ಅಭಿಪ್ರಾಯ / ಸಲಹೆಗಳು

ರಸ್ತೆ ಅಪಘಾತ ಪ್ರಕರಣ

ಗ್ರಾಮಾಂತರ ಪೊಲೀಸ್ ಠಾಣೆ

ದಿನಾಂಕ:26/10/2021 ರಂದು ಪಿರ್ಯಾದಿ ಕೆ.ಕೆ. ಸುರೇಶ್ ರವರು ನೀಡಿದ ದೂರಿನಲ್ಲಿ ದಿನಾಂಕ 25/10/2021 ರಂದು ರಾತ್ರಿ ಪಿರ್ಯಾಧಿಯ ಅಣ್ಣ  ಕೆ.ಕೆ. ರಮೇಶ್  ರವರು ಕೆಎ-18-ಇಹೆಚ್-4140 ನಂಬರಿನ ಡಿಯೋ ಸ್ಕೂಟಿಯಲ್ಲಿ ಚಿಕ್ಕಮಗಳೂರಿನಿಂದ ಕರ್ತಿಕೆರೆಗೆ ಹೋಗುತ್ತಿರುವಾಗ ಚಿಕ್ಕಮಗಳೂರು- ಬೆಲೂರು ಮುಖ್ಯ ರಸ್ತೆಯ ದಿ ಬಿ ಹೈವ್ ಹೋಮ್ ಸ್ಟೇ ಮುಂಭಾಗದಲ್ಲಿ ಎಪಿ-37-ಟಿಸಿ-8559 ನಂಬರಿನ ಲಾರಿ ಚಾಲಕ ಲಾರಿಯನ್ನು ಅತೀ ವೇಗ ಮತ್ತು ನಿರ್ಲಕ್ಷತದಿಂದ ಚಾಲನೆ ಮಾಡಿಕೊಂಡು ಬಂದು ಸ್ಕೂಟಿಗೆ ಡಿಕ್ಕಿ ಹೊಡೆಸಿದ ಪರಿಣಾಮ ರಮೇಶರವರ ಎರಡೂ ಕೈಗಳಿಗೆ ಹಾಗೂ ತಲೆಗೆ ತೀವ್ರ ಪೆಟ್ಟು ಬಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಎಂದು ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ  ಪ್ರಕರಣ

ಬಾಳೂರು ಪೊಲೀಸ್ ಠಾಣೆ

ದಿನಾಂಕ:26/10/2021 ರಂದು ಬಾಳೂರು ಠಾಣಾ ವ್ಯಾಪ್ತಿಯ ಜಾವಳಿ ಹೋಬಳಿ ಕಾಳಿಕಟ್ಟೆ ಗ್ರಾಮದಲ್ಲಿ ಕಲ್ಪನಾ ಕೆ.ಎಂ. ಕೋಂ ಗಣೇಶ ಎಂಬುವರು ಮನೆಯ ಪಕ್ಕದ ಶೆಡ್ಡಿನಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿಯ ಮದ್ಯ ತಯಾರಿಸಿ ಮಾರಾಟ ಮಾಡುತ್ತಿದ್ದು, ದಾಳಿ ವೇಳೆಯಲ್ಲಿ ಆರೋಪಿತಳು ಓಡಿ ಹೋಗಿದ್ದು ಆರೋಪಿತಳು ಅಕ್ರಮವಾಗಿ ಮದ್ಯ ತಯಾರಿಸಲು ಬಳಸುತ್ತಿದ್ದ  ಬಳಿ ಇದ್ದ ಒಂದು ಸಿಲ್ವರ್ ಹಂಡೆ, ಒಂದು ವೃತ್ತಾಕಾರದ ಮಣೆ, ಒಂದು 41/2 ಅಡಿ ಉದ್ದದ ರಬ್ಬರ್ ಪೈಪ್  ಹಾಗೂ ಬಿಳಿ ಬಣ್ಣದ ಕ್ಯಾನ್ ನಲ್ಲಿ 3 ಲೀಟರ್ ನಷ್ಟು ಕಳ್ಳಭಟ್ಟಿ ಸಾರಾಯಿಯನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತಳ ವಿರುದ್ದ ಬಾಳೂರು  ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತೆ. ಈ ಕಾರ್ಯಚರಣೆಯಲ್ಲಿ ಪಿಎಸ್ಐ ತಿಪ್ಪೇಶ್ ಹಾಗೂ ಸಿಬ್ಬಂದಿಗಳು ಪಾಲೊಂಡಿರುತ್ತಾರೆ.

