ಅಭಿಪ್ರಾಯ / ಸಲಹೆಗಳು

ಮನುಷ್ಯ ಕಾಣೆ ಪ್ರಕರಣ.

ಎನ್ .ಆರ್.ಪುರ   ಪೊಲೀಸ್ ಠಾಣೆ.

ದಿನಾಂಕ:-26-09-2021 ರಂದು ಮಂಜುಳ ಕೋಂ ಸಂಪತ್, ಲಕ್ಕುಂದ ಗ್ರಾಮವಾಸಿರವರು ನೀಡಿದ ದೂರಿನ ಸಾರಾಂಶವೇನೆಂದರೆ , ನನ್ನ ಗಂಡನಾದ ಸಂಪತ್ರವರು  ದಿನಾಂಕ 18-09-2021 ರಂದು ಮದ್ಯಾಹ್ನ 02-30 ಗಂಟೆ ಸಮಯದಲ್ಲಿ ಊರಿಗೆ  ಕೆಲಸಕ್ಕೆ ಹೋದವರು ವಾಪಾಸ್ ಮನೆಗೆ ಬಂದಿರುವುದಿಲ್ಲ. ಪರಿಚಯಸ್ಥರ, ಸಂಬಂಧಿಕರ ಹಾಗೂ ಸ್ನೇಹಿತರ ಮನೆಗಳಲ್ಲಿ ಹುಡುಕಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ ನನ್ನ ಗಂಡನನ್ನು  ಪತ್ತೆ  ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಕ್ರಿಕೆಟ್ ಬೆಟ್ಟಿಂಗ್ ಜೂಜು ಪ್ರಕರಣ.

ಸಿ.ಇ.ಎನ್ .ಪೊಲೀಸ್ ಠಾಣೆ.

ದಿನಾಂಕ 25-09-2021 ರಂದು ರಾತ್ರಿ 22-10 ಗಂಟೆ ಸಮಯದಲ್ಲಿ ಚಿಕ್ಕಮಗಳೂರು ನಗರದ ಮಲ್ಲಂದೂರು ರಸ್ತೆಯಲ್ಲಿರುವ ನ್ಯೂಸ್ಟಾರ್ ಮೊಬೈಲ್ ಅಂಗಡಿಯ ಮುಂಭಾಗದಲ್ಲಿ ಅಕ್ರಮವಾಗಿ ಐ.ಪಿ.ಎಲ್, ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ಆಡುತ್ತಿದ್ದ 1) ಶ್ರೀಧರ 2) ಮಹಮದ್ ಆಲಿ 3) ರೋಷನ್ ಜಮೀರ್ @ಜಮ್ಮು ಇವರುಗಳನ್ನು ವಶಕ್ಕೆ ಪಡೆದು ಅವರುಗಳ ಬಳಿಯಿದ್ದ ಎರಡು ಮೊಬೈಲ್ ಪೋನ್ ಗಳು , ಐಪಿಎಲ್ ಕ್ರಿಕೆಟ್ ಬಿಟ್ಟಿಂಗ್ ಜೂಜಾಟಕ್ಕೆ ಹಣವನ್ನು ಕಟ್ಟಿದವರ ಹೆಸರು ಮತ್ತು ಹಣ ನಮೂದು ಇರುವ ಚೀಟಿ, ಒಂದು ಬಾಲ್ ಪೆನ್ ಹಾಗೂ 21,000/-ರೂ ನಗದು ಹಣವನ್ನು  ಅಮಾನತ್ತುಪಡಿಸಿಕೊಂಡು ಆರೋಪಿತರುಗಳ ವಿರುದ್ದ  ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ, ನೀತು .ಆರ್. ಗುಡೆ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಜೂಜಾಟ   ಪ್ರಕರಣ.

ಅಜ್ಜಂಪುರ  ಪೊಲೀಸ್ ಠಾಣೆ,

ದಿನಾಂಕ 25-09-2021 ರಂದು 14-15 ಗಂಟೆ ಸಮಯದಲ್ಲಿ ಭಕ್ತನಕಟ್ಟೆ ಜುಂಜಪ್ಪನ ದೇವಸ್ಥಾನದ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಜೂಜಾಟವಾಡುತ್ತಿದ್ದ 1) ಜುಯಾವುಲ್ಲಾ 2) ಶಿವ 3) ಎನ್,ಎಸ್, ಹರೀಶ 4) ಮಂಜು 5) ನಬೀಸ್ 6) ಶಫೀ ಇವರುಗಳನ್ನು ವಶಕ್ಕೆ ಪಡೆದು ಅವರುಗಳ ಬಳಿಯಿದ್ದ 52 ಇಸ್ಪೀಟ್ ಎಲೆಗಳು, ಹಳದಿ ಬಣ್ಣದ ಟಾರ್ಪಲ್ , 17,160 /- ರೂ ನಗದು ಹಣವನ್ನು ಅಮಾನತ್ತುಪಡಿಸಿಕೊಂಡು ಆರೋಪಿತರುಗಳ ವಿರುದ್ದ  ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಐ. ಲಿಂಗರಾಜು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ.

