಾ.ಪುರ ತಾಲ್ಲೂಕು ವಾಸಿ ಈತನು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಾದಕ ವಸ್ತವನ್ನು ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ ,ಸದರಿ ಆಸಾಮಿಯನ್ನು ವಶಕ್ಕೆ ಪಡೆದು, ಸದರಿ ಆಸಾಮಿಯು ಮಾದಕ ವಸ್ತವನ್ನು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿದ್ದು, ಆರೋಪಿತನ ವಿರುದ್ದ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಎನ್.ಆರ್.ಪುರ  ಪೊಲೀಸ್ ಠಾಣಾ ಪಿ.ಎಸ್.ಐ ದಿಲೀಪ್ಕುಮಾರ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಕೊಪ್ಪ   ಪೊಲೀಸ್ ಠಾಣೆ.

ದಿನಾಂಕ 25-06-2022 ರಂದು ರಾತ್ರಿ 09-50 ಗಂಟೆ ಸಮಯದಲ್ಲಿ ಕೊಪ್ಪ  ಠಾಣಾ ಸರಹದ್ದಿನ ರಾಘವೇಂದ್ರನಗರಕ್ಕೆ ರಸ್ತೆಯಲ್ಲಿ  ಮಣಿಕಂಠ ಬಿನ್ ಗಣೇಶ,  , 35 ವರ್ಷ, ತಮಿಳು ಜನಾಂಗ, ಕೂಲಿಕೆಲಸ, ವಾಸ ರಾಘವೇಂದ್ರನಗರ, ಹರಂದೂರು ವಾಸಿ ಈತನು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಾದಕ ವಸ್ತವನ್ನು ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ ,ಸದರಿ ಆಸಾಮಿಯನ್ನು ವಶಕ್ಕೆ ಪಡೆದು, ಸದರಿ ಆಸಾಮಿಯು ಮಾದಕ ವಸ್ತವನ್ನು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿದ್ದು, ಆರೋಪಿತನ ವಿರುದ್ದ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಕೊಪ್ಪ ಪೊಲೀಸ್ ಠಾಣಾ ಪಿ.ಎಸ್.ಐ ಕೌಶಿಕ್.ಬಿ.ಸಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಕೊಪ್ಪ   ಪೊಲೀಸ್ ಠಾಣೆ.

ದಿನಾಂಕ 25-06-2022 ರಂದು ರಾತ್ರಿ 09-30 ಗಂಟೆ ಸಮಯದಲ್ಲಿ ಕೊಪ್ಪ  ಠಾಣಾ ಸರಹದ್ದಿನ ಕುದುರೆಗುಂಡಿ ನಾಗರಮಕ್ಕಿಗೆ ಹೋಗುವ ರಸ್ತೆಯಲ್ಲಿ  ಶಪಾನ್ ಬಿನ್ ಫಾರೂಕ್,  24 ವರ್ಷ, ಮುಸ್ಲಿಂ  ಜನಾಂಗ, ಮೀನುವ್ಯಾಪಾರ, ವಾಸ ಕುದುರೆಗುಂಡಿ ಈತನು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಾದಕ ವಸ್ತವನ್ನು ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ ,ಸದರಿ ಆಸಾಂಇಯನ್ನು ವಶಕ್ಕೆ ಪಡೆದು, ಸದರಿ ಆಸಾಮಿಯು ಮಾದಕ ವಸ್ತವನ್ನು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿದ್ದು, ಆರೋಪಿತನ ವಿರುದ್ದ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಕೊಪ್ಪ ಪೊಲೀಸ್ ಠಾಣಾ ಪಿ.ಎಸ್.ಐ ಕೌಶಿಕ್.ಬಿ.ಸಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಕೊಪ್ಪ   ಪೊಲೀಸ್ ಠಾಣೆ.

ದಿನಾಂಕ 25-06-2022 ರಂದು ರಾತ್ರಿ 10-20 ಗಂಟೆ ಸಮಯದಲ್ಲಿ ಕೊಪ್ಪ  ಠಾಣಾ ಸರಹದ್ದಿನ ರಾಘವೇಂದ್ರನಗರಕ್ಕೆ ಹೋಗುವ ರಸ್ತೆಯಲ್ಲಿ  ಕಾರ್ತಿಕ ಬಿನ್ ರವಿ, 26 ವರ್ಷ, ಪೂಜಾರಿ  ಜನಾಂಗ, ಕೂಲಿಕೆಲಸ, ವಾಸ ರಾಘವೇಂದ್ರನಗರ, ಹರಂದೂರು ವಾಸಿ ಈತನು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಾದಕ ವಸ್ತವನ್ನು ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ ,ಸದರಿ ಆಸಾಂಇಯನ್ನು ವಶಕ್ಕೆ ಪಡೆದು, ಸದರಿ ಆಸಾಮಿಯು ಮಾದಕ ವಸ್ತವನ್ನು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿದ್ದು, ಆರೋಪಿತನ ವಿರುದ್ದ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಕೊಪ್ಪ ಪೊಲೀಸ್ ಠಾಣಾ ಪಿ.ಎಸ್.ಐ ಕೌಶಿಕ್.ಬಿ.ಸಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 26-06-2022 06:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080