ಗೋಣಿಬೀಡು ಪೊಲೀಸ್ ಠಾಣೆ

ದಿನಾಂಕ:25/10/2021 ರಂದು ಗೋಣಿಬೀಡು ಠಾಣಾ ವ್ಯಾಪ್ತಿಯ ಕಣಚೂರು ಗ್ರಾಮದಲ್ಲಿ ಪುಟ್ಟಸ್ವಾಮಿಗೌಡ  ಬಿನ್ ಲೇಟ್ ರಾಮೇಗೌಡ  ಎಂಬುವನು ತಮ್ಮ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಆರೋಪಿ ಬಳಿ ಇದ್ದ 90 ಎಂ.ಎಲ್.  36 ಮದ್ಯದ ಟೆಟ್ರಾ ಪ್ಯಾಕ್ ಅವುಗಳ ಬೆಲೆ 1006/- ರೂ ಅಗಿದ್ದು ಸದರಿ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿ ವಿರುದ್ದ ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತೆ. ಈ ಕಾರ್ಯಚರಣೆಯಲ್ಲಿ ಪಿಎಸ್ಐ ಧನಂಜಯ ಎಂ.ಆರ್. ಹಾಗೂ ಸಿಬ್ಬಂದಿಗಳು ಪಾಲೊಂಡಿರುತ್ತಾರೆ.

 ಅಲ್ದೂರು ಪೊಲೀಸ್ ಠಾಣೆ

ದಿನಾಂಕ:25/10/2021 ರಂದು ಅಲ್ದೂರು ಠಾಣಾ ವ್ಯಾಪ್ತಿಯ ಬಸ್ಕಲ್ ಗ್ರಾಮದಲ್ಲಿ ಮಹೇಶ ಬಿನ್ ರಾಜು ಎಂಬುವನು ಬಸ್ಕಲ್ ಕ್ರಿಶ್ಚಿಯನ್ ಸ್ಮಶಾನ ರಸ್ತೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಆರೋಪಿಯು ದಾಳಿ ವೇಳೆ ಓಡಿ ಹೋಗಿದ್ದು, ಆರೋಪಿ ಬಳಿ ಇದ್ದ 90 ಎಂ.ಎಲ್.  8 ಮದ್ಯದ ಟೆಟ್ರಾ ಪ್ಯಾಕ್ ಅವುಗಳ ಬೆಲೆ 223/- ರೂ ಅಗಿದ್ದು ಸದರಿ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿ ವಿರುದ್ದ ಅಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತೆ. ಈ ಕಾರ್ಯಚರಣೆಯಲ್ಲಿ ಪಿಎಸ್ಐ ಬಸವರಾಜ್ ಜಿ.ಕೆ.  ಹಾಗೂ ಸಿಬ್ಬಂದಿಗಳು ಪಾಲೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಕಡೂರು ಪೊಲೀಸ್ ಠಾಣೆ.