ಅಜ್ಜಂಪುರ  ಪೊಲೀಸ್ ಠಾಣೆ.

ದಿನಾಂಕ25-09-2021 ರಂದು ಶಕುಂತಲ  ಕೋಂ ಪಾಲಾಕ್ಷಮೂರ್ತಿ , ಅಜ್ಜಂಪುರ ಬಸವೇಶ್ವರ ಬಡಾವಣೆ ವಾಸಿರವರು ನೀಡಿದ ದೂರಿನ ಸಾರಾಂಶವೇನೆಂದರೆ , ನನ್ನ ಗಂಡನಾದ ಪಾಲಾಕ್ಷಮೂರ್ತಿರವರು ಚೌಳಹಿರಿಯೂರು ಗ್ರಾಮಪಂಚಾಯ್ತಿಯಲ್ಲಿ ಗ್ರಾಮಲೆಕ್ಕಿಗರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ 24-09-2021 ರಂದು ಬೆಳಗ್ಗೆ ಕೆಲಸಕ್ಕೆ ಹೋದವರು ವಾಪಾಸ್ ಮನೆಗೆ ಬಂದಿರುವುದಿಲ್ಲ. ಪರಿಚಯಸ್ಥರ, ಸಂಬಂಧಿಕರ ಹಾಗೂ ಸ್ನೇಹಿತರ ಮನೆಗಳಲ್ಲಿ ಹುಡುಕಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ ನನ್ನ ಗಂಡನನ್ನು  ಪತ್ತೆ  ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಅಜ್ಜಂಫುರ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಆತ್ಮಹತ್ಯೆಗೆ ಪ್ರೇರಣೆ ಪ್ರಕರಣ.

ಗೋಣಿಬೀಡು ಪೊಲೀಸ್ ಠಾಣೆ.

ದಿನಾಂಕ 25-09-2021 ರಂದು ಗುಲಾಬಿ  ಕೋಂ ಕೃಷ್ಣಪ್ಪ, ಮಣ್ಣಿಕೆರೆ ಗ್ರಾಮ ವಾಸಿರವರು ನೀಡಿದ ದೂರಿನ ಸಾರಾಂಶವೇನೆಂದರೆ ನನ್ನ ಮಗಳಾದ ಸಂದ್ಯಾ, 24 ವರ್ಷ ಇವಳು ಈಗ್ಗೆ ಒಂದು ವರ್ಷಗಳಿಂದ ನಮ್ಮ ಗ್ರಾಮದ ಆನಂದರವರ ಎರಡನೇ ಮಗನಾದ ಅರುಣ್ ರವರನ್ನು ಪ್ರೀತಿಸುತ್ತಿದ್ದು, ದಿನಾಂಕ 24-09-2021 ರಂದು ರಾತ್ರಿ 07-00 ಗಂಟೆಯಲ್ಲಿ ನನ್ನ ಮಗಳು ಅಳುತ್ತಿದುದನ್ನು ಕಂಡು ಗಾಬರಿಗೊಂಡು ನೋಡಲಾಗಿ ವಿಷದ ಬಾಟಲಿ ಕೆಳಗೆ ಬಿದ್ದಿದ್ದು , ಏಕೆ ಅಳುತ್ತಿದ್ದೀಯಾ ಎಂದು ಕೇಳಿದ್ದಕ್ಕೆ ನಾನು ಪ್ರೀತಿಸುತ್ತಿದ್ದ ಅರುಣನು ನಿನ್ನನ್ನು ಮದುವೆಯಾಗುವುದಿಲ್ಲ, ಎಲ್ಲಿಯಾದರೂ ಹೋಗಿ ಸಾಯಿ ಎಂದು ಹೇಳಿದನು ಅದಕ್ಕೆ ನಾನು ವಿಷವನ್ನು ಕುಡಿದಿರುತ್ತೇನೆಂದು ತಿಳಿಸಿದ್ದು ಕೂಡಲೇ ಆಕೆಯನ್ನು ಚಿಕಿತ್ಸೆಗಾಗಿ ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆ ಮೇರಗೆ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆದುಕೋಮಡು ಹೋಗಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 25-09-2021 ರಂದು ಸಂಜೆ 06-30 ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾಳೆ, ನನ್ನ ಮಗಳ ಸಾವಿಗೆ ಕಾರಣನಾದ ಅರುಣನ ವಿರುದ್ದ ಕಾನೂನುಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಗೋಣಿಬೀಡು  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಇತ್ತೀಚಿನ ನವೀಕರಣ​ : 26-09-2021 06:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080