ದಿನಾಂಕ 26/10/2021 ರಂದು ಪಿರ್ಯಾದಿ ನೀಡಿದ ದೂರಿನಲ್ಲಿ ತನ್ನ ಗಂಡ ಅಜಮಾಲ್ ಪಾಷ ರವರು ದಿನಾಂಕ 21/10/2021 ರಂದು 6.30 ಗಂಟೆಗೆ ಚಿಕ್ಕಮಗಳೂರಿಗೆ ಹೋಗಿ ವಾಪಾಸ್ಸು ಬರುತ್ತೇನೆಂದು ಹೇಳಿ ಹೋಗಿದ್ದು ಇಲ್ಲಿಯವರೆಗೂ ಮನೆಗೆ ಬಾರದೇ ಇದ್ದು ಕಾಣೆಯಾಗಿರುತ್ತಾರೆ. ಚಹರೆ ಹೆಸರು ಅಜಮಾಲ್ ಪಾಷ, ತಂದೆ;ಅಪಷರ್ ಪಾಷ, ವಯಸ್ಸು 28 ವರ್ಷ,  ಹಿಂದಿ ಮತ್ತು ಕನ್ನಡ ಬಾಷೆ  ಗೋಧಿ ಮೈ ಬಣ್ಣ ಮಾತಾನಾಡುತ್ತಾರೆ. ಧರಿಸಿದ ಉಡುಪುಗಳು;- ನೀಲಿ ಬಣ್ಣದ ಜಿನ್ಸ್ ಪ್ಯಾಂಟ್ ಆಕಾಶ ನೀಲಿ ಬಣ್ಣದ ಶರ್ಟ್ ಧರಿಸಿರುತ್ತಾರೆ. ಕಾಣೆಯಾಗಿರುವ ತನ್ನ ಗಂಡನನ್ನು ಪತ್ತೆ ಮಾಡಿ ಕೊಡುವಂತೆ ಕೋರಿ ನೀಡಿದ ದೂರಿನ ಮೇರೆಗೆ  ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಇಸ್ಪೀಟ್ ಜೂಜಾಟ ಪ್ರಕರಣ .

ಲಕ್ಕವಳ್ಳಿ ಪೊಲೀಸ್ ಠಾಣೆ.

ದಿನಾಂಕ 25/10/2021 ರಂದು ಲಕ್ಕವಳ್ಳಿ ಠಾಣಾ ಸರಹದ್ದಿನ ಶಾಂತಿಪುರ ಗ್ರಾಮದ  ಭದ್ರಾ ಮೇಲ್ದಂಡ ಪವರ್ ಹೌಸ್ ಮೇಲ್ಬಾಗದಲ್ಲಿರುವ ಚಾನಲ್ ಪಕ್ಕದ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಡುತ್ತಿದ್ದ ಆರೋಪಿತರಾದ 1. ಧನರಾಜ್ ಬಿನ್ ಚನ್ನೇಗೌಡ 2. ಪ್ರದೀಪ ಬಿನ್ ಮಂಜೇಗೌಡ 3. ಸೋಮಶೇಖರ ನಾಯ್ಕ ಬಿನ್ ರೂಪ್ಲಾನಾಯ್ಕ 4. ಪ್ರತಾಪ ಬಿನ್ ಕುಪ್ಪುಸ್ವಾಮಿ 5. ಶ್ರೀನಿವಾಸ ಬಿನ್ ರಂಗಪ್ಪ 6. ರೇವಾನಾಯ್ಕ ಬಿನ್ ಚಂದ್ಯಾನಾಯ್ಕ  ಬಿನ್ ರವಿಕುಮಾರ್  7. ಪ್ರಭಾಕರ ಬಿನ್ ಶಿವಾನಂದ 8. ಮಂಜುನಾಥ ಬಿನ್ ರಾಮಣ್ಣ  ಇವರನ್ನು ವಶಕ್ಕೆ ಪಡೆದು ಆರೋಪಿತರು ಇಸ್ಪೀಟ್  ಜೂಜಾಟಕ್ಕೆ ಬಳಸಿದ ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲ , 15,000/- ರೂ ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತರ ವಿರುದ್ದ ಲಕ್ಕವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿಎಸ್ಐ ಮೇಘ ಟಿ.ಎನ್. ಹಾಗೂ ರವರು ಸಿಬ್ಬಂದಿಗಳು ಪಾಲೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 26-10-2021 07:35 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080